ಪ್ರಧಾನ ಮಂತ್ರಿಯವರ ಕಛೇರಿ
ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐ.ಟಿ.ಬಿ.ಪಿ) ಸಂಸ್ಥಾಪನಾ ದಿನದಂದು ಪ್ರಧಾನಮಂತ್ರಿ ಶುಭಾಶಯ ಕೋರಿದರು
Posted On:
24 OCT 2025 7:49PM by PIB Bengaluru
ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐ.ಟಿ.ಬಿ.ಪಿ) ಸಂಸ್ಥಾಪನಾ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಹಿಮವೀರರು ಮತ್ತು ಅವರ ಕುಟುಂಬಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ರಾಷ್ಟ್ರಕ್ಕೆ ರಕ್ಷಣಾ ಪಡೆಗಳ ಅನುಕರಣೀಯ ಸೇವೆಯನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಐ.ಟಿ.ಬಿ.ಪಿಯ ಧೈರ್ಯ, ಶಿಸ್ತು ಮತ್ತು ಕರ್ತವ್ಯಕ್ಕೆ ಅಚಲ ಬದ್ಧತೆಯನ್ನು ಶ್ಲಾಘಿಸಿದರು. ವಿಪತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಅವರ ಕಾಳಜಿಪೂರ್ವ ಸಹಾನುಭೂತಿಗಳು ಮತ್ತು ತ್ವರಿತ ಸಿದ್ಧತೆಗಳನ್ನು ಶ್ಲಾಘಿಸಿದರು ಹಾಗೂ ಇದು ಅವರ ಅತ್ಯುತ್ತಮ ಸೇವೆ ಮತ್ತು ಮಾನವೀಯತೆಯ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ಎಲ್ಲಾ ಐ.ಟಿ.ಬಿ.ಪಿ ಹಿಮವೀರರು ಮತ್ತು ಅವರ ಕುಟುಂಬಗಳಿಗೆ ಐ.ಟಿ.ಬಿ.ಪಿಯ ಸಂಸ್ಥಾಪನಾ ದಿನದಂದು ಹೃತ್ಪೂರ್ವಕ ಶುಭಾಶಯಗಳು. ಈ ಪಡೆ ಅಪ್ರತಿಮ ಧೈರ್ಯ, ಶಿಸ್ತು ಮತ್ತು ಕರ್ತವ್ಯದ ಮೇಲಿನ ಭಕ್ತಿಯನ್ನು ಸಾಕಾರಗೊಳಿಸುತ್ತದೆ. ಅತ್ಯಂತ ಕಠಿಣ ಹವಾಮಾನ ಮತ್ತು ಅತ್ಯಂತ ಕಷ್ಟಕರವಾದ ಭೂಪ್ರದೇಶಗಳ ನಡುವೆ ಸೇವೆ ಸಲ್ಲಿಸುತ್ತಾ, ಹಿಮವೀರರು ಅಚಲವಾದ ಸಂಕಲ್ಪದಿಂದ ರಾಷ್ಟ್ರವನ್ನು ರಕ್ಷಿಸುತ್ತಾರೆ. ವಿಪತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಅವರ ಕಾಳಜಿಪೂರ್ವ ಸಹಾನುಭೂತಿ ಮತ್ತು ಸಿದ್ಧತೆ ಸೇವೆ ಮತ್ತು ಮಾನವೀಯತೆಯ ಅತ್ಯುತ್ತಮ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ.
@ITBP_official ”
*****
(Release ID: 2182348)
Visitor Counter : 6
Read this release in:
Malayalam
,
English
,
Urdu
,
Marathi
,
हिन्दी
,
Assamese
,
Bengali
,
Punjabi
,
Gujarati
,
Odia
,
Tamil
,
Telugu