iffi banner

'ದಿ ಬ್ಲೂ ಟ್ರಯಲ್' ನ ಹಾದಿಯ ಅನುಸರಣೆಯೊಂದಿಗೆ  ಐ.ಎಫ್.ಎಫ್.ಐ. ತನ್ನ 56ನೇ ಅಧ್ಯಾಯವನ್ನು ಪ್ರಾರಂಭಿಸಿತು


ಈ ಚಲನಚಿತ್ರವು ವಯಸ್ಸಾದ ಮಹಿಳೆಯ ಬಗ್ಗೆ ಇದೆ,  ಅದು ಸದಾ ನಿಮ್ಮ ಜೀವನದ ಅರ್ಥವನ್ನು ಕಂಡುಕೊಳ್ಳುವ ಸಮಯ ಎಂಬುದನ್ನು ನಮಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ: ಗೇಬ್ರಿಯಲ್ ಮಸ್ಕಾರೊ

ಎರಡು, ಮೂರು ವರ್ಷಗಳಲ್ಲಿ ನಾವು 100,000 ಜನರನ್ನು ಹೊಂದುತ್ತೇವೆ ಮತ್ತು ನಾವು ಶೀಘ್ರದಲ್ಲೇ ಕೇನ್ಸ್ ಉತ್ಸವದಷ್ಟು ದೊಡ್ಡದಾಗುತ್ತೇವೆ ಎಂದು ನಾನು ಭಾವಿಸುತ್ತೇನೆ: ಶೇಖರ್ ಕಪೂರ್

ಗೇಬ್ರಿಯಲ್ ಮಸ್ಕಾರೊ ಅವರ ಡಿಸ್ಟೋಪಿಯನ್ ಕಥೆ 'ದಿ ಬ್ಲೂ ಟ್ರಯಲ್', ಅದರ ದೇಶೀಯ ಪೋರ್ಚುಗೀಸ್ ಭಾಷೆಯಲ್ಲಿ 'ಓ ಅಲ್ಟಿಮೊ ಅಜುಲ್' ಎಂದು ಕರೆಯಲ್ಪಡುತ್ತದೆ, ಇದು ಇಂದು 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ.ಎಫ್.ಐ.ಐ.) ಮೊದಲ ಕಿಡಿಯನ್ನು ಹೊತ್ತಿಸಿದೆ, ಇದು ಗೋವಾದ ಕರಾವಳಿ ಪ್ರದೇಶದಲ್ಲಿ ಅನಾವರಣಗೊಂಡಿದೆ. ಆರಂಭಿಕ ಚಿತ್ರವು ವ್ಯಾಪಕವಾಗಿ ಮೆಚ್ಚುಗೆ ಗಳಿಸಿದೆ ಮತ್ತು ಆಶ್ಚರ್ಯವನ್ನುಂಟು ಮಾಡಿದೆ.

ಚಿತ್ರವು ಪರದೆಯನ್ನು ಬೆಳಗಿಸುವ ಮೊದಲು, ಮರಿಯಾ ಅಲೆಜಾಂಡ್ರಾ ರೋಜಾಸ್, ಆರ್ಟುರೊ ಸಾಜಾರ್ ಆರ್.ಬಿ., ಕ್ಲಾರಿಸ್ಸಾ ಪಿನ್ಹೀರೊ, ರೋಸಾ ಮಲಗುಯೆಟಾ ಮತ್ತು ಗೇಬ್ರಿಯಲ್ ಮಸ್ಕಾರೊ ಸೇರಿದಂತೆ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ರೆಡ್ ಕಾರ್ಪೆಟ್ ಮೇಲೆ ಬಂದರು. ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಡಾ. ಎಲ್. ಮುರುಗನ್; ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್; ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು; ಐ.ಎಫ್.ಎಫ್.ಐ. ಉತ್ಸವ ನಿರ್ದೇಶಕ ಶ್ರೀ ಶೇಖರ್ ಕಪೂರ್ ಮತ್ತು ಪ್ರಸಿದ್ಧ ನಟ ಶ್ರೀ ನಂದಮೂರಿ ಬಾಲಕೃಷ್ಣ ಸಂವಾದ ಅಧಿವೇಶನದಲ್ಲಿ ಉಪಸ್ಥಿತರಿದ್ದರು.

"ನಾನು ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಈ ಆರಂಭಿಕ ಚಿತ್ರವನ್ನು ನೋಡಿದೆ, ಅಲ್ಲಿ ಅದು ಎರಡನೇ ಅತ್ಯುತ್ತಮ ಪ್ರಶಸ್ತಿಯಾದ ಬೆಳ್ಳಿ ಬಿಯರ್ ಪ್ರಶಸ್ತಿಯನ್ನು ಗೆದ್ದಿದೆ, ನಿರ್ದೇಶಕರು ಅದರ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ನಾನು ಅವಕಾಶ ನೀಡುತ್ತೇನೆ" ಎಂದು ಶ್ರೀ ಶೇಖರ್ ಕಪೂರ್ ಹೇಳಿದರು. "ಈ ಚಿತ್ರವು ವಯಸ್ಸಾದ ಮಹಿಳೆಯನ್ನು ಕುರಿತಾದುದಾಗಿದೆ, ಮತ್ತು ಅವರನ್ನು ನಮಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ, ಅದು ಸದಾ ನಿಮ್ಮ ಜೀವನದ ಅರ್ಥವನ್ನು ಕಂಡುಕೊಳ್ಳುವ ಸಮಯ ಎಂದು ನಾನು ಭಾವಿಸುತ್ತೇನೆ" ಎಂದು ಶ್ರೀ ಗೇಬ್ರಿಯಲ್ ಮಸ್ಕಾರೊ ಹೇಳಿದರು. ಶ್ರೀ ಕಪೂರ್ ಐ.ಎಫ್.ಎಫ್.ಐ ಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದರಲ್ಲದೆ ನಾವು ಶೀಘ್ರದಲ್ಲೇ ಕೇನ್ಸ್ ಉತ್ಸವದಷ್ಟು ದೊಡ್ಡದಾಗುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ದೃಢವಾಗಿ ನುಡಿದರು.

'ದಿ ಬ್ಲೂ ಟ್ರಯಲ್' ಚಿತ್ರದ ಪ್ರಥಮ ಪ್ರದರ್ಶನವನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು. ಜೀವನದ ಪರೀಕ್ಷೆಗಳ ಹೃತ್ಪೂರ್ವಕ ಅನ್ವೇಷಣೆ, ಸ್ಥಿತಿಸ್ಥಾಪಕತ್ವದ ಪ್ರಶಾಂತ ಆಚರಣೆ ಮತ್ತು ತೆರೇಸಾ ಧೈರ್ಯದಿಂದ ಕೈಗೊಳ್ಳುವ ಸ್ವಯಂ-ಶೋಧನೆಯ ಪ್ರಕಾಶಮಾನವಾದ ಪ್ರಯಾಣಕ್ಕಾಗಿ ಪ್ರೇಕ್ಷಕರು ಚಿತ್ರವನ್ನು ಶ್ಲಾಘಿಸಿದರು.

ಒಂದು ಡಿಸ್ಟೋಪಿಯನ್ ನಾಟಕ:

ಡಿಸ್ಟೋಪಿಯನ್ (ಭಾರೀ ಅಸಮಾನತೆ, ಅನ್ಯಾಯಗಳಿರುವ) ಬ್ರೆಜಿಲ್‌ನ ಕಾಡುವ ಹಿನ್ನೆಲೆಯಲ್ಲಿ, 'ದಿ ಬ್ಲೂ ಟ್ರಯಲ್' 77 ವರ್ಷದ ತೆರೇಸಾಳನ್ನು ಅನುಸರಿಸುತ್ತದೆ, ಆಕೆ ವಿಧಿಯ ತಣ್ಣನೆಯ ಕೈಯನ್ನು ಮತ್ತು ಹಿರಿಯರ  ವಾಸಸ್ಥಾನಕ್ಕೆ ತನ್ನನ್ನು ದೂಡುವ ಸರ್ಕಾರದ ಕ್ರಮವನ್ನು ಧಿಕ್ಕರಿಸುವ ಉತ್ಸಾಹಭರಿತ ಮಹಿಳೆ. ಕನಸುಗಳಿಂದ ತುಂಬಿದ ಹೃದಯ ಮತ್ತು ಸೀಮಾತೀತ ಆತ್ಮದೊಂದಿಗೆ, ಅವರು ಅಮೆಜಾನ್ ಮೂಲಕ ಧೈರ್ಯಶಾಲಿ ಪ್ರಯಾಣವನ್ನು ಪ್ರಾರಂಭಿಸುತ್ತಾರೆ, ಆಕಾಶವನ್ನು ಸವಿಯಲು ಮತ್ತು ಮೊದಲ ಬಾರಿಗೆ ಹಾರಲು ಹಂಬಲಿಸುತ್ತಾರೆ. ಸಾಮಾನ್ಯ ವಿಧಾನಗಳಿಂದ ಸಂಚರಿಸಲು ನಿರಾಕರಿಸಲ್ಪಟ್ಟು ಅವರು, ದೋಣಿಯಲ್ಲಿ ಸಾಗುತ್ತಾರೆ, ದಾರಿಯುದ್ದಕ್ಕೂ ತನ್ನ ಧೈರ್ಯ ಮತ್ತು ಅದ್ಭುತವನ್ನು ಪರೀಕ್ಷಿಸುವ ಹಂಬಲಕ್ಕೆ ಎದುರಾಗುವ ಸವಾಲುಗಳನ್ನು, ವೈವಿಧ್ಯಮಯ ವ್ಯಕ್ತಿಗಳನ್ನು ನಿಭಾಯಿಸುತ್ತಾರೆ.  ಪ್ರತಿಯೊಂದು ತಿರುವು, ಎಡವಟ್ಟು ಮತ್ತು ಮ್ಯಾಜಿಕ್ ಕ್ಷಣಗಳ ಮೂಲಕ, ತೆರೇಸಾ ಅವರ ಪ್ರಯಾಣವು ಸ್ವಾತಂತ್ರ್ಯ, ಸ್ಥಿತಿಸ್ಥಾಪಕತ್ವ ಮತ್ತು ಸಮಾಜವು ವಯಸ್ಸಿಗೆ ನಿಗದಿಪಡಿಸಿದ ಗಡಿಗಳನ್ನು ಮೀರಿ, ಒಬ್ಬರ ಸ್ವಂತ ನಿರ್ಣಯಗಳ ಮೇಲೆ ಜೀವನವನ್ನು ನಡೆಸುವ ಅನಿರ್ಬಂಧಿತ  ಸಂತೋಷಕ್ಕೆ ಸಾಕ್ಷಿಯಾಗಿ ಅರಳುತ್ತದೆ.

ಐ.ಎಫ್.ಎಫ್.ಐ.  ಬಗ್ಗೆ

1952ರಲ್ಲಿ ಜನಿಸಿದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಸಂಭ್ರಮಾಚರಣೆಯಾಗಿ ಬೆಳೆದು ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ.), ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ.) ಜಂಟಿಯಾಗಿ ಆಯೋಜಿಸಿರುವ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ನಡೆಸುತ್ತವೆ ಮತ್ತು ದಂತಕಥೆಯಾದಂತಹ ಕಲಾವಿದರು ನಿರ್ಭೀತವಾಗಿ  ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿ  ವಿದ್ಯುತ್ ಪ್ರವಾಹದಂತೆ ಸಾಗುವ  - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮತ್ತು ಹೆಚ್ಚಿನ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಸಂಭವಿಸುತ್ತವೆ. ನವೆಂಬರ್ 20–28ರ ಅವಧಿಯು ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ  ಪ್ರದರ್ಶಿಸಲಾಗುವ 56ನೇ ಆವೃತ್ತಿಯು ವಿವಿಧ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಬೆರಗುಗೊಳಿಸುವ ಕಾಮನಬಿಲ್ಲಿನ  ಭರವಸೆ ನೀಡುತ್ತದೆ – ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಸಂಭ್ರಮಾಚರಣೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56new/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Post Link: https://x.com/PIB_Panaji/status/1991438887512850647?s=20

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2192368   |   Visitor Counter: 5