ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಹಮದಾಬಾದ್ ಮೆಟ್ರೋ ಹಂತ–2ರ ಉದ್ಘಾಟನೆಯ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 11 JAN 2026 9:53PM by PIB Bengaluru

ಅಹಮದಾಬಾದ್ ಮೆಟ್ರೋ ಹಂತ–2ರ ಉದ್ಘಾಟನೆಯ ಕೆಲವು ಕ್ಷಣಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:  

“ಅಹಮದಾಬಾದ್‌ನ ಮೂಲಸೌಕರ್ಯವನ್ನು ಬಲಪಡಿಸುವ ನಮ್ಮ ಬದ್ಧತೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದು ಅಹಮದಾಬಾದ್ ಮೆಟ್ರೋ ಹಂತ–2ರ ಉಳಿದ ಭಾಗವಾದ ಸೆಕ್ಟರ್ 10ಎಯಿಂದ ಮಹಾತ್ಮಾ ಮಂದಿರದವರೆಗಿನ ಮಾರ್ಗವನ್ನು ಉದ್ಘಾಟಿಸಲಾಯಿತು. ಇದು ಅಹಮದಾಬಾದ್ ಮತ್ತು ಗಾಂಧಿನಗರದ ಜನರ ಜೀವನವನ್ನು ಮತ್ತಷ್ಟು ಸುಲಭಗೊಳಿಸಲಿದೆ.''

 

 

*****


(ಪ್ರಕಟಣೆ ಐ.ಡಿ.: 2213650) ವಿಸಿಟರ್ ಕೌಂಟರ್ : 26