ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾಜಿಕ ಅಭಿವೃದ್ಧಿ ಆಯೋಗದ 64ನೇ ಅಧಿವೇಶನದಲ್ಲಿ ಹಕ್ಕು ಆಧಾರಿತ, ಎಲ್ಲರನ್ನೂ ಒಳಗೊಂಡ ಮತ್ತು ಜನ-ಕೇಂದ್ರಿತ ಅಭಿವೃದ್ಧಿ ಕಾರ್ಯವಿಧಾನವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಭಾರತ


“ಕೊಪೆನ್ ಹೇಗನ್‌ನಿಂದ ದೋಹಾದವರೆಗಿನ ಎರಡನೇ ವಿಶ್ವ ಸಾಮಾಜಿಕ ಅಭಿವೃದ್ಧಿ ಶೃಂಗಸಭೆಯ ಫಲಿತಾಂಶಗಳನ್ನು ಸದುಪಯೋಗಪಡಿಸಿಕೊಳ್ಳುವುದು: 2030 ಮತ್ತು ಆನಂತರದ ಅವಧಿಗೆ ರಾಷ್ಟ್ರೀಯ ಕ್ರಿಯೆಯನ್ನು ಸಜ್ಜುಗೊಳಿಸುವುದು’’ ಎಂಬ ವಿಷಯದ ಕುರಿತು ಸಚಿವರ ವೇದಿಕೆ ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಖಾತೆ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್

ಪ್ರಕಟಣಾ ದಿನಾಂಕ: 04 FEB 2026 8:00AM by PIB Bengaluru

"ಕೊಪೆನ್ ಹೇಗನ್‌ ನಿಂದ ದೋಹಾವರೆಗಿನ ಎರಡನೇ ವಿಶ್ವ ಸಾಮಾಜಿಕ ಅಭಿವೃದ್ಧಿ ಶೃಂಗಸಭೆಯ ಫಲಿತಾಂಶಗಳನ್ನು ಸದುಪಯೋಗಪಡಿಸಿಕೊಳ್ಳುವುದು" ಎಂಬ ವಿಷಯದ ಕುರಿತು ವಿಶ್ವಸಂಸ್ಥೆಯ ಚರ್ಚೆಯಲ್ಲಿ ಭಾರತವು ತನ್ನ ಹಕ್ಕು ಆಧಾರಿತ,  ಎಲ್ಲರನ್ನೂ ಒಳಗೊಂಡ ಮತ್ತು ಜನ-ಕೇಂದ್ರಿತ ಅಭಿವೃದ್ಧಿ ಕಾರ್ಯವಿಧಾನವನ್ನು ಪ್ರಮುಖವಾಗಿ ಪ್ರಸ್ತಾಪಿಸಿತು. ಭಾರತದ ಹೇಳಿಕೆಯನ್ನು ಪ್ರಸ್ತುತಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್, ವಿಕಸಿತ ಭಾರತ@2047 ರಾಷ್ಟ್ರೀಯ ದೂರದೃಷ್ಟಿಯಲ್ಲಿ ಸಾಮಾಜಿಕ ನ್ಯಾಯವು ಕೇಂದ್ರಬಿಂದುವಾಗಿದೆ ಎಂದು ಒತ್ತಿ ಹೇಳಿದರು.

90a6c39fb9bb0ff8b25f2d0c3c770a38.jpg

ಕೋಪನ್ ಹ್ಯಾಗನ್ ಘೋಷಣೆಯು ಜನರನ್ನು ಅಭಿವೃದ್ಧಿಯ ಕೇಂದ್ರಭಾಗದಲ್ಲಿ ಇರಿಸಿದೆ ಮತ್ತು ದೋಹಾ ರಾಜಕೀಯ ಘೋಷಣೆಯು ಉದಯೋನ್ಮುಖ ಜಾಗತಿಕ ಸವಾಲುಗಳ ನಡುವೆ ಈ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಸ್ಮರಿಸಿಕೊಂಡ ಸಚಿವರು, “ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ ಎಂಬ ಭಾರತದ ಆಡಳಿತ ತತ್ವವು ಎಲ್ಲರಿಗೂ ಘನತೆ, ಸಮಾನತೆ ಮತ್ತು ಅವಕಾಶವನ್ನು ಖಾತ್ರಿಪಡಿಸಿಕೊಳ್ಳಲು ಒಟ್ಟು ಸರ್ಕಾರ ಮತ್ತು ಇಡೀ ಸಮಾಜದ ಕಾರ್ಯವಿಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಉಲ್ಲೇಖಿಸಿದರು.

ಭಾರತದ ದೊಡ್ಡ ಪ್ರಮಾಣದ ಸಾಮಾಜಿಕ ರಕ್ಷಣೆ ಮತ್ತು ಸೇರ್ಪಡೆ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾ, ಶ್ರೀಮತಿ  ಸಾವಿತ್ರಿ ಠಾಕೂರ್ ಹಂಚಿಕೊಂಡಿರುವ ವಿಷಯಗಳು ಹೀಗೆ ಕೆಳಗಿನಂತಿವೆ.

  • ಆಹಾರ ಭದ್ರತಾ ಕಾರ್ಯಕ್ರಮಗಳ ವ್ಯಾಪ್ತಿಗೆ 800 ಮಿಲಿಯನ್‌ಗಿಂತಲೂ ಅಧಿಕ ಜನರ ಸೇರ್ಪಡೆ.
  • • 550 ಮಿಲಿಯನ್‌ಗಿಂತಲೂ ಅಧಿಕ ನಾಗರಿಕರು ವ್ಯಾಪಕವಾದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಉಚಿತ ಆರೋಗ್ಯ ಸೇವೆ ಲಭ್ಯ.
  • • 16,000 ಜನ ಆರೋಗ್ಯ ಕೇಂದ್ರಗಳ ಮೂಲಕ ಕೈಗೆಟುಕುವ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳನ್ನು ಒದಗಿಸಲಾಗುತ್ತಿದೆ
  • • 1.45 ಮಿಲಿಯನ್‌ಗಿಂತಲೂ ಅಧಿಕ ಚುನಾಯಿತ ಮಹಿಳಾ ಪ್ರತಿನಿಧಿಗಳು ಸ್ಥಳೀಯ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದು ಭಾರತದ ತಳಮಟ್ಟದ ಪ್ರಜಾಪ್ರಭುತ್ವದ ಬದ್ಧತೆ ಪ್ರತಿಬಿಂಬಿಸುತ್ತದೆ
  • ಬೇಟಿ ಬಚಾವೊ ಬೇಟಿ ಪಡಾವೊ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಂತಹ ಪ್ರಮುಖ ಉಪಕ್ರಮಗಳು ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಭದ್ರತೆಯನ್ನು ಬಲಪಡಿಸುತ್ತಿವೆ
  • ಕಾರ್ಮಿಕ ಸುಧಾರಣೆಗಳು ಸಮಾನ ವೇತನ,ಸುರಕ್ಷಿತ ಕೆಲಸದ ಸ್ಥಳಗಳು ಮತ್ತು ಮಹಿಳಾ ಕಾರ್ಯಪಡೆಯ ಭಾಗವಹಿಸುವಿಕೆ ಉತ್ತೇಜಿಸುತ್ತವೆ
  • ದೊಡ್ಡ ಪ್ರಮಾಣದ ಮೇಲಾಧಾರ ಮುಕ್ತ (ಕೋಲಾಟರಲ್ ಫ್ರೀ) ಸಾಲಗಳು ಲಕ್ಷಾಂತರ ಮಹಿಳೆಯರು, ಉದ್ಯಮಿಗಳು ಮತ್ತು ಬೀದಿ ವ್ಯಾಪಾರಿಗಳು ಔಪಚಾರಿಕ ಆರ್ಥಿಕತೆಯನ್ನು ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿವೆ
  • ಸ್ಮೈಲ್ ನಂತಹ ಉದ್ದೇಶಿತ ಯೋಜನೆಗಳು ತೃತೀಯಲಿಂಗಿಗಳು ಮತ್ತು ಇತರ ದುರ್ಬಲ ಗುಂಪುಗಳ ಪುನರ್ವಸತಿ ಮತ್ತು ಸೇರ್ಪಡೆಗೆ ಬೆಂಬಲ ನೀಡುತ್ತಿವೆ

ಭಾರತದ ಅಭಿವೃದ್ಧಿ ಪಯಣವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನೇರ ನಗದು ವರ್ಗಾವಣೆ ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಸಂಯೋಜಿಸುತ್ತದೆ, ಪಾರದರ್ಶಕತೆ ಮತ್ತು ತಳ ಹಂತದಲ್ಲಿ ಸೇವಾ ವಿತರಣೆಯನ್ನು ಖಾತ್ರಿಪಡಿಸುತ್ತದೆ ಎಂದು ಶ್ರೀಮತಿ ಠಾಕೂರ್ ಒತ್ತಿ ಹೇಳಿದರು.

“ವಸುಧೈವ ಕುಟುಂಬಕಂ’’ – ಇಡೀ ವಿಶ್ವವೇ ಒಂದು ಕುಟುಂಬ - ಎಂಬ ಭಾರತದ ನಾಗರಿಕತೆಯ ನೀತಿಯನ್ನು ಪುನರುಚ್ಚರಿಸಿದ ಸಚಿವರು, ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ವಿಶ್ವಾದ್ಯಂತ ಸಾಮಾಜಿಕ ನ್ಯಾಯವನ್ನು ಮುನ್ನಡೆಸಲು ತನ್ನ ಅಭಿವೃದ್ಧಿ ಅನುಭವವನ್ನು ಹಂಚಿಕೊಳ್ಳಲು ಭಾರತದ ಸಿದ್ಧತೆವಿದೆ ಎಂದು ಪುನರುಚ್ಚರಿಸಿದರು.

ಅಧಿವೇಶನವು ವಿಶ್ವಸಂಸ್ಥೆಯ ಬಹುಪಾಲು ಸದಸ್ಯ ರಾಷ್ಟ್ರಗಳ ಸಕ್ರಿಯ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು.

ಅಧಿವೇಶನದ ನಂತರ, ಸಚಿವರು ಸ್ವೀಡನ್ ಸರ್ಕಾರದ ಸಾಮಾಜಿಕ ಸೇವೆಗಳ ಸಚಿವರಾದ ಗೌರವಾನ್ವಿತ ಶ್ರೀಮತಿ ಕ್ಯಾಮಿಲ್ಲಾ ವಾಲ್ಟರ್ಸನ್ ಗ್ರೋನ್ವಾಲ್ ಅವರೊಂದಿಗೆ ಸೌಹಾರ್ದಯುತ ಸಭೆ ನಡೆಸಿದರು.

873737dc500de1a0a6035c1a09debb58.jpg

 

*****


(ಪ್ರಕಟಣೆ ಐ.ಡಿ.: 2222965) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Punjabi , Gujarati , Telugu , Malayalam