ಹಣಕಾಸು ಸಚಿವಾಲಯ
ಸೂಕ್ತ ಕೌಶಲ್ಯಾಭಿವೃದ್ಧಿ, ಉದ್ಯಮಶೀಲ ಮನೋಭಾವ ಮತ್ತು ಸರ್ಕಾರದ ಉಪಕ್ರಮಗಳು ನಿರುದ್ಯೋಗವನ್ನು ನಿರಂತರವಾಗಿ ಕಡಿಮೆ ಮಾಡುತ್ತಿವೆ ಎಂದು ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ
ಪ್ರಸ್ತುತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ರಾಷ್ಟ್ರೀಯ ಉದ್ಯೋಗ ಸೇವಾ (NATIONAL CAREER SERVICE PORTAL) ಮೂಲಕ 2.3 ಕೋಟಿ ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಕಂಡುಬಂದಿವೆ.
ಇ-ಶ್ರಮ್ ಪೋರ್ಟಲ್ ಮೂಲಕ ನೋಂದಾಯಿತ 31 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸಲಾಗಿದೆ
ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಕಲ್ಯಾಣವನ್ನು ಮತ್ತು ಉದ್ಯೋಗದಾತರಿಗೆ ವ್ಯವಹಾರ ಸುಲಭತೆಯನ್ನು ಖಚಿತಪಡಿಸುತ್ತಿವೆ
ಮಹಿಳಾ ಕಾರ್ಮಿಕ ಶಕ್ತಿ ಹೆಚ್ಚುತ್ತಿರುವ ಸಮಯದಲ್ಲಿ, ಆರ್ಥಿಕ ಸಮೀಕ್ಷೆ ಸಡಿಲಿಕೆಯ ಕೆಲಸದ ಸಮಯಗಳ ಅಗತ್ಯವನ್ನು ಒಪ್ಪಿಕೊಂಡಿದೆ
ಗ್ರಾಮೀಣ ಭಾರತದಲ್ಲಿ ಉದ್ಯಮಶೀಲ ಚಟುವಟಿಕೆಗಳು ಸ್ವಯಂ ಉದ್ಯೋಗ ಕ್ರಾಂತಿಗೆ ದಾರಿ ಮಾಡಿಕೊಡುತ್ತಿವೆ, 12.9 ಕೋಟಿ ವ್ಯಕ್ತಿಗಳು (28% ಮಹಿಳೆಯರು) ಅಸಂಸ್ಥಾಪಿತ ಕೃಷಿಯೇತರ ವಲಯವನ್ನು ರೂಪಿಸುತ್ತಿದ್ದಾರೆ
ಆರ್ಥಿಕ ವರ್ಷ 2021 ರಿಂದ ಆರ್ಥಿಕ ವರ್ಷ 2025 ರವರೆಗೆ ಗಿಗ್ ಕಾರ್ಮಿಕರ ಸಂಖ್ಯೆಯಲ್ಲಿ ಶೇ.55ರಷ್ಟು ಏರಿಕೆಯಾಗಿದೆ.
प्रविष्टि तिथि:
29 JAN 2026 1:54PM by PIB Bengaluru
ಭಾರತದ ಕಾರ್ಮಿಕ ಮಾರುಕಟ್ಟೆಗಳು ಡಿಜಿಟಲೀಕರಣ, ಹಸಿರು ಇಂಧನ ಪರಿವರ್ತನೆ ಮತ್ತು ಗಿಗ್ ಹಾಗೂ ಪ್ಲಾಟ್‌ಫಾರ್ಮ್ ಕಾರ್ಮಿಕ ವಲಯದಲ್ಲಿ ಹೊಸ ಉದ್ಯೋಗ ರೂಪಗಳಿಂದ ಪ್ರೇರಿತವಾಗಿ ಮಹತ್ವದ ರಚನಾತ್ಮಕ ಪರಿವರ್ತನೆಗಳನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಹಲವು ಪ್ರಮುಖ ಉಪಕ್ರಮಗಳು ನಿರುದ್ಯೋಗವನ್ನು ನಿರಂತರವಾಗಿ ಕಡಿಮೆ ಮಾಡುತ್ತಿದ್ದು, ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುತ್ತಿವೆ ಮತ್ತು ಕಾರ್ಮಿಕರಿಗೆ ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸುತ್ತಿವೆ. ಇದನ್ನು ಇಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ.
ಕೋವಿಡ್ ಮಹಾಮಾರಿಯ ನಂತರದ ಬೆಳವಣಿಗೆಯ ಹಂತದಲ್ಲಿ ಉದ್ಯೋಗಗಳ ಸಂಖ್ಯೆಯಿಂದ ಕೆಲಸದ ಗುಣಮಟ್ಟದತ್ತ ಒತ್ತಾಸೆ ಸರಿದಿದ್ದು, ಇದು ಕಾರ್ಮಿಕ ಮಾರುಕಟ್ಟೆಯ ಹೆಚ್ಚು ಸಮಾವೇಶಕ ಮತ್ತು ದೀರ್ಘಕಾಲೀನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಸಮೀಕ್ಷೆ ಉಲ್ಲೇಖಿಸುತ್ತದೆ. ಕಾರ್ಮಿಕ ಆಧಾರಿತ ವಲಯಗಳನ್ನು ಉತ್ತೇಜಿಸುವ ಮತ್ತು ಕೌಶಲ್ಯಾಭಿವೃದ್ಧಿಯನ್ನು ಬಲಪಡಿಸುವ ಇತ್ತೀಚಿನ ಉಪಕ್ರಮಗಳು, ಗುಣಮಟ್ಟದ ಉದ್ಯೋಗ ಮತ್ತು ಮಾನವ ಸಂಪತ್ತಿನ ಅಭಿವೃದ್ಧಿಯತ್ತ ಸರ್ಕಾರದ ಪುನರ್‌ನವೀಕೃತ ಬದ್ಧತೆಯನ್ನು ತೋರಿಸುತ್ತವೆ. ಇದರ ಮೂಲಕ ಭಾರತದ ಜನಸಾಂಖ್ಯಿಕ ಲಾಭಾಂಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಉದ್ದೇಶವಿದೆ.
ಭಾರತವು ಇತ್ತೀಚಿನ ವರ್ಷಗಳಲ್ಲಿ ಮಹತ್ವದ ಉದ್ಯೋಗ ಬೆಳವಣಿಗೆಯನ್ನು ಕಂಡಿದೆ. ಇದಕ್ಕೆ ರಚನಾತ್ಮಕ ಸುಧಾರಣೆಗಳು, ತೆರಿಗೆ ಸರಳೀಕರಣ ಮತ್ತು ಕೌಶಲ್ಯಾಭಿವೃದ್ಧಿಗೆ ನೀಡಿದ ನಿರಂತರ ಗಮನ ಬೆಂಬಲವಾಗಿದೆ. ನಿಯಂತ್ರಣ ಸಡಿಲಿಕೆ, ಜಿಎಸ್ ಟಿ 2.0 ಮತ್ತು ರಾಜ್ಯಗಳು ಜಾರಿಗೆ ತಂದ ಕಾರ್ಮಿಕ ಸುಧಾರಣೆಗಳಂತಹ ಕ್ರಮಗಳು ಉದ್ಯಮ ಮತ್ತು ಸೇವಾ ವಲಯಗಳಲ್ಲಿ ಕಾರ್ಮಿಕ ಪಡೆಯ ಭಾಗವಹಿಸುವಿಕೆ ಮತ್ತು ಉದ್ಯೋಗ ವೃದ್ಧಿಗೆ ಸಹಕಾರಿಯಾಗಿದೆ ಎಂದು ಸಮೀಕ್ಷೆ ಹೇಳಿದೆ.

ಪ್ರಸ್ತುತ ಉದ್ಯೋಗ ಪ್ರವೃತ್ತಿಗಳು:
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮಹಿಳಾ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆ ದರ ಧನಾತ್ಮಕ ಪ್ರವೃತ್ತಿಯನ್ನು ಕಂಡಿದೆ. ಇದು 2017-18ರಲ್ಲಿ 23.3 ಶೇಕಡದಿಂದ 2023-24ರಲ್ಲಿ 41.7 ಶೇಕಡಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ ನಿರುದ್ಯೋಗ ದರ 5.6 ಶೇಕಡದಿಂದ ಕೇವಲ 3.2 ಶೇಕಡ ಇಳಿಕೆಯಾಗಿದೆ. ಇದು ಹೆಚ್ಚಿನ ಸಮಾವೇಶ ಮತ್ತು ಆರ್ಥಿಕ ಸಬಲೀಕರಣದತ್ತ ಸಾಗುತ್ತಿರುವ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಉದ್ಯೋಗ ಪ್ರವೃತ್ತಿಗಳ ಸಮಗ್ರ ಅವಲೋಕನ ನೀಡಲು ಆರ್ಥಿಕ ಸಮೀಕ್ಷೆ ಹಲವು ಪ್ರಮುಖ ಸಮೀಕ್ಷೆಗಳ ಅಂಕಿಅಂಶಗಳನ್ನು ಉಲ್ಲೇಖಿಸಿದೆ.
ತ್ರೈಮಾಸಿಕ ಮತ್ತು ಮಾಸಿಕ ಅವಧಿಯ ಕಾರ್ಮಿಕ ಶಕ್ತಿ ಸಮೀಕ್ಷೆ ದತ್ತಾಂಶವು ಋತುವಾರಿ ವ್ಯತ್ಯಾಸಗಳೊಂದಿಗೆ ಸ್ಥಿರ ಕಾರ್ಮಿಕ ಮಾರುಕಟ್ಟೆಯನ್ನು ತೋರಿಸುತ್ತದೆ. ಏಪ್ರಿಲ್ ರಿಂದ ಸೆಪ್ಟೆಂಬರ್ 2025ರವರೆಗೆ (H1 FY26) ಪ್ರಸ್ತುತ ವಾರದ ಸ್ಥಿತಿಯಲ್ಲಿ ನಿರುದ್ಯೋಗ ದರ ಇಳಿಕೆಯಾಗಿದ್ದು, ಕಾರ್ಮಿಕ ಶಕ್ತಿ ಭಾಗವಹಿಸುವಿಕೆ ದರ ಸ್ಥಿರಗೊಂಡಿದೆ. ಉದ್ಯೋಗ ಮಟ್ಟಗಳು ಸಾಕಷ್ಟು ಹೆಚ್ಚಾಗಿವೆ ಎಂದು ಇದು ಸೂಚಿಸುತ್ತದೆ. ಇದು ಉದ್ಯೋಗ ಪರಿಸ್ಥಿತಿಗಳ ಸುಧಾರಣೆಯನ್ನು ಸೂಚಿಸುತ್ತದೆ. ಆರ್ಥಿಕ ವರ್ಷ 2026ರ ತ್ರೈಮಾಸಿಕದಲ್ಲಿ (15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ) ಒಟ್ಟು 56.2 ಕೋಟಿ ಜನರು ಉದ್ಯೋಗದಲ್ಲಿದ್ದು, ಆರ್ಥಿಕ ವರ್ಷ 2026ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ದ್ವಿತೀಯ ತ್ರೈಮಾಸಿಕದಲ್ಲಿ ಸುಮಾರು 8.7 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.
ನಿಯಮಿತ ಕಾರ್ಮಿಕ ಶಕ್ತಿ ಸಮೀಕ್ಷೆ(PLFS) ದತ್ತಾಂಶದಿಂದ ಪಡೆದ ಮಾಹಿತಿಯನ್ನು ಉಲ್ಲೇಖಿಸಿ ಸಮೀಕ್ಷೆ ಹೇಳುತ್ತದೆ:
“ಗ್ರಾಮೀಣ ಉದ್ಯೋಗದಲ್ಲಿ ಕೃಷಿ ಕಾರ್ಮಿಕರು (57.7 ಶೇಕಡ) ಮತ್ತು ಸ್ವಯಂ ಉದ್ಯೋಗ (62.8 ಶೇಕಡ) ಪ್ರಾಬಲ್ಯ ಹೊಂದಿವೆ. ಮಹಿಳಾ ಕಾರ್ಮಿಕರು ಇವುಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ. ಇದಕ್ಕೆ ವಿರುದ್ಧವಾಗಿ, ನಗರ ಉದ್ಯೋಗವು ಮುಖ್ಯವಾಗಿ ಸೇವಾ ವಲಯದಲ್ಲಿ (62.0 ಶೇಕಡ) ಕೇಂದ್ರೀಕೃತವಾಗಿದ್ದು, ನಿಯಮಿತ ವೇತನ ಅಥವಾ ಸಂಬಳದ ಉದ್ಯೋಗಗಳು ಅತಿದೊಡ್ಡ ಹಂಚಿಕೆಯನ್ನು (49.8 ಶೇಕಡ) ಹೊಂದಿವೆ.”
ಸಂಘಟಿತ ತಯಾರಿಕಾ ವಲಯವನ್ನು ಒಳಗೊಂಡಿರುವ ಕೈಗಾರಿಕಾ ವಾರ್ಷಿಕ ಸಮೀಕ್ಷೆ (ASI)ಯ ಆರ್ಥಿಕ ವರ್ಷ 2024 ಫಲಿತಾಂಶಗಳು ತಯಾರಿಕಾ ವಲಯದ ಸ್ಥೈರ್ಯವನ್ನು ತೋರಿಸುತ್ತವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಉದ್ಯೋಗದಲ್ಲಿ 6 ಶೇಕಡ ವಾರ್ಷಿಕ ಏರಿಕೆ ಕಂಡುಬಂದಿದೆ. ಇದು ಆರ್ಥಿಕ ವರ್ಷ 2023ಕ್ಕೆ ಹೋಲಿಸಿದರೆ ಆರ್ಥಿಕ ವರ್ಷ 2024ರಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಸೇರ್ಪಡೆಗೆ ಸಮನಾಗಿದೆ. “2015ರಿಂದ 2024ರವರೆಗೆ ಕಳೆದ ದಶಕದಲ್ಲಿ ವಲಯವು 57 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಶೇಕಡಾ 4 ಶೇಕಡ ಸಂಯೋಜಿತ ವಾರ್ಷಿಕ ವೃದ್ಧಿದರ-CAGR ದೊಂದಿಗೆ ಆಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ.
ಅಸಂಸ್ಥಾಪಿತ ವಲಯ ಉದ್ಯಮಗಳ ತ್ರೈಮಾಸಿಕ ಬುಲೆಟಿನ್ ಪ್ರಕಾರ, ಅಸಂಸ್ಥಾಪಿತ ಕೃಷಿಯೇತರ ವಲಯದಲ್ಲಿ ಒಟ್ಟು 7.9 ಕೋಟಿ ಸಂಸ್ಥೆಗಳು ಇದ್ದು, ಅವುಗಳಲ್ಲಿ 12.9 ಕೋಟಿ ಜನರು ಉದ್ಯೋಗದಲ್ಲಿದ್ದಾರೆ. ವಲಯದಲ್ಲಿ ಒಟ್ಟು ಉದ್ಯೋಗಿಗಳಲ್ಲಿ ಕೆಲಸ ಮಾಡುವ ಮಾಲೀಕರ ಹಂಚಿಕೆ 2023-24ರಲ್ಲಿ 58.9 ಶೇಕಡದಿಂದ 2026ರ ದ್ವಿತೀಯ ತ್ರೈಮಾಸಿಕದಲ್ಲಿ 60 ಶೇಕಡಕ್ಕೆ ಏರಿಕೆಯಾಗಿದೆ. ಇದು ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲ ಚಟುವಟಿಕೆಗಳತ್ತ ಸಾಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತದೆ. ಆರ್ಥಿಕ ವರ್ಷ 2026ರ ದ್ವಿತೀಯ ತ್ರೈಮಾಸಿಕದಲ್ಲಿ ವಲಯದ ಗ್ರಾಮೀಣ ಕಾರ್ಮಿಕ ಶಕ್ತಿ 6 ಕೋಟಿ ಇದ್ದು, ಗ್ರಾಮೀಣ ಆರ್ಥಿಕ ಚಟುವಟಿಕೆಗಳಲ್ಲಿ ಅಸಂಸ್ಥಾಪಿತ ಉದ್ಯಮಗಳ ಮಹತ್ವದ ಕೊಡುಗೆಯನ್ನು ತೋರಿಸುತ್ತದೆ. ಮಹಿಳೆಯರು ವಲಯದ ಕಾರ್ಮಿಕ ಶಕ್ತಿಯಲ್ಲಿ 28.7 ಶೇಕಡವನ್ನು ಪ್ರತಿನಿಧಿಸುತ್ತಾರೆ. ಅಸಂಸ್ಥಾಪಿತ ಕೃಷಿಯೇತರ ವಲಯದಲ್ಲಿ ಡಿಜಿಟಲೀಕರಣದ ಹೆಚ್ಚುತ್ತಿರುವ ಪ್ರವೃತ್ತಿಯು ಉದ್ಯಮ ಘಟಕಗಳಲ್ಲಿ ಇಂಟರ್‌ನೆಟ್ ಬಳಕೆಯ ಏರಿಕೆಯಲ್ಲಿ ಪ್ರತಿಬಿಂಬಿಸುತ್ತದೆ. ಇದು 2023-24ರಲ್ಲಿ 26 ಶೇಕಡದಿಂದ ಆರ್ಥಿಕ ವರ್ಷ 2026ರ ದ್ವಿತೀಯ ತ್ರೈಮಾಸಿಕದಲ್ಲಿ 39 ಶೇಕಡಕ್ಕೆ ಸ್ಥಿರವಾಗಿ ಏರಿಕೆಯಾಗಿದೆ.
ಕಾರ್ಮಿಕ ಶಕ್ತಿಗೆ ಸಬಲೀಕರಣ:
ಆರ್ಥಿಕ ಸಮೀಕ್ಷೆ ಇತ್ತೀಚಿನ ನೀತಿ ಉಪಕ್ರಮಗಳ ಪಾತ್ರವನ್ನು ತಿಳಿಸುತ್ತದೆ. ಇವು ಅಸಂಘಟಿತ ಕಾರ್ಮಿಕರನ್ನು ಗುರುತಿಸಿ, ಕಲ್ಯಾಣ ಮತ್ತು ಕೌಶಲ್ಯಾಭಿವೃದ್ಧಿ ವ್ಯವಸ್ಥೆಗಳ ಮೂಲಕ ಅವರನ್ನು ಅಧಿಕೃತ ಆರ್ಥಿಕತೆಯೊಂದಿಗೆ ಇನ್ನಷ್ಟು ಒಗ್ಗೂಡಿಸಲು ಸಹಾಯ ಮಾಡುತ್ತವೆ.
ಇ-ಶ್ರಮ್:
ಅಸಂಘಟಿತ ವಲಯ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸುವ ಮತ್ತು ಅನೌಪಚಾರಿಕ ಹಾಗೂ ಅಧಿಕೃತ ಉದ್ಯೋಗಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಮುಖ ಸಂಸ್ಥಾತ್ಮಕ ವ್ಯವಸ್ಥೆಯಾಗಿ ಇ-ಶ್ರಮ್ ಪೋರ್ಟಲ್ ನ್ನು ಸಮೀಕ್ಷೆ ಗುರುತಿಸಿದೆ. ಈ ಪೋರ್ಟಲ್ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಅಂಕಿಅಂಶ ಆಗಿದ್ದು, ಇದರಲ್ಲಿ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಗೃಹ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರ ಮಾಹಿತಿ ಒಳಗೊಂಡಿದೆ. ಜನವರಿ 2026ರ ವೇಳೆಗೆ, ಈ ಪೋರ್ಟಲ್‌ನಲ್ಲಿ 31 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ನೋಂದಾಯಿತರಾಗಿದ್ದಾರೆ. ಇದು ಭಾರತದ ಅನೌಪಚಾರಿಕ ವಲಯದ ಕಾರ್ಮಿಕ ಶಕ್ತಿಯನ್ನು ಅಧಿಕೃತಗೊಳಿಸಲು ಮತ್ತು ಬೆಂಬಲಿಸಲು ಕೈಗೊಂಡ ಪ್ರಯತ್ನಗಳಲ್ಲಿ ಮಹತ್ವದ ಮುನ್ನಡೆಯಾಗಿದೆ. ವಿಶೇಷವಾಗಿ, ಒಟ್ಟು ನೋಂದಾಯಿತರಲ್ಲಿ ಮಹಿಳೆಯರು 54 ಶೇಕಡವನ್ನು ಹೊಂದಿದ್ದು, ಲಿಂಗ ಆಧಾರಿತ ಕಲ್ಯಾಣ ಯೋಜನೆಗಳ ವ್ಯಾಪ್ತಿಯನ್ನು ಬಹಳವಾಗಿ ಬಲಪಡಿಸಿದೆ ಎಂದು ದಾಖಲೆ ತಿಳಿಸುತ್ತದೆ.
ಇ-ಶ್ರಮ್ ವೇದಿಕೆ ಉದ್ಯೋಗಾವಕಾಶಗಳು, ಶಿಷ್ಯವೃತ್ತಿ ಅವಕಾಶಗಳು ಮತ್ತು ಕೌಶಲ್ಯಾಭಿವೃದ್ಧಿ ಸಂಪರ್ಕಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇದರಿಂದ ಕಾರ್ಮಿಕರು ಉತ್ತಮ ಉದ್ಯೋಗ ಅವಕಾಶಗಳತ್ತ ವರ್ಗಾವಣೆಯಾಗಲು ಸಾಧ್ಯವಾಗುತ್ತದೆ. ಈ ಪ್ರಯತ್ನಗಳು ಭಾರತದ ಅನೌಪಚಾರಿಕ ವಲಯದಲ್ಲಿ ಕಾರ್ಮಿಕ ಶಕ್ತಿಗೆ ಉತ್ಪಾದಕತೆ ಮತ್ತು ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವ ವಿಶಾಲ ದೃಷ್ಟಿಕೋನಕ್ಕೆ ಹೊಂದಿಕೆಯಾಗಿವೆ.
ರಾಷ್ಟ್ರೀಯ ಉದ್ಯೋಗ ಸೇವಾ ಪೋರ್ಟಲ್:
2015ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಉದ್ಯೋಗ ಸೇವಾ ಪೋರ್ಟಲ್ ಉದ್ಯೋಗ ಹುಡುಕುವವರು, ಉದ್ಯೋಗದಾತರು, ತರಬೇತಿ ಪೂರೈಕೆದಾರರು ಮತ್ತು ವೃತ್ತಿ ಮಾರ್ಗದರ್ಶನ ಸಂಸ್ಥೆಗಳನ್ನು ಸಂಪರ್ಕಿಸುವ ಏಕೈಕ ಪರಿಹಾರವಾಗಿ ಬೆಳೆಯುತ್ತಿದೆ. ಉಚಿತ ನೋಂದಣಿ, ಉದ್ಯೋಗ ಅರ್ಜಿ ಪ್ರಕ್ರಿಯೆ, ಸಂದರ್ಶನ ಸಹಾಯ ಮತ್ತು ಬಹುಭಾಷಾ ಸಹಾಯವಾಣಿ ಸೇರಿದಂತೆ ಹಲವು ಸೇವೆಗಳನ್ನು ಇದು ಒದಗಿಸುತ್ತದೆ. ಪ್ರಾರಂಭದಿಂದಲೂ ಪೋರ್ಟಲ್ ಪ್ರಮುಖ ಉದ್ಯೋಗ ಸೌಲಭ್ಯ ವೇದಿಕೆಯಾಗಿದ್ದು, 5.9 ಕೋಟಿಗೂ ಹೆಚ್ಚು ನೋಂದಾಯಿತ ಉದ್ಯೋಗಾರ್ಥಿಗಳು ಮತ್ತು 53 ಲಕ್ಷ ಉದ್ಯೋಗದಾತರು ವಿವಿಧ ವಲಯಗಳಲ್ಲಿ ಸೇರಿದ್ದಾರೆ. ಸುಮಾರು 8 ಕೋಟಿ ಖಾಲಿ ಹುದ್ದೆಗಳನ್ನು ಸಂಗ್ರಹಿಸಿದೆ ಎಂದು ಸಮೀಕ್ಷೆ ಹೇಳುತ್ತದೆ.
“ಆರ್ಥಿಕ ವರ್ಷ 2023ಕ್ಕೆ ಹೋಲಿಸಿದರೆ ಆರ್ಥಿಕ ವರ್ಷ 2024ರಲ್ಲಿ ಉದ್ಯೋಗ ಖಾಲಿ ಹುದ್ದೆಗಳು 200 ಶೇಕಡಕ್ಕೂ ಹೆಚ್ಚು ಏರಿಕೆಯಾಗಿದೆ. ಆರ್ಥಿಕ ವರ್ಷ 2025ರಲ್ಲಿ ಖಾಲಿ ಹುದ್ದೆಗಳು 2.8 ಕೋಟಿ ಮೀರಿದ್ದು, 2026ರ ಸೆಪ್ಟೆಂಬರ್ ವೇಳೆಗೆ ಈಗಾಗಲೇ 2.3 ಕೋಟಿ ದಾಟಿದೆ,” ಎಂದು ದಾಖಲೆ ಸೇರಿಸುತ್ತದೆ.
ಇದಲ್ಲದೆ, ರಾಷ್ಟ್ರೀಯ ವೃತ್ತಿ ಸೇವೆ ಪೋರ್ಟಲ್ ವಿದೇಶಾಂಗ ಸಚಿವಾಲಯದ ಇ-ವಲಸೆ e-Migrate ವ್ಯವಸ್ಥೆಯೊಂದಿಗೆ ಏಕೀಕರಣಗೊಂಡಿದ್ದು, ಪ್ರಮಾಣಿತ ನೇಮಕಾತಿ ಸಂಸ್ಥೆಗಳು ಪರಿಶೀಲಿತ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳನ್ನು ಪ್ರಕಟಿಸಲು ಸಹಾಯ ಮಾಡುತ್ತದೆ. ಕೌಶಲ್ಯ ಭಾರತ ಡಿಜಿಟಲ್ ವೇದಿಕೆ-Skill India Digital Hub ಜೊತೆಗೆ ಏಕೀಕರಣದಿಂದ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿ ಹಾಕುವ ಮೊದಲು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಪೋರ್ಟಲ್ ಖಾಸಗಿ ವೇದಿಕೆಗಳೊಂದಿಗೆ ಸಹಭಾಗಿತ್ವದಲ್ಲಿ ಉಚಿತ ಆನ್‌ಲೈನ್ ತರಬೇತಿಯನ್ನು ನೀಡುತ್ತಿದೆ. ಪ್ರಸ್ತುತ, ಇದು 30 ರಾಜ್ಯ ಉದ್ಯೋಗ ಪೋರ್ಟಲ್‌ಗಳೊಂದಿಗೆ ಏಕೀಕೃತವಾಗಿದೆ.
ಕಾರ್ಮಿಕ ಸಂಹಿತೆಗಳ ಮೂಲಕ ಉದ್ಯೋಗ ವೃದ್ಧಿಗೆ ವೇಗ:
ಆರ್ಥಿಕ ಸಮೀಕ್ಷೆ 2025-26 ಕಾರ್ಮಿಕ ಸಂಹಿತೆಗಳ ಸಾಮರ್ಥ್ಯವನ್ನು ತಿಳಿಸುತ್ತದೆ. ನಾಲ್ಕು ಕಾರ್ಮಿಕ ಸಂಹಿತೆಗಳು—ನಾಲ್ಕು ಕಾರ್ಮಿಕ ಸಂಹಿತೆಗಳು — ವೇತನ ಸಂಹಿತೆ 2019 (Code on Wages 2019), ಕೈಗಾರಿಕಾ ಸಂಬಂಧ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020, ಹಾಗೂ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020 — ನಿಯಮಗಳನ್ನು ಸರಳಗೊಳಿಸಲು ಮತ್ತು ಕಾರ್ಮಿಕರಿಗೆ ರಕ್ಷಣೆಯನ್ನು ವಿಸ್ತರಿಸಲು 29 ಕೇಂದ್ರ ಕಾನೂನುಗಳನ್ನು ಏಕೀಕರಿಸಿವೆ. ಈ ಸಂಹಿತೆಗಳ ಜಾರಿಗೆ 21 ನವೆಂಬರ್ 2025ರಂದು ಅಧಿಸೂಚನೆ ಹೊರಡಿಸಲಾಗಿದೆ.
ಸಮೀಕ್ಷೆಯ ಪ್ರಕಾರ, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಅವರಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವಂತೆ, ನಿಯಂತ್ರಣ ಮತ್ತು ಕೆಲಸದ ಸಮಯದಲ್ಲಿ ಸಡಿಲಿಕೆ ನಡುವಿನ ಸಮತೋಲನ ಸಾಧಿಸಲು ಈ ಸಂಹಿತೆಗಳು ಪ್ರಯತ್ನಿಸಿವೆ. ಇವು 2015ರಿಂದ 2019ರವರೆಗೆ ಸರ್ಕಾರ, ಉದ್ಯೋಗದಾತರು, ಕೈಗಾರಿಕಾ ಪ್ರತಿನಿಧಿಗಳು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ನಡುವೆ ಸಭೆಗಳಲ್ಲಿ ನಡೆದ ಚರ್ಚೆಗಳ ಫಲವಾಗಿದೆ.
“ಸಂಹಿತೆಗಳ ಜಾರಿಗೆ ಕಾರ್ಮಿಕ ಮಾರುಕಟ್ಟೆ ಪರಿವರ್ತನೆಯ ಮೊದಲ ಹೆಜ್ಜೆಯಾಗಿದೆ. ಈ ವರ್ಗಾವಣೆಗಾಗಿ ಖಾಸಗಿ ವಲಯದ ಸಮನ್ವಯ ಮತ್ತು ಹೂಡಿಕೆ ಅಗತ್ಯವಿದೆ,” ಎಂದು ಸಮೀಕ್ಷೆ ಹೇಳುತ್ತದೆ. ಕಂಪೆನಿಗಳು ತಮ್ಮ ವ್ಯವಸ್ಥೆಗಳನ್ನು ಬಲಪಡಿಸಬೇಕು, ನೀತಿಗಳನ್ನು ನವೀಕರಿಸಬೇಕು, ಕಾರ್ಮಿಕ ಶಕ್ತಿ ಮಾದರಿಗಳನ್ನು ಮರುಮೌಲ್ಯಮಾಪನ ಮಾಡಬೇಕು ಮತ್ತು ಸ್ಪರ್ಧಾತ್ಮಕವಾಗಿರಲು ಡಿಜಿಟಲ್ ಸಿದ್ಧತೆಯನ್ನು ಹೆಚ್ಚಿಸಬೇಕು. ಸಂಹಿತೆಗಳು ಏಕೀಕೃತ ಚೌಕಟ್ಟನ್ನು ಒದಗಿಸುತ್ತವೆ, ಆದರೆ ಈ ಚೌಕಟ್ಟನ್ನು ದಿನನಿತ್ಯದ ಕಾರ್ಯಾಚರಣೆಯಲ್ಲಿ ಅಳವಡಿಸುವ ಜವಾಬ್ದಾರಿ ಖಾಸಗಿ ವಲಯದ ಮೇಲಿದೆ.
ಗಿಗ್ ಕಾರ್ಮಿಕ ಶಕ್ತಿಯ ಹೊಸ ಎಲ್ಲೆಗಳು:
ಡಿಜಿಟಲ್ ವೇದಿಕೆಗಳ ಇತ್ತೀಚಿನ ಬೆಳವಣಿಗೆಗಳು ಮತ್ತು ನೀತಿ ಸುಧಾರಣೆಗಳು ಕೆಲಸದ ರಚನೆಗಳನ್ನು ಮರುಆಕಾರಗೊಳಿಸುತ್ತಿವೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಇವು ಸಡಿಲ ಕೆಲಸದ ಸಮಯವನ್ನು ಉತ್ತೇಜಿಸುವುದರ ಜೊತೆಗೆ ಉದ್ಯೋಗವನ್ನು ಅಧಿಕೃತಗೊಳಿಸುವತ್ತ ಸಹಾಯ ಮಾಡುತ್ತಿವೆ. ಕಾರ್ಮಿಕ ಸಂಹಿತೆಗಳು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಅಧಿಕೃತವಾಗಿ ಗುರುತಿಸಿ, ಸಾಮಾಜಿಕ ಭದ್ರತೆ, ಕಲ್ಯಾಣ ನಿಧಿಗಳು ಮತ್ತು ಲಾಭಗಳ ಸೌಲಭ್ಯವನ್ನು ವಿಸ್ತರಿಸಿವೆ.
ಡೆಲಿವರಿ, ರೈಡ್‌ಶೇರಿಂಗ್ ಮತ್ತು ಫ್ರೀಲಾನ್ಸಿಂಗ್ ನ್ನು ಒಳಗೊಂಡ ಗಿಗ್ ಆರ್ಥಿಕತೆ ರಚನಾತ್ಮಕ ಬೆಳವಣಿಗೆಯನ್ನು ಕಂಡಿದೆ. ಇದು ಅನೌಪಚಾರಿಕ ಉದ್ಯೋಗಗಳನ್ನು ಕ್ರಮೇಣ ವ್ಯವಸ್ಥೆಯೊಳಗೆ ಒಗ್ಗೂಡಿಸಿದ ಪಾತ್ರಗಳಾಗಿ ಪರಿವರ್ತಿಸುತ್ತಿದೆ.
ಆರ್ಥಿಕ ವರ್ಷ 2021ರಲ್ಲಿ 77 ಲಕ್ಷ ಕಾರ್ಮಿಕರಿಂದ ಆರ್ಥಿಕ ವರ್ಷ 2025ರಲ್ಲಿ ಈ ವಲಯವು 55 ಶೇಕಡ ಏರಿಕೆಯೊಂದಿಗೆ 120 ಲಕ್ಷ ಕಾರ್ಮಿಕರಿಗೆ ತಲುಪಿದೆ. ಇದಕ್ಕೆ 80 ಕೋಟಿಗೂ ಹೆಚ್ಚು ಬಳಕೆದಾರರಲ್ಲಿ ಸ್ಮಾರ್ಟ್‌ಫೋನ್ ವ್ಯಾಪ್ತಿ ಮತ್ತು ತಿಂಗಳಿಗೆ 15 ಬಿಲಿಯನ್ ಯುಪಿಐ ವ್ಯವಹಾರಗಳು ಪ್ರಮುಖ ಚಾಲಕಶಕ್ತಿಯಾಗಿವೆ. ಈಗ ಗಿಗ್ ಕಾರ್ಮಿಕರು ಭಾರತದ ಒಟ್ಟು ಕಾರ್ಮಿಕ ಶಕ್ತಿಯ 2 ಶೇಕಡಕ್ಕೂ ಹೆಚ್ಚು ಪ್ರತಿನಿಧಿಸುತ್ತಿದ್ದಾರೆ. ಒಟ್ಟಾರೆ ಉದ್ಯೋಗ ವೃದ್ಧಿಗಿಂತ ಗಿಗ್ ಉದ್ಯೋಗಿಗಳ ಬೆಳವಣಿಗೆ ವೇಗವಾಗಿದ್ದು, ಕೃಷಿಯೇತರ ಗಿಗ್ ಉದ್ಯೋಗಗಳು 2029-30ರ ವೇಳೆಗೆ ಕಾರ್ಮಿಕ ಶಕ್ತಿಯ 6.7 ಶೇಕಡವಾಗುವ ನಿರೀಕ್ಷೆಯಿದೆ ಮತ್ತು ದೇಶದ ಜಿಡಿಪಿಗೆ 2.35 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡಲಿದೆ ಎಂದು ಸಮೀಕ್ಷೆ ಹೇಳುತ್ತದೆ.
ಗಿಗ್ ಆರ್ಥಿಕತೆ ವಿಸ್ತರಿಸುತ್ತಿರುವಂತೆ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಅದರ ಪರಿಣಾಮ ಇನ್ನಷ್ಟು ಸ್ಪಷ್ಟವಾಗಲಿದೆ. ಆದರೂ, ಇದು ಅಪೂರ್ವ ಆದಾಯ ಸೃಷ್ಟಿ ಮತ್ತು ಆರ್ಥಿಕ ವೈವಿಧ್ಯೀಕರಣದ ಅವಕಾಶಗಳನ್ನು ಒದಗಿಸಿದರೂ, ಅದರ ಸವಾಲುಗಳನ್ನು ಪರಿಹರಿಸುವುದು ದೀರ್ಘಕಾಲೀನ ಹಾಗೂ ಸಮಾನತೆಯ ಬೆಳವಣಿಗೆಯನ್ನು ಖಚಿತಪಡಿಸಲು ಅತ್ಯಂತ ಅಗತ್ಯವಾಗಿದೆ.
ಸಡಿಲಿಕೆ ಕೆಲಸದ ಸಮಯಗಳ ಅಗತ್ಯ
ಉದ್ಯೋಗ ಮಾದರಿಗಳು ಲಿಂಗ ಆಧಾರಿತ ಪ್ರಮುಖ ಆಯಾಮಗಳನ್ನು ಹೊಂದಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗದಲ್ಲಿ ತೊಡಗಿರುವ ಅಥವಾ ಕುಟುಂಬ ಉದ್ಯಮಗಳಿಗೆ ಸಹಕಾರ ನೀಡುವ ಮಹಿಳೆಯರ ಪ್ರಮಾಣ ತುಲನಾತ್ಮಕವಾಗಿ ಹೆಚ್ಚಾಗಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ನಡೆಸಿದ ಸಮಯ ಬಳಕೆ ಸಮೀಕ್ಷೆಯ ಕಂಡುಬಂದ ಅಂಶಗಳು, ವ್ಯಕ್ತಿಗಳು ವಿವಿಧ ಚಟುವಟಿಕೆಗಳ ಮೇಲೆ ಎಷ್ಟು ಸಮಯವನ್ನು ವ್ಯಯಿಸುತ್ತಾರೆ ಎಂಬುದನ್ನು ಅಳೆಯಲು ಸಹಕಾರಿಯಾಗಿದೆ.
ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದಂತೆ, ಒಟ್ಟು ಉಪಯೋಗದ ಪ್ರಕಾರ ಮಹಿಳೆಯರು ಪ್ರಮುಖ ಆರೈಕೆದಾರರಾಗಿದ್ದಾರೆ. 15-59 ವಯೋಮಾನದ ಮಹಿಳೆಯರಲ್ಲಿ 41 ಶೇಕಡ ಮಂದಿ ತಮ್ಮ ಮನೆಯ ಸದಸ್ಯರ ಆರೈಕೆಯಲ್ಲಿ ಭಾಗವಹಿಸುತ್ತಿದ್ದಾರೆ; ಇದೇ ವಯೋಮಾನದ ಪುರುಷರಲ್ಲಿ ಈ ಭಾಗವಹಿಸುವಿಕೆ 21.4 ಶೇಕಡವಾಗಿದೆ.
ಸಮೀಕ್ಷೆಯಲ್ಲಿ, ಮಹಿಳೆಯರು ವೇತನದ ಹಾಗೂ ವೇತನವಿಲ್ಲದ ಚಟುವಟಿಕೆಗಳ ಮೇಲೆ ಒಟ್ಟಾಗಿ ವ್ಯಯಿಸುವ ಸಮಯವು ಪುರುಷರಿಗಿಂತ ಹೆಚ್ಚು ಎಂಬುದನ್ನು ಸಹ ತೋರಿಸುತ್ತದೆ. ಮಹಿಳೆಯ ಮನೆಯ ಸದಸ್ಯರು ಪುರುಷರಿಗಿಂತ ವೇತನವಿಲ್ಲದ ಚಟುವಟಿಕೆಗಳಿಗೆ ಬಹಳ ಹೆಚ್ಚು ಸಮಯ ಮೀಸಲಿಡುತ್ತಾರೆ. ಮಹಿಳೆಯರು ವೇತನದ ಕೆಲಸದಲ್ಲಿ ಭಾಗವಹಿಸಿದಾಗ ಸಾಕಷ್ಟು ಸಮಯ ಕೊಡುಗೆ ನೀಡಿದರೂ, ಅವರ ಒಟ್ಟಾರೆ ಭಾಗವಹಿಸುವಿಕೆ ಪುರುಷರಿಗಿಂತ ಕಡಿಮೆಯಾಗಿದೆ. ಈ ಅಂದಾಜುಗಳು ಮಹಿಳಾ ಕಾರ್ಮಿಕರ ಮೇಲೆ ಇರುವ ದ್ವಂದ್ವ ಕೆಲಸದ ಹೊರೆ — ಅಂದರೆ ಆರೈಕೆ ಕಾರ್ಯಗಳು ಮತ್ತು ವೇತನವಿಲ್ಲದ ಕೆಲಸಗಳ ಭಾರವನ್ನು ಸ್ಪಷ್ಟಪಡಿಸುತ್ತವೆ. ಇದೇ ಕಾರಣದಿಂದ ಮಹಿಳೆಯರು ಸಡಿಲ ಅವಧಿಯ ಕೆಲಸದ ಮಾದರಿಗಳತ್ತ ಹೆಚ್ಚಿನ ಆಸಕ್ತಿ ಅಥವಾ ಒಲವು ಹೊಂದಿರುವ ಸಾಧ್ಯತೆ ಇದೆ.
******
(रिलीज़ आईडी: 2220605)
आगंतुक पटल : 3