ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಡಿಸಿಐಡಿ ಮೂಲಕ ಡಿಜಿಟಲ್ ಮತ್ತು ಸ್ಥಳೀಯ ಜನಸಂಪರ್ಕವನ್ನು ವಿಸ್ತರಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ


ಸರ್ಕಾರಿ ಉಪಕ್ರಮಗಳ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿಗೆ ಡಿಸಿಐಡಿ ಯೋಜನೆ ಬೆಂಬಲ

प्रविष्टि तिथि: 18 DEC 2025 12:44PM by PIB Bengaluru

ಅಭಿವೃದ್ಧಿ ಸಂವಹನ ಮತ್ತು ಮಾಹಿತಿ ಪ್ರಸರಣ (ಡಿಸಿಐಡಿ), ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ವಲಯದ ಯೋಜನೆಯಾಗಿದೆ. ಇದು ಸರ್ಕಾರಿ ಕಾರ್ಯಕ್ರಮಗಳು/ ಯೋಜನೆಗಳು/ ಉಪಕ್ರಮಗಳ ಮಾಹಿತಿ ಪ್ರಸರಣ ಮತ್ತು ನಾಗರಿಕರ ಸಂಪರ್ಕವನ್ನು ಬೆಂಬಲಿಸುತ್ತದೆ.

ಈ ಯೋಜನೆಯಡಿ ಮಹಾರಾಷ್ಟ್ರ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ಗ್ರಾಮೀಣ, ಬುಡಕಟ್ಟು, ದೂರದ ಮತ್ತು ನಗರ ಜನಸಂಖ್ಯೆಯನ್ನು ತಲುಪಲು ಒತ್ತು ನೀಡಲಾಗಿದೆ.

ಈ ಯೋಜನೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ತನ್ನ ಮಾಧ್ಯಮ ಘಟಕಗಳಾದ ಕೇಂದ್ರ ಸಂವಹನ ಬ್ಯೂರೋ (ಸಿಬಿಸಿ), ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಮತ್ತು ಹೊಸ ಮಾಧ್ಯಮ ವಿಭಾಗ (ಎನ್ ಎಂಡಬ್ಲೂ) ಮೂಲಕ ಜಾರಿಗೊಳಿಸುತ್ತದೆ.

ಸಿಬಿಸಿ ಸ್ವಚ್ಛ ಭಾರತ ಮಿಷನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ ಮತ್ತು ನಗರ, ಜಲ ಜೀವನ್ ಮಿಷನ್,  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪ್ರಸರಣಕ್ಕಾಗಿ ಹಲವು ಸಾರ್ವಜನಿಕ ಬಹು ಮಾಧ್ಯಮ ಅಭಿಯಾನಗಳನ್ನು ನಡೆಸುತ್ತದೆ.

ಡಿಸಿಐಡಿ ಯೋಜನೆಯಡಿಯಲ್ಲಿ ವೆಚ್ಚದ ಚಟುವಟಿಕೆಯ ವಿವರಗಳು ಸಿಬಿಸಿಯ ವೆಬ್‌ಸೈಟ್‌ನಲ್ಲಿ ಅಂದರೆ  www.davp.nic.in. ನಲ್ಲಿ ಲಭ್ಯವಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಜಿಟಲ್ ಮತ್ತು ಸ್ಥಳೀಯ ಜನರನ್ನು ತಲುಪಲು ನಿರ್ದಿಷ್ಟವಾದ ಆಧುನಿಕ ಮತ್ತು ಬಹು-ವೇದಿಕೆ ಸಂವಹನ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಸರ್ಕಾರವು ಯೋಜನೆಯ ಪರಿಣಾಮವನ್ನು ಗಣನೀಯವಾಗಿ ಹೆಚ್ಚಿಸಿದೆ.

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಯುವಜನರು ಮತ್ತು ನಿರ್ದಿಷ್ಟ ಪ್ರೇಕ್ಷಕರನ್ನು ತಲುಪಲು ವಿವಿಧ ಡಿಜಿಟಲ್ ಜನಸಂಪರ್ಕ (ಔಟ್ರೀಚ್) ವೇದಿಕೆಗಳಲ್ಲಿ ಉದ್ದೇಶಿತ ಸಂಪರ್ಕ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ. ಇದನ್ನು ಭಾರತ ಸರ್ಕಾರದ 2023ರ ಡಿಜಿಟಲ್ ಜಾಹೀರಾತು ನೀತಿಯ ಪ್ರಕಾರ ಮಾಡಲಾಗುತ್ತದೆ.

ಜಲಗಾಂವ್‌ನಂತಹ ಪ್ರದೇಶಗಳಲ್ಲಿ ನಡೆಸಲಾದವುಗಳನ್ನು ಒಳಗೊಂಡಂತೆ ಎಲ್ಲಾ ಮಾಧ್ಯಮ ಅಭಿಯಾನಗಳನ್ನು ಸಂಬಂಧಿಸಿದ ಸಚಿವಾಲಯಗಳ ಅವಶ್ಯಕತೆಗಳು ಮತ್ತು ಆಯಾ ಕಾರ್ಯಕ್ರಮಗಳ ನಿರ್ದಿಷ್ಟ ಪ್ರೇಕ್ಷಕರೊಂದಿಗೆ ಕೇಂದ್ರ ಸಂವಹನ ಬ್ಯೂರೋ (ಸಿಬಿಸಿ) ತನ್ನ ಕಾರ್ಯತಂತ್ರವನ್ನು ಜೋಡಣೆ ಮಾಡುವ ಮೂಲಕ ಸಂಯೋಜಿಸುತ್ತದೆ.

ಮಾಹಿತಿಯನ್ನು ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು 2025 ಡಿ.17ರಂದು ಲೋಕಸಭೆಗೆ ನೀಡಿದ್ದಾರೆ.

 

*****


(रिलीज़ आईडी: 2205868) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Punjabi , Tamil , Telugu , Malayalam