ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಸತೀಶ್ ಶಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ
Posted On:
25 OCT 2025 7:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿರಿಯ ನಟ ಶ್ರೀ ಸತೀಶ್ ಶಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರನ್ನು ಭಾರತೀಯ ಮನರಂಜನೆಯ ನೈಜ ದಂತಕಥೆ ಎಂದು ಬಣ್ಣಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ:
"ಶ್ರೀ ಸತೀಶ್ ಶಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರನ್ನು ಭಾರತೀಯ ಮನರಂಜನೆಯ ನೈಜ ದಂತಕಥೆ ಎಂದು ಸ್ಮರಿಸಲಾಗುತ್ತದೆ. ಅವರ ಅಪ್ರಯತ್ನ ಹಾಸ್ಯ ಮತ್ತು ಅಪ್ರತಿಮ ಪ್ರದರ್ಶನಗಳು ಅಸಂಖ್ಯಾತ ಜನರ ಮೊಗದಲ್ಲಿ ಹಾಗೂ ಜೀವನದಲ್ಲಿ ನಗುವನ್ನು ತಂದಿವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ."
****
(Release ID: 2182537)
Visitor Counter : 5
Read this release in:
Odia
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam