ಚುನಾವಣಾ ಆಯೋಗ
azadi ka amrit mahotsav

ನಾಗರಿಕರು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳು /ಸಮಸ್ಯೆಗಳು/ ಕುಂದುಕೊರತೆಗಳನ್ನು ಪರಿಹರಿಸಲು ಮತದಾರರ ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡಬಹುದು ಮತ್ತು ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಗಳ ಜೊತೆಗೆ ಕರೆ ಮಾಡಿ ಸೌಲಭ್ಯಗಳನ್ನು ಪಡೆಯಬಹುದು ಮತ್ತು ಸೌಕರ್ಯಗಳನ್ನು ಬಳಸಬಹುದು

Posted On: 29 OCT 2025 4:58PM by PIB Bengaluru
  1. ನಾಗರಿಕರ ಎಲ್ಲಾ ಪ್ರಶ್ನೆಗಳು/ಸಮಸ್ಯೆಗಳು /ಕುಂದುಕೊರತೆಗಳನ್ನು ಪರಿಹರಿಸುವ ಗುರಿಯೊಂದಿಗೆ ಭಾರತದ ಚುನಾವಣಾ ಆಯೋಗ (ಇಸಿಐ) ರಾಷ್ಟ್ರೀಯ ಮತದಾರರ ಸಹಾಯವಾಣಿ ಮತ್ತು ಎಲ್ಲಾ 36 ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಹಾಯವಾಣಿಗಳನ್ನು ಸಕ್ರಿಯಗೊಳಿಸಿದೆ.
  2. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸಹಾಯವಾಣಿಯಾಗಿ ರಾಷ್ಟ್ರೀಯ ಸಂಪರ್ಕ ಕೇಂದ್ರ (ಎನ್.ಸಿ.ಸಿ) ಕಾರ್ಯನಿರ್ವಹಿಸುತ್ತದೆ. ಇದು ಪ್ರತಿದಿನ ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ನಿಶುಲ್ಕ(ಟೋಲ್-ಫ್ರೀ) ಕರೆ ಸಂಖ್ಯೆ 1800-11-1950 ಮೂಲಕ ಕಾರ್ಯನಿರ್ವಹಿಸುತ್ತದೆ. ಚುನಾವಣಾ ಸೇವೆಗಳು, ಮತದಾನದ ಸಮಸ್ಯೆಗಳು, ಕುಂದುಕೊರತೆಗಳು ಮತ್ತು ಪ್ರಶ್ನೆಗಳೊಂದಿಗೆ ಸಂಪರ್ಕಿಸುವ ನಾಗರಿಕರು ಮತ್ತು ಇತರ ಪಾಲುದಾರರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುವ ನಿಟ್ಟಿನಲ್ಲಿ ತರಬೇತಿ ಪಡೆದ ಕಾರ್ಯನಿರ್ವಾಹಕರು ಸಾರ್ವಜನಿಕರ ಕರೆಗಳನ್ನು ನಿರ್ವಹಿಸುತ್ತಾರೆ.
  3. ಸಕಾಲಿಕ ಮತ್ತು ಸ್ಥಳೀಯ ಪ್ರತಿಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು ಕ್ರಮವಾಗಿ ತನ್ನದೇ ಆದ ರಾಜ್ಯ ಸಂಪರ್ಕ ಕೇಂದ್ರ (ಎಸ್.ಸಿ.ಸಿ) ಮತ್ತು ಜಿಲ್ಲಾ ಸಂಪರ್ಕ ಕೇಂದ್ರ (ಡಿ.ಸಿ.ಸಿ.) ಗಳನ್ನು ಸ್ಥಾಪಿಸಲು ಭಾರತದ ಚುನಾವಣಾ ಆಯೋಗ (ಇಸಿಐ) ಪ್ರತಿ ರಾಜ್ಯ/ಕೇಂದ್ರಾಡಳಿತ ಮತ್ತು ಜಿಲ್ಲೆಗೆ ಸೂಚನೆಗಳನ್ನು ನೀಡಿದೆ. ಈ ಕೇಂದ್ರಗಳು ವರ್ಷವಿಡೀ ಎಲ್ಲಾ ಕೆಲಸದ ದಿನಗಳ ಕಚೇರಿ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ, ಹಾಗೂ ಸ್ಥಳೀಯರಿಗೆ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪ್ರಾದೇಶಿಕ / ಸ್ಥಳೀಯ ಭಾಷೆಗಳಲ್ಲಿ ಸಹಾಯವನ್ನು ಒದಗಿಸುತ್ತವೆ.
  4. ಎಲ್ಲಾ ದೂರುಗಳು, ಸಮಸ್ಯೆಗಳು, ಕುಂದುಕೊರತೆಗಳು  ಮತ್ತು ಪ್ರಶ್ನೆಗಳನ್ನು ರಾಷ್ಟ್ರೀಯ ಕುಂದುಕೊರತೆ ಸೇವಾ ಪೋರ್ಟಲ್ (ಎನ್.ಜಿ.ಎಸ್.ಪಿ. 2.0) ಮೂಲಕ ದಾಖಲಿಸಲಾಗುತ್ತದೆ ಮತ್ತು ಗಮನಿಸಲಾಗುವುದು (ಟ್ರ್ಯಾಕ್ ) ಮಾಡಲಾಗುತ್ತದೆ.
  5. ಇದಲ್ಲದೆ, ಭಾರತದ ಚುನಾವಣಾ ಆಯೋಗ (ಇಸಿಐ) ಇದರ ಬೂತ್ ಅಧಿಕಾರಿಗಳ ಜೊತೆಗೆ ಕರೆ/ಸಂಪರ್ಕ (  ಬಿಒ ವಿತ್ ಬುಕ್-ಎ-ಕಾಲ್' ) ಸೌಲಭ್ಯವನ್ನು ಸಹ ಪ್ರಾರಂಭಿಸಿದೆ, ಇದನ್ನು ಬಳಸಿಕೊಂಡು ನಾಗರಿಕರು ಇ.ಸಿ.ಐ.ನೆಟ್ ವೇದಿಕೆಯಲ್ಲಿ ಲಭ್ಯವಿರುವ ವಿವಿಧ ವೈಶಿಷ್ಟ್ಯ ಸೇವಾ ಸೌಲಭ್ಯಗಳ  ಮೂಲಕ ತಮ್ಮ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಗಳನ್ನು ನೇರವಾಗಿ ಸಂಪರ್ಕಿಸಬಹುದು.
  6. ಇಸಿಐನೆಟ್ ಅಪ್ಲಿಕೇಶನ್ ಬಳಸಿಕೊಂಡು ನಾಗರಿಕರು ಚುನಾವಣಾ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಬಹುದು. ಎಲ್ಲಾ ಸಿಇಒಗಳು, ಡಿಇಒಗಳು, ಇಆರ್ೊಗಳು ನಿಯಮಿತವಾಗಿ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಬಳಕೆದಾರರ ವಿನಂತಿಗಳನ್ನು 48 ಗಂಟೆಗಳ ಒಳಗೆ ತ್ವರಿತ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳಲು ಭಾರತದ ಚುನಾವಣಾ ಆಯೋಗ (ಇಸಿಐ) ನಿರ್ದೇಶಿಸಿದೆ.
  7. ಚುನಾವಣೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಜೊತೆಗೆ ನೂತನವಾಗಿ ಈ ಸೌಲಭ್ಯಗಳು ಸೇರಿವೆ. ನಾಗರಿಕರು complaints@eci.gov.in ಗೆ ಇಮೇಲ್ ಮಾಡಿ ತಮ್ಮ ಸಂಬಂಧಿಸಿದ ಕುಂದುಕೊರತೆಗಳ ಮಾಹಿತಿಯನ್ನು ಕಳುಹಿಸಬಹುದು
  8. ಎಲ್ಲಾ ಮತದಾರರು ತಮ್ಮ ಕಾಳಜಿಗಳ ತ್ವರಿತ ಮತ್ತು ಪಾರದರ್ಶಕ ಪರಿಹಾರಕ್ಕಾಗಿ 'ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಗಳ ಜೊತೆಗೆ ಕರೆ ಮಾಡಿ/ ಸಮಯ ಮೀಸಲಿಟ್ಟು ಭೇಟಿ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು  ಮತ್ತು ಮೀಸಲಾದ ಮತದಾರರ ಸಹಾಯವಾಣಿ ಸಂಖ್ಯೆ - 1950 ಸೌಲಭ್ಯಗಳನ್ನು ಬಳಸಲು ಚುನಾವಣಾ ಆಯೋಗವು ಈ ಮೂಲಕ ಕೋರುತ್ತದೆ ಹಾಗೂ ಮತದಾರರನ್ನು ಪ್ರೋತ್ಸಾಹಿಸುತ್ತದೆ.

 

*****


(Release ID: 2184419) Visitor Counter : 3