ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಿ ಎಸ್‌ ಎಫ್ ಸಿಬ್ಬಂದಿಗೆ ಸ್ಥಾಪನಾ ದಿನದ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 01 DEC 2025 3:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿ ಎಸ್‌ ಎಫ್ ಸ್ಥಾಪನಾ ದಿನದ ಅಂಗವಾಗಿ ಅದರ ಸಿಬ್ಬಂದಿಗೆ ಶುಭಾಶಯಗಳನ್ನು ಕೋರಿದ್ದಾರೆ. ಬಿಎಸ್‌ಎಫ್ ಭಾರತದ ದೃಢ ಸಂಕಲ್ಪ ಮತ್ತು ಶ್ರೇಷ್ಠ ವೃತ್ತಿಪರತೆಯನ್ನು ಸಂಕೇತಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ಅವರು ಕೆಲವು ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಶೌರ್ಯದ ಜೊತೆಗೆ, ಅವರ ಮಾನವೀಯ ಮನೋಭಾವವೂ ಅಸಾಧಾರಣವಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ X ನಲ್ಲಿ ಹೀಗೆ ಹೇಳಿದ್ದಾರೆ.

“ಬಿ ಎಸ್‌ ಎಫ್ ಸ್ಥಾಪನಾ ದಿನದಂದು, ಅದರ ಎಲ್ಲಾ ಸಿಬ್ಬಂದಿಗೆ ನನ್ನ ಶುಭಾಶಯಗಳು. ಬಿಎಸ್‌ಎಫ್ ಭಾರತದ ದೃಢವಾದ ಸಂಕಲ್ಪ ಮತ್ತು ಅತ್ಯಂತ ಶ್ರೇಷ್ಠ ವೃತ್ತಿಪರತೆಯನ್ನು ಸಂಕೇತಿಸುತ್ತದೆ. ಅವರ ಕರ್ತವ್ಯ ಪ್ರಜ್ಞೆ ಅನುಕರಣೀಯವಾಗಿದೆ. ಅವರು ಕೆಲವು ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಶೌರ್ಯದ ಜೊತೆಗೆ, ಅವರ ಮಾನವೀಯ ಮನೋಭಾವವೂ ಅಸಾಧಾರಣವಾಗಿದೆ. ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮತ್ತು ರಕ್ಷಿಸುವ ಪ್ರಯತ್ನದಲ್ಲಿರುವ ಪಡೆಗೆ ನನ್ನ ಶುಭಾಶಯಗಳು.’’

@BSF_India

 

*****


(रिलीज़ आईडी: 2197339) आगंतुक पटल : 7
इस विज्ञप्ति को इन भाषाओं में पढ़ें: Assamese , Malayalam , English , Urdu , Marathi , हिन्दी , Manipuri , Bengali , Bengali-TR , Punjabi , Gujarati , Odia , Tamil , Telugu