ಪ್ರಧಾನ ಮಂತ್ರಿಯವರ ಕಛೇರಿ
ಅಧ್ಯಕ್ಷರಾದ ಶ್ರೀ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯಡಿಯಲ್ಲಿ ಆಗಿರುವ ಪ್ರಗತಿಗೆ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
09 OCT 2025 10:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದರು ಮತ್ತು ಅಧ್ಯಕ್ಷರಾದ ಶ್ರೀ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯಡಿಯಲ್ಲಿ ಆಗಿರುವ ಪ್ರಗತಿಗೆ ಅವರನ್ನು ಅಭಿನಂದಿಸಿದರು.
ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ಹೆಚ್ಚಿದ ಮಾನವೀಯ ನೆರವು ಕುರಿತ ಒಪ್ಪಂದವನ್ನು ಶ್ರೀ ಮೋದಿ ಅವರು ಸ್ವಾಗತಿಸಿದರು. ಯಾವುದೇ ರೂಪದಲ್ಲಿ ಅಥವಾ ಅಭಿವ್ಯಕ್ತಿಯಲ್ಲಿ ಭಯೋತ್ಪಾದನೆಯು ಜಗತ್ತಿನ ಎಲ್ಲಿಯೂ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ ತಾಣದ ಖಾತೆಯಲ್ಲಿ ಈ ರೀತಿ ಬರೆದಿದ್ದಾರೆ;
“ಅಧ್ಯಕ್ಷ ಶ್ರೀ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯಡಿಯಲ್ಲಿ ಆಗಿರುವ ಪ್ರಗತಿಗೆ ಅಭಿನಂದನೆಗಳನ್ನು ಸಲ್ಲಿಸಲು ನನ್ನ ಸ್ನೇಹಿತ ಪ್ರಧಾನನಮಂತ್ರಿ ಶ್ರೀ ನೆತನ್ಯಾಹು ಅವರನ್ನು ಕರೆ ಮಾಡಿದಿದ್ದೇನೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ಹೆಚ್ಚಿದ ಮಾನವೀಯ ಸಹಾಯದ ಕುರಿತ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಯಾವುದೇ ರೂಪದಲ್ಲಿ ಅಥವಾ ಅಭಿವ್ಯಕ್ತಿಯಲ್ಲಿ ಭಯೋತ್ಪಾದನೆಯು ಜಗತ್ತಿನಲ್ಲಿ ಎಲ್ಲಿಯೂ ಸ್ವೀಕಾರಾರ್ಹವಲ್ಲ ಎಂದು ಪುನರುಚ್ಚರಿಸುತ್ತೇನೆ.
@netanyahu”
*****
(रिलीज़ आईडी: 2177446)
आगंतुक पटल : 26
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam