ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

“ಸಾಂಸ್ಕೃತಿಕ ರಥದಲ್ಲಿ  GenZ ಕೆಟಿಎಸ್ 4.0ನತ್ತ” ಪಯಣ ತಮಿಳುನಾಡಿನಿಂದ ಕಾಶಿಗೆ ಯುವ ಜನತೆಯ ಪಯಣ ‘ಸಾಂಸ್ಕೃತಿಕ ಆನಂದದ ಪ್ರಯಾಣ’ವಾಗಿ ಮಾರ್ಪಾಡು


ಬೀದಿ ನಾಟಕಗಳಿಂದ ರೀಲ್ಸ್ ಮಾಡುವವರೆಗೆ GenZ ಕಾಶಿ ತಮಿಳು ಸಂಗಮದ ಹೊಸ ಮುಖವಾಗಿ ಉದಯ

प्रविष्टि तिथि: 30 NOV 2025 6:56PM by PIB Bengaluru

ಡಿಸೆಂಬರ್ 2ರಿಂದ ಆರಂಭವಾಗಲಿರುವ ಕಾಶಿ ತಮಿಳು ಸಂಗಮ 4.0ಗೆ ಜೆಡ್ ಪೀಳಿಗೆ GenZಯಲ್ಲಿ ಅತ್ಯುತ್ಸಾಹದ ಅಲೆ ಕಂಡುಬರುತ್ತಿದೆ. ಈ ಕಾರ್ಯಕ್ರಮ ಕಾಶಿ ಮತ್ತು ತಮಿಳುನಾಡಿನ ನಡುವಿನ ಪ್ರಾಚೀನ ಸಾಂಸ್ಕೃತಿಕ ಮತ್ತು ಭಾಷಾ ಬಾಂಧವ್ಯಗಳನ್ನು ಬೆಸೆಯಲು ಯುವಜನತೆಯಲ್ಲಿ ಸಕ್ರಿಯ ಶಕ್ತಿತುಂಬಿ ಅವರನ್ನು ಬೆಸೆಯುವ ಉದ್ದೇಶ ಹೊಂದಿದೆ.

ಬಹುದೊಡ್ಡ ಸಂಖ್ಯೆಯ ಜೆಡ್ GenZಪೀಳಿಗೆಯ ವಿದ್ಯಾರ್ಥಿಗಳು ಭಾಗಿಯಾಗಿರುವ ಮೊದಲ ನಿಯೋಗ ನವೆಂಬರ್ 29ರಂದು ವಿಶೇಷ ರೈಲಿನಲ್ಲಿ ಕನ್ಯಾಕುಮಾರಿಯಿಂದ ಪ್ರಯಾಣವನ್ನು ಆರಂಭಿಸಿದೆ. ಈ ಸುದೀರ್ಘ ರೈಲು ಪ್ರವಾಸ ಸಾಂಸ್ಕೃತಿಕ ಆನಂದದ ಪ್ರವಾಸವಾಗಿ ಮಾರ್ಪಟ್ಟಿದ್ದು, ಅದರಲ್ಲಿ ಆಟೋಟಗಳು, ಗುಂಪು ಚಟುವಟಿಕೆಗಳು, ಹರ್ಷದಾಯಕ ಸಮಾಲೋಚನೆಗಳು ಹಾಗು ಸಕ್ರಿಯ ಸಹಭಾಗಿತ್ವದಿಂದ ಪ್ರಯಾಣ ಯುವಜನತೆಗೆ ಅರ್ಥಪೂರ್ಣ ಮತ್ತು ಸ್ಮರಣಾರ್ಹ ಅನುಭವವನ್ನು ಕಟ್ಟುಕೊಟ್ಟಿದೆ.

ಈ ವಿಶೇಷ ರೈಲಿನಲ್ಲಿ ಸಂಚರಿಸುತ್ತಿರುವ ತಮಿಳುನಾಡಿನ ಅರ್ಚನಾ, ಕಾಶಿ ತಮಿಳುಸಂಗಮ 4.0ನಲ್ಲಿ ಭಾಗವಹಿಸುವ ಕುರಿತು ತನ್ನ ಕುತೂಹಲವನ್ನು ಹಂಚಿಕೊಂಡರು. ಮನೆಗೆ ಹೋದ ನಂತರ ದೇವಾಲಯಗಳಿಗೆ ಭೇಟಿ ನೀಡುವ ಅಪರೂಪದ ಅವಕಾಶಗಳು ಸಿಗುವುದು ಕಷ್ಟ ಹಾಗಾಗಿ ಈ ಅವಕಾಶ ನನಗೆ ದೇವರ ಆಶೀರ್ವಾದ ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ. ಅವರು ಇದೇ ಮೊದಲ ಬಾರಿಗೆ ಕಾಶಿಯ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸಲು ಕುತೂಹಲದಿಂದ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುತ್ತಿರುವ ಮತ್ತೋರ್ವ ವಿದ್ಯಾರ್ಥಿ ತಿರುಪ್ಪೂರಿನ ಮಾಲತಿ ಯುಪಿಎಸ್ ಸಿ ಪರೀಕ್ಷೆಗಳಿಗೆ ಸಿದ್ಧವಾಗುತ್ತಿದ್ದು, ಅವರು ಕಾಶಿ ಮತ್ತು ತಮಿಳುನಾಡಿನ ನಡುವಿನ ಆಳವಾದ ಧಾರ್ಮಿಕ ಬಾಂಧವ್ಯವನ್ನು ಹಂಚಿಕೊಂಡರು ಮತ್ತು ಮಣಿಕ್ಕಾ ವಸಗರ್ ನಂತಹ ಸಂತರು, ಶತಮಾನಗಳ ಹಿಂದೆ ಇದನ್ನು ಬಣ್ಣಿಸಿದ್ದಾರೆ ಎಂದರು. ಕಾಶಿ ತಮಿಳುಸಂಗಮ ಆಧುನಿಕ ಸಕ್ರಿಯವಾಗಿ ಬಾಂಧವ್ಯವನ್ನು ಬಲವರ್ಧನೆಗೊಳಿಸುತ್ತದೆ ಮತ್ತು ಕಾಶಿಗೆ ಭೇಟಿ ನೀಡುತ್ತಿರುವುದು ನನಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಕಾಶಿಯಲ್ಲಿ ಘಾಟ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜೆಡ್ ಪೀಳಿಗೆ GenZ ಅತ್ಯುತ್ಸಾಹದಿಂದ ಬೀದಿನಾಟಕ ಸೇರಿ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದರಿಂದ ಜೀವಕಳೆ ಬಂದಿದೆ. ಕೆಟಿಎಸ್ 4.0ಗಾಗಿ ಓಟದಂತಹ ಕಾರ್ಯಕ್ರಮಗಳಲ್ಲಿ ದೊಡ್ಡ ಸಂಖ್ಯೆಯ ಯುವಜನರು ಭಾಗವಹಿಸಿದ್ದು, ಅವರು ದೈಹಿಕ ಕ್ಷಮತೆಯನ್ನಷ್ಟೇ ಉತ್ತೇಜಿಸಲಿಲ್ಲ. ಮುಂಬರುವ ಸಾಂಸ್ಕೃತಿಕ ಉತ್ಸವದ ಕುರಿತು ಜಾಗೃತಿ ಮೂಡಿಸಲು ಸಹ ಸಹಾಯ ಮಾಡಿದೆ.  ಕಾಶಿಯ ವಿಶ್ವನಾಥ ದೇವಾಲಯದ ಸುತ್ತಮುತ್ತ ಹಾಗೂ ವಿವಿಧ ಘಾಟಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಲಾಯಿತು. ಮತ್ತು ಜೆಡ್ GenZ ಪೀಳಿಗೆ ಸೃಜನಶೀಲ ಅಭಿವ್ಯಕ್ತಿಯ ಮೂಲಕ ತಮ್ಮದೇ ಆದ ಕಲಾತ್ಮಕತೆಯ ವಿಧಾನದಲ್ಲಿ ಕಾಶಿ ಮತ್ತು ತಮಿಳುನಾಡಿನ ನಡುವೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬಿಂಬಿಸಿದರು. ರೀಲ್ಸ್ ಗಳನ್ನು ಮಾಡುವ ಸ್ಪರ್ಧೆ ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಯುವ ಸೃಷ್ಟಿಕಾರರು ತಮ್ಮ ಒಳನೋಟಗಳನ್ನು ಸಾಮಾಜಿಕ ಮಾಧ್ಯಮಗಳಾದ್ಯಂತ ಹಂಚಿಕೊಂಡರು. ಆ ಮೂಲಕ ರಾಷ್ಟ್ರವ್ಯಾಪಿ ಇರುವ ಯುಜನತೆಯಲ್ಲಿ ಕುತೂಹಲವನ್ನು ಮೂಡಿಸಿದರು.

ಈ ವರ್ಷದ ಕಾಶಿ ತಮಿಳುಸಂಗಮ 4.0ದ ಘೋಷ ವಾಕ್ಯ “ತಮಿಳು ಕಲಿಯಿರಿ – ತಮಿಳು ಕರಕಲಂ” ಇದು ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಜನರನ್ನು ಬೆಸೆಯುವ ಗುರಿ ಹೊಂದಿದೆ. ಜೆಡ್ GenZ ಪೀಳಿಗೆಯ ಸಕ್ರಿಯ ಪಾಲ್ಗೊಳ್ಳುವಿಕೆ ಈ ಘೋಷವಾಕ್ಯವನ್ನು ಮತ್ತಷ್ಟು ಪ್ರಸ್ತುತ ಮತ್ತು ಪರಿಣಾಮಕಾರಿಯನ್ನಾಗಿ ಮಾಡಿವೆ.

 

*****


(रिलीज़ आईडी: 2196802) आगंतुक पटल : 8
इस विज्ञप्ति को इन भाषाओं में पढ़ें: हिन्दी , English , Manipuri , Gujarati , Malayalam , Urdu , Bengali , Assamese , Telugu , Marathi , Punjabi