ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋದಲ್ಲಿ ಕಂಚು ಗೆದ್ದ ಟೆಕ್ ಚಂದ್ ಮಹ್ಲಾವತ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 28 OCT 2023 8:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ-ಎಫ್55 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಟೆಕ್ ಚಂದ್ ಮಹ್ಲಾವತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಹ್ಲಾವತ್ ಅವರ ಪ್ರದರ್ಶನವು ಅವರ ದೃಢಸಂಕಲ್ಪ ಮತ್ತು ಶ್ರೇಷ್ಠತೆಯನ್ನು ಪ್ರದರ್ಶಿಸಿದೆ, ಇದು ದೇಶಕ್ಕೆ ಹೆಮ್ಮೆ ತಂದಿದೆ ಎಂದು ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು 'ಎಕ್ಸ್' (X) ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಪುರುಷರ ಜಾವೆಲಿನ್ ಥ್ರೋ-ಎಫ್55 ವಿಭಾಗದಲ್ಲಿ ಅತ್ಯುತ್ತಮ ಕಂಚಿನ ಪದಕ ಗೆದ್ದ ಟೆಕ್ ಚಂದ್ ಮಹ್ಲಾವತ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಈ ಸಾಧನೆಯು ಅವರ ದೃಢಸಂಕಲ್ಪ ಮತ್ತು ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ ಮತ್ತು ಇದು ನಮ್ಮ ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದೆ."

 

*****

 


(ಪ್ರಕಟಣೆ ಐ.ಡಿ.: 2189216) ವಿಸಿಟರ್ ಕೌಂಟರ್ : 38