ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಮಣಿಶಂಕರ್ ಮುಖೋಪಾಧ್ಯಾಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ 

ಪ್ರಕಟಣಾ ದಿನಾಂಕ: 20 FEB 2026 7:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ರೀ ಮಣಿಶಂಕರ್ ಮುಖೋಪಾಧ್ಯಾಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಬಂಗಾಳಿ ಸಾಹಿತ್ಯದಲ್ಲಿ ಸೂಕ್ಷ್ಮತೆ ಮತ್ತು ಒಳನೋಟ ಹೊಂದಿರುವ ಜನರ ಜೀವನವನ್ನು ಚಿತ್ರಿಸಿದ ಅದ್ಭುತ ವ್ಯಕ್ತಿ ಎಂದು ಅವರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.

ಈ ಕುರಿತು ಎಕ್ಸ್ ತಾಣದಲ್ಲಿ ಶ್ರೀ ಮೋದಿಯವರು ಹೀಗೆ ಹೇಳಿದ್ದಾರೆ:

“ಶಂಕರ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಶ್ರೀ ಮಣಿಶಂಕರ್ ಮುಖೋಪಾಧ್ಯಾಯ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.

ಅವರು ಬಂಗಾಳಿ ಸಾಹಿತ್ಯದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದರು, ಅವರ ಮಾತು-ಕೃತಿಗಳು ಸೂಕ್ಷ್ಮತೆ ಮತ್ತು ಒಳನೋಟ ಹೊಂದಿರುವ ಜನರ ಜೀವನವನ್ನು ಚಿತ್ರಿಸಿದವು. ತಮ್ಮ ಅವಿಸ್ಮರಣೀಯ ಕೃತಿಗಳ ಮೂಲಕ, ಅವರು ತಲೆಮಾರುಗಳ ಓದುಗರ ಮೇಲೆ ಪ್ರಭಾವ ಬೀರಿದರು ಮತ್ತು ಭಾರತದ ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸಿದರು.

ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ.”

 

“শ্রী মণি শঙ্কর মুখোপাধ্যায়-যিনি শংকর নামে  বিখ্যাত- এর প্রয়াণে গভীরভাবে শোকাহত ।

বাংলা সাহিত্যের এক উজ্জ্বল নক্ষত্র হিসেবে তিনি মানুষের জীবনকে অসাধারণ সংবেদনশীলতা ও অন্তর্দৃষ্টির সঙ্গে তাঁর লেখায় তুলে ধরেছেন। তাঁর অবিস্মরণীয় সৃষ্টি, বিভিন্ন প্রজন্মের পাঠককে প্রভাবিত  এবং ভারতের সাহিত্যভাণ্ডারকে সমৃদ্ধ করেছে।

তাঁর পরিবার, বন্ধু ও অসংখ্য অনুরাগীর প্রতি আমার আন্তরিক সমবেদনা রইল। ওঁ শান্তি।”

 

*****


(ಪ್ರಕಟಣೆ ಐ.ಡಿ.: 2230975) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Gujarati , Tamil , Malayalam