ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟೋಕಿಯೋದಲ್ಲಿ ನಡೆದ 25ನೇ ಬೇಸಿಗೆ ಡೆಫ್ಲಿಂಪಿಕ್ಸ್ 2025ರಲ್ಲಿ ಅದ್ವಿತೀಯ ಪ್ರದರ್ಶನ ನೀಡಿದ ಭಾರತೀಯ ಡೆಫ್ಲಿಂಪಿಯನ್ನರಿಗೆ ಪ್ರಧಾನಮಂತ್ರಿ ಅವರಿಂದ ಅಭಿನಂದನೆ


प्रविष्टि तिथि: 27 NOV 2025 5:10PM by PIB Bengaluru

ಜಪಾನ್ ನ ಟೋಕಿಯೋದಲ್ಲಿ ನಡೆದ 25ನೇ ಬೇಸಿಗೆ ಡೆಫ್ಲಿಂಪಿಕ್ಸ್ 2025ರಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತದ ಡೆಫ್ಲಿಂಪಿಯನ್ನರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

9 ಚಿನ್ನ ಸೇರಿದಂತೆ 20 ಐತಿಹಾಸಿಕ ಅತ್ಯುತ್ತಮ ಪದಕಗಳನ್ನು ಗಳಿಸುವ ಮೂಲಕ, ನಮ್ಮ ಕ್ರೀಡಾಪಟುಗಳು ದೃಢನಿಶ್ಚಯ ಮತ್ತು ಸಮರ್ಪಣೆ ಮನೋಭಾವದಿಂದ ಆಡಿದರೆ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಪ್ರತಿಯೊಬ್ಬ ಕ್ರೀಡಾಪಟು, ತರಬೇತುದಾರ ಮತ್ತು ಅವರಿಗೆ ಬೆಂಬಲ ನೀಡಿದ ಸಿಬ್ಬಂದಿಯ ಅವಿರತ ಪ್ರಯತ್ನ ಮತ್ತು ಬದ್ಧತೆಯನ್ನು ಪ್ರಧಾನಮಂತ್ರಿ ಈ ಸಂದರ್ಭದಲ್ಲಿ ಶ್ಲಾಘಿಸಿದರು. ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತಂದಿರುವ ಅವರ ಸಾಧನೆಗಳ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ: "ಟೋಕಿಯೊದಲ್ಲಿ ನಡೆದ 25ನೇ ಬೇಸಿಗೆ ಡೆಫ್ಲಿಂಪಿಕ್ಸ್ 2025 ರಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ನಮ್ಮ ಡೆಫ್ಲಿಂಪಿಯನ್ನರಿಗೆ ಹೃತ್ಪೂರ್ವಕ ಅಭಿನಂದನೆಗಳು. 9 ಚಿನ್ನ ಸೇರಿದಂತೆ 20 ಪದಕಗಳ ಐತಿಹಾಸಿಕ ಅತ್ಯುತ್ತಮ ಪದಕಗಳೊಂದಿಗೆ, ನಮ್ಮ ಕ್ರೀಡಾಪಟುಗಳು ದೃಢನಿಶ್ಚಯ ಮತ್ತು ಸಮರ್ಪಣೆ ಮೂಲಕ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪ್ರತಿಯೊಬ್ಬ ಕ್ರೀಡಾಪಟು, ತರಬೇತುದಾರ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು. ಇಡೀ ರಾಷ್ಟ್ರವು ನಿಮ್ಮೆಲ್ಲರ ಬಗ್ಗೆ ಹೆಮ್ಮೆಪಡುತ್ತದೆ!"

 

*****


(रिलीज़ आईडी: 2195818) आगंतुक पटल : 4
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Assamese , Gujarati , Telugu , Malayalam