ಇಂಧನ ಸಚಿವಾಲಯ 
                
                
                
                
                
                    
                    
                        ಇಂಧನ ವಲಯದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲಿನ ಸಾಧನೆ: 500 ಗಿಗಾವ್ಯಾಟ್ ಗೂ ಹೆಚ್ಚಿನ ಮತ್ತು ಬೇಡಿಕೆಯ ಶೇಕಡ 50 ಮೀರಿದ ನವೀಕರಿಸಬಹುದಾದ ಇಂಧನ ಉತ್ಪಾದನೆ
                    
                    
                        
                    
                
                
                    Posted On:
                29 OCT 2025 5:46PM by PIB Bengaluru
                
                
                
                
                
                
                ಶುದ್ಧ, ಸುಭದ್ರ ಮತ್ತು ಸ್ವಾವಲಂಬಿ ಇಂಧನ ಭವಿಷ್ಯದ ಕಡೆಗೆ ರಾಷ್ಟ್ರದ ಸ್ಥಿರ ಪ್ರಗತಿಯನ್ನು ತೋರಿಸುವ ಎರಡು ಐತಿಹಾಸಿಕ ಮೈಲಿಗಲ್ಲುಗಳನ್ನು ಭಾರತದ ಇಂಧನ ವಲಯ ಸಾಧಿಸಿದೆ. 
2025ರ ಸೆಪ್ಟೆಂಬರ್ 30ರ ವೇಳೆಗೆ ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವು 500 ಗಿಗಾ ವ್ಯಾಟ್ ಅನ್ನು ದಾಟಿ, 500.89 GW ತಲುಪಿದೆ. ಇಂಧನ ವಲಯದಾದ್ಯಂತದ ಬಲವಾದ ನೀತಿ ಬೆಂಬಲ, ಹೂಡಿಕೆ ಮತ್ತು ತಂಡದ ಕೆಲಸವನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ.

ಭಾರತದ ವಿದ್ಯುತ್ ಸಾಮರ್ಥ್ಯದ ಬಗ್ಗೆ ವಿವರಗಳು
• ಪಳೆಯುಳಿಕೆಯೇತರ ಇಂಧನ ಮೂಲಗಳು (ನವೀಕರಿಸಬಹುದಾದ ಇಂಧನ, ಜಲ ಮತ್ತು ಪರಮಾಣು): 256.09 ಗಿಗಾ ವ್ಯಾಟ್ - ಒಟ್ಟು ಉತ್ಪಾದನೆಯ ಶೇ. 51 ಕ್ಕಿಂತ ಹೆಚ್ಚು
• ಪಳೆಯುಳಿಕೆ-ಇಂಧನ ಆಧಾರಿತ ಮೂಲಗಳು: 244.80 GW – ಒಟ್ಟು ಉತ್ಪಾದನೆಯ ಶೇ. 49 ರಷ್ಟು
• ನವೀಕರಿಸಬಹುದಾದ ಇಂಧನದ ಪೈಕಿ
• ಸೌರ ಶಕ್ತಿ – 127.33 ಗಿಗಾ ವ್ಯಾಟ್
• ಪವನ ಶಕ್ತಿ – 53.12 ಗಿಗಾ ವ್ಯಾಟ್
 
ಹಣಕಾಸು ವರ್ಷ 2025–26ರಲ್ಲಿ (ಏಪ್ರಿಲ್ – ಸೆಪ್ಟೆಂಬರ್ 2025), ಭಾರತದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 28 ಗಿಗಾ ವ್ಯಾಟ್ ನಷ್ಟು ಮತ್ತು ಪಳೆಯುಳಿಕೆ-ಇಂಧನ ಸಾಮರ್ಥ್ಯ 5.1 ಗಿಗಾ ವ್ಯಾಟ್ ನಷ್ಟು ಹೆಚ್ಚಾಗಿದ್ದು - ಇದು ಶುದ್ಧ ಇಂಧನದ ಪಾಲು ಹೇಗೆ ವೇಗವಾಗಿ ಏರುತ್ತಿದೆ ಎಂಬುದನ್ನು ತೋರಿಸಿದೆ.
 
ನವೀಕರಿಸಬಹುದಾದ ಇಂಧನ ವಲಯಕ್ಕೆ ದಾಖಲೆಯ ದಿನ
ಭಾರತವು 2025ರ ಜುಲೈ 29 ರಂದು ವಿದ್ಯುತ್ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನ ಪ್ರಮಾಣದ ಅತ್ಯಧಿಕ ಮಟ್ಟವನ್ನು ತಲುಪಿತು.
ಆ ದಿನದಂದು, ನವೀಕರಿಸಬಹುದಾದ ಇಂಧನ ಪ್ರಮಾಣವು ದೇಶದ ಒಟ್ಟು ಇಂಧನ ಬೇಡಿಕೆಯಾದ 203 ಗಿಗಾ ವ್ಯಾಟ್ ನ ಶೇಕಡ 51.5 ರಷ್ಟಿತ್ತು.
• ಸೌರ ಶಕ್ತಿ ಉತ್ಪಾದನೆ: 44.50 ಗಿಗಾ ವ್ಯಾಟ್
• ಪವನ ಶಕ್ತಿ ಉತ್ಪಾದನೆ : 29.89 ಗಿಗಾ ವ್ಯಾಟ್
• ಜಲವಿದ್ಯುತ್ ಉತ್ಪಾದನೆ: 30.29 ಗಿಗಾ ವ್ಯಾಟ್
 
ಅಂದರೆ, ಮೊದಲ ಬಾರಿಗೆ, ಭಾರತದ ಬೇಡಿಕೆಯ ಅರ್ಧಕ್ಕಿಂತ ಹೆಚ್ಚಿನ ವಿದ್ಯುತ್ ಪ್ರಮಾಣ ಒಂದೇ ದಿನದಲ್ಲಿ ಪರಿಸರ ಸ್ನೇಹಿ ಮೂಲಗಳಿಂದ ದೊರೆತಿದೆ - ಇದು ಬದಲಾವಣೆಯ ಗಮನಾರ್ಹ ಸಂಕೇತ.
ನಿಗದಿತ ಗುರಿ ಅವಧಿಗೂ ಮುನ್ನವೇ ರಾಷ್ಟ್ರೀಯ ಗುರಿಗಳ ಸಾಧನೆ
ಈ ಪ್ರಗತಿಯೊಂದಿಗೆ, ಪ್ರಮುಖ COP26 ಪಂಚಾಮೃತ ಗುರಿಗಳಲ್ಲಿ ಒಂದಾದ 2030ರ ವೇಳೆಗೆ ಶೇಕಡ 50 ರಷ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಹೊಂದಬೇಕು ಎಂಬ ಗುರಿಯನ್ನು ಭಾರತವು ಐದು ವರ್ಷ ಮುಂಚಿತವಾಗಿ ಅಂದರೆ ಈಗಾಗಲೇ ಸಾಧಿಸಿದೆ. 
ಈ ಯಶಸ್ಸು, ವಿದ್ಯುತ್ ಗ್ರಿಡ್ ಅನ್ನು ಸ್ಥಿರ ಮತ್ತು ವಿಶ್ವಾಸಾರ್ಹವಾಗಿಟ್ಟುಕೊಂಡು ಸಾಧಿಸಿದ ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತದ ನಾಯಕತ್ವವನ್ನು ಒತ್ತಿ ಹೇಳುತ್ತದೆ.
ಸಾಧನೆಯ ಮಹತ್ವ
ಭಾರತದ ನವೀಕರಿಸಬಹುದಾದ ಇಂಧನ ಉತ್ತೇಜನವು ಉತ್ಪಾದನೆ, ಸ್ಥಾಪನೆ, ನಿರ್ವಹಣೆ ಮತ್ತು ನಾವಿನ್ಯತೆಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದು, ಗ್ರಾಮೀಣ ಮತ್ತು ನಗರ ಯುವಜನರಿಗೆ ಅನುಕೂಲ ನೀಡಿದೆ.
ಸಂಘಟಿತ ಪ್ರಯತ್ನ
ಈ ಸಾಧನೆಯಲ್ಲಿನ ಪಾತ್ರಕ್ಕಾಗಿ ಎಲ್ಲಾ ವಿದ್ಯುತ್ ಉತ್ಪಾದನಾ ಕಂಪನಿಗಳು, ಪ್ರಸರಣ ಸೌಲಭ್ಯಗಳು, ಸಿಸ್ಟಮ್ ಆಪರೇಟರ್ ಗಳು ಮತ್ತು ರಾಜ್ಯ ಸಂಸ್ಥೆಗಳನ್ನು ಇಂಧನ ಸಚಿವಾಲಯ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಅಭಿನಂದಿಸಿವೆ.
 
*****
                
                
                
                
                
                (Release ID: 2184007)
                Visitor Counter : 19