ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶಾಖಪಟ್ಟಣಂನಲ್ಲಿ ಗೂಗಲ್ ಎ.ಐ. ಹಬ್ ಉದ್ಘಾಟನೆಯನ್ನು ಸ್ವಾಗತಿಸಿದ ಪ್ರಧಾನಮಂತ್ರಿ

प्रविष्टि तिथि: 14 OCT 2025 2:30PM by PIB Bengaluru

ಆಂಧ್ರಪ್ರದೇಶದ ಕ್ರಿಯಾತ್ಮಕ ನಗರವಾದ ವಿಶಾಖಪಟ್ಟಣಂನಲ್ಲಿ ಗೂಗಲ್ ಎ.ಐ. ಹಬ್ ಉದ್ಘಾಟನೆಯಾಗಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ಒಳಗೊಂಡಿರುವ ಈ ಬಹುಮುಖಿ ಹೂಡಿಕೆಯು ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. "ಇದು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸು ನಿಟ್ಟಿನಲ್ಲಿ ಪ್ರಬಲ ಶಕ್ತಿಯಾಗಲಿದೆ. ಇದು ಎಲ್ಲರಿಗೂ ಎ.ಐ. ಅನ್ನು ಒದಗಿಸಿ, ನಮ್ಮ ನಾಗರಿಕರಿಗೆ ಅತ್ಯಾಧುನಿಕ ಸಾಧನಗಳನ್ನು ತಲುಪಿಸುವುದಲ್ಲದೆ, ನಮ್ಮ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಿ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ನಾಯಕನಾಗಿ ಭಾರತದ ಸ್ಥಾನವನ್ನು ಸುಭದ್ರಪಡಿಸುತ್ತದೆ!" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕ್ರಿಯಾತ್ಮಕ ನಗರದಲ್ಲಿ ಆದ ಗೂಗಲ್ ಎ.ಐ. ಹಬ್ ಉದ್ಘಾಟನೆಯು ಬಹಳ ಸಂತೋಷ ತಂದಿದೆ. 

ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ಒಳಗೊಂಡಿರುವ ಈ ಬಹುಮುಖಿ ಹೂಡಿಕೆಯು, ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಇದು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವಲ್ಲಿ ಪ್ರಬಲ ಶಕ್ತಿಯಾಗಲಿದೆ. ಇದು ಎಲ್ಲರಿಗೂ ಎ.ಐ ಅನ್ನು ಪರಿಚಯ ಮಾಡಿಸಿ, ನಮ್ಮ ನಾಗರಿಕರಿಗೆ ಅತ್ಯಾಧುನಿಕ ಸಾಧನಗಳನ್ನು ತಲುಪಿಸುತ್ತದೆ. ನಮ್ಮ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುವುದಲ್ಲದೆ ಜಾಗತಿಕ ತಂತ್ರಜ್ಞಾನ ನಾಯಕನಾಗಿ ಭಾರತದ ಸ್ಥಾನವನ್ನು ಸುಭದ್ರಪಡಿಸುತ್ತದೆ!"

@sundarpichai"

 

 

*****


(रिलीज़ आईडी: 2178997) आगंतुक पटल : 30
इस विज्ञप्ति को इन भाषाओं में पढ़ें: Punjabi , English , Urdu , Marathi , हिन्दी , Manipuri , Assamese , Bengali , Gujarati , Odia , Tamil , Telugu , Malayalam