ಪ್ರಧಾನ ಮಂತ್ರಿಯವರ ಕಛೇರಿ
ಬೀಟಿಂಗ್ ರಿಟ್ರೀಟ್ 2026ರ ಕೆಲವು ತುಣುಕುಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
29 JAN 2026 10:15PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೀಟಿಂಗ್ ರಿಟ್ರೀಟ್ 2026 ಕಾರ್ಯಕ್ರಮದ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಬ್ಯಾಂಡ್‌ಗಳ ಪ್ರದರ್ಶನಗಳು ಸ್ಮರಣೀಯವಾಗಿದ್ದವು ಎಂದು ಶ್ರೀ ಮೋದಿ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳಲ್ಲಿ, ಶ್ರೀ ಮೋದಿಯವರು ಹೀಗೆ ಹೇಳಿದ್ದಾರೆ:
“ಬೀಟಿಂಗ್ ರಿಟ್ರೀಟ್ 2026ರ ಕೆಲವು ತುಣುಕುಗಳು ಇಲ್ಲಿವೆ. ವಿವಿಧ ಬ್ಯಾಂಡ್‌ಗಳ ಪ್ರದರ್ಶನಗಳು ಸ್ಮರಣೀಯವಾಗಿದ್ದವು.”
“ಬೀಟಿಂಗ್ ರಿಟ್ರೀಟ್ 2026ರ ಇನ್ನಷ್ಟು ತುಣುಕುಗಳು ಇಲ್ಲಿವೆ.”
ಬೀಟಿಂಗ್ ರಿಟ್ರೀಟ್ 2026ರಲ್ಲಿ ವಾಯುಪಡೆ ಬ್ಯಾಂಡ್ ಅತ್ಯುತ್ತಮ ಪ್ರದರ್ಶನ ನೀಡಿತು.
ವಾಯುಪಡೆ ‘ಬ್ರೇವ್ ವಾರಿಯರ್’, ‘ಟ್ವೈಲೈಟ್’, ‘ಅಲರ್ಟ್ (ಪೋಸ್ಟ್ ಹಾರ್ನ್ ಗ್ಯಾಲಪ್)’ ಮತ್ತು ‘ಫ್ಲೈಯಿಂಗ್ ಸ್ಟಾರ್’ ನ್ನು ಅತ್ಯಂತ ಉತ್ತಮವಾಗಿ ಪ್ರದರ್ಶಿಸಿದರು.
ಸಿಂದೂರ ರಚನೆ ಅದ್ಭುತವಾಗಿತ್ತು!
“ಅತ್ಯಂತ ಅದ್ಭುತ!
ನೌಕಾಪಡೆ ಬ್ಯಾಂಡ್‌ನ ಪ್ರದರ್ಶನಗಳಲ್ಲಿ ‘ನಮಸ್ತೆ’, ‘ಸಾಗರ ಪವನ್’, ‘ಮಾತೃಭೂಮಿ’, ‘ತೇಜಸ್ವಿ’ ಮತ್ತು ‘ಜೈ ಭಾರತಿ’ ಒಳಗೊಂಡಿದ್ದವು.
ಮತ್ಸ್ಯ ಯಂತ್ರ ರಚನೆ ಪೂರ್ಣತೆಯಿಂದ ಕೂಡಿತ್ತು.”
ಬೀಟಿಂಗ್ ರಿಟ್ರೀಟ್ 2026ರಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಬ್ಯಾಂಡ್‌ಗಳ ವೈವಿಧ್ಯಮಯ ಸಂಗೀತ ಸಂಯೋಜನೆಗಳು ಉತ್ಸಾಹದಿಂದ ತುಂಬಿದ್ದು, ನಮ್ಮ ರಾಷ್ಟ್ರವನ್ನು ಕಾಪಾಡುವವರ ಮೇಲಿನ ಹೆಮ್ಮೆಯ ಮನೋಭಾವವನ್ನು ಪ್ರತಿಬಿಂಬಿಸಿದವು.
ಬೀಟಿಂಗ್ ರಿಟ್ರೀಟ್ 2026ರಲ್ಲಿ ಸೇನಾ ಮಿಲಿಟರಿ ಬ್ಯಾಂಡ್ ಪ್ರದರ್ಶಿಸಿದ ಸಂಗೀತ ತಾಳಗಳು ಅತ್ಯುತ್ತಮವಾಗಿದ್ದವು. ಅದೇ ರೀತಿ, ಭಾರತೀಯ ಸೇನೆಯ ಆಪರೇಷನ್ ಸಿಂದೂರಿಗೆ ಸಲ್ಲಿಸಿದ ಗೌರವ, ವಂದೇ ಮಾತರಂಗೆ 150 ವರ್ಷಗಳು, ಭಾರತದ ನಾರಿ ಶಕ್ತಿಯ ಕ್ರಿಕೆಟ್ ವಿಜಯ, ಹಾಗೂ ಅಶ್ನಿ ಡ್ರೋನ್, ಭೈರವ್ ಪಡೆ ಮತ್ತು ಪ್ರಾಚೀನ ‘ಗರುಡ ವ್ಯೂಹ’ ಯುದ್ಧ ರಚನೆಯ ಪ್ರತಿನಿಧಿಗಳನ್ನು ಒಳಗೊಂಡ ರೂಪಣೆಗಳು ಕೂಡ ಅಷ್ಟೇ ಅತ್ಯಂತ ಅದ್ಭುತವಾಗಿತ್ತು.
“ಡ್ರಮ್‌ವಾದಕರ ಸಂಗೀತ’
ಅದ್ಭುತ! ಬೀಟಿಂಗ್ ರಿಟ್ರೀಟ್ 2026ರಲ್ಲಿ ಇದನ್ನು ವ್ಯಾಪಕವಾಗಿ ಮೆಚ್ಚಲಾಯಿತು.”
“ವಂದೇ ಮಾತರಂ 150 ವರ್ಷಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಬೀಟಿಂಗ್ ರಿಟ್ರೀಟ್ 2026ರಲ್ಲಿ ನಮ್ಮ ಸಶಸ್ತ್ರ ಪಡೆಗಳು ನೀಡಿದ ಈ ಗಾಯನ ರೂಪಾಂತರವು ವಿಶೇಷವಾಗಿ ಮಹತ್ವದ್ದಾಗಿದೆ.”
*****
(ಪ್ರಕಟಣೆ ಐ.ಡಿ.: 2221219)
ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam