ರಸಗೊಬ್ಬರ ಇಲಾಖೆ
azadi ka amrit mahotsav

ಕೇಂದ್ರ ರಸಗೊಬ್ಬರ ಇಲಾಖೆಯ ಸಕಾಲಿಕ ಪರಿಯೋಜನೆ ಮತ್ತು ಸಮನ್ವಯದ ಮೂಲಕ 2025ರ ಮುಂಗಾರು ಬೆಳೆ(ಖಾರಿಫ್)ಯಲ್ಲಿ ರೈತರಿಗೆ ಸಾಕಷ್ಟು ಯೂರಿಯಾ ಲಭ್ಯತೆಯನ್ನು ಖಚಿತಪಡಿಸಲಾಗಿದೆ


ಕೇಂದ್ರ ಸರ್ಕಾರದ ಸಕಾಲಿಕ ಕ್ರಮವು 2025-26ರ ಹಿಂಗಾರು(ರಬಿ) ಬೆಳೆಗೆ ಬಲವಾದ ಯೂರಿಯಾ ಹೆಚ್ಚುವರಿ ಲಭ್ಯತೆ(ಬಫರ್)ಯನ್ನು ನಿರ್ಮಿಸುತ್ತದೆ

ಸದೃಢವಾದ ದೇಶೀಯ ಉತ್ಪಾದನೆ ಮತ್ತು ಹೆಚ್ಚಿನ ಆಮದುಗಳು ದೇಶಾದ್ಯಂತ ರೈತರಿಗೆ ಸಾಕಷ್ಟು ಯೂರಿಯಾ ಪೂರೈಕೆಯನ್ನು ಖಚಿತಪಡಿಸುತ್ತವೆ

ರಾಜ್ಯಗಳು ಜಾಗರೂಕ, ಪರಿಣಾಮಕಾರಿ ಯೂರಿಯಾ ವಿತರಣೆಗಾಗಿ ನವೀನ ಸಾಧನಗಳನ್ನು ಜಾರಿಗೆ ತರುತ್ತವೆ, ಪಾರದರ್ಶಕತೆ ಮತ್ತು ರೈತರಿಗೆ ಸಕಾಲಿಕ ಬೆಂಬಲವನ್ನು ಉತ್ತೇಜಿಸುತ್ತವೆ

प्रविष्टि तिथि: 03 NOV 2025 6:13PM by PIB Bengaluru

ಭಾರತ ಸರ್ಕಾರದ ರಸಗೊಬ್ಬರ ಇಲಾಖೆಯು 2025ರ ಮುಂಗಾರು ಬೆಳೆ(ಖಾರಿಫ್) ಋತುವಿನಲ್ಲಿ ದೇಶಾದ್ಯಂತ ಯೂರಿಯಾ ಸೇರಿದಂತೆ ರಸಗೊಬ್ಬರಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿದೆ. ಸಮಯೋಚಿತ ಯೋಜನೆ ಮತ್ತು ವಿವಿಧ ಪಾಲುದಾರರೊಂದಿಗೆ ಅಂದರೆ ಭಾರತೀಯ ರೈಲ್ವೆ, ಬಂದರುಗಳು, ರಾಜ್ಯ ಸರ್ಕಾರಗಳು ಮತ್ತು ರಸಗೊಬ್ಬರ ಕಂಪನಿಗಳೊಂದಿಗೆ ನಿಕಟ ಸಮನ್ವಯದ ಮೂಲಕ, ಕೇಂದ್ರ ಸರ್ಕಾರವು ರೈತರಿಗೆ ಅಗತ್ಯವಿರುವ ಪ್ರಮಾಣದ ಯೂರಿಯಾವನ್ನು ಯಾವುದೇ ಕೊರತೆಯಿಲ್ಲದಂತೆ ಪಡೆಯುವುದನ್ನು ಖಚಿತಪಡಿಸಿಕೊಂಡಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಅಂದಾಜು ಮಾಡಿದ 185.39 ಎಲ್.ಎಂ.ಟಿ. ಅಗತ್ಯಕ್ಕೆ ವಿರುದ್ಧವಾಗಿ, ಕೇಂದ್ರ ರಸಗೊಬ್ಬರ ಇಲಾಖೆಯಿಂದ ಖಚಿತಪಡಿಸಲ್ಪಟ್ಟ ಲಭ್ಯತೆಯು ಇನ್ನೂ ಅಧಿಕ ಎಂದರೆ 230.53 ಎಲ್.ಎಂ.ಟಿ. ಆಗಿದ್ದು, ಇದು 193.20 ಎಲ್.ಎಂ.ಟಿ. ಮಾರಾಟಕ್ಕಿಂತ ಹೆಚ್ಚಿನದಾಗಿದೆ. ಈ ಅಂಕಿಸಂಖ್ಯೆಯು ಅಖಿಲ ಭಾರತ ಮಟ್ಟದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಲಭ್ಯತೆಯನ್ನು ಪ್ರತಿಬಿಂಬಿಸುತ್ತದೆ. ಸ್ಪಷ್ಟವಾಗಿ, ರೈತರು 2024ರ ಖಾರಿಫ್ ಬೆಳೆಗೆ ಹೋಲಿಸಿದರೆ ಖಾರಿಫ್-2025ರಲ್ಲಿ ಸುಮಾರು 4.08 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಹೆಚ್ಚು ಯೂರಿಯಾವನ್ನು ಬಳಸಿದ್ದಾರೆ, ಇದು ಉತ್ತಮ ಮಾನ್ಸೂನ್ ನಿಂದಾಗಿ ಹೆಚ್ಚಿನ ಬೆಳೆ ಪ್ರದೇಶಕ್ಕೆ ಯೂರಿಯಾದ ಉತ್ತಮ ಲಭ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ದೇಶೀಯ ಉತ್ಪಾದನೆ ಮತ್ತು ಬಳಕೆಯ ನಡುವಿನ ಅಂತರವನ್ನು ಆಮದು ಮೂಲಕ ಕಡಿಮೆ ಮಾಡಲು ಕೇಂದ್ರ ರಸಗೊಬ್ಬರ ಇಲಾಖೆಯ ಸ್ಥಿರ ಪ್ರಯತ್ನಗಳನ್ನು ಮಾಡುತ್ತಿದೆ. ದೇಶೀಯ ಉತ್ಪಾದನೆ ಮತ್ತು ಹೆಚ್ಚುತ್ತಿರುವ ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು, ಸರ್ಕಾರವು ಆಮದುಗಳನ್ನು ಹೆಚ್ಚಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. 2025ರ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ, ಭಾರತವು 58.62 ಲಕ್ಷ ಮೆಟ್ರಿಕ್ ಟನ್ ಕೃಷಿ ದರ್ಜೆಯ ಯೂರಿಯಾವನ್ನು ಆಮದು ಮಾಡಿಕೊಂಡಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 24.76 ಲಕ್ಷ ಮೆಟ್ರಿಕ್ ಟನ್ ಗಳಷ್ಟಿತ್ತು. ಆಮದುಗಳಲ್ಲಿನ ಈ ಹೆಚ್ಚಳವು 2025ರ ಖಾರಿಫ್ ಬೆಳೆಯಲ್ಲಿ ಯೂರಿಯಾದ ಹೆಚ್ಚಿದ ಬೇಡಿಕೆಯನ್ನು ಪೂರೈಸುವುದಲ್ಲದೆ, ಮುಂಬರುವ ರಬಿ ಋತುವಿಗೆ ಸಾಕಷ್ಟು ಹೆಚ್ಚುವರಿ ಸ್ಟಾಕ್ ಗಳನ್ನು ಸಂಗ್ರಹಿಸಿಡಲು ಸಹಾಯ ಮಾಡಿತು. ಇದರ ಪರಿಣಾಮವಾಗಿ, ಒಟ್ಟಾರೆ ಯೂರಿಯಾ ದಾಸ್ತಾನು ಅಕ್ಟೋಬರ್ 1, 2025 ರಂದು 48.64 ಲಕ್ಷ ಮೆಟ್ರಿಕ್ ಟನ್ ಗಳಿಂದ ಅಕ್ಟೋಬರ್ 31, 2025 ರ ವೇಳೆಗೆ 68.85 ಲಕ್ಷ ಮೆಟ್ರಿಕ್ ಟನ್ಗಳಿಗೆ ಏರಿತು - ಇದು 20.21 ಲಕ್ಷ ಮೆಟ್ರಿಕ್ ಟನ್ಗಳ ಬೆಳವಣಿಗೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಜುಲೈನಿಂದ ಅಕ್ಟೋಬರ್ 2025 ರವರೆಗಿನ ತಿಂಗಳುಗಳಲ್ಲಿ ರಾಜ್ಯಗಳಿಗೆ ಯೂರಿಯಾದ (ರೇಕ್ ಗಳ ಚಲನೆಯ ವಿಷಯದಲ್ಲಿ) ಅತ್ಯಧಿಕ ಪೂರೈಕೆಯನ್ನು ದಾಖಲಿಸಿವೆ, ಇದು ರೈತರ ಹಿತದೃಷ್ಟಿಯಿಂದ ಯೂರಿಯಾವನ್ನು ಸಕಾಲಿಕವಾಗಿ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಪೂರ್ವಭಾವಿ ಪ್ರಯತ್ನಗಳನ್ನು ಅತ್ಯಂತ ನಿಖರವಾಗಿ ಉಲ್ಲೇಖಿಸುತ್ತದೆ.

ದೇಶೀಯ ಯೂರಿಯಾ ಉತ್ಪಾದನೆಯೂ ಸುಧಾರಣೆ ಕಂಡಿದ್ದು, ಅಕ್ಟೋಬರ್ 2025ರಲ್ಲಿ ಉತ್ಪಾದನೆಯು 26.88 ಲಕ್ಷ ಮೆಟ್ರಿಕ್ ಟನ್ಗಳನ್ನು ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 1.05 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಾಗಿದೆ. ಏಪ್ರಿಲ್-ಅಕ್ಟೋಬರ್ 2025  ನಡುವಿನ ಸರಾಸರಿ ಮಾಸಿಕ ಉತ್ಪಾದನೆಯು ಸುಮಾರು 25 ಲಕ್ಷ ಮೆಟ್ರಿಕ್ ಟನ್ ಗಳಷ್ಟಿತ್ತು. ಇದಲ್ಲದೆ, ನವೆಂಬರ್ ಮತ್ತು ಡಿಸೆಂಬರ್ 2025ಗಳಿಗೆ ಸುಮಾರು 17.5 ಲಕ್ಷ ಮೆಟ್ರಿಕ್ ಟನ್ ಗಳ ಆಮದು ಈಗಾಗಲೇ ಅಂತಿಮ ಹಂತದಲ್ಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ಸಕಾಲಿಕ ಮಧ್ಯಸ್ಥಿಕೆಗಳ ಮೂಲಕ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು.

ದೇಶದಲ್ಲಿ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಅಸ್ಸಾಂನ ನಮ್ರಪ್ ಮತ್ತು ಒಡಿಶಾದ ತಾಲ್ಚರ್ ನಲ್ಲಿರುವ ಎರಡು ಯೂರಿಯಾ ಸ್ಥಾವರಗಳು ವಾರ್ಷಿಕವಾಗಿ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ ಕಾರ್ಯಗತಗೊಳ್ಳುತ್ತಿವೆ. ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸುವ ಹಲವಾರು ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ ಮತ್ತು ಪರಿಗಣನೆಯಲ್ಲಿವೆ. ಈ ಯೋಜನೆಗಳು ಅನುಮೋದನೆ ಪಡೆದ ನಂತರ ಭಾರತದ ಆಮದು ಅವಲಂಬನೆಯನ್ನು ಗಣನೀಯ ರೀತಿಯಲ್ಲಿ ಕಡಿಮೆ ಮಾಡುತ್ತದೆ ಮತ್ತು ಯೂರಿಯಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆಗೆ ಕಾರಣವಾಗುತ್ತದೆ.

ಕೇಂದ್ರ ಕೃಷಿ ಇಲಾಖೆಯ ಸಮನ್ವಯದೊಂದಿಗೆ, ವಿತರಣಾ ದಕ್ಷತೆಯನ್ನು ಸುಧಾರಿಸಲು ಮತ್ತು ಸ್ಥಳೀಯವಾಗಿ ಮಾರಾಟ, ಕಳ್ಳಸಾಗಣೆ, ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆ ಹಾಗೂ ಯೂರಿಯಾದ ಹೆಚ್ಚುವರಿ ಬಳಕೆಯ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ರಾಜ್ಯ ಕೃಷಿ ಅಧಿಕಾರಿಗಳಿಗೆ ನಿರಂತರವಾಗಿ ಮಾರ್ಗದರ್ಶನ ನೀಡಲಾಗಿದೆ. ಸಬ್ಸಿಡಿ ಯೂರಿಯಾದ ಉತ್ತಮ ಜಾಗರೂಕತೆ ಮತ್ತು ಬಳಕೆಗಾಗಿ ಅನೇಕ ರಾಜ್ಯಗಳು ಕ್ರಮಗಳನ್ನು ಕೈಗೊಂಡಿವೆ ಮತ್ತು ನವೀನ ಸಾಧನಗಳ ಅನುಷ್ಠಾನವನ್ನು ಪ್ರಾರಂಭಿಸಿವೆ.

ಮುಂಗಡ ಯೋಜನೆ, ದಕ್ಷ ಸಾಗಣಿಕೆ ಮತ್ತು ಸಂಘಟಿತ ವಿವಿಧ ಕ್ರಮಗಳ ಮೂಲಕ, ಭಾರತದ ಕೃಷಿ ಬೆಳವಣಿಗೆ ಮತ್ತು ಆಹಾರ ಭದ್ರತೆಗೆ ನಿರ್ಣಾಯಕವಾದ ಕೃಷಿಯ ಒಳಹರಿವು/ಪೂರಕ ಆಗಿರುವ ಯೂರಿಯಾವನ್ನು ಪ್ರತಿಯೊಬ್ಬ ರೈತನು ಸಕಾಲಿಕವಾಗಿ ಪಡೆಯುವುದನ್ನು ಭಾರತ ಸರ್ಕಾರ ಖಚಿತಪಡಿಸಿಕೊಳ್ಳುವುದನ್ನು ಈ ಮೂಲಕ ಮುಂದುವರಿಸಿದೆ.

 

****


(रिलीज़ आईडी: 2186027) आगंतुक पटल : 53
इस विज्ञप्ति को इन भाषाओं में पढ़ें: Telugu , Marathi , English , Khasi , Urdu , हिन्दी , Nepali , Gujarati , Odia , Tamil , Malayalam