ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರ ಸೇವೆಗಳ (ನಿಯಂತ್ರಣ) ಕರಡು ವಿಧೇಯಕ-2023: ಮಧ್ಯಸ್ಥಗಾರರ ಜೊತೆ ಸಮಾಲೋಚನೆಗಳು ಪೂರ್ಣಗೊಂಡಿವೆ; ಸರ್ಕಾರವು ವ್ಯಾಪಕ ಮತ್ತು ಸಮಗ್ರವಾದ ಸಮಾಲೋಚನೆಗಳಲ್ಲಿ ನಂಬಿಕೆ ಇರಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಡಾ. ಎಲ್.ಮುರುಗನ್ ಹೇಳಿದ್ದಾರೆ

प्रविष्टि तिथि: 05 DEC 2025 1:47PM by PIB Bengaluru

ʻಪ್ರಸಾರ ಸೇವೆಗಳ (ನಿಯಂತ್ರಣ) ಕರಡು ವಿಧೇಯಕ-2023ʼ (ಬಿಎಸ್‌ಆರ್‌ ವಿಧೇಯಕ) ಅನ್ನು 10.11.2023ರಂದು ಸಾರ್ವಜನಿಕವಾಗಿ ಪರಿಶೀಲನೆಗೆ ಲಭ್ಯವಾಗಿಸಲಾಯಿತು. ಈ ಸಂಬಂಧ ಸಾರ್ವಜನಿಕರು ಮತ್ತು ಮಧ್ಯಸ್ಥಗಾರರು ತಮ್ಮ ಪ್ರತಿಕ್ರಿಯೆಗಳು / ಸಲಹೆ-ಸೂಚನೆಗಳನ್ನು ನೀಡಲು 09.12.2023 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಈ ಕಾಲಾವಕಾಶವನ್ನು 15.01.2024 ರವರೆಗೂ ವಿಸ್ತರಿಸಲಾಯಿತು.

ಮಾಧ್ಯಮ ಮತ್ತು ಮನರಂಜನಾ ಉದ್ಯಮ ಸಂಘಗಳು ಸೇರಿದಂತೆ ಮಧ್ಯಸ್ಥಗಾರರಿಂದ ಪಡೆದ ವೈವಿಧ್ಯಮಯ ಸಲಹೆಗಳ ಆಧಾರದ ಮೇಲೆ, ಸರ್ಕಾರವು ಪ್ರತಿಕ್ರಿಯೆ ಸಲ್ಲಿಸಲು ಗಡುವನ್ನು ಮತ್ತೊಮ್ಮೆ 15.10.2024 ರವರೆಗೆ ವಿಸ್ತರಿಸಿತು.

ಎಲ್ಲಾ ಪಾಲುದಾರರಿಂದ ಪಡೆದ ಸಲಹೆಗಳನ್ನು ಪರಿಶೀಲಿಸಲಾಗಿದೆ. ವ್ಯಾಪಕ ಮತ್ತು ಸಮಗ್ರ ಸಮಾಲೋಚನೆಗಳಲ್ಲಿ ಸರ್ಕಾರ ನಂಬಿಕೆ ಇಟ್ಟಿದೆ ಎಂದು ಸಚಿವರು ಹೇಳಿದರು.

ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಡಾ. ಎಲ್.ಮುರುಗನ್ ಅವರು ಇಂದು ರಾಜ್ಯಸಭೆಗೆ ಈ ಮಾಹಿತಿಯನ್ನು ನೀಡಿದರು.

 

*****


(रिलीज़ आईडी: 2199387) आगंतुक पटल : 4
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Assamese , Bengali , Bengali-TR