ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2026-27 ಸೇವಾ ವಲಯದ ಕುರಿತು ಕ್ರಮಗಳನ್ನು ಶಿಫಾರಸು ಮಾಡಲು ಉನ್ನತ ಮಟ್ಟದ ‘ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ’ ಸ್ಥಾಯಿ ಸಮಿತಿಯನ್ನು ಸ್ಥಾಪಿಸಲು ಪ್ರಸ್ತಾಪ


'ಚಾಲೆಂಜ್ ರೂಟ್' ಮೂಲಕ ಭಾರತದ ಪೂರ್ವ ಪ್ರದೇಶದಲ್ಲಿ ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಸ್ಥಾಪನೆ

ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ ಕಾರಿಡಾರ್‌ ಗಳ ಸಮೀಪದಲ್ಲಿ 5 ವಿಶ್ವವಿದ್ಯಾಲಯ ಟೌನ್‌ಶಿಪ್‌ ಗಳ ನಿರ್ಮಾಣ

ವಿಜಿಎಫ್/ಬಂಡವಾಳ ನೆರವಿನ ಮೂಲಕ ಪ್ರತಿ ಜಿಲ್ಲೆಯಲ್ಲೂ ಒಂದು ಹೆಣ್ಣು ಮಕ್ಕಳ ಹಾಸ್ಟೆಲ್ ಸ್ಥಾಪನೆ

ಖಭೌತಶಾಸ್ತ್ರ ಮತ್ತು ಖಗೋಳವಿಜ್ಞಾನವನ್ನು ಉತ್ತೇಜಿಸಲು 4 ಟೆಲಿಸ್ಕೋಪ್ ಮೂಲಸೌಕರ್ಯ ಸೌಲಭ್ಯಗಳ ಸ್ಥಾಪನೆ ಅಥವಾ ನವೀಕರಣ

प्रविष्टि तिथि: 01 FEB 2026 12:48PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2026-27ರ ಕೇಂದ್ರ ಬಜೆಟ್ ಮಂಡಿಸಿದರು. 'ವಿಕಸಿತ ಭಾರತ'ದ ಪ್ರಮುಖ ಚಾಲಕ ಶಕ್ತಿಯಾಗಿ ಸೇವಾ ವಲಯದ ಮೇಲೆ ಕೇಂದ್ರೀಕರಿಸಿ ಕ್ರಮಗಳನ್ನು ಶಿಫಾರಸು ಮಾಡಲು 'ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ' ಎಂಬ ಉನ್ನತ ಮಟ್ಟದ ಸ್ಥಾಯಿ ಸಮಿತಿಯನ್ನು ಸ್ಥಾಪಿಸಲು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ. ಇದು 2047ರ ವೇಳೆಗೆ ಶೇಕಡಾ 10 ರಷ್ಟು ಜಾಗತಿಕ ಪಾಲನ್ನು ಹೊಂದುವ ಮೂಲಕ ಭಾರತವನ್ನು ಸೇವಾ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಲಿದೆ. ಸಮಿತಿಯು ಬೆಳವಣಿಗೆ, ಉದ್ಯೋಗ ಮತ್ತು ರಫ್ತು ಸಾಮರ್ಥ್ಯವನ್ನು ಗರಿಷ್ಠಗೊಳಿಸಲು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸುತ್ತದೆ. ಉದ್ಯೋಗಗಳು ಮತ್ತು ಕೌಶಲ್ಯ ಅಗತ್ಯತೆಗಳ ಮೇಲೆ ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರಭಾವವನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಕ್ರಮಗಳನ್ನು ಪ್ರಸ್ತಾಪಿಸುತ್ತದೆ.

ಭಾರತೀಯ ವಿನ್ಯಾಸ ಉದ್ಯಮವು ವೇಗವಾಗಿ ವಿಸ್ತರಿಸುತ್ತಿದೆ, ಆದರೂ ಭಾರತೀಯ ವಿನ್ಯಾಸಕರ ಕೊರತೆಯಿದೆ. ಭಾರತದ ಪೂರ್ವ ಪ್ರದೇಶದಲ್ಲಿ ವಿನ್ಯಾಸ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು 'ಚಾಲೆಂಜ್ ರೂಟ್' ಮೂಲಕ ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ.

ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ ಕಾರಿಡಾರ್‌ ಗಳ ಸಮೀಪದಲ್ಲಿ 5 ವಿಶ್ವವಿದ್ಯಾಲಯ ಟೌನ್‌ಶಿಪ್‌ ಗಳನ್ನು ರಚಿಸಲು ಸರ್ಕಾರವು 'ಚಾಲೆಂಜ್ ರೂಟ್' ಮೂಲಕ ರಾಜ್ಯಗಳಿಗೆ ಬೆಂಬಲ ನೀಡಲಿದೆ. ಈ ಯೋಜಿತ ಶೈಕ್ಷಣಿಕ ವಲಯಗಳು ಅನೇಕ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಕೌಶಲ್ಯ ಕೇಂದ್ರಗಳು ಮತ್ತು ವಸತಿ ಸಂಕೀರ್ಣಗಳನ್ನು ಒಳಗೊಂಡಿರುತ್ತವೆ.

ಉನ್ನತ ಶಿಕ್ಷಣದ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಸಂಸ್ಥೆಗಳಲ್ಲಿ, ದೀರ್ಘಾವಧಿಯ ಅಧ್ಯಯನ ಮತ್ತು ಪ್ರಯೋಗಾಲಯದ ಕೆಲಸಗಳು ವಿದ್ಯಾರ್ಥಿನಿಯರಿಗೆ ಕೆಲವು ಸವಾಲುಗಳನ್ನು ಒಡ್ಡುತ್ತವೆ. ಕೇಂದ್ರ ಬಜೆಟ್ ಪ್ರತಿ ಜಿಲ್ಲೆಯಲ್ಲೂ ವಿಜಿಎಫ್/ಬಂಡವಾಳ ನೆರವಿನ ಮೂಲಕ ಒಂದು ಹೆಣ್ಣು ಮಕ್ಕಳ ಹಾಸ್ಟೆಲ್ ಸ್ಥಾಪಿಸಲು ಪ್ರಸ್ತಾಪಿಸಿದೆ.

ತನ್ಮಯಗೊಳಿಸುವ ಅನುಭವಗಳ ಮೂಲಕ ಖಭೌತಶಾಸ್ತ್ರ ಮತ್ತು ಖಗೋಳವಿಜ್ಞಾನವನ್ನು ಉತ್ತೇಜಿಸಲು, 4 ಟೆಲಿಸ್ಕೋಪ್ ಮೂಲಸೌಕರ್ಯ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಅಥವಾ ನವೀಕರಿಸಲಾಗುವುದು - ರಾಷ್ಟ್ರೀಯ ಬೃಹತ್ ಸೌರ ಟೆಲಿಸ್ಕೋಪ್, ರಾಷ್ಟ್ರೀಯ ಬೃಹತ್ ಆಪ್ಟಿಕಲ್ ಇನ್ಫ್ರಾರೆಡ್ ಟೆಲಿಸ್ಕೋಪ್, ಹಿಮಾಲಯನ್ ಚಂದ್ರ ಟೆಲಿಸ್ಕೋಪ್ ಮತ್ತು ಕಾಸ್ಮೋಸ್ 2 ಪ್ಲಾನೆಟೇರಿಯಮ್.

 

*****


(रिलीज़ आईडी: 2221463) आगंतुक पटल : 15
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Punjabi , Gujarati , Tamil , Telugu , Malayalam