ಪ್ರಧಾನ ಮಂತ್ರಿಯವರ ಕಛೇರಿ
ಸಂವಿಧಾನ ದಿನದಂದು, ಭಾರತದ ಸಂವಿಧಾನ ರಚನಾಕಾರರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
26 NOV 2025 10:01AM by PIB Bengaluru
'ಸಂವಿಧಾನ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸಂವಿಧಾನ ರಚನಾಕಾರರಿಗೆ ಗೌರವ ನಮನ ಸಲ್ಲಿಸಿದರು. 'ವಿಕಸಿತ ಭಾರತ'ವನ್ನು ನಿರ್ಮಿಸುವ ಸಾಮೂಹಿಕ ಪ್ರಯತ್ನದಲ್ಲಿ ಸಂವಿಧಾನ ರಚನಕಾರರ ಮುನ್ನೋಟ ಮತ್ತು ದೂರದೃಷ್ಟಿಯು ರಾಷ್ಟ್ರಕ್ಕೆ ಪ್ರೇರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತದ ಸಂವಿಧಾನವು ಮಾನವನ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸಂವಿಧಾನವು ನಾಗರಿಕರಿಗೆ ಹಕ್ಕುಗಳನ್ನು ನೀಡುವುದರ ಜೊತೆಗೆ, ಅವರ ಕರ್ತವ್ಯಗಳನ್ನು ಸಹ ನೆನಪಿಸುತ್ತದೆ, ಇದನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಪೂರೈಸಬೇಕು ಎಂದು ಅವರು ಕರೆ ನೀಡಿದರು. ಈ ಕರ್ತವ್ಯಗಳು ಬಲವಾದ ಮತ್ತು ಸದೃಢ ಪ್ರಜಾಪ್ರಭುತ್ವಕ್ಕೆ ಅಡಿಪಾಯವನ್ನು ರೂಪಿಸುತ್ತವೆ ಎಂದು ಅವರು ತಿಳಿಸಿದರು.
ರಾಷ್ಟ್ರದ ಸಂಕಲ್ಪವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಮೋದಿ, ನಾಗರಿಕರು ತಮ್ಮ ಕಾರ್ಯಗಳ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಲು, ಆ ಮೂಲಕ ದೇಶದ ಪ್ರಗತಿ ಮತ್ತು ಏಕತೆಗೆ ಕೊಡುಗೆ ನೀಡಲು ಕರೆ ನೀಡಿದರು.
ಶ್ರೀ ಮೋದಿ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಹೀಗೆ ಹೇಳಿದ್ದಾರೆ:
"ಸಂವಿಧಾನ ದಿನದಂದು, ನಾವು ನಮ್ಮ ಸಂವಿಧಾನ ರಚನಾಕಾರರಿಗೆ ಗೌರವ ಸಲ್ಲಿಸುತ್ತೇವೆ. ಅವರ ಮುನ್ನೋಟ ಮತ್ತು ದೂರದೃಷ್ಟಿಯು 'ವಿಕಸಿತ ಭಾರತ'ವನ್ನು ನಿರ್ಮಿಸುವ ನಮ್ಮ ಪ್ರಯತ್ನದಲ್ಲಿ ನಮ್ಮನ್ನು ಪ್ರೇರೇಪಿಸುತ್ತಲೇ ಇದೆ.
ನಮ್ಮ ಸಂವಿಧಾನವು ಮಾನವ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಇದು ನಮ್ಮನ್ನು ಹಕ್ಕುಗಳ ಮೂಲಕ ಸಶಕ್ತಗೊಳಿಸುವುದರ ಜೊತೆಗೆ, ನಾಗರಿಕರಾಗಿ ನಮ್ಮ ಕರ್ತವ್ಯಗಳನ್ನು ಸಹ ನೆನಪಿಸುತ್ತದೆ, ಆ ಕರ್ತವ್ಯಗಳನ್ನು ಪೂರೈಸಲು ನಾವು ಸದಾ ಪ್ರಯತ್ನಿಸಬೇಕು. ಈ ಕರ್ತವ್ಯಗಳು ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಅಡಿಪಾಯವಾಗಿವೆ.
ನಮ್ಮ ಕಾರ್ಯಗಳ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ."
*****
(रिलीज़ आईडी: 2194531)
आगंतुक पटल : 5