ಸಂಪುಟ
azadi ka amrit mahotsav

ಹಸಿರು ಇಂಧನಕ್ಕೆ ನಿರ್ಣಾಯಕವಾದ ಗ್ರ್ಯಾಫೈಟ್, ಸೀಸಿಯಂ, ರುಬಿಡಿಯಂ ಮತ್ತು ಜಿರ್ಕೋನಿಯಂ ಖನಿಜಗಳ ಸ್ವಾಮ್ಯಧನ ದರಗಳ ಪರಿಷ್ಕರಣೆಗೆ  ಸಚಿವ ಸಂಪುಟದ ಅನುಮೋದನೆ

प्रविष्टि तिथि: 12 NOV 2025 8:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ, ಸೀಸಿಯಮ್, ಗ್ರ್ಯಾಫೈಟ್, ರುಬಿಡಿಯಮ್ ಮತ್ತು ಜಿರ್ಕೋನಿಯಮ್ ಖನಿಜಗಳ ರಾಯಲ್ಟಿ ದರಗಳನ್ನು ಕೆಳಕಂಡಂತೆ ನಿಗದಿಪಡಿಸಲು/ಪರಿಷ್ಕರಿಸಲು ಅನುಮೋದನೆ ನೀಡಲಾಗಿದೆ:

ಖನಿಜ

ರಾಯಲ್ಟಿ ದರ

ಸೀಸಿಯಮ್

ಉತ್ಪಾದಿಸಿದ ಅದಿರಿನಲ್ಲಿರುವ ಸೀಸಿಯಮ್ ಲೋಹಕ್ಕೆ ವಿಧಿಸಬಹುದಾದ, ಸೀಸಿಯಮ್ ಲೋಹದ ಸರಾಸರಿ ಮಾರಾಟ ಬೆಲೆಯ (ಎ.ಎಸ್.ಪಿ) 2%.

ಗ್ರ್ಯಾಫೈಟ್

  1. ಎಂಬತ್ತು ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಸ್ಥಿರ ಇಂಗಾಲ (Fixed Carbon) ಹೊಂದಿರುವಲ್ಲಿ
  2. ಎಂಬತ್ತು ಪ್ರತಿಶತಕ್ಕಿಂತ ಕಡಿಮೆ ಸ್ಥಿರ ಇಂಗಾಲ ಹೊಂದಿರುವಲ್ಲಿ 

 

ಆಡ್ ವ್ಯಾಲೋರಂ ಆಧಾರದ ಮೇಲೆ ಎ.ಎಸ್.ಪಿ ಯ 2%

 

 

ಆಡ್ ವ್ಯಾಲೋರಂ ಆಧಾರದ ಮೇಲೆ ಎ.ಎಸ್.ಪಿ ಯ 4%

 

ರುಬಿಡಿಯಮ್

ಉತ್ಪಾದಿಸಿದ ಅದಿರಿನಲ್ಲಿರುವ ರುಬಿಡಿಯಮ್ ಲೋಹದ ಮೇಲಿನ ಶುಲ್ಕಕ್ಕೆ ಅನ್ವಯವಾಗುವ ರುಬಿಡಿಯಮ್ ಲೋಹದ ಸರಾಸರಿ ಮಾರಾಟ ಬೆಲೆ ಯ ಶೇ. 2

ಜಿರ್ಕೋನಿಯಮ್

ಉತ್ಪಾದಿಸಿದ ಅದಿರಿನಲ್ಲಿರುವ ಜಿರ್ಕೋನಿಯಮ್ ಲೋಹದ ಮೇಲಿನ ಶುಲ್ಕಕ್ಕೆ ಅನ್ವಯವಾಗುವ ಜಿರ್ಕೋನಿಯಮ್ ಲೋಹದ ಸರಾಸರಿ ಮಾರಾಟ ಬೆಲೆ ಯ ಶೇ. 1.

 

ಕೇಂದ್ರ ಸಂಪುಟದ ಈ ನಿರ್ಧಾರವು ಸೀಸಿಯಮ್, ರುಬಿಡಿಯಮ್ ಮತ್ತು ಜಿರ್ಕೋನಿಯಮ್ ಒಳಗೊಂಡ ಖನಿಜ ಬ್ಲಾಕ್‌ಗಳ ಹರಾಜನ್ನು ಉತ್ತೇಜಿಸುತ್ತದೆ , ಇದರಿಂದಾಗಿ ಈ ಖನಿಜಗಳು ಮಾತ್ರವಲ್ಲದೆ, ಅವುಗಳೊಂದಿಗೆ ಕಂಡುಬರುವ ಲಿಥಿಯಮ್, ಟಂಗ್‌ ಸ್ಟನ್, REES (ಅಪರೂಪದ ಭೂಮಿಯ ಅಂಶಗಳು), ನಿಯೋಬಿಯಮ್ ಇತ್ಯಾದಿ ಸಂಬಂಧಿತ ನಿರ್ಣಾಯಕ ಖನಿಜಗಳು ಸಹ ಲಭ್ಯವಾಗುತ್ತವೆ. ಗ್ರ್ಯಾಫೈಟ್‌ ನ ರಾಯಲ್ಟಿ ದರಗಳನ್ನು 'ಆಡ್ ವ್ಯಾಲೋರಂ' ಆಧಾರದ ಮೇಲೆ ನಿಗದಿಪಡಿಸುವುದರಿಂದ, ಖನಿಜದ ವಿವಿಧ ಶ್ರೇಣಿಗಳ ಬೆಲೆಗಳಲ್ಲಿನ ಬದಲಾವಣೆಯನ್ನು ಇದು ಸಮರ್ಪಕವಾಗಿ ಪ್ರತಿಬಿಂಬಿಸುತ್ತದೆ. ಈ ಖನಿಜಗಳ ಸ್ಥಳೀಯ ಉತ್ಪಾದನೆಯ ಹೆಚ್ಚಳವು ಆಮದುಗಳ ಕಡಿತ ಮತ್ತು ಪೂರೈಕೆ ಸರಣಿಯ ದುರ್ಬಲತೆಗಳನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. ಇದರೊಂದಿಗೆ, ದೇಶದಲ್ಲಿ ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗುತ್ತವೆ.

ಗ್ರ್ಯಾಫೈಟ್, ಸೀಸಿಯಂ, ರುಬಿಡಿಯಂ ಮತ್ತು ಜಿರ್ಕೋನಿಯಂ ಹೈಟೆಕ್ ಅನ್ವಯಿಕೆಗಳಿಗೆ ಮತ್ತು ಇಂಧನ ಪರಿವರ್ತನೆಗೆ ಪ್ರಮುಖ ಖನಿಜಗಳಾಗಿವೆ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 (ಎಂ.ಎಂ.ಡಿ.ಅರ್ ಕಾಯ್ದೆ) ರಲ್ಲಿ ಪಟ್ಟಿ ಮಾಡಲಾದ 24 ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಲ್ಲಿ ಗ್ರ್ಯಾಫೈಟ್ ಮತ್ತು ಜಿರ್ಕೋನಿಯಂ ಕೂಡ ಸೇರಿವೆ.

ವಿದ್ಯುತ್ ಚಾಲಿತ ವಾಹನಗಳ (ಇ.ವಿ) ಬ್ಯಾಟರಿಗಳಲ್ಲಿ ಗ್ರ್ಯಾಫೈಟ್ ಒಂದು ನಿರ್ಣಾಯಕ ಘಟಕಾಂಶವಾಗಿದೆ. ಇದು ಪ್ರಾಥಮಿಕವಾಗಿ 'ಆನೋಡ್' ವಸ್ತುವಾಗಿ ಕಾರ್ಯನಿರ್ವಹಿಸುತ್ತದೆ, ಹಾಗೂ ಹೆಚ್ಚಿನ ವಿದ್ಯುತ್ ವಾಹಕತೆ ಮತ್ತು ಚಾರ್ಜ್ ಸಾಮರ್ಥ್ಯವನ್ನು ಸಾಧ್ಯವಾಗಿಸುತ್ತದೆ. ಆದಾಗ್ಯೂ, ಭಾರತವು ತನ್ನ ಅಗತ್ಯದ 60% ರಷ್ಟು ಗ್ರ್ಯಾಫೈಟ್ ಅನ್ನು ಆಮದು ಮಾಡಿಕೊಳ್ಳುತ್ತದೆ. ಪ್ರಸ್ತುತ, ದೇಶದಲ್ಲಿ 9 ಗ್ರ್ಯಾಫೈಟ್ ಗಣಿಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 27 ಬ್ಲಾಕ್‌ ಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಇದಲ್ಲದೆ, ಜಿ.ಎಸ್‌.ಐ (GSI) ಮತ್ತು ಎಂ.ಇ.ಸಿ.ಎಲ್ (MECL) 20 ಗ್ರ್ಯಾಫೈಟ್ ಬ್ಲಾಕ್‌ ಗಳನ್ನು ಹಸ್ತಾಂತರಿಸಿದ್ದು, ಅವುಗಳನ್ನು ಶೀಘ್ರದಲ್ಲೇ ಹರಾಜು ಮಾಡಲಾಗುವುದು ಮತ್ತು ಸುಮಾರು 26 ಬ್ಲಾಕ್‌ಗಳು ಅನ್ವೇಷಣಾ ಹಂತದಲ್ಲಿವೆ.

ಜಿರ್ಕೋನಿಯಂ ಒಂದು ಬಹುಮುಖಿ ಲೋಹವಾಗಿದ್ದು, ಅದರ ಅಸಾಧಾರಣವಾದ ತುಕ್ಕು ನಿರೋಧಕತೆ ಮತ್ತು ಅಧಿಕ ತಾಪಮಾನ ಸ್ಥಿರತೆಯ ಕಾರಣದಿಂದಾಗಿ, ಪರಮಾಣು ಶಕ್ತಿ, ಏರೋಸ್ಪೇಸ್, ಆರೋಗ್ಯ ರಕ್ಷಣೆ ಮತ್ತು ಉತ್ಪಾದನಾ ವಲಯ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಸೀಸಿಯಂ ಅನ್ನು ಮುಖ್ಯವಾಗಿ ಹೈಟೆಕ್ ಎಲೆಕ್ಟ್ರಾನಿಕ್ ವಲಯದಲ್ಲಿ, ವಿಶೇಷವಾಗಿ ಪರಮಾಣು ಗಡಿಯಾರಗಳು, ಜಿ.ಪಿ.ಎಸ್ (GPS) ವ್ಯವಸ್ಥೆಗಳು, ಇತರ ಉನ್ನತ ನಿಖರತೆಯ ಉಪಕರಣಗಳು, ಮತ್ತು ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ವೈದ್ಯಕೀಯ ಉಪಕರಣಗಳಲ್ಲಿ ಬಳಸಲಾಗುತ್ತದೆ. ರುಬಿಡಿಯಂ ಅನ್ನು ಫೈಬರ್ ಆಪ್ಟಿಕ್ಸ್, ದೂರಸಂಪರ್ಕ ವ್ಯವಸ್ಥೆಗಳು, ರಾತ್ರಿ ದೃಷ್ಟಿ ಸಾಧನಗಳು ಇತ್ಯಾದಿಗಳಲ್ಲಿ ಬಳಸುವ ವಿಶೇಷ ಕನ್ನಡಕಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.

ಇತ್ತೀಚೆಗೆ, ಕೇಂದ್ರ ಸರ್ಕಾರವು ನಿರ್ಣಾಯಕ ಖನಿಜ ಬ್ಲಾಕ್‌ ಗಳಿಗಾಗಿನ ಆರನೇ ಹಂತದ ಹರಾಜಿಗಾಗಿ 2025ರ ಸೆಪ್ಟೆಂಬರ್ 16 ರಂದು ಎನ್‌.ಐ.ಟಿ (NIT - ಹರಾಜು ಪ್ರಕಟಣೆ) ಯನ್ನು ಹೊರಡಿಸಿದೆ. ಇದರಲ್ಲಿ 5 ಗ್ರ್ಯಾಫೈಟ್ ಬ್ಲಾಕ್‌ಗಳು, 2 ರುಬಿಡಿಯಂ ಬ್ಲಾಕ್‌ಗಳು ಮತ್ತು ಸೀಸಿಯಂ ಹಾಗೂ ಜಿರ್ಕೋನಿಯಂನ ತಲಾ 1 ಬ್ಲಾಕ್ ಕೂಡ ಸೇರಿವೆ (ವಿವರಗಳನ್ನು ಲಗತ್ತಿಸಲಾಗಿದೆ). ಸ್ವಾಮ್ಯಧನ ದರದ ಕುರಿತಾದ ಕೇಂದ್ರ ಸಚಿವ ಸಂಪುಟದ ಇಂದಿನ ಅನುಮೋದನೆಯು, ಹರಾಜಿನಲ್ಲಿ ಬಿಡ್‌ ದಾರರು ತಮ್ಮ ಹಣಕಾಸು ಬಿಡ್‌ಗಳನ್ನು ತರ್ಕಬದ್ಧವಾಗಿ ಸಲ್ಲಿಸಲು ಸಹಾಯ ಮಾಡುತ್ತದೆ.

2014ರ ಸೆಪ್ಟೆಂಬರ್ 1 ರಿಂದ, ಗ್ರ್ಯಾಫೈಟ್‌ ನ ರಾಯಲ್ಟಿ ದರವನ್ನು 'ಪ್ರತಿ ಟನ್‌ ಗೆ ಇಂತಿಷ್ಟು ರೂಪಾಯಿ' ಆಧಾರದ ಮೇಲೆ ನಿರ್ದಿಷ್ಟಪಡಿಸಲಾಗುತ್ತಿತ್ತು. ನಿರ್ಣಾಯಕ ಮತ್ತು ಆಯಕಟ್ಟಿನ ಖನಿಜಗಳ ಪಟ್ಟಿಯಲ್ಲಿ, 'ಪ್ರತಿ ಟನ್' ಆಧಾರದ ಮೇಲೆ ರಾಯಲ್ಟಿ ದರವನ್ನು ಹೊಂದಿದ್ದ ಏಕೈಕ ಖನಿಜ ಇದಾಗಿತ್ತು. ಇದಲ್ಲದೆ, ವಿವಿಧ ದರ್ಜೆಯ ಗ್ರ್ಯಾಫೈಟ್ ಬೆಲೆಗಳಲ್ಲಿನ ವ್ಯತ್ಯಾಸಗಳನ್ನು ಪರಿಗಣಿಸಿ, ಈಗ ಗ್ರ್ಯಾಫೈಟ್‌ ನ ರಾಯಲ್ಟಿ ದರವನ್ನು 'ಆ್ಯಡ್ ವಲೊರೆಮ್' ಆಧಾರದ ಮೇಲೆ, ಅಂದರೆ ಮೌಲ್ಯಾಧಾರಿತವಾಗಿ, ವಿಧಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ, ವಿವಿಧ ದರ್ಜೆಗಳಿಂದ ಬರುವ ರಾಯಲ್ಟಿದರ ಸಂಗ್ರಹವು ಆ ಖನಿಜದ ಬೆಲೆಗಳಲ್ಲಿನ ಬದಲಾವಣೆಗಳನ್ನು ಅನುಪಾತದಲ್ಲಿ ಪ್ರತಿಬಿಂಬಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಹೆಚ್ಚಿನ ನಿರ್ಣಾಯಕ ಖನಿಜಗಳ ರಾಯಲ್ಟಿ ದರಗಳನ್ನು 2% ರಿಂದ 4% ರ ವ್ಯಾಪ್ತಿಯಲ್ಲಿ ನಿಗದಿಪಡಿಸಲಾಗಿದೆ.

 

*****


(रिलीज़ आईडी: 2189489) आगंतुक पटल : 47
इस विज्ञप्ति को इन भाषाओं में पढ़ें: Khasi , English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam