ಗೃಹ ವ್ಯವಹಾರಗಳ ಸಚಿವಾಲಯ
2001ರ ಸಂಸತ್ತಿನ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕರಿಗೆ ಸೂಕ್ತ ಪ್ರತ್ಯುತ್ತರ ನೀಡುವ ಸಂದರ್ಭದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದ್ದಾರೆ
ಇಂದು ನಮ್ಮ ಭದ್ರತಾ ಪಡೆಗಳ ಭಯೋತ್ಪಾದನೆಯ ವಿರುದ್ಧದ ಅದಮ್ಯ ಧೈರ್ಯ ಮತ್ತು ಶೌರ್ಯವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ದಿನ
2001ರಲ್ಲಿ, ಭದ್ರತಾ ಪಡೆಗಳು ತಮ್ಮ ದೃಢನಿಶ್ಚಯ ಮತ್ತು ಮನೋಭಾವದಿಂದ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇವಾಲಯವಾದ ನಮ್ಮ ಸಂಸತ್ ಭವನದ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದವು
ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುವ ಸಂದರ್ಭದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ
ಈ ವೀರ ಯೋಧರ ತ್ಯಾಗ ಮತ್ತು ಹುತಾತ್ಮತೆಗೆ ಈ ರಾಷ್ಟ್ರವು ಸದಾ ಋಣಿಯಾಗಿರುತ್ತದೆ
प्रविष्टि तिथि:
13 DEC 2025 10:11AM by PIB Bengaluru
2001ರ ಡಿಸೆಂಬರ್ 13 ರಂದು ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕರಿಗೆ ಸೂಕ್ತ ಪ್ರತ್ಯುತ್ತರ ನೀಡುವ ಸಂದರ್ಭದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಇಂದು ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವರು: "2001ರಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ದೇವಾಲಯವಾದ ನಮ್ಮ ಸಂಸತ್ ಭವನದ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ಧೈರ್ಯದಿಂದ ವಿಫಲಗೊಳಿಸಿದ ನಮ್ಮ ಭದ್ರತಾ ಪಡೆಗಳ ಅದಮ್ಯ ಧೈರ್ಯ ಮತ್ತು ಶೌರ್ಯವನ್ನು ಇಂದು ಮತ್ತೊಮ್ಮೆ ನೆನಪಿಸಿಕೊಳ್ಳುವ ದಿನವಾಗಿದೆ. ಭಯೋತ್ಪಾದಕರಿಗೆ ಸೂಕ್ತ ಪ್ರತ್ಯುತ್ತರ ನೀಡುವಾಗ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ಈ ವೀರ ಯೋಧರ ತ್ಯಾಗ ಮತ್ತು ಹುತಾತ್ಮತೆಗೆ ಈ ರಾಷ್ಟ್ರವು ಸದಾ ಋಣಿಯಾಗಿರುತ್ತದೆ."
*****
(रिलीज़ आईडी: 2203527)
आगंतुक पटल : 8
इस विज्ञप्ति को इन भाषाओं में पढ़ें:
Tamil
,
Telugu
,
Marathi
,
Malayalam
,
Bengali
,
Bengali-TR
,
Odia
,
English
,
Urdu
,
हिन्दी
,
Assamese
,
Punjabi
,
Gujarati