ಗೃಹ ವ್ಯವಹಾರಗಳ ಸಚಿವಾಲಯ
ಬಲಿದಾನ ದಿನದ ಅಂಗವಾಗಿ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಮತ್ತು ರೋಶನ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ
ಅವರ ತ್ಯಾಗ 'ಕಾಕೋರಿ ರೈಲು ಕಾರ್ಯಾಚರಣೆ' ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿತು ಮತ್ತು ಬ್ರಿಟಿಷ್ ಆಳ್ವಿಕೆಯ ಅಡಿಪಾಯ ಅಲುಗಾಡಿಸಿತು
ದೇಶದ ಸಂಪನ್ಮೂಲಗಳು ಮತ್ತು ಅದರ ಶ್ರಮಶೀಲ ಜನರು ಉತ್ಪಾದಿಸುವ ಸರಕುಗಳು ನ್ಯಾಯಯುತವಾಗಿ ಜನರಿಗೆ ಸೇರುತ್ತವೆ ಎಂಬ ಸಂಕಲ್ಪವನ್ನು ಅರಿತುಕೊಂಡ ಈ ಸ್ವಾತಂತ್ರ್ಯ ಹೋರಾಟಗಾರರು
ಅವರು ಇತರ ಕ್ರಾಂತಿಕಾರಿಗಳಿಗೆ ಧೈರ್ಯ ಮತ್ತು ಶೌರ್ಯಕ್ಕೆ ಸ್ಫೂರ್ತಿಯ ಮೂಲ
ಈ ಹುತಾತ್ಮರನ್ನು ರಾಷ್ಟ್ರವು ಎಂದಿಗೂ ಮರೆಯುವುದಿಲ್ಲ
प्रविष्टि तिथि:
19 DEC 2025 11:55AM by PIB Bengaluru
ಬಲಿದಾನ ದಿನದ ಅಂಗವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಮತ್ತು ರೋಶನ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅಲ್ಲದೆ, ಈ ಸ್ವಾತಂತ್ರ್ಯ ಹೋರಾಟಗಾರರು 'ಕಾಕೋರಿ ರೈಲು ಕಾರ್ಯಾಚರಣೆ’ಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ನೀಡಿದರು ಮತ್ತು ಬ್ರಿಟಿಷ್ ಆಳ್ವಿಕೆಯ ಬುನಾದಿಯನ್ನೇ ಅಲುಗಾಡಿಸಿದ್ದರು ಎಂದು ಬಣ್ಣಿಸಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಜಾಲತಾಣ ‘X’ ಪೋಸ್ಟ್‌ನಲ್ಲಿ 'ಸ್ವಾತಂತ್ರ ಹೋರಾಟಗಾರರಾದ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಮತ್ತು ರೋಶನ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅವರು ಕಾಕೋರಿ ರೈಲು ಕಾರ್ಯಾಚರಣೆ'ಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ನೀಡಿದರು ಮತ್ತು ಬ್ರಿಟಿಷ್ ಆಳ್ವಿಕೆಯ ಬುನಾದಿಯನ್ನು ಅಲುಗಾಡಿಸಿದ ಅವರ ತ್ಯಾಗವನ್ನು ಗೌರವಿಸುವುದಾಗಿ ಹೇಳಿದ್ದಾರೆ. ಈ ಸ್ವಾತಂತ್ರ್ಯ ಹೋರಾಟಗಾರರು ದೇಶದ ಸಂಪನ್ಮೂಲಗಳು ಮತ್ತು ಅದರ ಶ್ರಮಶೀಲ ಜನರು ಉತ್ಪಾದಿಸುವ ಸರಕುಗಳು ನ್ಯಾಯಯುತವಾಗಿ ಜನರಿಗೆ ಸೇರಿವೆ ಎಂಬ ಸಂಕಲ್ಪವನ್ನು ಅರಿತುಕೊಂಡರು ಮಾತ್ರವಲ್ಲದೆ, ಇತರ ಕ್ರಾಂತಿಕಾರಿಗಳಿಗೆ ಧೈರ್ಯ ಮತ್ತು ಶೌರ್ಯದ ಸ್ಫೂರ್ತಿಯ ಮೂಲವಾದರು ಎಂದು ಅವರು ಹೇಳಿದ್ದಾರೆ. ಈ ಹುತಾತ್ಮರನ್ನು ರಾಷ್ಟ್ರವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀ ಶಾ ತಿಳಿಸಿದ್ದಾರೆ.
*****
(रिलीज़ आईडी: 2206448)
आगंतुक पटल : 9