ಪ್ರಧಾನ ಮಂತ್ರಿಯವರ ಕಛೇರಿ
ಆದಾಯ ಬೆಂಬಲ ಮತ್ತು ದೀರ್ಘಾವಧಿಯ ಗ್ರಾಮೀಣ ಉತ್ಪಾದಕತೆಯನ್ನು ವಿಬಿ-ಜಿ ರಾಮ್ ಜಿ ಕಾಯ್ದೆ 2025, ಪರಸ್ಪರ ವಿನಿಮಯಕ್ಕಿಂತ ಹೆಚ್ಚಾಗಿ ನಿರಂತರತೆಯಾಗಿ ಹೇಗೆ ಪರಿಗಣಿಸುತ್ತದೆ ಎಂಬುದರ ಕುರಿತು ಬರೆದ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 DEC 2025 1:41PM by PIB Bengaluru
ಆದಾಯ ಬೆಂಬಲ, ಆಸ್ತಿ ಸೃಷ್ಟಿ, ಕೃಷಿ ಸ್ಥಿರತೆ ಮತ್ತು ದೀರ್ಘಾವಧಿಯ ಗ್ರಾಮೀಣ ಉತ್ಪಾದಕತೆಯನ್ನು ವಿಬಿ-ಜಿ ರಾಮ್ ಜಿ ಕಾಯ್ದೆ 2025, ಪರಸ್ಪರ ವಿನಿಮಯಕ್ಕಿಂತ ಹೆಚ್ಚಾಗಿ ನಿರಂತರತೆಯಾಗಿ ಹೇಗೆ ಪರಿಗಣಿಸುತ್ತದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.
"ಮಸೂದೆಗೆ ಮುಂಚಿತವಾಗಿ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಬಹು-ಪಾಲುದಾರರ ಚರ್ಚೆಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಎಕ್ಸ್ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ಈ ಅರಿವು ಮೂಡಿಸಬಲ್ಲ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @ChouhanShivraj ಅವರು ಆದಾಯ ಬೆಂಬಲ, ಆಸ್ತಿ ಸೃಷ್ಟಿ, ಕೃಷಿ ಸ್ಥಿರತೆ ಮತ್ತು ದೀರ್ಘಾವಧಿಯ ಗ್ರಾಮೀಣ ಉತ್ಪಾದಕತೆಯನ್ನು ವಿಬಿ-ಜಿ ರಾಮ್ ಜಿ ಕಾಯ್ದೆ ಕಾಯ್ದೆ 2025, ಪರಸ್ಪರ ವಿನಿಮಯಕ್ಕಿಂತ ಹೆಚ್ಚಾಗಿ ನಿರಂತರತೆಯಾಗಿ ಪರಿಗಣಿಸುತ್ತದೆ ಎಂದು ವಿವರಿಸಿದ್ದಾರೆ.
ಮುಂಚಿತವಾಗಿ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಬಹು-ಪಾಲುದಾರರ ಚರ್ಚೆಗಳಿಂದ ಮಸೂದೆಯ ಪ್ರಕ್ರಿಯೆಯನ್ನು ನಡೆಸಲಾಯಿತು ಎಂದು ಅವರು ಲೇಖನದಲ್ಲಿ ತಿಳಿಸಿದ್ದಾರೆ."
*****
(ಪ್ರಕಟಣೆ ಐ.ಡಿ.: 2208132)
ವಿಸಿಟರ್ ಕೌಂಟರ್ : 58
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam