iffi banner

ಐ.ಎಫ್.ಎಫ್.ಐ. ರಾಯಭಾರಿಗಳ ದುಂಡುಮೇಜಿನ ಸಭೆಯಲ್ಲಿ ಭಾರತವು ಸಹ-ನಿರ್ಮಾಣ ಸಾಮರ್ಥ್ಯವನ್ನು ಪ್ರದರ್ಶಿಸಿತು, ಆಳವಾದ ಸಾಂಸ್ಕೃತಿಕ ಮತ್ತು ತಾಂತ್ರಿಕ ಸಂಯೋಜನೆಗೆ ಕರೆ ನೀಡಲಾಯಿತು    


ಭಾರತವು 'ವಿಶ್ವದ ಸ್ಟುಡಿಯೋ' ಆಗಿ ಬೆಳೆಯಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಮತ್ತು ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಹೇಳಿದರು

ಭಾರತದ ಪ್ರತಿಭೆ, ತಂತ್ರಜ್ಞಾನ ಮತ್ತು ಸಹ-ನಿರ್ಮಾಣ ಅವಕಾಶಗಳನ್ನು ರಾಯಭಾರಿಗಳು ಶ್ಲಾಘಿಸಿದರು

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಇಂದು ಡೋನಾ ಪೌಲಾದ ತಾಜ್ ಸಿಡೇಡ್ ಡಿ ಗೋವಾ ಹೆರಿಟೇಜ್ ಹೋಟೆಲ್ ನಲ್ಲಿ ನಡೆದ ರಾಯಭಾರಿಗಳ ದುಂಡುಮೇಜಿನ ಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ರಾಜತಾಂತ್ರಿಕರನ್ನು ಒಟ್ಟುಗೂಡಿಸಿತು. ಸಹ-ನಿರ್ಮಾಣ ಅವಕಾಶಗಳು, ಸೃಜನಶೀಲ-ಆರ್ಥಿಕ ಬೆಳವಣಿಗೆ ಮತ್ತು ಆಳವಾದ ಸಾಂಸ್ಕೃತಿಕ ವಿನಿಮಯದ ಮೇಲೆ ಕೇಂದ್ರೀಕರಿಸಿ, ದ್ವಿಪಕ್ಷೀಯ ಶ್ರವ್ಯ-ದೃಶ್ಯ ಸಹಕಾರವನ್ನು ಮುನ್ನಡೆಸಲು ಹೊಸ ಮಾರ್ಗಗಳನ್ನು ಈ ಅಧಿವೇಶನವು ಅನ್ವೇಷಿಸುವ ಕುರಿತು ಚರ್ಚಿಸಿತು.

ಭಾರತ ಮತ್ತು ಪಾಲುದಾರ ರಾಷ್ಟ್ರಗಳ ನಡುವಿನ ಸಂವಾದಕ್ಕೆ ಒಂದು ವೇದಿಕೆಯಾಗಿ ಕಲ್ಪಿಸಲಾದ ಈ ವಿಶೇಷ ದುಂಡುಮೇಜಿನ ಸಭೆಯು ಚಲನಚಿತ್ರ ನಿರ್ಮಾಣ, ತಂತ್ರಜ್ಞಾನ ಪಾಲುದಾರಿಕೆಗಳು ಮತ್ತು ಜಾಗತಿಕ ಸೃಜನಶೀಲ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವ ನಿಯಂತ್ರಕ ಸಾಮರಸ್ಯದಲ್ಲಿ ಉದಯೋನ್ಮುಖ ಸಾಧ್ಯತೆಗಳ ಸುತ್ತ ಕೇಂದ್ರೀಕೃತವಾಗಿತ್ತು. ಸಹ-ನಿರ್ಮಾಣ ಒಪ್ಪಂದಗಳ ಮೂಲಕ ಆರ್ಥಿಕ ಮೌಲ್ಯವನ್ನು ತೆರೆಯುವ ವ್ಯವಸ್ಥೆ ಮಾಡುವುದು, ಸಾಂಸ್ಕೃತಿಕ ಮತ್ತು ತಾಂತ್ರಿಕ ವಿನಿಮಯವನ್ನು ಬೆಳೆಸುವುದು, ವಿದೇಶಗಳಲ್ಲಿ ಚಲನಚಿತ್ರ ನಿರ್ಮಾಪಕರಿಗೆ ನಿಯಂತ್ರಕ ಸವಾಲುಗಳನ್ನು ಸರಾಗಗೊಳಿಸುವುದು ಮತ್ತು ಹೆಚ್ಚು ಪರಸ್ಪರ ಸಂಬಂಧ ಹೊಂದಿರುವ ಸೃಜನಶೀಲ ವೇದಿಕೆಯನ್ನು ನಿರ್ಮಿಸುವ ಬಗ್ಗೆ ದುಂಡುಮೇಜಿನ ಸಭೆಯಲ್ಲಿ ಚರ್ಚೆಯು ಹೆಚ್ಚುವರಿ ಗಮನ ಹರಿಸಿತು.

ದುಂಡುಮೇಜಿನ ಸಭೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು, ಭಾಗವಹಿಸಿದ ಎಲ್ಲರನ್ನು ಸ್ವಾಗತಿಸುತ್ತಾ, ವೇಗವಾಗಿ ವಿಸ್ತರಿಸುತ್ತಿರುವ ಭಾರತದ ಮಾಧ್ಯಮ ಕ್ಷೇತ್ರ, ಮಾಧ್ಯಮ ಪರಿಸರ ಮತ್ತು ಮಾಧ್ಯಮ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿರುವ ರೀತಿಯನ್ನು ಉತ್ತಮವಾಗಿ ವಿವರಿಸಿದರು.

ದುಂಡುಮೇಜಿನ ಸಭೆಯು "ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಮತ್ತು ಪಾಲುದಾರಿಕೆಗಳನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ" ಎಂದು ಅವರು ತಿಳಿಸಿದರು. ಅದೇ ಸಮಯದಲ್ಲಿ ದೇಶದ ಬಹುಭಾಷಾ ಪ್ರತಿಭಾ ಸಂಪನ್ಮೂಲ ಮತ್ತು "ಜಾಗತಿಕ ಕಥೆಗಳನ್ನು ಕಲ್ಪಿಸಿಕೊಳ್ಳಬಹುದಾದ, ಉತ್ಪಾದಿಸಬಹುದಾದ ಮತ್ತು ಹಂಚಿಕೊಳ್ಳಬಹುದಾದ ವಿಶ್ವದ ಸ್ಟುಡಿಯೋ" ಆಗಿ ಅದರ ಹೊರಹೊಮ್ಮುವಿಕೆಯನ್ನು ಅವರು ಒತ್ತಿ ಹೇಳಿದರು.

ವೈವಿಧ್ಯಮಯ ಚಿತ್ರೀಕರಣ ಸ್ಥಳಗಳ ವಿಶೇಷಗಳಿಂದ ಹಿಡಿದು ಮುಂದುವರಿದ ಅನಿಮೇಷನ್ ಮತ್ತು ವಿ.ಎಫ್.ಎಕ್ಸ್. ಸ್ಟುಡಿಯೊಗಳವರೆಗೆ ಭಾರತದ ಸಾಮರ್ಥ್ಯಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು  ವಿವರಿಸಿದರು ಮತ್ತು ಐ.ಎಫ್.ಎಫ್.ಐಯ ಪ್ರಮುಖ ವೇದಿಕೆಯಾದ ವೇವ್ಸ್ ಫಿಲ್ಮ್ ಬಜಾರ್ನಲ್ಲಿ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರತಿನಿಧಿಗಳನ್ನು ಅವರು ಆಹ್ವಾನಿಸಿದರು. ಭಾರತದೊಂದಿಗೆ ಪಾಲುದಾರಿಕೆಯು ವಿಸ್ತಾರವಾದ ಜಾಗತಿಕ ವಲಸೆಗಾರರಿಗೆ ಪ್ರವೇಶವನ್ನು ಒದಗಿಸುತ್ತದೆ. ಕಥೆಗಳು, ಸಂಸ್ಕೃತಿಗಳು ಮತ್ತು ಮಾರುಕಟ್ಟೆಗಳಲ್ಲಿ ಸರಾಗವಾಗಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ತಮ್ಮ ವಿಶೇಷ ಭಾಷಣದಲ್ಲಿ, ಸಹ-ನಿರ್ಮಾಣವನ್ನು "ಶ್ರವ್ಯ-ದೃಶ್ಯ ಸಹಕಾರವನ್ನು ಬಲಪಡಿಸಲು ಅತ್ಯಂತ ಶಕ್ತಿಶಾಲಿ ಮಾರ್ಗ" ಎಂದು ಹೇಳಿದರು. ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯವು 2025ರಲ್ಲಿ 31.6 ಶತಕೋಟಿ ಯು.ಎಸ್.‌ ಡಾಲರ್ ತಲುಪುವ ನಿರೀಕ್ಷೆಯಿದೆ, ಇದು ವಿ.ಎಫ್.ಎಕ್ಸ್., ಅನಿಮೇಷನ್ ಮತ್ತು ಮುಂದಿನ ಪೀಳಿಗೆಯ ಉತ್ಪಾದನಾ ತಂತ್ರಜ್ಞಾನಗಳಲ್ಲಿನ ತೀವ್ರ ಬೆಳವಣಿಗೆಯಿಂದ ಉತ್ತೇಜಿಸಲ್ಪಟ್ಟಿದೆ ಎಂದು ಅವರು ಹೇಳಿದರು.

ಜಂಟಿ ಅಭಿವೃದ್ಧಿ ಉದ್ಯಮಗಳನ್ನು ಸಕ್ರಿಯಗೊಳಿಸುವಲ್ಲಿ ದ್ವಿಪಕ್ಷೀಯ ಒಪ್ಪಂದಗಳ ಪಾತ್ರ, ಸರಳ ಅನುಮತಿಗಳು, ಪ್ರತಿಭೆ ಮತ್ತು ಸಂಪನ್ಮೂಲಗಳ ಸುಗಮ ಚಲನಶೀಲತೆ ಮತ್ತು ಚಲನಚಿತ್ರ ನಿರ್ಮಾಪಕರಿಗೆ ಹೆಚ್ಚಿದ ಸೃಜನಶೀಲ ಸ್ವಾತಂತ್ರ್ಯವನ್ನು ಡಾ. ಮುರುಗನ್ ಅವರು ಉಲ್ಲೇಖಿಸಿದರು. ಜಾಗತಿಕ ನಿರ್ಮಾಣಗಳಿಗೆ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ಖಾತ್ರಿಪಡಿಸುವ ಮೂಲಕ, ಕೇಂದ್ರ (MeiTY)ಮೈಟಿ, ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಕಾನೂನು ಸಚಿವಾಲಯದೊಂದಿಗೆ ಅಂತರ-ಸಚಿವಾಲಯದ ಸಹಯೋಗದ ಮೂಲಕ ಸುಗಮಗೊಳಿಸಲಾದ ಕಡಲ್ಗಳ್ಳತನದ ವಿರುದ್ಧ ಭಾರತದ ಬಲಪಡಿಸಿದ ಕ್ರಮಗಳ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

ಕೇಂದ್ರ ಸಚಿವರ ಭಾಷಣದ ನಂತರ, ಎನ್.ಎಫ್.ಡಿ.ಸಿ.ಯ ಸಲಹೆಗಾರರಾದ ಶ್ರುತಿ ರಾಜ್‌ಕುಮಾರ್, ಭಾರತದ ವಿಕಸನಗೊಳ್ಳುತ್ತಿರುವ ಕಡಲ್ಗಳ್ಳತನ ವಿರೋಧಿ ಚೌಕಟ್ಟನ್ನು ದುಂಡುಮೇಜಿನ ಸಭೆಯ ಮುಂದೆ ಪ್ರಸ್ತುತಪಡಿಸಿದರು. ಡಿಜಿಟಲ್ ಸೋರಿಕೆಯನ್ನು ನಿಗ್ರಹಿಸಲು ಮತ್ತು ವಿಷಯ ರಕ್ಷಿಸಲು ವಿನ್ಯಾಸಗೊಳಿಸಲಾದ ತಾಂತ್ರಿಕ ಮಧ್ಯಸ್ಥಿಕೆಗಳು ಮತ್ತು ನೀತಿ-ಮಟ್ಟದ ಕಾರ್ಯವಿಧಾನಗಳನ್ನು, ಪ್ರಸ್ತುತಿ ವಿವರಿಸಿದೆ.

ಕ್ಯೂಬಾ ಮತ್ತು ನೇಪಾಳದ ರಾಯಭಾರಿಗಳು, ಇಸ್ರೇಲ್, ಗಯಾನಾ, ಆಸ್ಟ್ರೇಲಿಯಾ, ಐರ್ಲೆಂಡ್, ಮೊರಾಕೊ, ಟೋಗೊ ಮತ್ತು ಕೋಟ್ ಡಿ'ಐವರಿಯನ್ನು ಪ್ರತಿನಿಧಿಸುವ ಹಿರಿಯ ರಾಜತಾಂತ್ರಿಕರು ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ರಾಷ್ಟ್ರಗಳಲ್ಲಿನ ಚಲನಚಿತ್ರೋದ್ಯಮಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.

ಭಾರತದ ಸೃಜನಶೀಲ ಕಾರ್ಯಪಡೆಯೊಂದಿಗೆ ಸಹಕರಿಸುವುದು, ಅದರ ತಾಂತ್ರಿಕ ಸಾಮರ್ಥ್ಯಗಳನ್ನು ಪ್ರವೇಶಿಸುವುದು ಮತ್ತು ಅವರ ಸಿನಿಮಾ ಪರಿಸರ ವ್ಯವಸ್ಥೆಗಳನ್ನು ಪರಸ್ಪರ ಉತ್ಕೃಷ್ಟಗೊಳಿಸಬಹುದಾದ ಸಹ-ನಿರ್ಮಾಣ ಮಾರ್ಗಗಳನ್ನು ಅನ್ವೇಷಿಸುವ ಬಗ್ಗೆ ಗಣ್ಯರು ಸಾಮೂಹಿಕವಾಗಿ ಆಶಾವಾದ ವ್ಯಕ್ತಪಡಿಸಿದರು.

ಕೇಂದ್ರ ವಿದೇಶಾಂಗ ಸಚಿವಾಲಯದ ನಿರ್ದೇಶಕರಾದ ಶ್ರೀ ರಾಜೇಶ್ ಪರಿಹಾರ್ ಅವರು ಧನ್ಯವಾದ ಸಮರ್ಪಿಸುವುದರೊಂದಿಗೆ ದುಂಡುಮೇಜಿನ ಅಧಿವೇಶನ ಮುಕ್ತಾಯವಾಯಿತು, ಅವರು, ಈ ಸಂದರ್ಭದಲ್ಲಿ ರಾಜತಾಂತ್ರಿಕರ ಕೊಡುಗೆಗಳನ್ನು ವಿವರಿಸಿ ಹೇಳಿದರು ಮತ್ತು ಈ ಸಹಯೋಗದ ಜಾಗತಿಕ ಶ್ರವ್ಯ-ದೃಶ್ಯ ಪರಿಸರವನ್ನು ಬೆಳೆಸುವಲ್ಲಿ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಐ.ಎಫ್.ಎಫ್.ಐ 2025 ರಲ್ಲಿ ನಡೆದ ರಾಯಭಾರಿಗಳ ದುಂಡುಮೇಜಿನ ಸಭೆಯು ಬಲವಾದ ದ್ವಿಪಕ್ಷೀಯ ಸಂಬಂಧಗಳು, ಹೆಚ್ಚು ವೈವಿದ್ಯಮಯ ಮಾಧ್ಯಮ ಪಾಲುದಾರಿಕೆಗಳು ಮತ್ತು ಕಥೆ ಹೇಳುವಿಕೆಯ ಭವಿಷ್ಯಕ್ಕಾಗಿ ಹಂಚಿಕೆಯ ದೃಷ್ಟಿಕೋನವನ್ನು ನಿರ್ಮಿಸುವತ್ತ ಮಹತ್ವದ ಹೆಜ್ಜೆಯನ್ನು ಗುರುತಿಸಿದರು.

ಐ.ಎಫ್.ಎಫ್.ಐ. ಬಗ್ಗೆ

1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಅತ್ಯಂತ ಗೌರವದಿಂದ ಹೆಮ್ಮೆಯಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ , ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ  ಜಂಟಿಯಾಗಿ ಆಯೋಜಿಸಿರುವ ಈ ಚಲನಚಿತ್ರ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಸೃಜನಶೀಲ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮತ್ತು ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರುವ ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್.  ನವೆಂಬರ್ 20 ರಿಂದ 28, 2025 ರವರೆಗೆ ಗೋವಾದ ಬೆರಗುಗೊಳಿಸುವ ಅತ್ಯಾಕರ್ಷಕ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲವನ್ನು ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಈ ವಿಶೇಷ ಲಿಂಕ್ ಗಳನ್ನು ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56new/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2192546   |   Visitor Counter: 8