ಪ್ರಧಾನ ಮಂತ್ರಿಯವರ ಕಛೇರಿ
ಛತ್ತೀಸ್ ಗಢ ಭೇಟಿಯ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
Posted On:
01 NOV 2025 9:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ತಮ್ಮ ಭೇಟಿಯ ಕೆಲವು ನೋಟಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳಲ್ಲಿ, ಪ್ರಧಾನಮಂತ್ರಿಯವರು ನಯಾ ರಾಯ್ಪುರ ಅಟಲ್ ನಗರದಲ್ಲಿ ತಮ್ಮ ರೋಡ್ ಶೋ ಸಂದರ್ಭದಲ್ಲಿ ಜನರು ತೋರಿಸಿದ ಆತ್ಮೀಯತೆ ಮತ್ತು ಉತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ಹೀಗೆ ಹೇಳಿದ್ದಾರೆ:
"ಛತ್ತೀಸ್ ಗಢದ ನವಾ ರಾಯ್ಪುರ ಅಟಲ್ ನಗರದಲ್ಲಿ ನಡೆದ ರೋಡ್ ಶೋನಲ್ಲಿ ನನ್ನ ಕುಟುಂಬ ಸದಸ್ಯರು ನನ್ನನ್ನು ಅತ್ಯುತ್ಸಾಹ ಮತ್ತು ಸಾಂಸ್ಕೃತಿಕ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದುದು ಅದ್ಭುತವಾಗಿತ್ತು."
ಛತ್ತೀಸ್ ಗಢದ ನಯಾ ರಾಯ್ಪುರ ಅಟಲ್ ನಗರದಲ್ಲಿ ನೂತನ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸುವ ಸೌಭಾಗ್ಯ ತಮಗೆ ದೊರೆಯಿತು ಎಂದು ಶ್ರೀ ಮೋದಿ ಅವರು ಸಂತಸ ಹಂಚಿಕೊಂಡಿದ್ದಾರೆ. ಹಸಿರು ಕಟ್ಟಡದ ಪರಿಕಲ್ಪನೆಯ ಮೇಲೆ ನಿರ್ಮಿಸಲಾದ ಈ ಹೊಸ ಸಂಕೀರ್ಣವು ಸೌರಶಕ್ತಿಯೊಂದಿಗೆ ಕಾರ್ಯನಿರ್ವಹಿಸುವುದಲ್ಲದೆ, ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಹೊಂದಿದೆ. ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“‘विकसित छत्तीसगढ़’ की यात्रा को और रफ्तार देने के लिए नवा रायपुर अटल नगर में निर्मित छत्तीसगढ़ विधानसभा के नए भवन के उद्घाटन का सौभाग्य मिला। ग्रीन बिल्डिंग की अवधारणा से बना यह भवन ना सिर्फ सौर ऊर्जा से संचालित होगा, बल्कि वर्षा जल को भी सहेजेगा।”
ಪ್ರಧಾನಮಂತ್ರಿಯವರು ನಯಾ ರಾಯ್ಪುರ್ ಅಟಲ್ ನಗರದಲ್ಲಿ ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಪ್ರತಿಮೆಯು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರಲಿದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ, ಅವರು ಒಂದು ಸಸಿ ತಾಯಿಯ ಹೆಸರಿನಲ್ಲಿ ('ಏಕ್ ಪೆಡ್ ಮಾ ಕೆ ನಾಮ್') ಅಭಿಯಾನದಲ್ಲಿಯೂ ಭಾಗಿಯಾದರು. ಶ್ರೀ ಮೋದಿ ಅವರು ನುಡಿಗಳು ಹೀಗಿವೆ:
“छत्तीसगढ़ में आज पूर्व प्रधानमंत्री भारत रत्न अटल बिहारी वाजपेयी जी की प्रतिमा के अनावरण का सुअवसर मिला। यहां के नवा रायपुर अटल नगर में उनकी यह प्रतिमा हर पीढ़ी को प्रेरित करती रहेगी। इस दौरान ‘एक पेड़ मां के नाम’ अभियान में पौधारोपण भी किया।”
ನಯಾ ರಾಯ್ಪುರದ ಶ್ರೀ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಯಲ್ಲಿ ನಡೆದ ಸಂವಾದ ಅತ್ಯಂತ ವಿಶೇಷವಾಗಿತ್ತು ಮತ್ತು ಹೃದಯಸ್ಪರ್ಶಿಯಾಗಿತ್ತು ಎಂದು ಪ್ರಧಾನಮಂತ್ರಿ ಹಂಚಿಕೊಂಡಿದ್ದಾರೆ. ಜನ್ಮಜಾತ ಹೃದಯ ಕಾಯಿಲೆಗಳನ್ನು ಯಶಸ್ವಿಯಾಗಿ ಜಯಿಸಿದ ಮಕ್ಕಳನ್ನು ಭೇಟಿ ಮಾಡುವ ಅವಕಾಶ ತಮಗೆ ದೊರೆಯಿತು ಹಾಗೂ ಆ ಮಕ್ಕಳ ಉತ್ಸಾಹ ಮತ್ತು ಸಕಾರಾತ್ಮಕತೆಯು ತಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿತು ಎಂದು ಅವರು ಹೇಳಿದ್ದಾರೆ. ಪ್ರಧಾನಿಯವರ ಮಾತುಗಳು ಹೀಗಿವೆ:
“छत्तीसगढ़ के नवा रायपुर अटल नगर में आज का संवाद बहुत विशेष और दिल को छू लेने वाला रहा। श्री सत्य साईं संजीवनी अस्पताल में उन बहादुर बच्चों से बातचीत करने का सौभाग्य मिला, जो जन्मजात हृदय रोगों को मात दे चुके हैं। उत्साह और उमंग से भरी इनकी बातों ने एक नई ऊर्जा से भर दिया।”
ಹೊಸ ವಿಧಾನಸಭಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಶ್ರೀ ಮೋದಿ ಅವರು, ಇದು ಛತ್ತೀಸ್ ಗಢದ 25ನೇ ಸಂಸ್ಥಾಪನಾ ದಿನಾಚರಣೆಯ ಉತ್ಸಾಹಕ್ಕೆ ಇಂಬು ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
“छत्तीसगढ़ के नए विधानसभा भवन के उद्घाटन समारोह में भारी संख्या में आए मेरे परिवारजनों की खुशी ने राज्य की 25वीं वर्षगांठ की रौनक को और बढ़ा दिया।”
ನಯಾ ರಾಯ್ಪುರ ಅಟಲ್ ನಗರದಲ್ಲಿ 'ಶಾಂತಿ ಶಿಖರ್' ಎಂಬ ಬ್ರಹ್ಮ ಕುಮಾರಿ ಧ್ಯಾನ ಕೇಂದ್ರದ ಉದ್ಘಾಟನೆಯ ಬಗ್ಗೆಯೂ ಪ್ರಧಾನಮಂತ್ರಿ ಪ್ರಸ್ತಾಪಿಸಿದ್ದಾರೆ. ಈ ಕೇಂದ್ರದ ಭವ್ಯತೆಯು ಆಧುನಿಕತೆ ಮತ್ತು ಆಧ್ಯಾತ್ಮಿಕತೆ ಎರಡನ್ನೂ ಪ್ರತಿಬಿಂಬಿಸುತ್ತದೆ ಎಂದು ಹೇಳಿರುವ ಅವರು, ಇದು ಧ್ಯಾನ, ಆತ್ಮ ಸಾಕ್ಷಾತ್ಕಾರ ಮತ್ತು ವಿಶ್ವ ಶಾಂತಿಗೆ ಮಹತ್ವದ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
“नवा रायपुर अटल नगर में ब्रह्माकुमारी मेडिटेशन सेंटर 'शांति शिखर' के शुभारंभ का सौभाग्य मिला। इस केंद्र की भव्यता इसके आधुनिक और आध्यात्मिक स्वरूप में झलकती है। इस आध्यात्मिक आंदोलन को हमने वटवृक्ष के रूप में विस्तार लेते हुए देखा है। मुझे विश्वास है कि यह दिव्य संस्थान साधना, आत्मज्ञान और विश्व शांति का एक प्रमुख केंद्र बनेगा।”
*****
(Release ID: 2185630)
Visitor Counter : 6
Read this release in:
Telugu
,
Malayalam
,
English
,
Urdu
,
Marathi
,
हिन्दी
,
Assamese
,
Bengali
,
Punjabi
,
Gujarati
,
Odia