ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಭಾರತದ ಕಥಾ ನಿರೂಪಣೆ ಪರಂಪರೆ ಮತ್ತು ವೇವ್ಸ್ ದೃಷ್ಟಿಕೋನ ಪ್ರದರ್ಶಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸ್ತಬ್ಧಚಿತ್ರ

प्रविष्टि तिथि: 26 JAN 2026 4:04PM by PIB Bengaluru

ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯ ಪಥದಲ್ಲಿ ಇಂದು ನಡೆದ ಪರೇಡ್ ನಲ್ಲಿ ಸಾಗಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ (MIB) ಸ್ತಬ್ಧಚಿತ್ರದ ಕೆಲವು ನೋಟಗಳು ಇಲ್ಲಿವೆ. "ಭಾರತ್ ಗಾಥಾ: ಶ್ರುತಿ, ಕೃತಿ, ದೃಷ್ಟಿ" ಎಂಬ ಶೀರ್ಷಿಕೆಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸ್ತಬ್ಧಚಿತ್ರವು ಪ್ರಾಚೀನ ಮೌಖಿಕ ಸಂಪ್ರದಾಯಗಳಿಂದ ಸಮಕಾಲೀನ ಮಾಧ್ಯಮ ಮತ್ತು ಸಿನಿಮಾವರೆಗಿನ ಪಯಣದ ಜಾಡಿನೊಂದಿಗೆ ಭಾರತದ ಶ್ರೀಮಂತ ಕಥಾ ನಿರೂಪಣೆ ಪರಂಪರೆಯನ್ನು ಪ್ರದರ್ಶಿಸಿತು, ಇದು ರಾಷ್ಟ್ರದ ಸಾಂಸ್ಕೃತಿಕ ವಿಕಸನ ಹಾಗೂ ಜಾಗತಿಕ ವಿಷಯ ನಿರೂಪಣೆಯ ಶಕ್ತಿ ಕೇಂದ್ರವಾಗಿ ದೇಶದ ಹೊರಹೊಮ್ಮುವಿಕೆಯನ್ನು ಪ್ರತಿಬಿಂಬಿಸಿದೆ.

77ನೇ ಗಣರಾಜ್ಯೋತ್ಸವದ ಮೆರವಣಿಗೆಯು ಸಂಪ್ರದಾಯಗಳನ್ನು ಜೀವಂತವಾಗಿಸಲು ಮತ್ತು ಭವಿಷ್ಯ ಸಿದ್ಧ ನಿರೂಪಣೆಗಾಗಿ ನಾಗರಿಕತೆಯ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸರಾಗವಾಗಿ ಬೆಸೆಯುವ ಜೊತೆಗೆ, ವೇವ್ಸ್ ಭಾರತದ ಮಾಧ್ಯಮ ಮತ್ತು ಮನರಂಜನಾ ನಾಯಕತ್ವ, ನಾವಿನ್ಯತೆ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯನ್ನು ಮುನ್ನಡೆಸುವ ಜಾಗತಿಕ ವೇದಿಕೆಯಾಗಿದೆ ಎಂಬುದನ್ನು ಸ್ತಬ್ಧಚಿತ್ರ ಪ್ರದರ್ಶಿಸಿದೆ.

 

*****


(रिलीज़ आईडी: 2218842) आगंतुक पटल : 15
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Gujarati , Odia , Tamil , Telugu , Malayalam