ಮಣಿಪುರಿ ಸಾಕ್ಷ್ಯಚಿತ್ರ 'ಬ್ಯಾಟಲ್‌ಫೀಲ್ಡ್'; ಎರಡನೇ ಮಹಾಯುದ್ಧದ ಕಥೆಗಳು ಮತ್ತು ಪುರಾಣಗಳನ್ನು ಜೀವಂತಗೊಳಿಸುವ ಕಾರ್ಯಾರಂಭ
'ಹಂಸಫರ್' - ಹಿಂದಿನ ಯುಗದ ಒಡನಾಟದ ಕಥೆ
56ನೇ ಐ ಎಫ್ ಎಫ್ ಐ ಸದೃಢವಾದ, ಅರ್ಥಪೂರ್ಣ ಸಂದೇಶಗಳನ್ನು ಹೊಂದಿರುವ, ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸುವ ಮತ್ತು ಪ್ರಬಲ ಕಥೆ ಹೇಳುವ ಮೂಲಕ ಜಾಗತಿಕ ಸಿನಿಮಾಗೆ ಗಮನಾರ್ಹವಾಗಿ ಕೊಡುಗೆ ನೀಡುವ ವೈವಿಧ್ಯಮಯ ನಾನ್-ಫೀಚರ್ ಚಲನಚಿತ್ರಗಳನ್ನು ಪ್ರಸ್ತುತಪಡಿಸುವುದನ್ನು ಮುಂದುವರೆಸಿದೆ. ಈ ವರ್ಷದ ಐಎಫ್‌ಎಫ್‌ಐನಲ್ಲಿ ಗಮನ ಸೆಳೆದ ನಾನ್-ಫೀಚರ್ ಚಲನಚಿತ್ರಗಳಲ್ಲಿ ಹಮ್ಸಫರ್ (ಮರಾಠಿ), ಮತ್ತು ಬ್ಯಾಟಲ್‌ಫೀಲ್ಡ್ (ಮಣಿಪುರಿ) ಸೇರಿವೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಮತ್ತು ನಟರು ತಮ್ಮ ಚಿತ್ರಗಳ ಹಿಂದಿನ ಕಥೆಗಳನ್ನು ಹಂಚಿಕೊಂಡರು ಮತ್ತು ಈ ಚಿತ್ರಗಳು ಸಮಾಜಕ್ಕೆ ತರಬಹುದಾದ ಸಕಾರಾತ್ಮಕ ಪರಿಣಾಮದ ಬಗ್ಗೆ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದರು.

ನಿರ್ದೇಶಕ ಬೋರುನ್ ಥೋಕ್ಚೋಮ್ 'ಬ್ಯಾಟಲ್‌ಫೀಲ್ಡ್' ಚಿತ್ರ ಪೂರ್ಣಗೊಳ್ಳಲು ಸುಮಾರು ಹತ್ತು ವರ್ಷಗಳನ್ನು ತೆಗೆದುಕೊಂಡಿತು ಎಂದು ಹಂಚಿಕೊಂಡರು. ಪ್ರತಿಯೊಬ್ಬ ಮಣಿಪುರಿಯೂ ಎರಡನೇ ಮಹಾಯುದ್ಧದ ಕಥೆಗಳನ್ನು ಕೇಳುತ್ತಾ ಬೆಳೆದಿದ್ದಾನೆ ಎಂದು ಅವರು ಉಲ್ಲೇಖಿಸಿದರು ಮತ್ತು ಮಣಿಪುರವು ಎರಡನೇ ಮಹಾಯುದ್ಧದ ಇತಿಹಾಸದಲ್ಲಿ ರಕ್ತಸಿಕ್ತ ಯುದ್ಧಭೂಮಿಗಳಲ್ಲಿ ಒಂದಾಗಿರಬಹುದು ಎಂದು ಹೇಳಿದರು. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ, ವಿಶೇಷವಾಗಿ ಪುಸ್ತಕಗಳಲ್ಲಿ ಅಥವಾ ಮಾಧ್ಯಮ ವರದಿಯಲ್ಲಿ ಸರಿಯಾದ ದಾಖಲೆಗಳ ಅನುಪಸ್ಥಿತಿಯಲ್ಲಿ ಈ ನೆನಪುಗಳನ್ನು ದಾಖಲಿಸುವ ಸವಾಲಿನ ಒತ್ತಡ ನನ್ನ ಮೇಲಿತ್ತು ಎಂದರು. ತನ್ನ ಪ್ರದೇಶದ ಪೂರ್ವಜರ ಕಥೆಯನ್ನು ದೃಢತೆ ಮತ್ತು ಗೌರವದಿಂದ ಹೇಳುವುದು ನನ್ನ ಜವಾಬ್ದಾರಿ ಎಂದು ಅವರು ನಂಬಿದ್ದರು.
ಪ್ರತಿಯೊಬ್ಬ ಮಣಿಪುರಿಯೂ ಈ ಯುದ್ಧಕಾಲದ ಪರಂಪರೆಯ ಒಂದು ಭಾಗವನ್ನು ಹೊಂದಿರುವುದರಿಂದ, ಅವುಗಳನ್ನು ಒಗೂಡಿಸಲು ಮತ್ತು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಅವರು ಕಥೆಗಳು, ಪುರಾಣಗಳು ಮತ್ತು ಯುದ್ಧಗೀತೆಗಳನ್ನು ಶೋಧಿಸಿರು ಮತ್ತು ಸಂಗ್ರಹಿಸಿದರು.

ಅಲ್ಲದೆ, ಈ ಚಿತ್ರದ ನಿರ್ಮಾಣವು ಸುಮಾರು ಹತ್ತು ವರ್ಷಗಳ ಹಿಂದೆ ಆರಂಭವಾಯಿತು, ರಾಜೇಶ್ವರ್ ಅವರಂತಹ ಜನರು - ಕೇವಲ ಸರಳ ಲೋಹ ಶೋಧಕಗಳೊಂದಿಗೆ - ಎರಡನೇ ಮಹಾಯುದ್ಧದ ಕಥೆಗಳು ಮತ್ತು ಪುರಾಣಗಳನ್ನು ಜೀವಂತಗೊಳಿಸುವ ಕಾರ್ಯಾಚರಣೆಯನ್ನುಅದಾಗಲೇ ಆರಂಭಿಸಿದ್ದರು ಎಂದು ಅವರು ಹೇಳಿದರು.

ಬ್ಯಾಟಲ್ ಫೀಲ್ಡ್ ಚಿತ್ರದ ನಿರ್ಮಾಪಕರು ಮತ್ತು ಸಹ-ನಿರ್ಮಾಪಕರಾದ ಮಂಜೋಯ್ ಲೌರೆಂಬಮ್ ಮತ್ತು ಡಾ. ರಾಧೇಶ್ಯಾಮ್ ಓಯಿನಮ್, ಇಂತಹ ಶಕ್ತಿಶಾಲಿ ಮತ್ತು ಪ್ರತಿಧ್ವನಿಸುವ ಕಥಾವಸ್ತು ಹೊಂದಿರುವ ಚಿತ್ರವನ್ನು ಆಯ್ಕೆ ಮಾಡಿದ್ದಕ್ಕಾಗಿ ಐಎಫ್‌ಎಫ್‌ಐ ಸಂಘಟನಾ ಸಮಿತಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಬ್ಯಾಟಲ್ ಫೀಲ್ಡ್ ತನ್ನದೇ ಆದ ಮಹತ್ವವನ್ನು ಹೊಂದಿದೆ ಮತ್ತು ಈ ಕಥೆಗಳನ್ನು ಸಂರಕ್ಷಿಸುವ ಮತ್ತು ಭವಿಷ್ಯದ ಪೀಳಿಗೆಗೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಹಂಸಫರ್ ಚಿತ್ರದ ನಿರ್ದೇಶಕ ಅಭಿಜಿತ್ ಅರವಿಂದ್ ದಳವಿ ಈ ಕಥೆಯು ತನ್ನ ಸ್ವಂತ ಮನೆಯಲ್ಲಿ ನಡೆದ ಬಾಲ್ಯದ ಘಟನೆಯಿಂದ ಪ್ರೇರಿತವಾಗಿದೆ ಎಂದು ಹಂಚಿಕೊಂಡರು. ಚಿಕ್ಕ ಹುಡುಗನಾಗಿದ್ದಾಗ, ತನ್ನ ಅಜ್ಜ ರೇಡಿಯೋ ಟ್ರಾನ್ಸಿಸ್ಟರ್ ಇಲ್ಲದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಲು ಅದನ್ನು ಅಡಗಿಸಿಟ್ಟಿದ್ದೆನು, ಆ ಸಾಧನಕ್ಕೆ ಅವರು ಅತಿಯಾಗಿ ಪ್ರೀತಿಸುತ್ತಿದ್ದೆರೆಂದು ಎಂದು ನಂಬಿದ್ದೆನು. ಕೆಲವು ದಿನಗಳ ನಂತರ ನನ್ನ ತಾಯಿಗೆ ಈ ದುಷ್ಕೃತ್ಯದ ಹಿಂದೆ ತನ್ನ ಕೈವಾಡವಿದೆ ಎಂದು ಕಂಡುಬಂದಿತು. ಅದಕ್ಕಾಗಿ ತನಗೆ ಶಿಸ್ತುಬದ್ಧ ಶಿಕ್ಷೆ ವಿಧಿಸಲಾಯಿತು ಮತ್ತು ಅಂತಿಮವಾಗಿ ಟ್ರಾನ್ಸಿಸ್ಟರ್ ಅನ್ನು ಹಿಂತಿರುಗಿಸಲಾಯಿತು. ವರ್ಷಗಳ ನಂತರ ನನಗೆ ಮತ್ತೆ ಅದೇ ಟ್ರಾನ್ಸಿಸ್ಟರ್ ಸಿಕ್ಕಿತು, ಅದು ಈ ಚಿತ್ರದ ಕಲ್ಪನೆಯನ್ನು ಹುಟ್ಟುಹಾಕಿತು.
ಚಿತ್ರದಲ್ಲಿ ಎಲ್ಲಾ ಧ್ವನಿಗಳು ರೇಡಿಯೊ ಮೂಲಕ ಮಾತ್ರ ಕೇಳಿಬರುತ್ತವೆ - ಯಾವುದೇ ನಾಯಕ ನೇರವಾಗಿ ಮಾತನಾಡುವುದಿಲ್ಲ - ಕಥೆಯಲ್ಲಿ ಟ್ರಾನ್ಸಿಸ್ಟರ್ ಹೊಂದಿರುವ ಭಾವನಾತ್ಮಕ ಸಂಪರ್ಕ ಮತ್ತು ನಿರೂಪಣಾ ಮಹತ್ವವನ್ನು ಸಂಕೇತಿಸುತ್ತದೆ ಎಂದು ದಳವಿ ವಿವರಿಸಿದರು. ಅಜ್ಜ ಟ್ರಾನ್ಸಿಸ್ಟರ್ ನಷ್ಟವನ್ನು ಅನುಭವಿಸಿದ ನಂತರ ಮಾಧ್ಯಮವಾಗಿ ಮತ್ತು ಒಡನಾಡಿಯಾಗಿ ರೇಡಿಯೋ ಹೊಂದಿರುವ ಮಹತ್ವವು ವ್ಯಕ್ತವಾಗುತ್ತದೆ ಎಂದು ಅವರು ಗಮನಸೆಳೆದರು.
ಪಿಸಿ ಲಿಂಕ್:
ಐ ಎಫ್ ಎಫ್ ಐ ಕುರಿತು
1952 ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಡಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ ಎಸ್ ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಒಳಗೊಂಡಿವೆ ಮತ್ತು ಕಲಾವಿದ ದಿಗ್ಗಜರು ಭಯವಿಲ್ಲದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐಎಫ್ ಎಫ್ ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮೊದಲಾದ ಅದ್ಭುತ ಸಮ್ಮಿಶ್ರಣಗಳು ಮತ್ತು ಅಧಿಕ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹೊಸ ಎತ್ತರಕ್ಕೆ ಏರುತ್ತವೆ. ನವೆಂಬರ್ 20ರಿಂದ 28ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಇರುವ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ನಾನಾ ಭಾಷೆಗಳ, ಪ್ರಕಾರಗಳ, ನಾವೀನ್ಯತೆಗಳ ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲಕ್ಕೆ ಭರವಸೆ ನೀಡುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ- ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಸಂಭ್ರಮದ ಆಚರಣೆಯಾಗಿದೆ.
For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2194073
| Visitor Counter:
4