ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತವು ವೇವ್ಸ್ (WAVES) 2025 ಅನ್ನು ಆಯೋಜಿಸಿತು; ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೂಲ ಉಪಕ್ರಮದಲ್ಲಿ 90ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದವು
ಕ್ರಿಯೇಟೋಸ್ಪಿಯರ್‌ನಲ್ಲಿ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್’, ವಿವಿಧ ದೇಶಗಳ ಸೃಜನಶೀಲರನ್ನು ಜೋಡಿಸುತ್ತಿದೆ
ವೇವೆಕ್ಸ್ 2025: ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಮುಂದಿನ ಪೀಳಿಗೆಯ ವೇದಿಕೆ
ವೇವ್ಸ್ ಬಜಾರ್, ಭಾರತದ ಸೃಜನಶೀಲ ಪ್ರತಿಭೆಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲು ಇರುವ ಏಕ ಗವಾಕ್ಷಿ ಪೋರ್ಟಲ್
ಸೃಜನಶೀಲ ತಂತ್ರಜ್ಞಾನಗಳಲ್ಲಿ ಅತ್ಯಾಧುನಿಕ ತರಬೇತಿಗಾಗಿ ಹೊಸ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ, ಐಐಸಿಟಿಅನ್ನು ಸ್ಥಾಪಿಸಲಾಗಿದೆ
प्रविष्टि तिथि:
31 DEC 2025 8:54AM by PIB Bengaluru
ವೇವ್ಸ್ (WAVES)
2025ರಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಬೆಂಬಲಿಸಲು ಹಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿತು. ಅವುಗಳಲ್ಲಿ ವಿಶ್ವ ಆಡಿಯೋ ದೃಶ್ಯ ಮತ್ತು ಮನರಂಜನಾ ಶೃಂಗಸಭೆ - ವೇವ್ಸ್ (WAVES 2025) ದೊಡ್ಡದಾಗಿತ್ತು.
ಪ್ರಧಾನಮಂತ್ರಿ ಮೋದಿ ಅವರು ʻವೇವ್ಸ್ʼಅನ್ನು ಕೇವಲ ಒಂದು ಕಾರ್ಯಕ್ರಮವಾಗಿ ಅಲ್ಲ, ಅದೊಂದು "ಸಂಸ್ಕೃತಿ, ಸೃಜನಶೀಲತೆ ಮತ್ತು ಸಾರ್ವತ್ರಿಕ ಸಂಪರ್ಕದ ಅಲೆ" ಎಂದು ಬಣ್ಣಿಸಿದರು ಮತ್ತು ವಿಶ್ವಾದ್ಯಂತ ಸೃಜನಶೀಲರನ್ನು "ದೊಡ್ಡ ಕನಸು ಕಾಣಲು ಮತ್ತು ನಿಮ್ಮ ಕಥೆಯನ್ನು ಹೇಳಲು" ಪ್ರೋತ್ಸಾಹಿಸಿದರು. ಪ್ರಧಾನಮಂತ್ರಿ ಅವರು "ಭಾರತದಲ್ಲಿ ರಚಿಸಿ, ಜಗತ್ತಿಗಾಗಿ ರಚಿಸಿ" ಎನ್ನುವ ಭಾರತದ ದೃಷ್ಟಿಕೋನವನ್ನು ಒತ್ತಿ ಹೇಳಿದರು, ಜಾಗತಿಕ ಹೂಡಿಕೆದಾರರು ಮತ್ತು ಯುವಕರನ್ನು ಭಾರತದ ವಿಸ್ತಾರವಾದ ಸೃಜನಶೀಲ ಪರಿಸರ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳಲು ಆಹ್ವಾನಿಸಿದರು.
ವೇವ್ಸ್ 2025, 90ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಯನ್ನು ಕಂಡಿತು, ಇದರಲ್ಲಿ 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 1,000ಕ್ಕೂ ಹೆಚ್ಚು ಸೃಜನಶೀಲರು, 300ಕ್ಕೂ ಹೆಚ್ಚು ಕಂಪನಿಗಳು, 350ಕ್ಕೂ ಹೆಚ್ಚು ನವೋದ್ಯಮ (ಸ್ಟಾರ್ಟ್‌ಅಪ್)ಗಳು ಮತ್ತು ಪ್ರಸಾರ, ಇನ್ಫೋಟೈನ್‌ಮೆಂಟ್, ಎವಿಜಿಸಿ-ಎಕ್ಸ್ ಆರ್, ಚಲನಚಿತ್ರಗಳು ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ವೈವಿಧ್ಯಮಯ ವಲಯಗಳಲ್ಲಿ ವ್ಯಾಪಿಸಿರುವ ಸುಮಾರು 1 ಲಕ್ಷ ಪ್ರೇಕ್ಷಕರು ಭಾಗವಹಿಸಿದ್ದರು.
ವೇವ್ಸ್ ಪ್ಲಾಟ್‌ಫಾರ್ಮ್ ಅನ್ನು ಅದರ ಮೂರು ಭವಿಷ್ಯದ ವಿಭಾಗಗಳ ಮೂಲಕ ಮುಂದುವರಿಸಲಾಗುತ್ತಿದೆ:
1) ಕ್ರಿಯೇಟೋಸ್ಪಿಯರ್ ಮತ್ತು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್ (ಸಿಐಸಿ)
ಕ್ರಿಯೇಟೋಸ್ಪಿಯರ್ ಒಂದು ವಿಶೇಷ ನಾವೀನ್ಯತೆಯ ಕೇಂದ್ರವಾಗಿದ್ದು, ಸೃಜನಶೀಲರನ್ನು ಪ್ರಧಾನವಾಗಿ ಇರಿಸುತ್ತದೆ, ಚಲನಚಿತ್ರ, ವಿಎಫ್ ಎಕ್ಸ್, ವಿ ಆರ್, ಅನಿಮೇಷನ್, ಗೇಮಿಂಗ್, ಕಾಮಿಕ್ಸ್, ಸಂಗೀತ, ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮದಾದ್ಯಂತ ವಿಚಾರಗಳನ್ನು ಅನುಭವಗಳಾಗಿ ಪರಿವರ್ತಿಸುತ್ತದೆ. ಇದು ಭಾರತ ಮತ್ತು ವಿದೇಶಗಳಿಂದ ಪ್ರಮುಖ ಸೃಜನಶೀಲ ಮನಸ್ಸುಗಳನ್ನು ಒಟ್ಟುಗೂಡಿಸಿ ಸಂವಾದ, ಪಾಲುದಾರಿಕೆ, ನಾವೀನ್ಯತೆ ಮತ್ತು ಜಾಗತಿಕ ಪ್ರತಿಭೆಯ ಪ್ರದರ್ಶನವನ್ನು ಬೆಳೆಸುತ್ತದೆ.
ಸಿಐಸಿ ಸೀಸನ್- I "ಭಾರತದ ಅತಿದೊಡ್ಡ ಸೃಜನಶೀಲ ಪ್ರತಿಭಾ ಚಳುವಳಿ"ಯಾಗಿ ಹೊರಹೊಮ್ಮಿದೆ ಮತ್ತು ಅಭೂತಪೂರ್ವ ಜಾಗತಿಕ ವ್ಯಾಪ್ತಿಯನ್ನು ಸಾಧಿಸಿದೆ. ಸೀಸನ್ I, 33 ವಿಭಾಗಗಳನ್ನು ಒಳಗೊಂಡಿತ್ತು, ಭಾರತದಾದ್ಯಂತ ಮತ್ತು 60 ಕ್ಕೂ ಹೆಚ್ಚು ದೇಶಗಳಿಂದ 1 ಲಕ್ಷಕ್ಕೂ ಹೆಚ್ಚು ಪ್ರವೇಶಗಳನ್ನು ಮತ್ತು ʻವೇವ್ಸ್ʼನಲ್ಲಿ ಎಂಟು ಸೃಜನಶೀಲ ವಲಯಗಳಲ್ಲಿ 750 ಕ್ಕೂ ಹೆಚ್ಚು ಅಂತಿಮ ಸ್ಪರ್ಧಿಗಳನ್ನು ಪ್ರದರ್ಶಿಸಿತು, ಇದು ಭಾರತದ ಅತಿದೊಡ್ಡ ಸೃಜನಶೀಲ-ನೇತೃತ್ವದ ಸವಾಲಿನ ವೇದಿಕೆಯನ್ನು ಸ್ಥಾಪಿಸಿತು.
ಈ ಸೀಸನ್ ನ ನಿರ್ಣಾಯಕ ಕ್ಷಣವೆಂದರೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭೇಟಿ, ಅವರು ಯುವ ಸೃಜನಶೀಲರೊಂದಿಗೆ ನೇರವಾಗಿ ಸಂವಹಿಸಿದರು, ವಿಜೇತವಾದ ನಾವೀನ್ಯತೆಗಳನ್ನು ವೀಕ್ಷಿಸಿದರು ಮತ್ತು ಜಾಗತಿಕ ವಿಷಯ ಕೇಂದ್ರವಾಗಿ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಈ ಸೀಸನ್‌ನ ಅಂತಿಮ ಘಟ್ಟದಲ್ಲಿ 150 ಕ್ಕೂ ಹೆಚ್ಚು ಸೃಜನಶೀಲರನ್ನು ವೇವ್ಸ್ ಕ್ರಿಯೇಟರ್ ಪ್ರಶಸ್ತಿಗಳನ್ನು ನೀಡಿ ಗುರುತಿಸಲಾಯಿತು, ಇದು ಭಾರತದ ಸೃಜನಶೀಲ ಆರ್ಥಿಕತೆಯನ್ನು ಪೋಷಿಸುವತ್ತ ಸರ್ಕಾರದ ಗಮನದ ಬಗ್ಗೆ ಒತ್ತಿಹೇಳಿತು.
ಸಿಐಸಿ ವಿಜೇತರು ಇತ್ತೀಚೆಗೆ ಮೆಲ್ಬೋರ್ನ್, ಒಸಾಕಾ, ಟೊರೊಂಟೊ, ಟೋಕಿಯೊ ಮತ್ತು ಮ್ಯಾಡ್ರಿಡ್‌ನಾದ್ಯಂತ ಭಾರತವನ್ನು ಪ್ರತಿನಿಧಿಸಿದ್ದಾರೆ, ಪ್ರಮುಖ ಅಂತರರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದಾರೆ ಮತ್ತು ಪ್ರದರ್ಶಿಸಿದ್ದಾರೆ. ಮೆಲ್ಬೋರ್ನ್ ಮತ್ತು ಟೊರೊಂಟೊದ ಟಿಐಎಫ್‌ಎಫ್ ನಲ್ಲಿ ಸಂಗೀತ ವಿಜೇತರು ಪ್ರದರ್ಶನ ನೀಡಿದ್ದಾರೆ. ಟೋಕಿಯೊ ಗೇಮ್ ಶೋನಲ್ಲಿ ಗೇಮಿಂಗ್ ಮತ್ತು ಅನಿಮೇಷನ್ ಫೈನಲಿಸ್ಟ್ ಗಳು ಪ್ರದರ್ಶಿಸಿದ್ದಾರೆ. ಚಲನಚಿತ್ರ ಮತ್ತು ವಿಎಫ್‌ಎಕ್ಸ್ ರಚನೆಕಾರರು ಮ್ಯಾಡ್ರಿಡ್ ನ ಐಬರ್‌ಸರೀಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹಲವಾರು ಇತರ ವಿಜೇತರು ಸಹಯೋಗಗಳನ್ನು ಪಡೆಯಲು, ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಕೆಲಸವನ್ನು ಪ್ರದರ್ಶಿಸುತ್ತಾ ಮತ್ತು ಪ್ರಮುಖ ಮನ್ನಣೆಯನ್ನು ಗಳಿಸುತ್ತಾ ಮುಂದುವರೆದರು.
2) ವೇವ್‌ಎಕ್ಸ್
ವೇವ್‌ಎಕ್ಸ್ ನಾವೀನ್ಯತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ತನ್ನ ಉಪಕ್ರಮದ ಭಾಗವಾಗಿ 200 ಕ್ಕೂ ಹೆಚ್ಚು ನವೋದ್ಯಮಗಳನ್ನು ಬೆಂಬಲಿಸಲು ಮತ್ತು ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಇದು 30ಕ್ಕೂ ಹೆಚ್ಚು ನವೋದ್ಯಮಗಳನ್ನು ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಲುಮಿಕೈನಂತಹ ಜಾಗತಿಕ ಉದ್ಯಮ ನಾಯಕರಿಗೆ ಪ್ರಸ್ತುತಪಡಿಸಲು ಅನುವು ಮಾಡಿಕೊಟ್ಟಿತು, ಜೊತೆಗೆ ಸುಮಾರು 100 ನವೋದ್ಯಮಗಳು ಪ್ರದರ್ಶನ ಬೂತ್‌ಗಳ ಮೂಲಕ ಪರಿಹಾರಗಳನ್ನು ಪ್ರದರ್ಶಿಸಿದವು. ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಪ್ರಸ್ತುತಿ ನೀಡಲು ವಿವೈಜಿಆರ್ ನ್ಯೂಸ್ ಮತ್ತು ವಿವಾ ಟೆಕ್ನಾಲಜೀಸ್ (ಎರಡೂ ವೇವ್‌ಎಕ್ಸ್‌ನಿಂದ ಬೆಂಬಲಿತವಾಗಿದೆ) ಆಯ್ಕೆಯಾಗಿದ್ದು, ಇದು ರಾಷ್ಟ್ರೀಯ ಮನ್ನಣೆ ಮತ್ತು ವಿಶ್ವಾಸಾರ್ಹತೆಯನ್ನು ಒತ್ತಿಹೇಳುತ್ತದೆ.
ತಂತ್ರಜ್ಞಾನ, ಸಂಸ್ಕೃತಿ ಮತ್ತು ಭಾಷಾ ವೈವಿಧ್ಯತೆಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ವೇವ್‌ಎಕ್ಸ್ ಕಲಾಸೇತು ಮತ್ತು ಭಾಷಾಸೇತು ಸವಾಲುಗಳನ್ನು ಯಶಸ್ವಿಯಾಗಿ ಪರಿಕಲ್ಪನೆ ಮಾಡಿ ಕಾರ್ಯಗತಗೊಳಿಸಿತು. ಕಲಾಸೇತು ಬೆಳವಣಿಗೆಯ ಎಐ-ಚಾಲಿತ ಪಠ್ಯದಿಂದ ವೀಡಿಯೊ ಉತ್ಪಾದನೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದರೆ, ಭಾಷಾಸೇತು ನೈಜ-ಸಮಯದ ಭಾಷಾ ಅನುವಾದ ಪರಿಕರಗಳ ರಚನೆಯನ್ನು ಪ್ರೋತ್ಸಾಹಿಸಿತು. ಈ ಉಪಕ್ರಮಗಳು ದೇಶಾದ್ಯಂತ 100ಕ್ಕೂ ಹೆಚ್ಚು ನವೋದ್ಯಮಗಳಿಂದ ಭಾಗವಹಿಸುವಿಕೆಯನ್ನು ಕಂಡವು ಮತ್ತು ಕಡೆಗೆ 10 ನವೋದ್ಯಮಗಳ ಆಯ್ಕೆಯಾದವು, ಅವುಗಳಿಗೆ ಸರ್ಕಾರಿ ಮಾಧ್ಯಮ ಘಟಕಗಳೊಂದಿಗೆ ಸಹಯೋಗ ಹೊಂದಲು ಅವಕಾಶವನ್ನು ಒದಗಿಸಲಾಯಿತು.
ವೇವ್‌ಎಕ್ಸ್ ಇಂಡಿಯಾ ಜಾಯ್, ಐಜಿಡಿಸಿ, ಇನ್ಫೋಕಾಮ್, ಐಎಫ್‌ಎಫ್‌ಐ/ ವೇವ್ಸ್ ಫಿಲ್ಮ್ ಬಜಾರ್ (ಗೋವಾ), ಮತ್ತು ಬಿಗ್ ಪಿಕ್ಚರ್ ಶೃಂಗಸಭೆ ಸೇರಿದಂತೆ ಪ್ರಮುಖ ವೇದಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಸುಗಮಗೊಳಿಸಿತು, ಹೂಡಿಕೆದಾರರ ಆಸಕ್ತಿ ಮತ್ತು ಪಾಲುದಾರಿಕೆಗಳು, ಪ್ರಕಟಣೆ ಮತ್ತು ವಾಣಿಜ್ಯೀಕರಣದ ಕುರಿತು ಮುಂದುವರಿದ ಚರ್ಚೆಗಳನ್ನು ಹೆಚ್ಚಿಸಿತು. ಇದು ಎಫ್‌ಟಿಐಐ ಪುಣೆ, ಎಸ್‌ಆರ್‌ಎಫ್‌ಟಿಐ ಕೋಲ್ಕತ್ತಾ, ಐಐಸಿಟಿ ಮುಂಬೈ ಮತ್ತು ಬಹು ಐಐಎಂಸಿ ಕ್ಯಾಂಪಸ್‌ಗಳಂತಹ ಪ್ರಮುಖ ಸಂಸ್ಥೆಗಳಲ್ಲಿ 9 ಇನ್‌ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಿದೆ, ಇದು ಭಾರತದಾದ್ಯಂತ ತನ್ನ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ. ಪ್ರಸ್ತುತ, 34 ನವೋದ್ಯಮಗಳಿಗೆ ಬೆಂಬಲ (ಇನ್ಕ್ಯುಬೇಟ್) [ಭೌತಿಕ ಮತ್ತು ಹೈಬ್ರಿಡ್] ನೀಡಲಾಗಿದ್ದು, 100ಕ್ಕೂ ಹೆಚ್ಚು ಅರ್ಜಿಗಳು ಮೌಲ್ಯಮಾಪನದ ಹಂತದಲ್ಲಿವೆ, ಟಿ-ಹಬ್ ಜೊತೆಗಿನ ಒಪ್ಪಂದದಂತಹ ಪಾಲುದಾರಿಕೆಗಳಿಂದ ಇದು ಬಲಗೊಂಡಿದೆ.
3) ವೇವ್ಸ್ ಬಜಾರ್
ವೇವ್ಸ್ ಬಜಾರ್ ಚಲನಚಿತ್ರಗಳು, ಗೇಮ್ ಡೆವಲಪರ್‌ಗಳು, ಅನಿಮೇಷನ್ ಮತ್ತು ವಿ ಎಫ್ ಎಕ್ಸ್ ಸೇವೆಗಳು, ಎಕ್ಸ್ ಆರ್, ವಿ ಆರ್ ಮತ್ತು ಎ ಆರ್ ಸೇವೆಗಳು, ರೇಡಿಯೋ ಮತ್ತು ಪಾಡ್‌ಕ್ಯಾಸ್ಟ್, ಕಾಮಿಕ್ಸ್ ಮತ್ತು ಇ-ಪುಸ್ತಕಗಳು, ವೆಬ್-ಸರಣಿ, ಸಂಗೀತಕ್ಕಾಗಿ ಜಾಗತಿಕ ಮಾರುಕಟ್ಟೆ (ಇ-ಮಾರ್ಕೆಟ್‌ಪ್ಲೇಸ್) ಆಗಿದೆ. ಇದನ್ನು "ಕ್ರಾಫ್ಟ್-ಟು-ಕಾಮರ್ಸ್" ಉಪಕ್ರಮವಾಗಿ ವಿನ್ಯಾಸಗೊಳಿಸಲಾಗಿದ್ದು, ಭಾರತೀಯ ಸೃಜನಶೀಲರು ಮತ್ತು ಸಂಸ್ಥೆಗಳನ್ನು ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳೊಂದಿಗೆ ಆಯ್ದ ಉತ್ಸವ / ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಬಿ2ಬಿ ಸಭೆಗಳು, ಸಹ-ನಿರ್ಮಾಣಗಳು, ಹೂಡಿಕೆಗಳು ಮತ್ತು ಸಹಯೋಗಗಳ ಮೂಲಕ ಉದ್ಯಮದ ಪಾಲುದಾರರೊಂದಿಗೆ ಸಮನ್ವಯದೊಂದಿಗೆ ಸಂಪರ್ಕಿಸುತ್ತದೆ.
ಜಾಗತಿಕ ಮತ್ತು ದೇಶೀಯ ಸಂಪರ್ಕ (ಔಟ್ರೀಚ್) (ಆಗಸ್ಟ್-ಡಿಸೆಂಬರ್ 2025)
ಆಗಸ್ಟ್ ಮತ್ತು ನವೆಂಬರ್ 2025 ರ ನಡುವೆ, ವೇವ್ಸ್ ಬಜಾರ್ ನಾಲ್ಕು ಖಂಡಗಳಾದ್ಯಂತ 12 ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು 4 ಪ್ರಮುಖ ದೇಶೀಯ ಉದ್ಯಮ ಕಾರ್ಯಕ್ರಮಗಳನ್ನು ಒಳಗೊಂಡ ವ್ಯಾಪಕ ಸಂಪರ್ಕಿಸುವ ಕಾರ್ಯಕ್ರಮವನ್ನು ಕೈಗೊಂಡಿತು. ಈ ತೊಡಗಿಸಿಕೊಳ್ಳುವಿಕೆಗಳು ಅಭೂತಪೂರ್ವ ಪ್ರಮಾಣದ ಮತ್ತು ಅಭಿವೃದ್ಧಿಯ ಪರಿಣಾಮವನ್ನು ಉಂಟುಮಾಡಿದವು:
- ಸುಮಾರು ರೂ. 4,334 ಕೋಟಿ ರೂಪಾಯಿಗಳ ಸಂಭಾವ್ಯ ವ್ಯವಹಾರ ಮತ್ತು ಹೂಡಿಕೆ ಚರ್ಚೆಗಳು ಸೃಷ್ಟಿಯಾಗಿವೆ
- 10 ಒಪ್ಪಂದಗಳು / ಎಲ್ ಒ ಐ ಗಳಿಗೆ ಸಹಿ ಹಾಕಲಾಗಿದೆ ಮತ್ತು 3 ಒಪ್ಪಂದಗಳು / ಎಲ್ ಒ ಐ ಗಳಿಗೆ ಪ್ರಸ್ತಾಪಿಸಲಾಗಿದೆ
- 9000 ಕ್ಕೂ ಹೆಚ್ಚು ರಚನಾತ್ಮಕ B2B ಸಭೆಗಳನ್ನು ಆಯೋಜಿಸಲಾಗಿದೆ
- ಇಂಡೋ-ಜಪಾನ್ ಕ್ರಿಯೇಟಿವ್ ಕಾರಿಡಾರ್, ಭಾರತ-ಕೊರಿಯಾ ಎವಿಜಿಸಿ ಸಹಯೋಗ ಚೌಕಟ್ಟು ಮತ್ತು ಇಂಡೋ-ಆಸ್ಟ್ರೇಲಿಯಾ ಕ್ರಿಯೇಟಿವ್ ಸಹಯೋಗಕ್ಕೆ ಚಾಲನೆ.
ಮೆಲ್ಬೋರ್ನ್ ಚಲನಚಿತ್ರೋತ್ಸವ, ಗೇಮ್ಸ್‌ಕಾಮ್, ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಒಸಾಕಾ ವರ್ಲ್ಡ್ ಎಕ್ಸ್‌ಪೋ, ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಟಿಐಎಫ್ ಎಫ್ 50), ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಟೋಕಿಯೊ ಗೇಮ್ ಶೋ, ಐಬರ್‌ಸರೀಸ್, ಎಂಐಪಿಸಿಒಎಂ, ರೆಡ್ ಸೀ ಚಲನಚಿತ್ರೋತ್ಸವ, ಫೋಕಸ್ ಲಂಡನ್ ಮತ್ತು ಸಿಂಗಾಪುರದ ಏಷ್ಯಾ ಟಿವಿ ಫೋರಮ್ ಮಾರುಕಟ್ಟೆ, ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳಾಗಿವೆ.
ಪ್ರಮುಖ ದೇಶೀಯ ಒಪ್ಪಂದಗಳು – ಐಎಫ್ ಎಫ್ ಐ /ವೇವ್ಸ್ ಫಿಲ್ಮ್ ಬಜಾರ್ (ಗೋವಾ), ಇಂಡಿಯಾ ಜಾಯ್ (ಹೈದರಾಬಾದ್), ಐಜಿಡಿಸಿ (ಚೆನ್ನೈ), ಸಿ ಐ ಐ - ಬಿಗ್ ಪಿಕ್ಚರ್.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (ಐಐಸಿಟಿ)
ಸರ್ಕಾರವು ಸೆಪ್ಟೆಂಬರ್ 19, 2024 ರಂದು ಮುಂಬೈನಲ್ಲಿ ₹391.15 ಕೋಟಿಗಳ ಒಂದು ಬಾರಿಯ ಬಜೆಟ್ ಬೆಂಬಲದೊಂದಿಗೆ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ (ವಿಎಫ್ ಎಕ್ಸ್), ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ (ಎವಿಜಿಸಿ-ಎಕ್ಸ್ ಆರ್) ಗಾಗಿ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವನ್ನು (ಎನ್ ಸಿ ಒ ಇ) ಸ್ಥಾಪಿಸಿದೆ, ಇದನ್ನು ನಂತರ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (ಐಐಸಿಟಿ)' ಎಂದು ಕರೆಯಲಾಗುತ್ತಿದೆ, ಇದು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯನ್ನು ಅನುಸರಿಸುತ್ತಿದ್ದು ಇದರಲ್ಲಿ ಎಫ್ ಐ ಸಿ ಸಿ ಐ ಮತ್ತು ಸಿ ಐ ಐ ಉದ್ಯಮ ಪಾಲುದಾರರಾಗಿದ್ದಾರೆ. ಮುಂಬೈನ ಎನ್ ಎಫ್ ಡಿ ಸಿ ಕ್ಯಾಂಪಸ್ ನಲ್ಲಿ ತಾತ್ಕಾಲಿಕ ಕ್ಯಾಂಪಸ್ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
ಜುಲೈ 18, 2025 ರಂದು ಐ ಐ ಸಿ ಟಿ – ಎನ್ ಎಫ್ ಡಿ ಸಿ ಮುಂಬೈ ಕ್ಯಾಂಪಸ್ ನಲ್ಲಿ ಕಾರ್ಯಾಚರಣೆಯ ಮೊದಲ ಹಂತವನ್ನು ಉದ್ಘಾಟಿಸಲಾಯಿತು, ಇದು ನಾಲ್ಕು ಸಂಪೂರ್ಣ ಕ್ರಿಯಾತ್ಮಕ ಮಹಡಿಗಳನ್ನು (4 ರಿಂದ 7 ನೇ) ಅತ್ಯಾಧುನಿಕ ತರಗತಿ ಕೊಠಡಿಗಳು ಮತ್ತು ಎಂಟು ನವೀನ ನವೋದ್ಯಮಗಳನ್ನು ಪೋಷಿಸುವ ಮೀಸಲಾದ ʻಸ್ಟಾರ್ಟ್‌ಅಪ್ ಇನ್‌ಕ್ಯುಬೇಶನ್ ಸೆಂಟರ್ʼ ಅನ್ನು ಒಳಗೊಂಡಿದೆ. ಜಾಗತಿಕ ಉದ್ಯಮ ಮಾನದಂಡಗಳನ್ನು ಪ್ರತಿಬಿಂಬಿಸುವ ವೃತ್ತಿಪರ ದರ್ಜೆಯ ಸ್ಕ್ರೀನಿಂಗ್, ಧ್ವನಿ ವಿನ್ಯಾಸ ಮತ್ತು ಪೋಸ್ಟ್-ಪ್ರೊಡಕ್ಷನ್‌ಗಾಗಿ ಉನ್ನತ-ಮಟ್ಟದ ರಂಗಮಂದಿರ ಸೌಲಭ್ಯವನ್ನು ಸಹ ಪೂರ್ಣಗೊಳಿಸಲಾಗಿದೆ. ಗೋರೆಗಾಂವ್ ನ ಫಿಲ್ಮ್ ಸಿಟಿಯಲ್ಲಿರುವ 10 ಎಕರೆ ವಿಸ್ತೀರ್ಣದ ಶಾಶ್ವತ ಕ್ಯಾಂಪಸ್ ಗೆ ಇದು ವಿಸ್ತರಿಸಿದೆ, ಇದು ಭಾರತದ ಮನರಂಜನಾ ಉದ್ಯಮದ ಹೃದಯಭಾಗದಲ್ಲಿ ವಿದ್ಯಾರ್ಥಿಗಳನ್ನು ನೇರವಾಗಿ ಸೇರಿಸಿಕೊಳ್ಳುವ, ಪ್ರಾಯೋಗಿಕ ಎಆರ್/ವಿ ಆರ್/ಎಕ್ಸ್ ಆರ್ ತರಬೇತಿಗಾಗಿ ಅತ್ಯಾಧುನಿಕ ಸ್ಟುಡಿಯೋವನ್ನು ಒಳಗೊಂಡಿದೆ.
ಪ್ರಮುಖ ಬೆಳವಣಿಗೆಗಳು:
ಎ) ಬಹು ಒಪ್ಪಂದಗಳ ಮೂಲಕ ಗೂಗಲ್, ಮೆಟಾ, ಎನ್‌ವಿಡಿಯಾ, ಮೈಕ್ರೋಸಾಫ್ಟ್, ಆಪಲ್, ಅಡೋಬಿ ಮತ್ತು ಡಬ್ಲೂಪಿಪಿ ನಂತಹ ಪ್ರಮುಖ ಜಾಗತಿಕ ತಂತ್ರಜ್ಞಾನ ಮತ್ತು ಮಾಧ್ಯಮ ಕಂಪನಿಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಸ್ಥಾಪಿಸಲಾಗಿದೆ.
ಬಿ) ಸಂಸ್ಥೆಯ ಜಾಲತಾಣದಲ್ಲಿ (https://www.iict.org) ಒಟ್ಟು 18 ಕೋರ್ಸ್‌ಗಳನ್ನು ಪ್ರಕಟಿಸಲಾಗಿದೆ ಮತ್ತು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ದಾಖಲಾಗಿದ್ದಾರೆ. ಪ್ರಸ್ತುತ ಐಐಸಿಟಿಯಲ್ಲಿ ಒಟ್ಟು 8 ನವೋದ್ಯಮಗಳನ್ನು ಇನ್ಕ್ಯುಬೇಟ್ ಮಾಡಲಾಗುತ್ತಿದೆ.
ಭಾರತದ ಲೈವ್ ಈವೆಂಟ್ ಉದ್ಯಮ
ಸಂಗೀತ ಕಾರ್ಯಕ್ರಮದ ʻಕನ್ಸರ್ಟ್ʼ ಆರ್ಥಿಕತೆಯನ್ನು ದೇಶದ ಬೆಳವಣಿಗೆಯ ಮಾರ್ಗದರ್ಶಕವಾಗಿ ಇರಿಸುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಲೈವ್ ಈವೆಂಟ್ ಗಳ ಅಭಿವೃದ್ಧಿ ಕೋಶ (ಎಲ್ ಇ ಡಿ ಸಿ)ವನ್ನು ಸ್ಥಾಪಿಸಿದೆ. ಈ ಸಂಸ್ಥೆಯು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಕೈಗಾರಿಕಾ ಸಂಸ್ಥೆಗಳು ಮತ್ತು ಪ್ರಮುಖ ಪಾಲುದಾರರ ಪ್ರತಿನಿಧಿಗಳನ್ನು ಒಳಗೊಂಡಿದೆ ಮತ್ತು ವಲಯದ ಸಂಘಟಿತ ಮತ್ತು ರಚನಾತ್ಮಕ ಬೆಳವಣಿಗೆಗೆ ಅನುಕೂಲವಾಗುವ ಗುರಿಯನ್ನು ಹೊಂದಿದೆ.
ಪ್ರಮುಖ ಕ್ಷೇತ್ರಗಳು
- ತ್ವರಿತ ಅನುಮೋದನೆಗಳು ಮತ್ತು ಹೂಡಿಕೆದಾರ ಸ್ನೇಹಿ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು ಅನುಮತಿಗಳಿಗಾಗಿ (ಅಗ್ನಿಶಾಮಕ, ಸಂಚಾರ, ಪುರಸಭೆ, ಇತ್ಯಾದಿ) ಇಂಡಿಯಾ ಸಿನಿ ಹಬ್ (ಐಸಿಎಚ್) ನಲ್ಲಿ ಏಕ-ಗವಾಕ್ಷಿ ಪರವಾನಗಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
- ರಾಜ್ಯಗಳಿಗೆ ಮಾದರಿ ಎಸ್ ಒಪಿಗಳು ಮತ್ತು ಅನಗತ್ಯ ಅನುಮತಿಗಳನ್ನು ತೆಗೆದುಹಾಕುವುದು
ಡಿಜಿಟಲ್ ಪೈರಸಿಯನ್ನು ನಿಗ್ರಹಿಸಲು ಸರ್ಕಾರದ ಕ್ರಮಗಳು
ಚಲನಚಿತ್ರ ಮತ್ತು ಮನರಂಜನಾ ಉದ್ಯಮ ಸೇರಿದಂತೆ ಸೃಜನಶೀಲ ಆರ್ಥಿಕತೆಯ ಮೇಲೆ ಪೈರಸಿಯ ದುಷ್ಪರಿಣಾಮದ ಬಗ್ಗೆ ಸರ್ಕಾರವು ಜಾಗೃತವಾಗಿದೆ. ಈ ನಿಟ್ಟಿನಲ್ಲಿ, ಪೈರಸಿಯ ಸಮಸ್ಯೆಯನ್ನು ಪರಿಹರಿಸಲು ಕಾನೂನು, ಕಟ್ಟುನಿಟ್ಟಿನ ಜಾರಿ ಮತ್ತು ಜಾಗೃತಿ ಪ್ರಯತ್ನಗಳ ಮೂಲಕ ಸರ್ಕಾರವು ಹಲವು ವಿಧಾನವನ್ನು ಅಳವಡಿಸಿಕೊಂಡಿದೆ.
ಪೈರಸಿ ವಿರೋಧಿ ತಂತ್ರಗಳನ್ನು ಬಲಪಡಿಸಲು ಮತ್ತು ಸಂಘಟಿತ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಗೃಹ ವ್ಯವಹಾರಗಳು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಮತ್ತು ದೂರಸಂಪರ್ಕ ಇಲಾಖೆ (ಡಿ.ಒ.ಟಿ) ಪ್ರಮುಖ ಸಚಿವಾಲಯಗಳ ಸದಸ್ಯರನ್ನು ಹೊಂದಿರುವ ಸಚಿವಾಲಯಗಳ ಸಮಿತಿ (ಐಎಂಸಿ) ಇದೆ.
ದೂರದರ್ಶನ ಕೇಂದ್ರ ಮತ್ತು ಸಮುದಾಯ ರೇಡಿಯೋದ ಸಾಧನೆಗಳು
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾರರ ಜಾಗೃತಿ ಮತ್ತು ಶಿಕ್ಷಣಕ್ಕಾಗಿ ದೂರದರ್ಶನ ಕೇಂದ್ರವು ಇಸಿಐ ಮಾಧ್ಯಮ ಪ್ರಶಸ್ತಿ (ಟಿವಿ)ಯನ್ನು ಪಡೆದುಕೊಂಡಿತು, ಇದನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ರಾಷ್ಟ್ರೀಯ ಮತದಾರರ ದಿನದಂದು, ಜನವರಿ 25, 2025 ರಂದು ಪ್ರದಾನ ಮಾಡಿದರು.
2025ರಲ್ಲಿ, ಸಮುದಾಯ ರೇಡಿಯೋ ಸ್ಥಳೀಯ ಸಂವಹನ, ಶಿಕ್ಷಣ ಮತ್ತು ಅಭಿವೃದ್ಧಿಗೆ ಪ್ರಮುಖ ಸಾಧನವಾಗಿ ವಿಸ್ತರಿಸುವುದನ್ನು ಮುಂದುವರೆಸಿತು, 22 ಹೊಸ ಕೇಂದ್ರಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು, ಒಟ್ಟು ದೇಶಾದ್ಯಂತ 551 ಕೇಂದ್ರಗಳನ್ನು ತಲುಪಿತು. ಮುಂಬೈನಲ್ಲಿ ನಡೆದ ವೇವ್ಸ್ ಶೃಂಗಸಭೆಯ ಸಮಯದಲ್ಲಿ ರಾಷ್ಟ್ರೀಯ ಸಮುದಾಯ ರೇಡಿಯೋ ಸಮ್ಮೇಳನವನ್ನು ಆಯೋಜಿಸಲಾಯಿತು, ಜೊತೆಗೆ 5 ಜಾಗೃತಿ ಕಾರ್ಯಾಗಾರಗಳು ಮತ್ತು 1 ಪ್ರಾದೇಶಿಕ ಸಮ್ಮೇಳನವನ್ನು ಆಯೋಜಿಸಲಾಯಿತು, ಇದು ಸಮುದಾಯ ರೇಡಿಯೋ ದೂರದ ಪ್ರದೇಶಗಳು ಮತ್ತು ರಾಜ್ಯಗಳ ಸಾಮರ್ಥ್ಯ ವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.
ಐಎಫ್ ಎಫ್ ಐ 2025 (56 ನೇ ಆವೃತ್ತಿ) ಮತ್ತು ವೇವ್ಸ್ / ಫಿಲ್ಮ್ ಬಜಾರ್
- ಗೋವಾದಲ್ಲಿ ನಡೆದ 56 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ 2025) 81 ದೇಶಗಳಿಂದ 240 ಕ್ಕೂ ಹೆಚ್ಚು ಸಿನಿಮಾಗಳನ್ನು ಪ್ರದರ್ಶಿಸಿತು, ಹಲವಾರು ವಿಶ್ವ, ಅಂತರರಾಷ್ಟ್ರೀಯ ಮತ್ತು ಏಷ್ಯಾದ ಪ್ರಥಮ ಪ್ರದರ್ಶನಗಳೊಂದಿಗೆ, ಪ್ರಮುಖ ಅಂತರರಾಷ್ಟ್ರೀಯ ಉತ್ಸವವಾಗಿ ಅದರ ಸ್ಥಾನಮಾನವನ್ನು ಒತ್ತಿಹೇಳಿತು.
- ಐ ಎಫ್ ಎಫ್ ಐ 2025 ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಮುನ್ನೆಲೆಗೆ ತಂದಿತು, ಭಾರತದ ಮೊದಲ ಎಐ ಚಲನಚಿತ್ರೋತ್ಸವ ಮತ್ತು ವಿ ಎಫ್ ಎಕ್ಸ್, ಸಿಜಿಐ ಮತ್ತು ಡಿಜಿಟಲ್ ಉತ್ಪಾದನೆಯ ಬಗ್ಗೆ ಕಾರ್ಯಕ್ರಮಗಳನ್ನು ಒಳಗೊಂಡಿತ್ತು, ಉತ್ಸವವನ್ನು ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಭವಿಷ್ಯದ ಸಿದ್ಧ ಕೌಶಲ್ಯಗಳೊಂದಿಗೆ ಜೋಡಿಸಿತು.
- ಪಣಜಿಯ ಮೂಲಕ ನಡೆದ ಐತಿಹಾಸಿಕ ಗ್ರ್ಯಾಂಡ್ ಪೆರೇಡ್ ಐ ಎಫ್ ಎಫ್ ಐ ಅನ್ನು ತಳಮಟ್ಟದ ಸಾರ್ವಜನಿಕ ಆಚರಣೆಯನ್ನಾಗಿ ಪರಿವರ್ತಿಸಿತು, ಜನ-ಕೇಂದ್ರಿತ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾಗಿ ಅದರ ಗುರುತನ್ನು ಬಲಪಡಿಸಿತು ಮತ್ತು ಗೋವಾದ ಸೃಜನಶೀಲ ಕೇಂದ್ರವಾಗಿ ಬ್ರಾಂಡಿಂಗ್ ಅನ್ನು ಬಲಪಡಿಸಿತು.
- ಐ ಎಫ್ ಎಫ್ ಐ 2025 ಜೊತೆಗೆ ನಡೆದ ವೇವ್ಸ್ ಫಿಲ್ಮ್ ಬಜಾರ್, ಅಭೂತಪೂರ್ವ ಜಾಗತಿಕ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು, 40ಕ್ಕೂ ಹೆಚ್ಚು ದೇಶಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು, ಇದು ದಕ್ಷಿಣ ಏಷ್ಯಾದ ಚಲನಚಿತ್ರ ಮಾರುಕಟ್ಟೆಯಲ್ಲಿ ಅತಿದೊಡ್ಡ ಅಂತರರಾಷ್ಟ್ರೀಯ ಕೂಟಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮವು 15 ಕ್ಕೂ ಹೆಚ್ಚು ದೇಶಗಳಿಂದ 320 ಯೋಜನೆಗಳನ್ನು ಪ್ರದರ್ಶಿಸಿತು, ಇದು ಭಾರತದ ವಿಷಯವಸ್ತುವಿನ ಪರಿಸರ ವ್ಯವಸ್ಥೆಯಲ್ಲಿ ಬಲವಾದ ಮತ್ತು ಬೆಳೆಯುತ್ತಿರುವ ಜಾಗತಿಕ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಸಿಬಿಎಫ್ ಸಿ ಡಿಜಿಟಲ್, ಬಹುಭಾಷಾ ಮತ್ತು ಲಿಂಗ-ಸಮತೋಲಿತ ಪ್ರಮಾಣೀಕರಣವನ್ನು ಮುಂದುವರಿಸುತ್ತಿದೆ
- ಸಿಬಿಎಫ್ ಸಿ, ಇ-ಸಿನಿಪ್ರಮಾಣ್ ಪೋರ್ಟಲ್ (e‑Cinepramaan portal)ನಲ್ಲಿ ಆನ್ ಲೈನ್ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಿತು, ಅರ್ಜಿದಾರರು ಡೌನ್ ಲೋಡ್ ಮಾಡಬಹುದಾದ ಸುರಕ್ಷಿತ ಡಿಜಿಟಲ್ ಸಹಿ ಮಾಡಿದ ಚಲನಚಿತ್ರ ಪ್ರಮಾಣಪತ್ರಗಳ ಸಂಪೂರ್ಣ ಎಲೆಕ್ಟ್ರಾನಿಕ್ ಸಂಸ್ಕರಣೆ ಮತ್ತು ವಿತರಣೆಯನ್ನು ಸಕ್ರಿಯಗೊಳಿಸಿದೆ.
- ಇ-ಸಿನೆಪ್ರಮಾಣ್ ನಲ್ಲಿ ಹೊಸ ಬಹುಭಾಷಾ ಪ್ರಮಾಣೀಕರಣ ಮಾಡ್ಯೂಲ್ ಅನ್ನು ಪ್ರಾರಂಭಿಸಲಾಯಿತು, ಇದು ಒಂದೇ ಅಪ್ಲಿಕೇಶನ್ ಮೂಲಕ ಚಲನಚಿತ್ರದ ಬಹು ಭಾಷಾ ಆವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವುದು ಮತ್ತು ಎಲ್ಲಾ ಅನುಮೋದಿತ ಭಾಷೆಗಳನ್ನು ಪಟ್ಟಿ ಮಾಡುವ ಒಂದೇ ಏಕೀಕೃತ ಬಹುಭಾಷಾ ಪ್ರಮಾಣಪತ್ರವನ್ನು ನೀಡುವುದು.
- ಸಿಬಿಎಫ್ ಸಿ, ಪ್ರತಿ ಪರೀಕ್ಷೆ ಮತ್ತು ಪರಿಷ್ಕರಣಾ ಸಮಿತಿಯಲ್ಲಿ 50% ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿದೆ, ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಲಿಂಗ ಪ್ರಾತಿನಿಧ್ಯವನ್ನು ಬಲಪಡಿಸಿದೆ.
*****
(रिलीज़ आईडी: 2210095)
आगंतुक पटल : 7