ಪ್ರಧಾನ ಮಂತ್ರಿಯವರ ಕಛೇರಿ
ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2025ರಲ್ಲಿ ತಮ್ಮ ಭಾಷಣದ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
18 OCT 2025 12:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2025ರಲ್ಲಿ ತಮ್ಮ ಭಾಷಣದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಎಲ್ಲ ಗಣ್ಯರನ್ನು ಸ್ವಾಗತಿಸಿದರು. ಎಲ್ಲಾ ನಾಗರಿಕರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ ಶ್ರೀ ನರೇಂದ್ರ ಮೋದಿ ಅವರು, ಹಬ್ಬದ ವಾತಾವರಣದ ನಡುವೆ ಎನ್ ಡಿಟಿವಿ ವಿಶ್ವ ಶೃಂಗಸಭೆ ನಡೆಯುತ್ತಿದೆ ಎಂದು ಹೇಳಿದರು. "ತಡೆಯಲಾಗದ ಭಾರತ" ಅಧಿವೇಶನದ ಧ್ಯೇಯವಾಕ್ಯವನ್ನು ಅವರು ಶ್ಲಾಘಿಸಿದರು ಮತ್ತು ಭಾರತ ಇಂದು ನಿಲ್ಲುವ ಮನಸ್ಥಿತಿಯಲ್ಲಿಲ್ಲದ ಕಾರಣ ಇದು ನಿಜವಾಗಿಯೂ ಸೂಕ್ತವಾಗಿದೆ ಎಂದು ಹೇಳಿದರು. "ಭಾರತವು ನಿಲ್ಲುವುದಿಲ್ಲ ಅಥವಾ ವಿರಾಮ ಪಡೆಯುವುದಿಲ್ಲ, 140 ಕೋಟಿ ಭಾರತೀಯರು ಒಟ್ಟಾಗಿ ವೇಗವಾಗಿ ಮುನ್ನಡೆಯುತ್ತಿದ್ದಾರೆ" ಎಂದು ಪ್ರಧಾನಿ ದೃಢಪಡಿಸಿದರು.
ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಕಳೆದ 11 ವರ್ಷಗಳಲ್ಲಿ, ಭಾರತವು ಪ್ರತಿಯೊಂದು ಆತಂಕವನ್ನು ಒಡೆದುಹಾಕಿದೆ ಮತ್ತು ಪ್ರತಿಯೊಂದು ಸವಾಲನ್ನು ಸೋಲಿಸಿದೆ. ಈ ಕಾರಣಕ್ಕಾಗಿಯೇ ಇಂದು ಭಾರತವು ಸ್ವಾವಲಂಬಿಯಾಗುವ ವಿಶ್ವಾಸವು ಪ್ರತಿಯೊಂದು ಕ್ಷೇತ್ರದಲ್ಲೂ ಗೋಚರಿಸುತ್ತಿದೆ."
"ಇಂದು, ಇಡೀ ಜಗತ್ತು ಭಾರತವನ್ನು ವಿಶ್ವಾಸಾರ್ಹ, ಜವಾಬ್ದಾರಿಯುತ ಮತ್ತು ಸ್ಥಿತಿಸ್ಥಾಪಕ ಪಾಲುದಾರನಾಗಿ ನೋಡುತ್ತಿದೆ" ಎಂದು ಅವರು ಹೇಳಿದರು.
"ಪ್ರತಿ ಮೌಲ್ಯಮಾಪನಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುವುದು ಇಂದು ದೇಶದ ಮನಸ್ಥಿತಿಯಾಗಿದೆ, ಆದ್ದರಿಂದ ಭಾರತವನ್ನು ತಡೆಯಲಾಗದು," ಎಂದರು.
"ಕಾಂಗ್ರೆಸ್ ತನ್ನ ದಶಕಗಳ ಆಡಳಿತದಲ್ಲಿ ನೀತಿ ಮತ್ತು ಪ್ರಕ್ರಿಯೆಯ ಆಡಳಿತಕ್ಕೆ ಯಾವಾಗಲೂ ಒತ್ತು ನೀಡಿತು. ಆದರೆ ಕಳೆದ 11 ವರ್ಷಗಳಲ್ಲಿ ನಾವು ಪ್ರಜಾಪ್ರಭುತ್ವೀಕರಣಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ್ದೇವೆ. ಬ್ಯಾಂಕಿಂಗ್ ಸೇರಿದಂತೆ ಅನೇಕ ಕ್ಷೇತ್ರಗಳ ಶಕ್ತಿ ಇದರ ಫಲಿತಾಂಶವಾಗಿದೆ," ಎಂದರು.
"ಬಿಎಸ್ಎನ್ಎಲ್ ನ ಮೇಡ್ ಇನ್ ಇಂಡಿಯಾ 4ಜಿ ಸ್ಟ್ಯಾಕ್ ಪ್ರಾರಂಭವಾಗಲಿ ಅಥವಾ ಹೈಸ್ಪೀಡ್ ಸಂಪರ್ಕವನ್ನು ಆಧರಿಸಿದ ಇ-ಸಂಜೀವಿನಿ ಸೇವೆಯಾಗಲಿ, ಬಡವರು ಮತ್ತು ದೀನದಲಿತರ ಜೀವನವನ್ನು ಸುಧಾರಿಸಲು ನಾವು ಕೆಲಸ ಮಾಡುತ್ತಿರುವ ಸೂಕ್ಷ್ಮತೆಯನ್ನು ಅವು ತೋರಿಸುತ್ತವೆ," ಎಂದು ಹೇಳಿದರು.
"ದೇಶವಾಸಿಗಳ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರ ಉಳಿತಾಯವನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಆದಾಯ ತೆರಿಗೆ ಮತ್ತು ಜಿಎಸ್ ಟಿಯಲ್ಲಿ ತೀವ್ರ ಕಡಿತವು ಇದಕ್ಕೆ ನೇರ ಪುರಾವೆಯಾಗಿದೆ, " ಎಂದು ಹೇಳಿದ್ದಾರೆ.
"ಮಾವೋವಾದಿ ಭಯೋತ್ಪಾದನೆಯಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ತಾಯಂದಿರ ನೋವು ನನಗೆ ತಿಳಿದಿದೆ. ಅವರಲ್ಲಿ ಹೆಚ್ಚಿನವರು ಬಡ ಮತ್ತು ಬುಡಕಟ್ಟು ಕುಟುಂಬಗಳಿಂದ ಬಂದವರು. ಆ ತಾಯಂದಿರ ಆಶೀರ್ವಾದದಿಂದ ಶೀಘ್ರದಲ್ಲೇ ದೇಶವು ಮಾವೋವಾದಿ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ," ಪ್ರಧಾನಿ ಹೇಳಿದ್ದಾರೆ.
*****
(Release ID: 2180740)
Visitor Counter : 5