ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮಾಧ್ಯಮ ವೇದಿಕೆಗಳಲ್ಲಿ ನಕಲಿ ಸುದ್ದಿ ಮತ್ತು ಡೀಪ್ ಫೇಕ್ ಗಳನ್ನು ಎದುರಿಸಲು ಸಾಂಸ್ಥಿಕ ಚೌಕಟ್ಟನ್ನು ಬಲವರ್ಧನೆಗೊಳಿಸಿದ ಸರ್ಕಾರ


ಸೃಜನಶೀಲ ಸ್ವಾತಂತ್ರ್ಯವನ್ನು ರಕ್ಷಿಸುವಾಗ ದಾರಿ ತಪ್ಪಿಸುವ ಮಾಹಿತಿಯ ವಿರುದ್ಧ ಸರ್ಕಾರದಿಂದ ಕ್ರಮ

ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಅಧಿಕೃತ ಸುದ್ದಿಗಳನ್ನು ಪರಿಶೀಲಿಸುವ ಮತ್ತು ನಕಲಿ ಸುದ್ದಿಗಳನ್ನು ಎದುರಿಸಲಿರುವ ಪಿಐಬಿಯ ಫ್ಯಾಕ್ಟ್‌ ಚಕ್‌ ಘಟಕ

प्रविष्टि तिथि: 12 DEC 2025 2:06PM by PIB Bengaluru

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನದ 19(1)ನೇ ವಿಧಿಯ ಅಡಿಯಲ್ಲಿ ರಕ್ಷಿಸಲಾಗಿದೆ. ಮಾಧ್ಯಮ ವೇದಿಕೆಗಳಲ್ಲಿ ನಕಲಿ, ಸುಳ್ಳು, ದಾರಿತಪ್ಪಿಸುವ ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆ(ಎಐ)ನಿಂದ ಸೃಷ್ಟಿಸಲಾದ ಡೀಪ್ ಫೇಕ್‌ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅದು ಪ್ರಜಾಪ್ರಭುತ್ವದ ಪ್ರಕ್ರಿಯೆಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.

ನಕಲಿ ಸುದ್ದಿಗಳನ್ನು ಸಾಮಾನ್ಯವಾಗಿ ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿ ಎಂದು ಅರ್ಥೈಸಲಾಗುತ್ತದೆ ಮತ್ತು ಅವುಗಳನ್ನು ಸುದ್ದಿಯಾಗಿ ಪ್ರಸ್ತುತಪಡಿಸಲಾಗುತ್ತದೆ. ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಅಂತಹ ಹಾನಿಕಾರಕ ವಿಷಯವನ್ನು ಪರಿಹರಿಸಲು ವಿಸ್ತೃತವಾದ ಶಾಸನಬದ್ಧ ಮತ್ತು ಸಾಂಸ್ಥಿಕ ಚೌಕಟ್ಟು ಈಗಾಗಲೇ ಅಸ್ತಿತ್ವದಲ್ಲಿದೆ.

ಎಲೆಕ್ಟ್ರಾನಿಕ್ ಮಾಧ್ಯಮ

  • ಟಿವಿ ಚಾನೆಲ್‌ಗಳು ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆ 1995ರ ಅಡಿಯಲ್ಲಿ ಕಾರ್ಯಕ್ರಮ ಸಂಹಿತೆಯನ್ನು ಅನುಸರಿಸುತ್ತವೆ.
  • ಇದು ಅಶ್ಲೀಲ, ಮಾನಹಾನಿಕರ, ಉದ್ದೇಶಪೂರ್ವಕವಾಗಿ ಸುಳ್ಳು ಅಥವಾ ಸೂಚ್ಯವಾದ ವ್ಯಂಗ್ಯೋಕ್ತಿಗಳು ಮತ್ತು ಅರ್ಧ-ಸತ್ಯಗಳನ್ನು ಒಳಗೊಂಡಿರುವ ವಿಷಯವನ್ನು ನಿಷೇಧಿಸುತ್ತದೆ.
  • ಕಾಯ್ದೆಯಡಿಯಲ್ಲಿ ರೂಪಿಸಲಾದ ನಿಯಮಗಳು ಉಲ್ಲಂಘನೆಗಳನ್ನು ಪರಿಹರಿಸಲು ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸ್ಥಾಪಿಸುತ್ತವೆ.
    • ಒಂದನೇ ಹಂತ – ಪ್ರಸಾರಕರಿಂದ ಸ್ವಯಂ ನಿಯಂತ್ರಣ
    • ಎರಡನೇ ಹಂತ – ಪ್ರಸಾರಕರ ಸ್ವಯಂ ನಿಯಂತ್ರಣ ಸಂಸ್ಥೆಗಳಿಂದ ನಿಯಂತ್ರಣ
    • ಮೂರನೇ ಹಂತ – ಕೇಂದ್ರ ಸರ್ಕಾರದಿಂದ ಮೇಲ್ವಿಚಾರಣಾ ಕಾರ್ಯವಿಧಾನ

ಕಾರ್ಯಕ್ರಮ ಸಂಹಿತೆಯ ಉಲ್ಲಂಘನೆಯನ್ನು ಸಲಹೆಗಳು, ಎಚ್ಚರಿಕೆಗಳು, ಕ್ಷಮೆಯಾಚನೆ ಸ್ಕ್ರೋಲ್‌ಗಳು  ತಾತ್ಕಾಲಿಕ ಪ್ರಸಾರದ ನಿರ್ದೇಶನಗಳು ಇತ್ಯಾದಿಗಳ ಮೂಲಕ ಪರಿಹರಿಸಲಾಗುತ್ತದೆ.

ಮುದ್ರಣ ಮಾಧ್ಯಮ

  • ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಪತ್ರಿಕೋದ್ಯಮ ನಡಾವಳಿಯ ನಿಯಮಗಳು ನಕಲಿ, ಮಾನನಷ್ಟ ಅಥವಾ ದಾರಿತಪ್ಪಿಸುವ ಸುದ್ದಿಗಳ ಪ್ರಕಟಣೆಯನ್ನು ನಿರ್ಬಂಧಿಸುತ್ತವೆ.
  • ಈ ಮಾನದಂಡಗಳ ಉಲ್ಲಂಘನೆಯ ಆರೋಪಗಳನ್ನು ಪಿಸಿಐ ವಿಚಾರಣೆ ಮಾಡಬಹುದು.
  • ಪಿಸಿಐ ದೂರುಗಳನ್ನು ಸರಿಯಾಗಿ ಪರಿಶೀಲಿಸುತ್ತದೆ ಮತ್ತು ಪತ್ರಿಕೆ, ಸಂಪಾದಕರು, ಪತ್ರಕರ್ತರು ಇತ್ಯಾದಿಗಳಿಗೆ ಎಚ್ಚರಿಕೆ ನೀಡುವುದು, ವಾಗ್ದಂಡನೆ ಮಾಡುವುದು ಅಥವಾ ಖಂಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಡಿಜಿಟಲ್ ಮಾಧ್ಯಮ

ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಪ್ರಕಾಶಕರಿಗೆ ಐಟಿ ನಿಯಮಗಳು 2021 ರ ಅಡಿಯಲ್ಲಿ ನೀತಿ ಸಂಹಿತೆಯನ್ನು ರೂಪಿಸಲಾಗಿದೆ:

  • ಮಧ್ಯವರ್ತಿಗಳು(ಇಂಟರ್ ಮೀಡಿಯರಿಸ್) ಬಳಕೆದಾರರು ತಪ್ಪು ಮಾಹಿತಿ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಡೆಯಬೇಕು, ಅದು ಸ್ಪಷ್ಟವಾಗಿ ಸುಳ್ಳು ಮತ್ತು ಸತ್ಯಕ್ಕೆ ದೂರವಾದ ಅಥವಾ ದಾರಿತಪ್ಪಿಸುವ ಸ್ವಭಾವದ್ದಾಗಿದೆ.
  • ನೀತಿ ಸಂಹಿತೆಯನ್ನು ಪಾಲಿಸಲು ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸಹ ಒದಗಿಸಲಾಗಿದೆ .
  • ಸುಳ್ಳು ಅಥವಾ ಮಾನಹಾನಿಕರ ವಿಷಯಕ್ಕೆ ಸಂಬಂಧಿಸಿದ ದೂರುಗಳನ್ನು ನಿಗದಿತ ಸಮಯದೊಳಗೆ ನಿರ್ವಹಿಸಲು ವೇದಿಕೆಗಳಿಂದ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲಾಗುವುದು.
  • ಐಟಿ ನಿಯಮಗಳ ಭಾಗ II, ಇತರ ವಿಷಯಗಳ ನಡುವೆ ಸ್ಪಷ್ಟವಾಗಿ ಸುಳ್ಳು, ಸತ್ಯಕ್ಕೆ ದೂರವಾದ ಅಥವಾ ದಾರಿತಪ್ಪಿಸುವ ಸ್ವರೂಪದ ಮಾಹಿತಿಯ ಪ್ರಸರಣವನ್ನು ತಡೆಗಟ್ಟುವ ಜವಾಬ್ದಾರಿಯನ್ನು ಮಧ್ಯವರ್ತಿಗಳ ಮೇಲೆ ಹೇರುತ್ತದೆ.

ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯಗಳ ಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧಗಳು ಅಥವಾ ಸಾರ್ವಜನಿಕ ಸುವ್ಯವಸ್ಥೆ ಅಥವಾ ಮೇಲೆ ತಿಳಿಸಿದ ಯಾವುದೇ ಗುರುತಿಸಬಹುದಾದ ಅಪರಾಧದ ಆಯೋಗಕ್ಕೆ ಪ್ರಚೋದನೆಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಆದೇಶಗಳನ್ನು ಹೊರಡಿಸುತ್ತದೆ.

ಫ್ಯಾಕ್ಟ್ಚಕ್ಘಟಕ

ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪರಿಶೀಲಿಸಲು ಪತ್ರಿಕಾ ಮಾಹಿತಿ ಬ್ಯೂರೋ ಅಡಿಯಲ್ಲಿ ಫ್ಯಾಕ್ಟ್‌ ಚೆಕ್‌ ಯೂನಿಟ್ (ಎಫ್ ಸಿಯು) ಅನ್ನು ಸ್ಥಾಪಿಸಲಾಗಿದೆ.

  • ಇದು ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳಲ್ಲಿನ ಅಧಿಕೃತ ಮೂಲಗಳಿಂದ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತದೆ.
  • ನಂತರ ಎಫ್ ಸಿಯು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸರಿಯಾದ ಮಾಹಿತಿಯನ್ನು ಪೋಸ್ಟ್ ಮಾಡುತ್ತದೆ.

ಸಮಾಜದ ಅಡಿಪಾಯವನ್ನು ರೂಪಿಸುವ ಸಂಸ್ಥೆಗಳು ಮತ್ತು ನಂಬಿಕೆಯನ್ನು ಸರ್ಕಾರವು ಬಲವರ್ಧನೆಗೊಳಿಸುತ್ತಿದೆ. ತಪ್ಪು ಮಾಹಿತಿಯಿಂದ ಉಂಟಾಗುವ ಹಾನಿಗಳನ್ನು ಪರಿಹರಿಸುವುದರ ಜೊತೆಗೆ ಸೃಜನಶೀಲ ಸ್ವಾತಂತ್ರ್ಯವನ್ನು ರಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ.

ರಾಜ್ಯಸಭೆಯಲ್ಲಿಂದು ಸದಸ್ಯರಾದ ಶ್ರೀ ಮೊಹಮ್ಮದ್ ನದಿಮುಲ್ ಹಕ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಮಾಹಿತಿ ನೀಡಿದ್ದಾರೆ.

 

*****

 


 


(रिलीज़ आईडी: 2202947) आगंतुक पटल : 12
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Gujarati , Tamil , Telugu , Malayalam