ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೇಘಾಲಯದ ಪೂರ್ವ ಜೈಂಟಿಯಾ ಗುಡ್ಡದಲ್ಲಿ ಸಂಭವಿಸಿದ ದುರಂತದಲ್ಲಿ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ


ಪಿ ಎಂ ಎನ್‌ ಆರ್‌ ಎಫ್‌ ನಿಂದ ಪರಿಹಾರ ಘೋಷಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 05 FEB 2026 8:36PM by PIB Bengaluru

ಮೇಘಾಲಯದ ಪೂರ್ವ ಜೈಂಟಿಯಾ ಗುಡ್ಡದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಅವರು ಮೃತರ ವಾರಸುದಾರರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ( ಪಿ ಎಂ ಎನ್‌  ಆರ್‌ ಎಫ್‌) ನಿಂದ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಪ್ರಕಟಿಸಿದ್ದಾರೆ.

ಪಿಎಂಒ ಇಂಡಿಯಾ ಹ್ಯಾಂಡಲ್ ಎಕ್ಸ್ ಪೋಸ್ಟ್‌ ನಲ್ಲಿ ಹೀಗೆ ಹೇಳಿದೆ:

“ಮೇಘಾಲಯದ ಪೂರ್ವ ಜೈಂಟಿಯಾ ಗುಡ್ಡದಲ್ಲಿ ಸಂಭವಿಸಿದ ಅಪಘಾತದಿಂದ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು.  ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ.

ಮೃತರ ವಾರಸುದಾರರಿಗೆ PMNRF ನಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ತಲಾ ರೂ.50,000  ಪರಿಹಾರ ನೀಡಲಾಗುವುದು: ಪ್ರಧಾನಮಂತ್ರಿ @narendramodi”

 

*****


(ಪ್ರಕಟಣೆ ಐ.ಡಿ.: 2224382) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Assamese , Punjabi , Gujarati , Telugu , Malayalam