ಪ್ರಧಾನ ಮಂತ್ರಿಯವರ ಕಛೇರಿ
ಅಕ್ಟೋಬರ್ 31 ರಂದು ನವದೆಹಲಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಆರ್ಯನ್ ಶೃಂಗಸಭೆ 2025ರಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಮತ್ತು ಸಮಾಜಕ್ಕೆ ಆರ್ಯ ಸಮಾಜದ 150 ವರ್ಷಗಳ ಸೇವೆಯ ಸ್ಮರಣಾರ್ಥ ಜ್ಞಾನ ಜ್ಯೋತಿ ಉತ್ಸವದ ಭಾಗವಾಗಿದೆ
ಭಾರತ ಮತ್ತು ವಿದೇಶಗಳಾದ್ಯಂತ ಆರ್ಯ ಸಮಾಜ ಘಟಕಗಳ ಪ್ರತಿನಿಧಿಗಳ ಭಾಗವಹಿಸುವಿಕೆಗೆ ಶೃಂಗಸಭೆ ಸಾಕ್ಷಿಯಾಗಲಿದೆ
Posted On:
29 OCT 2025 10:57AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಮಧ್ಯಾಹ್ನ 2:45ರ ಸುಮಾರಿಗೆ ನವದೆಹಲಿಯ ರೋಹಿಣಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಆರ್ಯನ್ ಶೃಂಗಸಭೆ 2025ರಲ್ಲಿ ಭಾಗವಹಿಸಲಿದ್ದಾರೆ. ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಮತ್ತು ಸಮಾಜಕ್ಕೆ ಆರ್ಯ ಸಮಾಜದ 150 ವರ್ಷಗಳ ಸೇವೆಯ ಸ್ಮರಣಾರ್ಥ ಈ ಕಾರ್ಯಕ್ರಮವು ಜ್ಯಾನ ಜ್ಯೋತಿ ಉತ್ಸವದ ಪ್ರಮುಖ ಭಾಗವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಶೃಂಗಸಭೆಯು ಭಾರತ ಮತ್ತು ವಿದೇಶಗಳಾದ್ಯಂತದ ಆರ್ಯ ಸಮಾಜ ಘಟಕಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ. ಇದು ಮಹರ್ಷಿ ದಯಾನಂದರ ಸುಧಾರಣಾವಾದಿ ಆದರ್ಶಗಳ ಸಾರ್ವತ್ರಿಕ ಪ್ರಸ್ತುತತೆ ಮತ್ತು ಸಂಸ್ಥೆಯ ಜಾಗತಿಕ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ಶಿಕ್ಷಣ, ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಉನ್ನತಿಯಲ್ಲಿ ಆರ್ಯ ಸಮಾಜದ ಕೊಡುಗೆಗಳ ಮೂಲಕ ಆರ್ಯ ಸಮಾಜದ ಪರಿವರ್ತನಾತ್ಮಕ ಪ್ರಯಾಣವನ್ನು ಪ್ರದರ್ಶಿಸುವ "150 ಸುವರ್ಣ ವರ್ಷಗಳ ಸೇವೆ" ಎಂಬ ಶೀರ್ಷಿಕೆಯ ಪ್ರದರ್ಶನವನ್ನು ಸಹ ಒಳಗೊಂಡಿರುತ್ತದೆ.
ಮಹರ್ಷಿ ದಯಾನಂದ ಸರಸ್ವತಿ ಅವರ ಸುಧಾರಣಾವಾದಿ ಮತ್ತು ಶೈಕ್ಷಣಿಕ ಪರಂಪರೆಯನ್ನು ಗೌರವಿಸುವುದು, ಶಿಕ್ಷಣ, ಸಾಮಾಜಿಕ ಸುಧಾರಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಆರ್ಯ ಸಮಾಜದ 150 ವರ್ಷಗಳ ಸೇವೆಯನ್ನು ಆಚರಿಸುವುದು ಮತ್ತು ವಿಕಸಿತ ಭಾರತ 2047ಕ್ಕೆ ಅನುಗುಣವಾಗಿ ವೈದಿಕ ತತ್ವಗಳು ಮತ್ತು ಸ್ವದೇಶಿ ಮೌಲ್ಯಗಳ ಜಾಗತಿಕ ಜಾಗೃತಿಯನ್ನು ಪ್ರೇರೇಪಿಸುವ ಗುರಿಯನ್ನು ಈ ಶೃಂಗಸಭೆ ಹೊಂದಿದೆ.
****
(Release ID: 2183642)
Visitor Counter : 11
Read this release in:
Bengali
,
Assamese
,
Odia
,
English
,
Urdu
,
Marathi
,
हिन्दी
,
Manipuri
,
Punjabi
,
Gujarati
,
Tamil
,
Telugu
,
Malayalam