ಪ್ರಧಾನ ಮಂತ್ರಿಯವರ ಕಛೇರಿ
ಬಾರ್ಬಡೋಸ್‌ನಲ್ಲಿ ಐತಿಹಾಸಿಕ ಸತತ ಮೂರನೇ ಚುನಾವಣಾ ಗೆಲುವಿಗಾಗಿ ಪ್ರಧಾನಮಂತ್ರಿ ಮಿಯಾ ಅಮೋರ್ ಮೊಟ್ಲಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
13 FEB 2026 12:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಾರ್ಬಡೋಸ್‌ನಲ್ಲಿ ಐತಿಹಾಸಿಕ ಸತತ ಮೂರನೇ ಚುನಾವಣಾ ಗೆಲುವಿಗಾಗಿ ಪ್ರಧಾನಮಂತ್ರಿ ಮಿಯಾ ಅಮೋರ್ ಮೊಟ್ಲಿ ಅವರನ್ನು ಅಭಿನಂದಿಸಿದ್ದಾರೆ. ಬಾರ್ಬಡೋಸ್‌ನೊಂದಿಗಿನ ತನ್ನ ದೀರ್ಘಕಾಲದ ಸ್ನೇಹವನ್ನು ಭಾರತವು ಬಹಳವಾಗಿ ಗೌರವಿಸುತ್ತದೆ, ಇದು ವಿವಿಧ ಕ್ಷೇತ್ರಗಳ ಸಹಕಾರದಲ್ಲಿ ವಿಸ್ತರಣೆಯಾಗುತ್ತಲೇ ಇದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. "2024ರಲ್ಲಿ ಭಾರತ-CARICOM ಶೃಂಗಸಭೆಯ ಸಂದರ್ಭದಲ್ಲಿ ನಮ್ಮ ಸಭೆಯನ್ನು ನಾನು ಹೃತ್ಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ ಮತ್ತು ನಮ್ಮ ಜನರ ಪ್ರಯೋಜನಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ನಿಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಶ್ರೀ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
"ಸತತ ಮೂರನೇ ಚುನಾವಣಾ ಗೆಲುವಿಗಾಗಿ ಪ್ರಧಾನಮಂತ್ರಿ ಮಿಯಾ ಅಮೋರ್ ಮೊಟ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಭಾರತವು ಬಾರ್ಬಡೋಸ್‌ನೊಂದಿಗಿನ ತನ್ನ ದೀರ್ಘಕಾಲದ ಸ್ನೇಹವನ್ನು ಬಹಳ ಗೌರವಿಸುತ್ತದೆ, ಅದು ವಿವಿಧ ಕ್ಷೇತ್ರಗಳ ಸಹಕಾರದಲ್ಲಿ ವಿಸ್ತರಣೆಯಾಗುತ್ತಲೇ ಇದೆ.
2024ರಲ್ಲಿ ಭಾರತ-CARICOM ಶೃಂಗಸಭೆಯ ಸಂದರ್ಭದಲ್ಲಿ ನಮ್ಮ ಸಭೆಯನ್ನು ನಾನು ಹೃತ್ಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ ಮತ್ತು ನಮ್ಮ ಜನರ ಪ್ರಯೋಜನಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ನಿಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ.’’
@miaamormottley
*****
(ಪ್ರಕಟಣೆ ಐ.ಡಿ.: 2227434)
ವಿಸಿಟರ್ ಕೌಂಟರ್ : 6