ಪ್ರಧಾನ ಮಂತ್ರಿಯವರ ಕಛೇರಿ
ಕ್ವಾಲಾಲಂಪುರದಲ್ಲಿ ನಡೆದ 22ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದರು
Posted On:
26 OCT 2025 9:31PM by PIB Bengaluru
22ನೇ ಆಸಿಯಾನ್ ಭಾರತ ಶೃಂಗಸಭೆಯು ಅಕ್ಟೋಬರ್ 26, 2025 ರಂದು ನಡೆಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದರು. ಪ್ರಧಾನಮಂತ್ರಿ ಮತ್ತು ಆಸಿಯಾನ್ ನಾಯಕರು ಜಂಟಿಯಾಗಿ ಆಸಿಯಾನ್-ಭಾರತ ಸಂಬಂಧಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು ಹಾಗು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಉಪಕ್ರಮಗಳ ಕುರಿತು ಚರ್ಚೆ ನಡೆಸಿದರು. ಇದು ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ 12ನೇ ಬಾರಿಗೆ ಭಾಗವಹಿಸಿರುವುದಾಗಿದೆ.
ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಆಸಿಯಾನ್ ನ 11ನೇ ಸದಸ್ಯ ರಾಷ್ಟ್ರವಾಗಿ ಟಿಮೋರ್ ಲೆಸ್ಟೆ ಸೇರ್ಪಡೆಗೊಂಡಿದ್ದಕ್ಕಾಗಿ ಅಭಿನಂದಿಸಿದರು ಮತ್ತು ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪೂರ್ಣ ಸದಸ್ಯ ರಾಷ್ಟ್ರವಾಗಿ ಅದರ ನಿಯೋಗವನ್ನು ಸ್ವಾಗತಿಸಿದರು ಮತ್ತು ಅದರ ಮಾನವ ಅಭಿವೃದ್ಧಿಗೆ ಭಾರತದ ನಿರಂತರ ಬೆಂಬಲವನ್ನು ತಿಳಿಸಿದರು.
ಆಸಿಯಾನ್ ಏಕತೆ, ಆಸಿಯಾನ್ ಪ್ರಾಮುಖ್ಯತೆ ಮತ್ತು ಇಂಡೋ-ಪೆಸಿಫಿಕ್ನಲ್ಲಿ ಆಸಿಯಾನ್ ದೃಷ್ಟಿಕೋನಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, ಆಸಿಯಾನ್ ಸಮುದಾಯ ದೃಷ್ಟಿ 2045 ಅನ್ನು ಅಳವಡಿಸಿಕೊಂಡಿದ್ದಕ್ಕಾಗಿ ಆಸಿಯಾನ್ ಅನ್ನು ಶ್ಲಾಘಿಸಿದರು.
ಆಸಿಯಾನ್-ಭಾರತ ಎಫ್.ಟಿ.ಎ (ಎ.ಐ.ಟಿ.ಐ.ಜಿ.ಎ)ನ ಆರಂಭಿಕ ಪರಿಶೀಲನೆಯು ನಮ್ಮ ಜನರ ಪ್ರಯೋಜನಕ್ಕಾಗಿ ನಮ್ಮ ಸಂಬಂಧದ ಸಂಪೂರ್ಣ ಆರ್ಥಿಕ ಸಾಮರ್ಥ್ಯವನ್ನು ಮತ್ತು ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.
ಭಯೋತ್ಪಾದನೆ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಗಂಭೀರ ಸವಾಲನ್ನು ಒಡ್ಡುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು.
ಮಲೇಷಿಯಾದ ಅಧ್ಯಕ್ಷರ "ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ" ಎಂಬ ಧ್ಯೇಯವಾಕ್ಯವನ್ನು ಬೆಂಬಲಿಸಿ, ಪ್ರಧಾನಮಂತ್ರಿ ಅವರು ಇವುಗಳನ್ನು ಘೋಷಿಸಿದರು:
• ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ (2026-2030) ಅನ್ನು ಕಾರ್ಯಗತಗೊಳಿಸಲು ಆಸಿಯಾನ್-ಭಾರತ ಕ್ರಿಯಾ ಯೋಜನೆಯ ಅನುಷ್ಠಾನಕ್ಕೆ ವಿಸ್ತೃತ ಬೆಂಬಲ
• ನಾವು ಆಸಿಯಾನ್-ಭಾರತ ಪ್ರವಾಸೋದ್ಯಮ ವರ್ಷವನ್ನು ಆಚರಿಸುತ್ತಿರುವಾಗ ಪ್ರವಾಸೋದ್ಯಮ ಸಹಕಾರವನ್ನು ಬಲಪಡಿಸಲು ಆಸಿಯಾನ್-ಭಾರತ ಜಂಟಿ ನಾಯಕರ ಸುಸ್ಥಿರ ಪ್ರವಾಸೋದ್ಯಮದ ಹೇಳಿಕೆಯನ್ನು ಅಳವಡಿಸಿಕೊಳ್ಳುವುದು
• ನೀಲಿ ಆರ್ಥಿಕತೆಯಲ್ಲಿ ಪಾಲುದಾರಿಕೆಗಳನ್ನು ರೂಪಿಸಲು 2026 ಅನ್ನು "ಆಸಿಯಾನ್-ಭಾರತ ಕಡಲ ಸಹಕಾರ ವರ್ಷ" ಎಂದು ಹೆಸರಿಸುವುದು
• ಸುರಕ್ಷಿತ ಕಡಲ ಪರಿಸರಕ್ಕಾಗಿ ಎರಡನೇ ಆಸಿಯಾನ್-ಭಾರತ ರಕ್ಷಣಾ ಮಂತ್ರಿಗಳ ಸಭೆ ಮತ್ತು ಎರಡನೇ ಆಸಿಯಾನ್-ಭಾರತ ಕಡಲ ಸಮರಾಭ್ಯಾಸವನ್ನು ಆಯೋಜಿಸಲು ಪ್ರಸ್ತಾಪಿಸುವುದು
• ನೆರೆಹೊರೆಯಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಮೊದಲ ಪ್ರತಿಸ್ಪಂದಕನಾಗಿ ತನ್ನ ಪಾತ್ರವನ್ನು ಮುಂದುವರಿಸುತ್ತದೆ ಮತ್ತು ವಿಪತ್ತು ಸನ್ನದ್ಧತೆ ಮತ್ತು ಎಚ್.ಎ.ಡಿ.ಆರ್ ನಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ
• ಆಸಿಯಾನ್ ಪವರ್ ಗ್ರಿಡ್ ಉಪಕ್ರಮವನ್ನು ಬೆಂಬಲಿಸಲು ನವೀಕರಿಸಬಹುದಾದ ಇಂಧನದಲ್ಲಿ 400 ವೃತ್ತಿಪರರಿಗೆ ತರಬೇತಿ
•ಟಿಮೋರ್ ಲೆಸ್ಟೆ ಗೆ ತ್ವರಿತ ಪರಿಣಾಮ ಯೋಜನೆಗಳನ್ನು (ಕ್ಯೂ.ಐ.ಪಿ ಗಳು) ವಿಸ್ತರಿಸುವುದು.
• ಪ್ರಾದೇಶಿಕ ಪರಿಣತಿಯನ್ನು ಅಭಿವೃದ್ಧಿಪಡಿಸಲು ನಳಂದ ವಿಶ್ವವಿದ್ಯಾಲಯದಲ್ಲಿ ಆಗ್ನೇಯ ಏಷ್ಯಾ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆ
• ಶಿಕ್ಷಣ, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಫಿನ್ ಟೆಕ್ ಮತ್ತು ಸಾಂಸ್ಕೃತಿಕ ಸಂರಕ್ಷಣೆಯಲ್ಲಿ ನಡೆಯುತ್ತಿರುವ ಸಹಕಾರವನ್ನು ಬೆಂಬಲಿಸುವುದು ಮತ್ತು ಮೂಲಸೌಕರ್ಯ, ಅರೆವಾಹಕ (ಸೆಮಿ ಕಂಡಕ್ಟರ್), ಉದಯೋನ್ಮುಖ ತಂತ್ರಜ್ಞಾನಗಳು, ವಿರಳ ಲೋಹ ಮತ್ತು ನಿರ್ಣಾಯಕ ಖನಿಜಗಳಲ್ಲಿ ಹೆಚ್ಚುತ್ತಿರುವ ಸಹಕಾರದ ಅಗತ್ಯವನ್ನು ಒತ್ತಿಹೇಳುವುದು
• ಗುಜರಾತಿನ ಲೋಥಾಲ್ ನಲ್ಲಿ ಪೂರ್ವ ಏಷ್ಯಾ ಶೃಂಗಸಭೆಯ ಕಡಲ ಪರಂಪರೆ ಉತ್ಸವ ಮತ್ತು ಕಡಲ ಭದ್ರತಾ ಸಹಕಾರದ ಕುರಿತು ಸಮ್ಮೇಳನವನ್ನು ನಡೆಸುವುದು
22ನೇ ಆಸಿಯಾನ್-ಭಾರತ ಶೃಂಗಸಭೆಯನ್ನು ವರ್ಚುವಲ್ ಮೂಲಕ ಆಯೋಜಿಸುವಲ್ಲಿ ಹಾಗು ಸಭೆಗೆ ಅತ್ಯುತ್ತಮ ವ್ಯವಸ್ಥೆಗಳನ್ನು ಒದಗಿಸಿದ್ದಕ್ಕಾಗಿ ಪ್ರಧಾನಮಂತ್ರಿ ಡಾಟೋ'ಸೆರಿ ಅನ್ವರ್ ಇಬ್ರಾಹಿಂ ಅವರಿಗೆ ಗೌರವಾನ್ವಿತ ಪ್ರಧಾನಮಂತ್ರಿ ಅವರು ಕೃತಜ್ಞತೆ ಸಲ್ಲಿಸಿದರು. ದೇಶ-ದೇಶಗಳ ನಡುವಿನ ಪರಿಣಾಮಕಾರಿ ಸಮನ್ವಯಕ್ಕಾಗಿ ಫಿಲಿಪೈನ್ಸ್ ಅಧ್ಯಕ್ಷ ಮಾರ್ಕೋಸ್ ಜೂನಿಯರ್ ಅವರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು. ಆಸಿಯಾನ್ ಗೆ ಭಾರತದ ದೀರ್ಘಕಾಲದ ಬೆಂಬಲ ಮತ್ತು ಅದರ ʻಆಕ್ಟ್ ಈಸ್ಟ್ ನೀತಿಯʼ ಮೂಲಕ ಈ ಪ್ರದೇಶದೊಂದಿಗೆ ಸಂಬಂಧವನ್ನು ಬಲಪಡಿಸುವ ನಿರಂತರ ಬದ್ಧತೆಯನ್ನು ಆಸಿಯಾನ್ ನಾಯಕರು ಶ್ಲಾಘಿಸಿದರು.
*****
(Release ID: 2182796)
Visitor Counter : 8