ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭವಿಷ್ಯದ ವಲಯಗಳಲ್ಲಿ ಕಾಗ್ನಿಜೆ಼ಂಟ್ ಪಾಲುದಾರಿಕೆಗೆ ಪ್ರಧಾನಮಂತ್ರಿ ಸ್ವಾಗತ

प्रविष्टि तिथि: 09 DEC 2025 9:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಗ್ನಿಜೆ಼ಂಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ರವಿ ಕುಮಾರ್ ಎಸ್ ಹಾಗೂ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ವಾರಿಯರ್ ಅವರೊಂದಿಗೆ ಇಂದು ರಚನಾತ್ಮಕ ಸಭೆ ನಡೆಸಿದರು. 

ಭವಿಷ್ಯದ ವಲಯಗಳಲ್ಲಿ ಭಾರತದ ಪಯಣವನ್ನು ಮುನ್ನಡೆಸುವಲ್ಲಿ ಕಾಗ್ನಿಜೆ಼ಂಟ್ ನ ನಿರಂತರ ಪಾಲುದಾರಿಕೆಯನ್ನು ಚರ್ಚೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಸ್ವಾಗತಿಸಿದರು. ಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ಕೌಶಲ್ಯದ ಮೇಲೆ ದೃಢವಾಗಿ ಗಮನ ಹರಿಸುವ ಮೂಲಕ ಭಾರತದ ಯುವಜನರು ದೇಶದ ತಾಂತ್ರಿಕ ಭವಿಷ್ಯವನ್ನು ರೂಪಿಸುವ ರೋಮಾಂಚಕ ಸಹಯೋಗಕ್ಕೆ ನಾಂದಿ ಹಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕಾಗ್ನಿಜೆಂಟ್ ಹ್ಯಾಂಡಲ್ ನ ಎಕ್ಸ್ ಪೋಸ್ಟ್ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:

"ಶ್ರೀ ರವಿ ಕುಮಾರ್ ಎಸ್ ಮತ್ತು ಶ್ರೀ ರಾಜೇಶ್ ವಾರಿಯರ್ ಅವರೊಂದಿಗಿನ ಸಭೆ ಅದ್ಭುತವಾಗಿತ್ತು. ಭವಿಷ್ಯದ ವಲಯಗಳಲ್ಲಿ ಕಾಗ್ನಿಜೆ಼ಂಟ್ ನ ನಿರಂತರ ಪಾಲುದಾರಿಕೆಯನ್ನು ಭಾರತ ಸ್ವಾಗತಿಸುತ್ತದೆ. ಎಐ ಮತ್ತು ಕೌಶಲ್ಯಕ್ಕೆ ನಮ್ಮ ಯುವಸಮೂಹದ ಆದ್ಯತೆಯು,  ಮುಂದಿನ ದಿನಗಳಲ್ಲಿ ರೋಮಾಂಚಕ ಸಹಯೋಗಕ್ಕೆ ನಾಂದಿ ಹಾಡಲಿದೆ." 

@Cognizant 

@imravikumars”

 

*****


(रिलीज़ आईडी: 2201291) आगंतुक पटल : 3
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Gujarati , Telugu , Malayalam