ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿಸೆಂಬರ್ 26 ರಂದು 'ವೀರ್ ಬಾಲ್ ದಿವಸ್' ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ

प्रविष्टि तिथि: 25 DEC 2025 5:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಡಿಸೆಂಬರ್ 26 ರಂದು ಮಧ್ಯಾಹ್ನ 12:15ರ ಸುಮಾರಿಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ‘ವೀರ್ ಬಾಲ್ ದಿನ’ ರಾಷ್ಟ್ರೀಯ ಕಾರ್ಯಕ್ರಮ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ವೀರ್ ಬಾಲ್ ದಿನಾಚರಣೆ ಅಂಗವಾಗಿ ಭಾರತ ಸರ್ಕಾರವು ದೇಶಾದ್ಯಂತ ಜನರ ಭಾಗಿದಾರಿಕೆಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದು ನಾಗರಿಕರಿಗೆ ಸಾಹಿಬ್‌ಜಾದೆಗಳ ಅಸಾಧಾರಣ ಧೈರ್ಯ ಮತ್ತು ಪರಮೋಚ್ಚ ತ್ಯಾಗದ ಬಗ್ಗೆ ತಿಳಿಸುವ ಮತ್ತು ಶಿಕ್ಷಣ ನೀಡುವ ಉದ್ದೇಶ ಮತ್ತು ಭಾರತದ ಇತಿಹಾಸದ ಯುವ ವೀರರ ಅದಮ್ಯ ಧೈರ್ಯ, ತ್ಯಾಗ ಮತ್ತು ಶೌರ್ಯವನ್ನು ಗೌರವಿಸುವ ಮತ್ತು ಸ್ಮರಿಸುವ ಗುರಿಯನ್ನು ಹೊಂದಿದೆ. ಈ ಚಟುವಟಿಕೆಗಳಲ್ಲಿ ಕಥೆ ಹೇಳುವ ಗೋಷ್ಠಿಗಳು, ಪಠಣಗಳು, ಪೋಸ್ಟರ್ ಸಿದ್ಧಪಡಿಸುವುದು ಮತ್ತು ಪ್ರಬಂಧ ಬರೆಯುವ ಸ್ಪರ್ಧೆಗಳು ಸೇರಿವೆ. ಅವುಗಳನ್ನು ಶಾಲೆಗಳು, ಮಕ್ಕಳ ಆರೈಕೆ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಇತರ ಶೈಕ್ಷಣಿಕ ವೇದಿಕೆಗಳಲ್ಲಿ ಹಾಗೂ MyGov ಮತ್ತು MyBharat ಪೋರ್ಟಲ್‌ಗಳಲ್ಲಿ ಆನ್‌ಲೈನ್ ಚಟುವಟಿಕೆಗಳ ಮೂಲಕ ನಡೆಸಲಾಗುವುದು.

ಪ್ರಧಾನಮಂತ್ರಿ ಅವರು 2022ರ ಜನವರಿ 9 ರಂದು ಶ್ರೀ ಗುರು ಗೋವಿಂದ ಸಿಂಗ್ ಅವರ ಪ್ರಕಾಶ್ ಪುರಬ್ ಆಚರಣೆ ವೇಳೆ ಪ್ರತಿ ವರ್ಷ ಡಿಸೆಂಬರ್ 26 ಅನ್ನು 'ವೀರ ಬಾಲ್ ದಿನ’ವನ್ನಾಗಿ ಆಚರಿಸಲಾಗುವುದೆಂದು ಘೋಷಿಸಿದ್ದರು. ಶ್ರೀ ಗುರು ಗೋವಿಂದ ಸಿಂಗ್ ಅವರ ಪುತ್ರರಾದ ಸಾಹಿಬ್ಜಾದಾಸ್ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಹುತಾತ್ಮರ ಸ್ಮರಣಾರ್ಥವಾಗಿ ಅವರ ಅಪ್ರತಿಮ ತ್ಯಾಗವು ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ನೀಡುತ್ತದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ಪ್ರಶಸ್ತಿ ಪುರಸ್ಕೃತರು ಸಹ ಉಪಸ್ಥಿತರಿರಲಿದ್ದಾರೆ.

                                                                                        

*****


(रिलीज़ आईडी: 2208552) आगंतुक पटल : 29
इस विज्ञप्ति को इन भाषाओं में पढ़ें: Marathi , Assamese , Bengali , Odia , English , Urdu , हिन्दी , Manipuri , Punjabi , Gujarati , Tamil , Telugu , Malayalam