ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಅಸಾಧಾರಣ ಪ್ರದರ್ಶನವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು
प्रविष्टि तिथि:
28 OCT 2023 11:13PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 111 ಪದಕಗಳೊಂದಿಗೆ ಭಾರತದ ಅಸಾಧಾರಣ ಪ್ರದರ್ಶನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಶ್ರೀ ಮೋದಿ ಅವರು ಕ್ರೀಡಾಪಟುಗಳ ಅಚಲ ಸಮರ್ಪಣೆ ಮತ್ತು ಅಜೇಯ ಮನೋಭಾವವನ್ನು ಹಾಡಿ ಹೊಗಳಿದರು.
ಪ್ರಧಾನಮಂತ್ರಿಯವರು 'ಎಕ್ಸ್' (X) ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಅಸಾಧಾರಣ ಪ್ರದರ್ಶನವು ಇಡೀ ರಾಷ್ಟ್ರವನ್ನು ರೋಮಾಂಚನಗೊಳಿಸಿದೆ! ದಾಖಲೆ ಮುರಿದ 111 ಪದಕಗಳನ್ನು ದೇಶಕ್ಕೆ ತಂದುಕೊಟ್ಟ ನಮ್ಮ ಗಮನಾರ್ಹ ಕ್ರೀಡಾಪಟುಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಸಾಧನೆಯು ನಮ್ಮ ಕ್ರೀಡಾಪಟುಗಳ ಅಚಲ ಸಮರ್ಪಣೆ ಮತ್ತು ಅಜೇಯ ಮನೋಭಾವಕ್ಕೆ ಸಾಕ್ಷಿಯಾಗಿದೆ."
*****
(रिलीज़ आईडी: 2189249)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam