ಪರಿಸರ ಮತ್ತು ಅರಣ್ಯ ಸಚಿವಾಲಯ
ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಭಾರತ ಜಾಗತಿಕವಾಗಿ 9ನೇ ಸ್ಥಾನಕ್ಕೆ ಏರಿದೆ; ವಾರ್ಷಿಕ ಅರಣ್ಯ ಗಳಿಕೆಯಲ್ಲಿ 3ನೇ ಸ್ಥಾನದಲ್ಲಿ ಮುಂದುವರೆದಿದೆ
Posted On:
22 OCT 2025 10:42AM by PIB Bengaluru
ಬಾಲಿಯಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ) ಬಿಡುಗಡೆ ಮಾಡಿದ ಜಾಗತಿಕ ಅರಣ್ಯ ಸಂಪನ್ಮೂಲ ಮೌಲ್ಯಮಾಪನ (ಜಿ.ಎಫ್.ಆರ್.ಎ) 2025ರ ಪ್ರಕಾರ, ಭಾರತವು ಜಾಗತಿಕ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ, ಜಾಗತಿಕವಾಗಿ ಒಟ್ಟು ಅರಣ್ಯ ವ್ಯಾಪ್ತಿ ಪ್ರದೇಶದ ವಿಷಯದಲ್ಲಿ 9ನೇ ಸ್ಥಾನಕ್ಕೆ ಏರಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಸಾಮಾಜಿಕ ಮಾಧ್ಯಮ ʼಎಕ್ಸ್ʼ ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಈ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಿಂದಿನ ಮೌಲ್ಯಮಾಪನದಲ್ಲಿ, ಭಾರತ 10ನೇ ಸ್ಥಾನದಲ್ಲಿತ್ತು. ಅರಣ್ಯ ಪ್ರದೇಶದ ವಾರ್ಷಿಕ ಬೆಳವಣಿಗೆ ವಿಷಯದಲ್ಲಿ ದೇಶವು ವಿಶ್ವಾದ್ಯಂತ ತನ್ನ 3ನೇ ಸ್ಥಾನವನ್ನು ಕಾಯ್ದುಕೊಂಡಿದೆ, ಇದು ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಪರಿಸರ ಸಮತೋಲನಕ್ಕೆ ದೇಶವು ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಅರಣ್ಯ ರಕ್ಷಣೆ, ಅರಣ್ಯೀಕರಣ ಮತ್ತು ಸಮುದಾಯ ನೇತೃತ್ವದ ಪರಿಸರ ಕ್ರಿಯಾ ಕಾರ್ಯಕ್ರಮದ ಗುರಿಯನ್ನು ಹೊಂದಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಯಶಸ್ಸನ್ನು ಈ ಗಮನಾರ್ಹ ಪ್ರಗತಿಯು ಒತ್ತಿಹೇಳುತ್ತದೆ ಎಂದು ಶ್ರೀ ಯಾದವ್ ಹೇಳಿದ್ದಾರೆ.
‘ಏಕ್ ಪೆಡ್ ಮಾ ಕೆ ನಾಮ್’ ಎಂಬ ಪ್ರಧಾನಮಂತ್ರಿ ಅವರ ಕರೆ ಮತ್ತು ಪರಿಸರ ಪ್ರಜ್ಞೆಯ ಮೇಲಿನ ಅವರ ನಿರಂತರ ಒತ್ತು ದೇಶಾದ್ಯಂತ ಜನರು ಗಿಡ ನೆಡುವಿಕೆ ಮತ್ತು ರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರಣೆ ನೀಡಿದೆ.
ಈ ಬೆಳೆಯುತ್ತಿರುವ ಸಾರ್ವಜನಿಕ ಭಾಗವಹಿಸುವಿಕೆಯು ಹಸಿರು ಮತ್ತು ಸುಸ್ಥಿರ ಭವಿಷ್ಯದ ಕಡೆಗೆ ಸಾಮೂಹಿಕ ಜವಾಬ್ದಾರಿಯ ಬಲವಾದ ಪ್ರಜ್ಞೆಯನ್ನು ಬೆಳೆಸುತ್ತಿದೆ. ಅರಣ್ಯ ರಕ್ಷಣೆ ಮತ್ತು ವರ್ಧನೆಗಾಗಿ ಮೋದಿ ಸರ್ಕಾರದ ಯೋಜನೆ ಮತ್ತು ನೀತಿಗಳು ಮತ್ತು ರಾಜ್ಯ ಸರ್ಕಾರಗಳ ಬೃಹತ್ ಗಿಡ ನೆಡುವಿಕೆ ಪ್ರಯತ್ನಗಳ ಹಿನ್ನೆಲೆಯಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.
*****
(Release ID: 2181445)
Visitor Counter : 6