ಹಣಕಾಸು ಸಚಿವಾಲಯ
‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ಪ್ರಾಯಸ್, ಸಬ್ಕಾ ವಿಶ್ವಾಸ್’ ಆಧಾರದ ಮೇಲೆ ಸಮಗ್ರ ಬೆಳವಣಿಗೆಯು ಭಾರತಕ್ಕೆ ಸಾಕಷ್ಟು ಲಾಭ ಉಂಟುಮಾಡಿದೆ
ಹಣರಹಿತ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರತವು ಮಹತ್ವದ ಸಾಧನೆ ಮಾಡಿದೆ; 2022-23ರಲ್ಲಿ ಭಾರತದ ಬಡತನ ಪ್ರಮಾಣವು ಗಣನೀಯವಾಗಿ ಶೇಕಡಾ 5.3ಕ್ಕೆ ಇಳಿಕೆಯಾಗಿದೆ
ಸಾಮಾಜಿಕ ರಕ್ಷಣಾ ವ್ಯವಸ್ಥೆಗಳ ಅಡಿಯಲ್ಲಿ ಒಳಗೊಂಡಿರುವ ಜನಸಂಖ್ಯೆಯ ಪ್ರಮಾಣವು 2016ರ ಶೇಕಡಾ 22 ರಿಂದ 2025ರಲ್ಲಿ ಶೇಕಡಾ 64.3ಕ್ಕೆ ಹೆಚ್ಚಾಗಿದೆ
ಸರ್ಕಾರದ ಸಾಮಾಜಿಕ ಸೇವೆಗಳ ವೆಚ್ಚ (SSE) ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಅನುಗುಣವಾಗಿ ಸಾಗಿದ್ದು, ಆರ್ಥಿಕ ವರ್ಷ 2022ರಿಂದ ಆರ್ಥಿಕ ವರ್ಷ 2026ರವರೆಗೆ ಶೇಕಡಾ 12 ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ದಾಖಲಿಸಿದೆ
प्रविष्टि तिथि:
29 JAN 2026 1:56PM by PIB Bengaluru
ಕೇಂದ್ರ ಸರ್ಕಾರವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ಎಂಬ ಮನೋಭಾವದೊಂದಿಗೆ ಕೈಗೆಟುಕುವ ವಸತಿ, ಸಾಮಾಜಿಕ ಹಾಗೂ ಆಹಾರ ಭದ್ರತೆ, ಹಣಕಾಸು ಒಳಗೊಳ್ಳಿಕೆ, ಮೂಲಭೂತ ಸೌಲಭ್ಯಗಳಿಗೆ ಸರ್ವರಿಗೂ ಲಭ್ಯವಾಗುವ ಮತ್ತು ಒಟ್ಟಾರೆ ಜೀವನಮಟ್ಟ ಹಾಗೂ ಕಲ್ಯಾಣವನ್ನು ಸುಧಾರಿಸುವತ್ತ ಮಹತ್ವದ ಪ್ರಯತ್ನಗಳನ್ನು ಕೈಗೊಂಡಿದೆ.
ಈ ಕ್ರಮಗಳು ಬಡತನ ನಿರ್ಮೂಲನೆಗೆ ದಿಟ್ಟ ಮತ್ತು ಕಣ್ಣಿಗೆ ಕಾಣಿಸುವಂತೆ ಸಾಧನೆಗಳನ್ನು ತಂದುಕೊಟ್ಟಿದ್ದು, ಸಮಾಜದಲ್ಲಿ ಜನರ ಮಧ್ಯೆ ಅಸಮಾನತೆ ಹೆಚ್ಚಾಗದಂತೆ ತಡೆಯಲು ಸಹಕಾರಿಯಾಗಿವೆ. ಇದನ್ನು ಇಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
ಆರ್ಥಿಕ ಸಮೀಕ್ಷೆ ಆದಾಯ ಬೆಂಬಲ, ಸಾಮಾಜಿಕ ರಕ್ಷಣೆ, ಕಾರ್ಮಿಕ ಮಾರುಕಟ್ಟೆ ನಿಯಂತ್ರಣ ಮತ್ತು ಎಲ್ಲರಿಗೂ ಶಿಕ್ಷಣದಂತಹ ನೀತಿಗಳು ತಲೆಮಾರುಗಳಿಂದ ತಲೆಮಾರಿಗೆ ಹಾಗೂ ವ್ಯಕ್ತಿಯ ಜೀವನಾವಧಿಯೊಳಗೂ ಮೇಲ್ಮಟ್ಟದ ಸಾಮಾಜಿಕ ಚಲನೆ (upward social mobility) ಸಾಧಿಸುವ ಗುರಿಯನ್ನು ರಾಜ್ಯವು ನೆರವೇರಿಸಲು ಸಹಕಾರಿಯಾಗುತ್ತವೆ ಎಂದು ಹೇಳುತ್ತದೆ. ಇಂಟರ್ನೆಟ್ ಬಳಕೆದಾರರ ಆಶಯಗಳು ಮತ್ತು ನೀತಿ ಪ್ರಯತ್ನಗಳನ್ನು ಸಾಮಾನ್ಯವಾಗಿ ಬಡತನ ಮತ್ತು ವಂಚನೆಗಳ ಮಾನದಂಡಗಳ ಮೂಲಕ ಅಳೆಯಲಾಗುತ್ತದೆ. ಇಂತಹ ಒಂದು ಮಾನದಂಡವೆಂದರೆ ವಿಶ್ವ ಬ್ಯಾಂಕ್‌ನ (WB) ಅಂತಾರಾಷ್ಟ್ರೀಯ ಬಡತನ ರೇಖೆ (International Poverty Line - IPL). ಇದು ಆಹಾರ, ಬಟ್ಟೆ ಮತ್ತು ಆಶ್ರಯದಂತಹ ಮೂಲಭೂತ ಅಗತ್ಯಗಳನ್ನು ಜನರಿಗೆ ಪೂರೈಸಲು ವ್ಯಕ್ತಿಗೆ ದಿನಕ್ಕೆ ಬೇಕಾದ ಕನಿಷ್ಠ ಹಣದ ಪ್ರಮಾಣವನ್ನು ಸೂಚಿಸುತ್ತದೆ.
ಜೂನ್ 2025ರಲ್ಲಿ ವಿಶ್ವ ಬ್ಯಾಂಕ್ ಬಡತನ ರೇಖೆಯನ್ನು ದಿನಕ್ಕೆ 2.15 ಡಾಲರ್ ನಿಂದ 3.00ಡಾಲರ್ ಗೆ ಹೆಚ್ಚಿಸಿತು. ಈ ಪರಿಷ್ಕರಣೆ ಹಣದ ಖರೀದಿ ಸಾಮರ್ಥ್ಯವನ್ನು 2021ರ ಬೆಲೆಗಳಿಗೆ ಹೊಂದಿಸಿಕೊಂಡಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಪರಿಷ್ಕೃತ ಭಾರತದ ಬಡತನ ದರಗಳ(IPL) ಅನ್ವಯ 2022-23ರಲ್ಲಿ ಭಾರತದಲ್ಲಿ ಬಡತನ ಪ್ರಮಾಣವು ತೀವ್ರ ಬಡತನಕ್ಕೆ 5.3 ಶೇಕಡಾ ಮತ್ತು ಕಡಿಮೆ-ಮಧ್ಯಮ ಆದಾಯ ಬಡತನಕ್ಕೆ 23.9 ಶೇಕಡಾ ಎಂದು ಅಂದಾಜಿಸಲಾಗಿದೆ.
ವಿಶ್ವ ಬ್ಯಾಂಕ್ ಪ್ರಕಾರ, ಜನರ ಬಳಿ ಹಣವಿಲ್ಲದ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರತವು ಮಹತ್ವದ ಸಾಧನೆ ಮಾಡಿದೆ. ವಿಶ್ವ ಬ್ಯಾಂಕ್‌ನ ಅಂದಾಜುಗಳ ಜೊತೆಗೆ, ತೆಂಡುಲ್ಕರ್ ಸಮಿತಿ ಬಡತನ ರೇಖೆಯ ಆಧಾರದಲ್ಲಿ ಸಂಶೋಧಕರು ಮಾಡಿದ ಅಂದಾಜುಗಳು ಕೂಡ ಭಾರತದಲ್ಲಿ ಬಡತನದಲ್ಲಿ ತೀಕ್ಷ್ಣ ಹಾಗೂ ವ್ಯಾಪಕ ಇಳಿಕೆಯನ್ನು ಸೂಚಿಸುತ್ತವೆ. 2011-12 ಮತ್ತು 2023-24ರ ನಡುವೆ, ಪುನರ್ವಿತರಣಾತ್ಮಕ ಕ್ರಮಗಳಿಂದ ಬೆಂಬಲಿತ ನಿರಂತರ ಆರ್ಥಿಕ ಬೆಳವಣಿಗೆಯು ಬಡತನ ಪ್ರಮಾಣವನ್ನು 2011-12ರಲ್ಲಿ 21.9 ಶೇಕಡದಿಂದ 2022-23ರಲ್ಲಿ 4.7 ಶೇಕಡಕ್ಕೆ ಮತ್ತು 2023-24ರಲ್ಲಿ ಇನ್ನಷ್ಟು ಇಳಿದು 2.3 ಶೇಕಡಕ್ಕೆ ತಗ್ಗಿಸಿದೆ ಎಂದು ಅಂದಾಜಿಸಲಾಗಿದೆ.
ಈ ಅಂದಾಜುಗಳು ರಾಜ್ಯಗಳಾದ್ಯಂತ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಡತನ ಪ್ರಮಾಣ ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಸತತ ಅಭಿವೃದ್ಧಿ ಗುರಿ (SDG) ರಾಷ್ಟ್ರೀಯ ಸೂಚಕ ಚೌಕಟ್ಟು (NIF) ಪ್ರಗತಿ ವರದಿ 2025 ಈ ಯೋಜನೆಗಳ ಪರಿಣಾಮವನ್ನು ಸಮಗ್ರವಾಗಿ ವಿವರಿಸುತ್ತದೆ ಮತ್ತು ಸ್ಥಿರ ಅಭಿವೃದ್ಧಿ ದರ (SDG) ಗುರಿಗಳನ್ನು ಸಾಧಿಸುವತ್ತ ರೂಪಾಂತರ ವಿಸ್ತರಣೆಯ ಚಿತ್ರಣವನ್ನು ಒದಗಿಸುತ್ತದೆ.
ಸಾಮಾಜಿಕ ರಕ್ಷಣಾ ವ್ಯವಸ್ಥೆಗಳ ಅಡಿಯಲ್ಲಿ ಒಳಗೊಂಡಿರುವ ಜನಸಂಖ್ಯೆಯ ಪ್ರಮಾಣವು 2016ರ 22 ಶೇಕಡದಿಂದ 2025ರಲ್ಲಿ 64.3 ಶೇಕಡಕ್ಕೆ ಹೆಚ್ಚಾಗಿದೆ. ಇದು ದೇಶದಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿ ಗಣನೀಯವಾಗಿ ವಿಸ್ತರಿಸಿರುವುದನ್ನು ಸೂಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಕುಡಿಯುವ ನೀರಿನ ಮೂಲಗಳನ್ನು ಬಳಸುವ ಜನಸಂಖ್ಯೆಯ ಪ್ರಮಾಣವು 2015-16ರ 94.6 ಶೇಕಡದಿಂದ 2024-25ರಲ್ಲಿ 99.6 ಶೇಕಡಕ್ಕೆ ಏರಿಕೆಯಾಗಿದೆ. ಸರ್ವಜನ ಗೃಹ ವಿದ್ಯುದೀಕರಣವನ್ನು 2021-22ರಲ್ಲಿ ಸಾಧಿಸಲಾಗಿದೆ. 2019-20ರಲ್ಲಿ ದೇಶದ ಶೇಕಡಾ 100 ಜಿಲ್ಲೆಗಳನ್ನು ತೆರೆಯಲ್ಲಿನ ಮಲವಿಸರ್ಜನೆ ಮುಕ್ತ (ODF) ಎಂದು ಘೋಷಿಸಲಾಯಿತು. ಜೊತೆಗೆ, ಸ್ವಚ್ಛ ಭಾರತ ಮಿಷನ್ (SBM) ಅಡಿಯಲ್ಲಿ 96 ಶೇಕಡಕ್ಕೂ ಹೆಚ್ಚು ಗ್ರಾಮಗಳು ODF ಪ್ಲಸ್ ಸ್ಥಾನಮಾನವನ್ನು ಪಡೆದಿವೆ (31 ಡಿಸೆಂಬರ್ 2025ರ ವೇಳೆಗೆ).

ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಅನುಗುಣವಾಗಿ ಸಾಮಾನ್ಯ ಸರ್ಕಾರದ ಸಾಮಾಜಿಕ ಸೇವೆಗಳ ವೆಚ್ಚ ಕೂಡ ಸಮಾನ ವೇಗದಲ್ಲಿ ಮುಂದುವರೆದಿದೆ. 2022ರಿಂದ ಸಾಮಾನ್ಯ ಸರ್ಕಾರದ ಭದ್ರತಾ ಸೇವೆ (SSE) ಏರಿಕೆಯಯನ್ನು ತೋರಿಸಿದೆ. 2022ರಿಂದ 2026 (ಬಜೆಟ್ ಅಂದಾಜು - BE) ವರೆಗೆ ಇರುವ ಐದು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಸೇವೆಗಳ ವೆಚ್ಚ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ಶೇಕಡಾ 12ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಶಿಕ್ಷಣ ಕ್ಷೇತ್ರದ ವೆಚ್ಚವು ಶೇಕಡಾ 11 ದರದಲ್ಲಿ, ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR)ದಲ್ಲಿ ವೃದ್ಧಿಯಾಗಿದ್ದು, ಆರೋಗ್ಯ ಕ್ಷೇತ್ರದ ವೆಚ್ಚವು ಇದೇ ಅವಧಿಯಲ್ಲಿ ಶೇಕಡಾ 8 ದರದಲ್ಲಿ ಹೆಚ್ಚಾಗಿದೆ.
*****
(रिलीज़ आईडी: 2220056)
आगंतुक पटल : 6