ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮುದ್ರಣ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರದ ಜಾಹೀರಾತುಗಳಿಗೆ ಪರಿಷ್ಕೃತ ದರ ರಚನೆಯನ್ನು ಅನುಮೋದಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ


ಮುದ್ರಣ ಮಾಧ್ಯಮದಲ್ಲಿನ ಜಾಹೀರಾತುಗಳಿಗೆ ದರಗಳಲ್ಲಿ 26% ಹೆಚ್ಚಳವನ್ನು ಘೋಷಿಸಿದೆ ಮತ್ತು ಬಣ್ಣದ ಜಾಹೀರಾತುಗಳಿಗೆ ಪ್ರೀಮಿಯಂಗಳನ್ನು ಪರಿಚಯಿಸುತ್ತದೆ

Posted On: 17 NOV 2025 4:24PM by PIB Bengaluru

ಕೇಂದ್ರ ಸರ್ಕಾರವು ಜಾಹೀರಾತು ದರಗಳನ್ನು 26% ರಷ್ಟು ಪರಿಷ್ಕರಿಸಲು ನಿರ್ಧರಿಸಿದೆ. ಕಪ್ಪು ಮತ್ತು ಬಿಳಿ ಬಣ್ಣದ ಜಾಹೀರಾತಿಗಾಗಿ, ದಿನಪತ್ರಿಕೆಗಳ ಒಂದು ಲಕ್ಷ ಪ್ರತಿಗಳಿಗೆ ಪ್ರತಿ ಚದರ ಸೆಂ.ಮೀ.ಗಾಗಿ, ಮುದ್ರಣ ಮಾಧ್ಯಮದ ಮಾಧ್ಯಮ ದರಗಳನ್ನು ರೂ. 47.40 ರಿಂದ ರೂ. 59.68ಕ್ಕೆ ಹೆಚ್ಚಿಸಲಾಗಿದೆ, ಇದು 26% ರಷ್ಟು ಹೆಚ್ಚಳವಾಗಿದೆ. ವರ್ಣಮಯ  ಜಾಹೀರಾತುಗಳ ದರಗಳಿಗೆ ಹಾಗೂ ಜಾಹೀರಾತಿನ ವಿಶೇಷ ಆದ್ಯತೆಯ ಸ್ಥಾನೀಕರಣಕ್ಕೆ ನೀಡಲಾಗುವ ಹೆಚ್ಚುವರಿ ಪ್ರೀಮಿಯಂ ದರಗಳಿಗೆ ಸಂಬಂಧಿಸಿದಂತೆ ಸಮಿತಿಯ ಮಾಡಿದ ಶಿಫಾರಸುಗಳಿಗೆ ಸಹ ಕೇಂದ್ರ ಸರ್ಕಾರವು ಒಪ್ಪಿಕೊಂಡಿದೆ.

ಭಾರತ ಸರ್ಕಾರದ ಕೇಂದ್ರ ಸಂವಹನ ವಿಭಾಗವು (ಸಿ.ಬಿ.ಸಿ) ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳ ಪರವಾಗಿ ಪ್ರಚಾರ ಅಭಿಯಾನಗಳನ್ನು ಕೈಗೊಳ್ಳಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ನೋಡಲ್ ಮಾಧ್ಯಮ ಘಟಕವಾಗಿದೆ ಹಾಗೂ ಈ ಉದ್ದೇಶಕ್ಕಾಗಿ ಕೇಂದ್ರ ಸಂವಹನ ವಿಭಾಗ (ಸಿ.ಬಿ.ಸಿ) ದೊಂದಿಗೆ ಎಂಪನೇಲ್ ಮಾಡಲಾಗಿದೆ. ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಬಿಡುಗಡೆ ದರಗಳನ್ನು ಕೊನೆಯದಾಗಿ, ಈ ಹಿಂದೆ, ಕೇಂದ್ರ ಸಚಿವಾಲಯವು 8ನೇ ದರ ರಚನೆ ಸಮಿತಿಯ (ಆರ್.ಎಸ್.ಸಿ.) ಶಿಫಾರಸುಗಳ ಆಧಾರದ ಮೇಲೆ ಸಿಬಿಸಿಯಿಂದ 09.01.2019 ರಂದು ಪರಿಷ್ಕರಿಸಿತು, ಹಾಗೂ ಈ ದರವು ಮೂರು ವರ್ಷಗಳ ಅವಧಿಗೆ ಮಾನ್ಯವಾಗಿತ್ತು.

ಮುದ್ರಣ ಮಾಧ್ಯಮ ವೆಚ್ಚಗಳನ್ನು ಸಮಿತಿಯು ಮೌಲ್ಯಮಾಪನ ಮಾಡುತ್ತದೆ

ಮುದ್ರಣ ಮಾಧ್ಯಮದಲ್ಲಿ ಕೇಂದ್ರ ಸರ್ಕಾರಿ ಜಾಹೀರಾತುಗಳಿಗೆ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡಲು ಎ.ಎಸ್.&ಎಫ್.ಎ (ಐ.&ಬಿ) ಅಧ್ಯಕ್ಷತೆಯಲ್ಲಿ 9ನೇ ದರ ರಚನೆ ಸಮಿತಿಯನ್ನು ನವೆಂಬರ್ 11, 2021 ರಂದು ರಚಿಸಲಾಯಿತು.

ಈ ನೂತನ ಸಮಿತಿಯು ನವೆಂಬರ್, 2021 ಮತ್ತು ಆಗಸ್ಟ್, 2023ರ ನಡುವಿನ ತನ್ನ ಪ್ರಕ್ರಿಯೆಗಳಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ವರ್ಗದ ಪತ್ರಿಕೆಗಳ ವಿವಿಧ ಪತ್ರಿಕಾ ಸಂಘಗಳಾದ ಭಾರತೀಯ ವೃತ್ತಪತ್ರಿಕೆ ಸಂಘ (ಐ.ಎನ್.ಎಸ್.), ಅಖಿಲ ಭಾರತ ಸಣ್ಣ ವೃತ್ತಪತ್ರಿಕೆ ಸಂಘ (ಎ.ಐ.ಎಸ್.ಎನ್.ಎ), ಸಣ್ಣ-ಮಧ್ಯಮ-ದೊಡ್ಡ ವೃತ್ತಪತ್ರಿಕೆ ಸಂಘ (ಎಸ್.ಎಂ.ಬಿ.ಎನ್.ಎಸ್.) ಮತ್ತು ಇತರ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಪಾಲುದಾರರಿಂದ ಬಂದ ಪ್ರಾತಿನಿಧ್ಯಗಳನ್ನು ಪರಿಗಣಿಸಿತು. ಮುದ್ರಣ ಮಾಧ್ಯಮದಲ್ಲಿನ ಜಾಹೀರಾತು ದರಗಳ ಮೇಲೆ ಪರಿಣಾಮ ಬೀರುವ ವಿವಿಧ ನಿಯತಾಂಕಗಳ ಬಗ್ಗೆ ಸಮಿತಿಯು ಚರ್ಚಿಸಿತು. ಉದಾಹರಣೆಗೆ, ಸುದ್ದಿ ಮುದ್ರಣದಲ್ಲಿ ಡಬ್ಲ್ಯೂ.ಪಿ.ಐ. ಹಣದುಬ್ಬರ, ವೇತನ, ಹಣದುಬ್ಬರ ದರ, ಆಮದು ಮಾಡಿದ ಸುದ್ದಿ ಮುದ್ರಣ ಬೆಲೆಗಳ ಪ್ರವೃತ್ತಿ, ಸಂಸ್ಕರಣಾ ವೆಚ್ಚ ಇತ್ಯಾದಿ, ವಿವಿಧ ನಿಯತಾಂಕಗಳ ಬಗ್ಗೆ ಸಮಿತಿಯು ಚರ್ಚಿಸಿತು ಹಾಗೂ ಅಂತಿಮವಾಗಿ ಸಮಿತಿಯು ಸೆಪ್ಟೆಂಬರ್ 23, 2023 ರಂದು ತನ್ನ ಶಿಫಾರಸುಗಳನ್ನು ಸಲ್ಲಿಸಿತು.

ಆದಾಯವನ್ನು ಹೆಚ್ಚಿಸುವ ಮೂಲಕ ಮುದ್ರಣ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ

ಮುದ್ರಣ ಮಾಧ್ಯಮದಲ್ಲಿ ಕೇಂದ್ರ ಸರ್ಕಾರದ ಜಾಹೀರಾತುಗಳಿಗೆ ದರಗಳನ್ನು ಹೆಚ್ಚಿಸುವುದರಿಂದ ಸರ್ಕಾರ ಮತ್ತು ಮಾಧ್ಯಮ ವ್ಯವಸ್ಥೆಯ ಚೌಕಟ್ಟಿನಲ್ಲಿ, ಈ ಎರಡಕ್ಕೂ ಹಲವಾರು ಗಮನಾರ್ಹ ಪ್ರಯೋಜನಗಳು ದೊರೆಯುತ್ತವೆ. ವಿಶೇಷವಾಗಿ ವಿವಿಧ ಇತರ ಮಾಧ್ಯಮ ವೇದಿಕೆಗಳಿಂದ ಸ್ಪರ್ಧೆಯ ಯುಗದಲ್ಲಿ ಮತ್ತು ಕಳೆದ ಕೆಲವು ವರ್ಷಗಳಲ್ಲಿ ವೆಚ್ಚದಲ್ಲಿನ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರಿ ಜಾಹೀರಾತುಗಳಿಗೆ ಹೆಚ್ಚಿನ ದರಗಳ ಮೂಲಕ ಮುದ್ರಣ ಮಾಧ್ಯಮಕ್ಕೆ ಅಗತ್ಯವಾದ ಉತ್ತಮ ಆದಾಯ ಬೆಂಬಲವನ್ನು ಒದಗಿಸಿದಂತಾಗುತ್ತದೆ. ಇದು ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು, ಗುಣಮಟ್ಟದ ಪತ್ರಿಕೋದ್ಯಮವನ್ನು ಕಾಪಾಡಿಕೊಳ್ಳಲು ಮತ್ತು ಸ್ಥಳೀಯ ಸುದ್ದಿ ಉಪಕ್ರಮಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವ ಮೂಲಕ, ಮುದ್ರಣ ಮಾಧ್ಯಮವು ಉತ್ತಮ ವಿಷಯದಲ್ಲಿ ಹೂಡಿಕೆ ಮಾಡಬಹುದು, ಇದರಿಂದಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸಬಹುದು.

ಜಾಹೀರಾತು ದರಗಳಲ್ಲಿನ ಮೇಲ್ಮುಖ ಹಾಗೂ ಹೆಚ್ಚುವರಿ ದರ ಪರಿಷ್ಕರಣೆಯು ಮಾಧ್ಯಮ ಬಳಕೆಯಲ್ಲಿನ ವಿಶಾಲ ಪ್ರವೃತ್ತಿಗಳೊಂದಿಗೆ ಹೊಂದಿಕೆಯಾಗಬಹುದು. ವೈವಿಧ್ಯಮಯ ಮಾಧ್ಯಮ ಪರಿಸರ ವ್ಯವಸ್ಥೆಯಲ್ಲಿ ಮುದ್ರಣ ಮಾಧ್ಯಮದ ಉಳಿಕೆ-ಬಾಳಿಕೆ-ಮೌಲ್ಯವನ್ನು ಗುರುತಿಸುವ ಮೂಲಕ, ಕೇಂದ್ರ ಸರ್ಕಾರವು ತನ್ನ ಸಂವಹನ ತಂತ್ರಗಳನ್ನು ಉತ್ತಮವಾಗಿ ಗುರಿಯಾಗಿಸಬಹುದು. ಈ ಮೂಲಕ ಸರ್ಕಾರದ ಮಾಹಿತಿಯು ವಿವಿಧ ವೇದಿಕೆಗಳಲ್ಲಿ ನಾಗರಿಕರನ್ನು ಪರಿಣಾಮಕಾರಿಯಾಗಿ ತಲುಪುತ್ತವೆ ಎಂದು ಖಚಿತಪಡಿಸಿಕೊಳ್ಳಬಹುದು.

 

*****


(Release ID: 2190902) Visitor Counter : 11