ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ದಾವೋಸ್ ನಲ್ಲಿ ಭಾರತದ ಪ್ರಭಾವಶಾಲಿ ಆರಂಭ


ಭಾರತೀಯ ಕೃತಕ ಬುದ್ದಿಮತ್ತೆ ಮಾದರಿಗಳು ಜಾಗತಿಕ ಸಮಸ್ಯೆಗಳಿಗೆ ಹೆಚ್ಚು ಸೂಕ್ತವಾಗಿವೆ; ಐದನೇ ಕೈಗಾರಿಕಾ ಕ್ರಾಂತಿಯ ಯುಗದಲ್ಲಿ ನಾವು ಕಡಿಮೆ ವೆಚ್ಚದಲ್ಲಿ ಗರಿಷ್ಠ ಲಾಭವನ್ನು ನೀಡುತ್ತಿದ್ದೇವೆ: ಅಶ್ವಿನಿ ವೈಷ್ಣವ್

ಕೃತಕ ಬುದ್ದಿಮತ್ತೆ ಭಾರತದಲ್ಲಿ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ. ಇದು ನಮಗೆ ದಕ್ಷ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತಿದೆ: ಅಶ್ವಿನಿ ವೈಷ್ಣವ್

'AI ಪವರ್ ಪ್ಲೇ' ಸಂವಾದದಲ್ಲಿ ಭಾರತವು ಜಾಗತಿಕ ಕೃತಕ ಬುದ್ದಿಮತ್ತೆ ಶಕ್ತಿಯ ಮೊದಲ ಗುಂಪಿನ ರಾಷ್ಟ್ರವಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ ಮತ್ತು ಐಎಂಎಫ್ ಶ್ರೇಯಾಂಕವನ್ನು ಪ್ರಶ್ನಿಸಿದೆ.

ಕೃತಕ ಬುದ್ದಿಮತ್ತೆ ಆಡಳಿತದ ಕುರಿತಾದ ನಮ್ಮ 'ತಾಂತ್ರಿಕ-ಕಾನೂನು') ವಿಧಾನವು ಪೂರ್ವಾಗ್ರಹ, ಡೀಪ್ ಫೇಕ್ ಮತ್ತು ನಂಬಿಕೆಯಂತಹ ಸಮಸ್ಯೆಗಳನ್ನು ಪರಿಹರಿಸಲಿದೆ: ಅಶ್ವಿನಿ ವೈಷ್ಣವ್

प्रविष्टि तिथि: 21 JAN 2026 5:20PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು “AI ಪವರ್ ಪ್ಲೇ” ಎಂಬ ಶೀರ್ಷಿಕೆಯ ಉನ್ನತ ಮಟ್ಟದ ಜಾಗತಿಕ ಸಂವಾದದಲ್ಲಿ ಭಾಗವಹಿಸಿದರು. ಈ ಚರ್ಚೆಯು ಕೃತಕ ಬುದ್ಧಿಮತ್ತೆಯ ವಿಕಸನಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ, ಅದರ ಆರ್ಥಿಕ ಪ್ರಭಾವ, ಆಡಳಿತಾತ್ಮಕ ಸವಾಲುಗಳು ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಸರಣದ ಮಾರ್ಗಗಳ ಮೇಲೆ ಕೇಂದ್ರೀಕರಿಸಿತ್ತು. ಕೃತಕ ಬುದ್ದಿಮತ್ತೆ  ಹೇಗೆ ವಿವಿಧ ರಾಷ್ಟ್ರಗಳಲ್ಲಿ ಅಧಿಕಾರ, ಉತ್ಪಾದಕತೆ ಮತ್ತು ನೀತಿಗಳನ್ನು ಮರುರೂಪಿಸುತ್ತಿದೆ ಎಂಬುದರ ಕುರಿತು ಚರ್ಚಿಸಲು ಈ ಸಂವಾದವು ಪ್ರಮುಖ ಜಾಗತಿಕ ನೀತಿ ನಿರೂಪಕರು, ಉದ್ಯಮದ ಮುಖಂಡರು ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಒಂದು ವೇದಿಕೆಗೆ ತಂದಿತು.

ಈ ಸಂವಾದದ ಮಾಡರೇಟರ್ ಆಗಿ ಯುರೇಷಿಯಾ ಗ್ರೂಪ್ ಅಧ್ಯಕ್ಷರಾದ ಶ್ರೀ ಇಯಾನ್ ಬ್ರೆಮರ್ ಕಾರ್ಯನಿರ್ವಹಿಸಿದರು. ಈ ಗಣ್ಯರ ಪ್ಯಾನೆಲ್ ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕ್ರಿಸ್ಟಲಿನಾ ಜಾರ್ಜೀವಾ, ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದ ಶ್ರೀ ಬ್ರಾಡ್ ಸ್ಮಿತ್, ಸೌದಿ ಅರೇಬಿಯಾದ ಹೂಡಿಕೆ ಸಚಿವ ಶ್ರೀ ಖಾಲಿದ್ ಅಲ್-ಫಾಲಿಹ್ ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಭಾಗವಹಿಸಿದ್ದರು.

ಸಂವಾದದಲ್ಲಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, ಅಪ್ಲಿಕೇಶನ್ ಗಳು, ಮಾಡೆಲ್ ಗಳು, ಚಿಪ್ ಗಳು, ಮೂಲಸೌಕರ್ಯ ಮತ್ತು ಇಂಧನ ಹೀಗೆ AI ಆರ್ಕಿಟೆಕ್ಚರ್ ನ ಎಲ್ಲಾ ಐದು ಹಂತಗಳಲ್ಲಿ ವ್ಯವಸ್ಥಿತ ಪ್ರಗತಿಯನ್ನು ಸಾಧಿಸುತ್ತಿರುವ ಭಾರತವು ಸ್ಪಷ್ಟವಾಗಿ 'AI-ಸಿದ್ಧ' (AI-ready) ರಾಷ್ಟ್ರಗಳ ಮೊದಲ ಗುಂಪಿನಲ್ಲಿದೆ ಎಂದು ಒತ್ತಿ ಹೇಳಿದರು. ಭಾರತದ AI ಕಾರ್ಯತಂತ್ರವು ಕೇವಲ ಬೃಹತ್ ಮಾದರಿಗಳ ಮೇಲೆ ಅತಿಯಾಗಿ ಗಮನಹರಿಸುವ ಬದಲು, ನೈಜ-ಪ್ರಪಂಚದ ನಿಯೋಜನೆ  ಮತ್ತು ಹೂಡಿಕೆಯ ಮೇಲಿನ ಆದಾಯದ (ROI) ಮೇಲೆ ದೃಢವಾಗಿ ನಿಂತಿದೆ ಎಂದು ಅವರು ಒತ್ತಿ ಹೇಳಿದರು.

ʼʼಹೂಡಿಕೆಯ ಮೇಲಿನ ಆದಾಯವು (ROI) ಕೇವಲ ಬೃಹತ್ ಮಾಡೆಲ್ ಗಳನ್ನು ತಯಾರಿಸುವುದರಿಂದ ಬರುವುದಿಲ್ಲ. ನೈಜ ಪ್ರಪಂಚದ ಸುಮಾರು ಶೇಕಡಾ 95 ರಷ್ಟು ಬಳಕೆಯ ಪ್ರಕರಣಗಳನ್ನು (use cases) 20 ರಿಂದ 50 ಬಿಲಿಯನ್ ಪ್ಯಾರಾಮೀಟರ್ ವ್ಯಾಪ್ತಿಯ ಮಾಡೆಲ್ಗಳನ್ನು ಬಳಸಿಯೇ ಪರಿಹರಿಸಬಹುದು," ಎಂದು ಸಚಿವರು ಹೇಳಿದರು. ಉತ್ಪಾದಕತೆ, ದಕ್ಷತೆ ಮತ್ತು ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಹೆಚ್ಚಿಸಲು ವಿವಿಧ ವಲಯಗಳಲ್ಲಿ ನಿಯೋಜಿಸಲಾಗುತ್ತಿರುವ ಇಂತಹ ದಕ್ಷ ಮತ್ತು ಕೈಗೆಟುಕುವ ಬೆಲೆಯ ಮಾಡೆಲ್ ಗಳ ಸಮೂಹವನ್ನೇ ಭಾರತವು ಈಗಾಗಲೇ ಅಭಿವೃದ್ಧಿಪಡಿಸಿದೆ ಎಂದು ಅವರು ಎತ್ತಿ ತೋರಿಸಿದರು. ಕಡಿಮೆ ವೆಚ್ಚದಲ್ಲಿ ಗರಿಷ್ಠ ಲಾಭವನ್ನು ನೀಡುವತ್ತ ಗಮನಹರಿಸಿರುವ ಈ ವಿಧಾನವು, ಆರ್ಥಿಕವಾಗಿ ಸುಸ್ಥಿರವಾದ ಕೃತಕ ಬುದ್ದಿಮತ್ತೆ ನಿಯೋಜನೆಯ ಮೇಲೆ ಭಾರತ ಹೊಂದಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಮಾನದಂಡಗಳನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್ ಅವರು, ಕೃತಕ ಬುದ್ದಿಮತ್ತೆ ವ್ಯಾಪ್ತಿ ಮತ್ತು ಸನ್ನದ್ಧತೆಯಲ್ಲಿ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯವು ಭಾರತಕ್ಕೆ ಮೂರನೇ ಸ್ಥಾನವನ್ನು ನೀಡಿದೆ ಮತ್ತು ಕೃತಕ ಬುದ್ದಿಮತ್ತೆ ಪ್ರತಿಭೆಯಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಭಾರತವು ದೊಡ್ಡ ಮಟ್ಟದಲ್ಲಿ ಕೃತಕ ಬುದ್ದಿಮತ್ತೆ ಪ್ರಸರಣ ಮತ್ತು ಸುಧಾರಿತ ಕೃತಕ ಬುದ್ದಿಮತ್ತೆ ಸಾಮರ್ಥ್ಯಗಳ ಪ್ರವೇಶವನ್ನು ಜನಸಾಮಾನ್ಯರಿಗೂ ತಲುಪಿಸುವ ಬಗ್ಗೆ ಗಮನಹರಿಸುತ್ತಿರುವುದನ್ನು ಒತ್ತಿಹೇಳಿದ ಶ್ರೀ ವೈಷ್ಣವ್ ಅವರು, GPU ಲಭ್ಯತೆಯ ಕೊರತೆಯನ್ನು ನೀಗಿಸಲು ಸರ್ಕಾರವು ಕೈಗೊಂಡಿರುವ 'ಸಾರ್ವಜನಿಕ-ಖಾಸಗಿ ಸಹಭಾಗಿತ್ವದ' (public-private partnership) ಮಾದರಿಯ ಬಗ್ಗೆ ವಿವರಿಸಿದರು. ಈ ಉಪಕ್ರಮದ ಅಡಿಯಲ್ಲಿ, 38,000 GPUಗಳನ್ನು ಹಂಚಿಕೆಯ ರಾಷ್ಟ್ರೀಯ ಕಂಪ್ಯೂಟ್ ಸೌಲಭ್ಯವಾಗಿ ಪಟ್ಟಿ ಮಾಡಲಾಗಿದೆ. ಇವುಗಳಿಗೆ ಸರ್ಕಾರವು ಸಬ್ಸಿಡಿ ನೀಡುತ್ತಿದ್ದು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಟಾರ್ಟ್ ಅಪ್ ಗಳಿಗೆ ಜಾಗತಿಕ ವೆಚ್ಚದ ಸುಮಾರು ಮೂರನೇ ಒಂದು ಭಾಗದಷ್ಟು ಕಡಿಮೆ ದರದಲ್ಲಿ ಇವು ಲಭ್ಯವಾಗುವಂತೆ ಮಾಡಲಾಗಿದೆ. ಇದರೊಂದಿಗೆ, ಭಾರತದ ಐಟಿ ಉದ್ಯಮ ಮತ್ತು ಸ್ಟಾರ್ಟ್ ಅಪ್ ಗಳು ದೇಶೀಯ ಹಾಗೂ ಜಾಗತಿಕ ಸೇವೆಗಳ ವಿತರಣೆಗಾಗಿ ಕೃತಕ ಬುದ್ದಿಮತ್ತೆ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, 1 ಕೋಟಿ ಜನರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿರುವ ಭಾರತದ ರಾಷ್ಟ್ರವ್ಯಾಪಿ 'AI ಕೌಶಲ್ಯ ಅಭಿವೃದ್ಧಿ' ಕಾರ್ಯಕ್ರಮದ ಬಗ್ಗೆಯೂ ಅವರು ಮಾಹಿತಿ ನೀಡಿದರು.

ನಿಯಂತ್ರಣ ಮತ್ತು ಆಡಳಿತದ ಕುರಿತು ಮಾತನಾಡಿದ ಶ್ರೀ ವೈಷ್ಣವ್ ಅವರು, ಕೃತಕ ಬುದ್ದಿಮತ್ತೆ ವಿಷಯದಲ್ಲಿ 'ತಾಂತ್ರಿಕ-ಕಾನೂನು' (techno-legal) ವಿಧಾನದ ಅಗತ್ಯವನ್ನು ಒತ್ತಿ ಹೇಳಿದರು. "AI ಆಡಳಿತವು ಕೇವಲ ಕಾನೂನಿನ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ಪೂರ್ವಾಗ್ರಹಗಳನ್ನು ಪತ್ತೆಹಚ್ಚಲು, ನ್ಯಾಯಾಲಯದಲ್ಲಿ ಪುರಾವೆಯಾಗಿ ಒಪ್ಪಿಕೊಳ್ಳಬಹುದಾದ ನಿಖರತೆಯೊಂದಿಗೆ ಡೀಪ್ ಫೇಕ್ ಗಳನ್ನು ದೃಢೀಕರಿಸಲು ನಾವು ತಾಂತ್ರಿಕ ಸಾಧನಗಳನ್ನು ಅಭಿವೃದ್ಧಿಪಡಿಸಬೇಕು. ಮತ್ತು 'ಅನ್ ಲರ್ನಿಂಗ್' (unlearning) ನಂತಹ ಪ್ರಕ್ರಿಯೆಗಳ ಮೂಲಕ ಸುರಕ್ಷಿತ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು," ಎಂದು ಅವರು ಹೇಳಿದರು. ಅಲ್ಲದೆ, ಭಾರತವು ಇಂತಹ ಸ್ವದೇಶಿ ತಾಂತ್ರಿಕ ಸುರಕ್ಷತಾ ಕ್ರಮಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ತಿಳಿಸಿದರು.

ಇತರ ಭಾಷಣಕಾರರು ಸಹ ಜಾಗತಿಕ ಕೃತಕ ಬುದ್ದಿಮತ್ತೆ ಭೂದೃಶ್ಯದಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಶ್ಲಾಘಿಸಿದರು. ಕಳೆದ ದಶಕದಲ್ಲಿ ಭಾರತವು ಒಂದು ಪ್ರಮುಖ ಭೌಗೋಳಿಕ ರಾಜಕೀಯ ಮತ್ತು ತಾಂತ್ರಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಶ್ರೀ ಇಯಾನ್ ಬ್ರೆಮ್ಮರ್ ಗಮನಿಸಿದರು. ಜಾಗತಿಕ ಸಂಸ್ಥೆಗಳು ಮತ್ತು ಉದ್ಯಮದ ಪ್ರತಿನಿಧಿಗಳು, ಭಾರತವು ಕೃತಕ ಬುದ್ದಿಮತ್ತೆ ಪ್ರಸರಣ, ಪ್ರವೇಶದ ಸುಲಭತೆ ಮತ್ತು ಸಾರ್ವಭೌಮ ಸಾಮರ್ಥ್ಯದ ಮೇಲೆ ನೀಡುತ್ತಿರುವ ಒತ್ತು ಉದಯೋನ್ಮುಖ ಆರ್ಥಿಕತೆಗಳಿಗೆ ಒಂದು ಮಾದರಿಯಾಗಿದೆ ಎಂದು ಉಲ್ಲೇಖಿಸಿದರು.

 

*****


(रिलीज़ आईडी: 2216983) आगंतुक पटल : 22
इस विज्ञप्ति को इन भाषाओं में पढ़ें: Gujarati , Odia , हिन्दी , English , Urdu , Marathi , Assamese , Tamil , Malayalam