ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾರತ-ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್.ಟಿ.ಎ) ಶ್ಲಾಘಿಸಿದ್ದು, ಇದನ್ನು ಮೋದಿ ಅವರ ಸರ್ಕಾರದ ವ್ಯಾಪಾರ ರಾಜತಾಂತ್ರಿಕತೆಯ "ನವ ಮೈಲಿಗಲ್ಲು" ಎಂದು ಬಣ್ಣಿಸಿದ್ದಾರೆ



​ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು 20 ಶತಕೋಟಿ ಡಾಲರ್ ಹೂಡಿಕೆಯನ್ನು ದೇಶಕ್ಕೆ ತರಲಿದ್ದು, ಭಾರತೀಯ ಸಂಶೋಧಕರು, ಉದ್ಯಮಿಗಳು, ರೈತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂ.ಎಸ್.‌ಎಂ.ಇ ಗಳು), ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಅಪಾರ ಲಾಭದಾಯಕ ಅವಕಾಶಗಳನ್ನು ಸೃಷ್ಟಿಸಲಿದೆ. ಇದು ದೇಶದ ಸಮೃದ್ಧಿಯ ಪಾಲಿಗೆ ಹೊಸ ಹೆಬ್ಬಾಗಿಲನ್ನು ತೆರೆಯಲಿದೆ

​ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, 'ಜನಕೇಂದ್ರಿತ ವಿದೇಶಾಂಗ ನೀತಿ'ಯು ನಾಗರಿಕರ ಆಕಾಂಕ್ಷೆಗಳನ್ನು ಹೇಗೆ ಸಾಕಾರಗೊಳಿಸುತ್ತಿದೆ ಎಂಬುದಕ್ಕೆ ಈ ಒಪ್ಪಂದವು ಒಂದು ಅತ್ಯುತ್ತಮ ನಿದರ್ಶನವಾಗಿದೆ

प्रविष्टि तिथि: 22 DEC 2025 7:58PM by PIB Bengaluru

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾರತ-ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್.ಟಿ.ಎ) ಶ್ಲಾಘಿಸಿದ್ದು, ಇದು ಮೋದಿ ಅವರ ಸರ್ಕಾರದ ವ್ಯಾಪಾರ ರಾಜತಾಂತ್ರಿಕತೆಯ ಹೊಸ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

​ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವರು, "ಮೋದಿ ಸರ್ಕಾರದ ವ್ಯಾಪಾರ ರಾಜತಾಂತ್ರಿಕತೆಯು ನವ ಮೈಲಿಗಲ್ಲನ್ನು ಸ್ಥಾಪಿಸುತ್ತಿದೆ. 20 ಶತಕೋಟಿ ಡಾಲರ್ ಹೂಡಿಕೆಯನ್ನು ತರಲಿರುವ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಭಾರತೀಯ ಸಂಶೋಧಕರು, ಉದ್ಯಮಿಗಳು, ರೈತರು, ಎಂ.ಎಸ್.‌ಎಂ.ಇ ಗಳು, ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಲಾಭದಾಯಕ ಅವಕಾಶಗಳನ್ನು ಒದಗಿಸುವ ಮೂಲಕ ಸಮೃದ್ಧಿಯ ಹೊಸ ದ್ವಾರಗಳನ್ನು ತೆರೆಯಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜನಕೇಂದ್ರಿತ ವಿದೇಶಾಂಗ ನೀತಿಯು ನಾಗರಿಕರ ಆಕಾಂಕ್ಷೆಗಳನ್ನು ಹೇಗೆ ಪೂರೈಸುತ್ತಿದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಹೇಳಿದ್ದಾರೆ.

****


(रिलीज़ आईडी: 2207557) आगंतुक पटल : 72
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Punjabi , Gujarati , Tamil , Telugu , Malayalam