ಪ್ರಧಾನ ಮಂತ್ರಿಯವರ ಕಛೇರಿ
ಐಎನ್‌ಎಸ್‌ವಿ ಕೌಂಡಿನ್ಯ ಸಿಬ್ಬಂದಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಮಂತ್ರಿ
प्रविष्टि तिथि:
31 DEC 2025 11:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮುದ್ರದಲ್ಲಿ ನೌಕಾಯಾನ ಮಾಡುತ್ತಿರುವ ಐಎನ್‌ಎಸ್‌ವಿ ಕೌಂಡಿನ್ಯ ತಂಡದಿಂದ ಛಾಯಾಚಿತ್ರ ಸ್ವೀಕರಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. 2026ನೇ ವರ್ಷವನ್ನು ಸ್ವಾಗತಿಸಲು ದೇಶ ಸಿದ್ಧವಾಗುತ್ತಿರುವಾಗ ಸಿಬ್ಬಂದಿಯ ಉತ್ಸಾಹವನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ ಮತ್ತು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಐಎನ್‌ಎಸ್‌ವಿ ಕೌಂಡಿನ್ಯ ತಂಡದಿಂದ ಈ ಚಿತ್ರವನ್ನು ಸ್ವೀಕರಿಸುತ್ತಿರುವುದು ಸಂತೋಷವಾಗುತ್ತಿದೆ! ಅವರ ಉತ್ಸಾಹವನ್ನು ನೋಡಿ ಹೃದಯ ತುಂಬಿ ಬಂದಿದೆ. ನಾವೆಲ್ಲರೂ 2026 ಅನ್ನು ಸ್ವಾಗತಿಸುತ್ತಿರುವ ಹೊತ್ತಿನಲ್ಲಿ ಸಮುದ್ರದಲ್ಲಿ ಸಂಚರಿಸುತ್ತಿರುವ ಐಎನ್‌ಎಸ್‌ವಿ ಕೌಂಡಿನ್ಯ ತಂಡಕ್ಕೆ ನನ್ನ ವಿಶೇಷ ಶುಭಾಶಯಗಳು. ಅವರ ಉಳಿದ ಪ್ರಯಾಣವು ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಆಶಿಸುತ್ತೇನೆ.’’
@INSVKaundinya”
*****
(रिलीज़ आईडी: 2210738)
आगंतुक पटल : 6
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam