ಪ್ರಧಾನ ಮಂತ್ರಿಯವರ ಕಛೇರಿ
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪರಂಪರೆಯನ್ನು ಗೌರವಿಸಲು ಅಕ್ಟೋಬರ್ 31 ರಂದು ನಡೆಯುವ ಏಕತಾ ಓಟದಲ್ಲಿ ನಾಗರಿಕರು ಭಾಗವಹಿಸಲು ಪ್ರಧಾನಮಂತ್ರಿ ಮನವಿ
Posted On:
27 OCT 2025 9:15AM by PIB Bengaluru
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಅಕ್ಟೋಬರ್ 31 ರಂದು ನಡೆಯುವ ಏಕತಾ ಓಟದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ದೇಶಾದ್ಯಂತ ನಾಗರಿಕರಿಗೆ ಕರೆ ನೀಡಿದ್ದಾರೆ. ಈ ಕಾರ್ಯಕ್ರಮವು ರಾಷ್ಟ್ರೀಯ ಏಕತಾ ದಿನವನ್ನು ಸೂಚಿಸುತ್ತದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾರತಕ್ಕಾಗಿ ಕಲ್ಪಿಸಿಕೊಂಡ ಏಕತೆ ಮತ್ತು ಒಗ್ಗಟ್ಟಿನ ಶಾಶ್ವತ ಮನೋಭಾವವನ್ನು ಆಚರಿಸುವ ಸಂಕೇತವಾಗಿದೆ.
ಏಕತಾ ದಿವಸ್ ಭಾರತ್ದ ಎಕ್ಸ್ ಖಾತೆಯ ಪೋಸ್ಟ್‌ಗೆ ಶ್ರೀ ಮೋದಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ:
“ಅಕ್ಟೋಬರ್ 31 ರಂದು ನಡೆಯುವ ಏಕತಾ ದಿನದ ಓಟದಲ್ಲಿ ಎಲ್ಲರೂ ಭಾಗವಹಿಸಿ ಒಗ್ಗಟ್ಟಿನ ಮನೋಭಾವವನ್ನು ಆಚರಿಸಿ! ಸರ್ದಾರ್ ಪಟೇಲ್ ಅವರ ಏಕತಾ ಭಾರತದ ದೃಷ್ಟಿಕೋನವನ್ನು ನಾವೆಲ್ಲರೂ ಗೌರವಿಸೋಣ.”
****
(Release ID: 2182759)
Visitor Counter : 5
Read this release in:
Odia
,
English
,
Urdu
,
हिन्दी
,
Marathi
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Tamil
,
Telugu
,
Malayalam