ಪ್ರಧಾನ ಮಂತ್ರಿಯವರ ಕಛೇರಿ
ವೇದಗಳ ಕಾಲಾತೀತ ಬುದ್ಧಿವಂತಿಕೆಯನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
12 FEB 2026 10:15AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೇದಗಳ ಕಾಲಾತೀತ ಬುದ್ಧಿವಂತಿಕೆಯನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ:
"ऊर्ध्वमूलमधःशाखमश्वत्थं प्राहुरव्ययम्।
छन्दांसि यस्य पर्णानि यस्तं वेद स वेदवित्।।"
ಈ ಸುಭಾಷಿತದ ವ್ಯಾಖ್ಯಾನ ಹೀಗೆ ಹೇಳುತ್ತದೆ, "ಈ ಜಗತ್ತು ಮೇಲೆ ಬೇರುಗಳು ಮತ್ತು ಕೆಳಗೆ ಕೊಂಬೆಗಳನ್ನು ಹೊಂದಿರುವ ಶಾಶ್ವತವಾದ ಅರಳಿ ಮರದಂತಿದೆ ಎಂದು ಜ್ಞಾನಿಗಳು ಹೇಳುತ್ತಾರೆ. ಅದರ ಎಲೆಗಳು ವೇದಗಳು. ಈ ಲೌಕಿಕ ಅಸ್ತಿತ್ವದ ಮರವನ್ನು ಅರ್ಥಮಾಡಿಕೊಳ್ಳುವವನು ನಿಜವಾಗಿಯೂ ವೇದಗಳನ್ನು ತಿಳಿದವನು".
ಜ್ಞಾನದ ದೀಪವು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ಇಡೀ ಜಗತ್ತನ್ನೇ ಬೆಳಗಿಸುತ್ತದೆ ಮತ್ತು ಮಹರ್ಷಿ ದಯಾನಂದ ಸರಸ್ವತಿ ಜಿ ಇದಕ್ಕೆ ಜೀವಂತ ಉದಾಹರಣೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ತಾಣದ ಖಾತೆಯಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ;
“ज्ञान का दीपक ना केवल अज्ञानता के अंधकार को मिटाता है, बल्कि समस्त जगत को आलोकित भी करता है। महर्षि दयानंद सरस्वती जी का दिव्य व्यक्तित्व इसका साक्षात उदाहरण है।
ऊर्ध्वमूलमधःशाखमश्वत्थं प्राहुरव्ययम्।
छन्दांसि यस्य पर्णानि यस्तं वेद स वेदवित्।।"
*****
(ಪ್ರಕಟಣೆ ಐ.ಡಿ.: 2226860)
ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam