ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಹಾನ್ ದೇಶಭಕ್ತ ಮತ್ತು ಅಮರ ಹುತಾತ್ಮ ಖುದಿರಾಮ್ ಬೋಸ್ ಅವರ ಜನ್ಮ ವಾರ್ಷಿಕೋತ್ಸವದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಮಾತೃಭೂಮಿಗಾಗಿ ಶೌರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವಾದ ಖುದಿರಾಮ್ ಬೋಸ್ ಅವರು ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಕ್ರಾಂತಿಗಾಗಿ ಯುವಕರನ್ನು ಸಂಘಟಿಸಿದರು ಮತ್ತು ಸ್ವದೇಶಿಗಾಗಿ ದೇಶವಾಸಿಗಳನ್ನು ಜಾಗೃತಗೊಳಿಸಿದರು

ಅಸಂಖ್ಯಾತ ಕ್ರಾಂತಿಕಾರಿಗಳಿಂದ ಪ್ರೇರಿತರಾದ ಖುದಿರಾಮ್ ಅವರನ್ನು ಬ್ರಿಟಿಷ್ ಸರ್ಕಾರವು ಕ್ರಾಂತಿಯ ಹಾದಿಯಿಂದ ತಡೆಯಲಿಲ್ಲ ಮತ್ತು ಅವರು ಮಾತೃಭೂಮಿಗಾಗಿ ಸಂತೋಷದಿಂದ ತಮ್ಮ ಪ್ರಾಣವನ್ನು ತ್ಯಾಗ

ಖುದಿರಾಮ್ ಬೋಸ್ ಅವರ ವೀರಗಾಥೆಯು ಪ್ರತಿಯೊಬ್ಬ ಯುವಕರಲ್ಲೂ ರಾಷ್ಟ್ರ ಮೊದಲು ಎನ್ನುವ ಪ್ರಜ್ಞೆ ತುಂಬಲು ಸ್ಫೂರ್ತಿಯ ಅಮೂಲ್ಯ ಮೂಲ

प्रविष्टि तिथि: 03 DEC 2025 11:40AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಮಹಾನ್ ದೇಶಭಕ್ತ ಮತ್ತು ಅಮರ ಹುತಾತ್ಮ ಖುದಿರಾಮ್ ಬೋಸ್ ಅವರ ಜನ್ಮ ವಾರ್ಷಿಕೋತ್ಸವದ ದಿನದಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು.

ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ ‘X’ ವೇದಿಕೆಯ ಪೋಸ್ಟ್‌ನಲ್ಲಿ, “ಮಾತೃಭೂಮಿಗಾಗಿ ಶೌರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವಾದ ಖುದಿರಾಮ್ ಬೋಸ್ ಅವರು ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಕ್ರಾಂತಿಗಾಗಿ ಯುವಕರನ್ನು ಸಂಘಟಿಸಿದರು ಮತ್ತು ಸ್ವದೇಶಿಗಾಗಿ ದೇಶವಾಸಿಗಳನ್ನು ಜಾಗೃತಗೊಳಿಸಿದರು ಎಂದು ಹೇಳಿದರು. ಅಸಂಖ್ಯಾತ ಕ್ರಾಂತಿಕಾರಿಗಳಿಂದ ಪ್ರೇರಿತರಾದ ಖುದಿರಾಮ್ ಅವರನ್ನು ಬ್ರಿಟಿಷ್ ಸರ್ಕಾರವು ಕ್ರಾಂತಿಯ ಹಾದಿಯಿಂದ ಹಿಮ್ಮೆಟ್ಟಿಸಲಾಗಲಿಲ್ಲ ಮತ್ತು ಅವರು ಮಾತೃಭೂಮಿಗಾಗಿ ಸಂತೋಷದಿಂದ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಅವರು ಹೇಳಿದರು. ಖುದಿರಾಮ್ ಬೋಸ್ ಅವರ ವೀರಗಾಥೆಯು ಪ್ರತಿಯೊಬ್ಬ ಯುವಕರಲ್ಲಿ ರಾಷ್ಟ್ರ ಮೊದಲು ಎನ್ನುವ ಪ್ರಜ್ಞೆ ಮೂಡಿಸಲು ಸ್ಫೂರ್ತಿಯ ಅಮೂಲ್ಯ ಮೂಲವಾಗಿದೆ ಎಂದು ಶ್ರೀ ಶಾ ಹೇಳಿದರು.

 

*****


(रिलीज़ आईडी: 2198035) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Gujarati , Tamil , Telugu , Malayalam