ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರ ಭಾರತಿಯು ಎಐ ಬ್ಯಾಂಡ್ ತ್ರಿಲೋಕ್ ಜೊತೆ ಪಾಲುದಾರಿಕೆ ಹೊಂದಿಲ್ಲ: ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್

प्रविष्टि तिथि: 12 DEC 2025 2:53PM by PIB Bengaluru

ಆಕಾಶವಾಣಿ, ದೂರದರ್ಶನ ಅಥವಾ ಅದರ ಒಟಿಟಿ ಪ್ಲಾಟ್‌ಫಾರ್ಮ್ ವೇವ್ಸ್‌ ನಲ್ಲಿ ವಿಷಯವನ್ನು ಪ್ರಸಾರ ಮಾಡಲು ಪ್ರಸಾರ ಭಾರತಿ "ತ್ರಿಲೋಕ್" ಎಂಬ ಎಐ ನಿರ್ಮಿತ ಸಂಗೀತ ಬ್ಯಾಂಡ್‌ನೊಂದಿಗೆ ಪಾಲುದಾರಿಕೆ ಅಥವಾ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ.

ಈ ವರ್ಷದ ದುರ್ಗಾ ನವರಾತ್ರಿ ಹಬ್ಬದ ಸಂದರ್ಭದಲ್ಲಿ ವೇವ್ಸ್‌ ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಪ್ರಸಾರ ಭಾರತಿ ನೆಟ್‌ವರ್ಕ್‌ ನಲ್ಲಿ ಕೆಲವು ಎಐ-ರಚಿತ ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಯಿತು. ಯಾವುದೇ ಹಣಕಾಸಿನ ಅಥವಾ ಪುನರಾವರ್ತಿತ ಬದ್ಧತೆಯಿಲ್ಲದೆ ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗಿದೆ.

ರಾಜ್ಯಸಭೆಯಲ್ಲಿ ಇಂದು ಶ್ರೀ ಎಸ್. ನಿರಂಜನ್ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

 

*****


(रिलीज़ आईडी: 2203106) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati , Tamil , Telugu , Malayalam