ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಸ್ಟಾರ್ಟ್-ಅಪ್ ಮಹಾಕುಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
Posted On:
20 MAR 2024 6:19PM by PIB Bengaluru
ಮಂತ್ರಿ ಮಂಡಳಿಯಲ್ಲಿರುವ ನನ್ನ ಸಹೋದ್ಯೋಗಿಗಳಾದ ಶ್ರೀ ಪಿಯೂಷ್ ಗೋಯಲ್ ಜಿ, ಅನುಪ್ರಿಯಾ ಪಟೇಲ್ ಜಿ ಮತ್ತು ಸೋಮ್ ಪ್ರಕಾಶ್ ಜಿ, ಗೌರವಾನ್ವಿತ ಗಣ್ಯರು ಮತ್ತು ದೇಶಾದ್ಯಂತದ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಲ್ಲಿರುವ ನಮ್ಮ ಎಲ್ಲಾ ಸ್ನೇಹಿತರೇ! ಸ್ಟಾರ್ಟ್-ಅಪ್ ಮಹಾಕುಂಭಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ ಮತ್ತು ಈ ಶೃಂಗ ಸಮಾವೇಶಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ಅನೇಕ ಜನರು ಸ್ಟಾರ್ಟ್-ಅಪ್‌ಗಳನ್ನು ಪ್ರಾರಂಭಿಸುತ್ತಾರೆ ಮತ್ತು ರಾಜಕೀಯದಲ್ಲಿ ಅದು ಇನ್ನೂ ಹೆಚ್ಚು, ಮತ್ತು ಅವುಗಳನ್ನು ಮತ್ತೆ ಮತ್ತೆ ಪ್ರಾರಂಭಿಸಬೇಕಾಗುತ್ತದೆ. ನಿಮ್ಮ ಮತ್ತು ಅವರ ನಡುವಿನ ವ್ಯತ್ಯಾಸವೆಂದರೆ ನಾವೀನ್ಯತೆ; ಒಂದು ಉಡಾವಣೆ ಕೆಲಸ ಮಾಡದಿದ್ದರೆ, ನೀವು ಬೇಗನೆ ಮುಂದಿನದಕ್ಕೆ ಮುಂದುವರಿಯುತ್ತೀರಿ. ಈಗ, ಅದನ್ನು ಮಾಡುವ ಸಮಯ ಬಂದಿದೆ.
ಸ್ನೇಹಿತರೇ,
2047ರಲ್ಲಿ ರಾಷ್ಟ್ರವು 'ವಿಕಸಿತ್ ಭಾರತ್' ಗಾಗಿ ಮಾರ್ಗಸೂಚಿಯಲ್ಲಿ ಕೆಲಸ ಮಾಡುತ್ತಿರುವಾಗ, ಈ ಸ್ಟಾರ್ಟ್-ಅಪ್ ಮಹಾಕುಂಭವು ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಕಳೆದ ದಶಕಗಳಲ್ಲಿ, ಭಾರತವು ಐಟಿ ಮತ್ತು ಸಾಫ್ಟ್‌ವೇರ್ ವಲಯಗಳಲ್ಲಿ ತನ್ನ ಛಾಪನ್ನು ಹೇಗೆ ಮೂಡಿಸಿದೆ ಎಂಬುದನ್ನು ನಾವು ನೋಡಿದ್ದೇವೆ. ಈಗ, ಭಾರತದಲ್ಲಿ ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿಯ ಪ್ರವೃತ್ತಿಯಲ್ಲಿ ನಿರಂತರ ಏರಿಕೆಯನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ, ಈ ಮಹಾಕುಂಭದಲ್ಲಿ ಸ್ಟಾರ್ಟ್-ಅಪ್‌ಗಳ ಜಗತ್ತಿನಲ್ಲಿ ನಿಮ್ಮೆಲ್ಲರ ಭಾಗವಹಿಸುವಿಕೆ ಅಪಾರ ಮಹತ್ವದ್ದಾಗಿದೆ. ಸ್ಟಾರ್ಟ್-ಅಪ್‌ಗಳನ್ನು ಯಶಸ್ವಿಗೊಳಿಸುವುದು ಏಕೆ ಮತ್ತು ಅವುಗಳ ಯಶಸ್ಸಿಗೆ ಕಾರಣವಾಗುವ ಪ್ರತಿಭೆಯ ಅಂಶ ಯಾವುದು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಆಗ ನನಗೆ ಒಂದು ಆಲೋಚನೆ ಬಂತು: ನಾನು ಸರಿಯೋ ತಪ್ಪೋ ಎಂದು ನೀವೆಲ್ಲರೂ ತಿಳಿಸಬೇಕು. ಇದನ್ನು ಆಯೋಜಿಸಿದ್ದು ನಿಮ್ಮ ತಂಡ. ಏಕೆಂದರೆ ಸಾಮಾನ್ಯವಾಗಿ, ಕೈಗಾರಿಕಾ ಅಥವಾ ವ್ಯವಹಾರ ಜಗತ್ತಿನಲ್ಲಿ ಯಾವುದೇ ನಿರ್ಧಾರವು ಸರ್ಕಾರಕ್ಕೆ ಸಂಬಂಧಿಸಿದೆ. ಮತ್ತು ಅದು ಸರ್ಕಾರಕ್ಕೆ ಸಂಬಂಧಿಸಿದಾಗ, ಸಾಮಾನ್ಯವಾಗಿ ಐದು ವರ್ಷಗಳ ಕಾಲಮಿತಿ ಇರುತ್ತದೆ. ಈ ಕಡೆಯಿಂದ ನಿಧಾನವಾಗಿ ಪ್ರಗತಿಯನ್ನು ಮಾಡಲಾಗುತ್ತಿದೆ. ಆದ್ದರಿಂದ, ಉದ್ಯಮಿಗಳು ಆಗಾಗ್ಗೆ "ಈ ವರ್ಷ ಚುನಾವಣಾ ವರ್ಷ, ಕಾಯೋಣ. ಚುನಾವಣೆಗಳು ಮುಗಿದ ನಂತರ, ಹೊಸ ಸರ್ಕಾರದೊಂದಿಗೆ ಏನಾಗುತ್ತದೆ ಎಂದು ನೋಡೋಣ" ಎಂದು ಯೋಚಿಸುತ್ತಾರೆ. ಅಲ್ಲವೇ? ಈಗ ಚುನಾವಣೆಗಳನ್ನು ಘೋಷಿಸಲಾಗಿದೆ. ಅದರ ಹೊರತಾಗಿಯೂ, ನೀವು ಅಂತಹ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೀರಿ. ಇದರರ್ಥ ಮುಂದಿನ ಐದು ವರ್ಷಗಳಲ್ಲಿ ಏನಾಗುತ್ತದೆ ಎಂದು ನಿಮಗೆ ತಿಳಿದಿದೆ. ಮತ್ತು ನಿಮ್ಮೊಳಗಿನ ಪ್ರತಿಭಾನ್ವಿತ ಅಂಶವು ಸ್ಟಾರ್ಟ್-ಅಪ್ ಅನ್ನು ಯಶಸ್ವಿಗೊಳಿಸುತ್ತದೆ ಎಂದು ನಾನು ನಂಬುತ್ತೇನೆ.
ಇಲ್ಲಿ, ನಮ್ಮಲ್ಲಿ ಹೂಡಿಕೆದಾರರು, ಶಿಕ್ಷಣ ತಜ್ಞರು, ಸಂಶೋಧಕರು, ಉದ್ಯಮ ಸದಸ್ಯರು ಇದ್ದಾರೆ - ಮೂಲಭೂತವಾಗಿ, ಇದು ನಿಜವಾದ ಅರ್ಥದಲ್ಲಿ ನಿಜವಾಗಿಯೂ ಮಹಾಕುಂಭ. ಇಲ್ಲಿ, ನಮ್ಮಲ್ಲಿ ಯುವ ಉದ್ಯಮಿಗಳು ಮತ್ತು ಭವಿಷ್ಯದ ಉದ್ಯಮಿಗಳು ಇಬ್ಬರೂ ಇದ್ದಾರೆ. ಮತ್ತು ನಿಮ್ಮೊಳಗೆ ಪ್ರತಿಭೆ ಇರುವಂತೆಯೇ, ನನ್ನೊಳಗೆಯೂ ಇದೆ. ಮತ್ತು ನಾನು ಅದನ್ನು ಗುರುತಿಸಬಲ್ಲೆ; ನಾನು ಇಲ್ಲಿ ಭವಿಷ್ಯದ ಉದ್ಯಮಿಗಳನ್ನು ನೋಡುತ್ತಿದ್ದೇನೆ. ಅಂತಹ ವಾತಾವರಣದಲ್ಲಿ, ಈ ಶಕ್ತಿ, ಈ ವೈಬ್ ನಿಜವಾಗಿಯೂ ಗಮನಾರ್ಹವಾಗಿದೆ. ನಾನು ಪಾಡ್‌ಗಳು ಮತ್ತು ಪ್ರದರ್ಶನ ಮಳಿಗೆಗಳ ಮೂಲಕ ಹಾದುಹೋಗುವಾಗ, ನನಗೆ ಹೊಸ ವೈಬ್ ಅನುಭವವಾಯಿತು. ದೂರದಲ್ಲಿ, ಕೆಲವರು ಘೋಷಣೆಗಳನ್ನು ಕೂಗುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ನಾವೀನ್ಯತೆಗಳನ್ನು ಬಹಳ ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದರು. ಇಲ್ಲಿಗೆ ಬರುವಾಗ, ಯಾವುದೇ ಭಾರತೀಯನು ಇಂದಿನ ಸ್ಟಾರ್ಟ್-ಅಪ್‌ಗಳನ್ನು ವೀಕ್ಷಿಸುತ್ತಿಲ್ಲ ಆದರೆ ನಾಳೆಯ ಯುನಿಕಾರ್ನ್‌ಗಳು ಮತ್ತು ಡೆಕಾಕಾರ್ನ್‌ಗಳನ್ನು ಸಹ ನೋಡುತ್ತಿದ್ದೇವೆ ಎಂಬ ವಿಶ್ವಾಸವಿದೆ.
ಸ್ನೇಹಿತರೇ,
ಭಾರತ ಇಂದು ಜಾಗತಿಕ ಸ್ಟಾರ್ಟ್-ಅಪ್ ಕ್ಷೇತ್ರದಲ್ಲಿ ಹೊಸ ಭರವಸೆಯಾಗಿ, ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದರೆ, ಅದು ಚೆನ್ನಾಗಿ ಯೋಚಿಸಿದ ದೃಷ್ಟಿಕೋನದಿಂದ ಬೆಂಬಲಿತವಾಗಿದೆ. ಭಾರತ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಸರಿಯಾದ ಸಮಯದಲ್ಲಿ ಸ್ಟಾರ್ಟ್-ಅಪ್‌ಗಳ ಕುರಿತು ಕೆಲಸ ಮಾಡಲು ಪ್ರಾರಂಭಿಸಿದೆ. ಈಗ, ನೀವು ಈ ಶೃಂಗಸಭೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿದ್ದೀರಿ. ಆದರೆ "ಸ್ಟಾರ್ಟ್-ಅಪ್" ಎಂಬ ಪದವು ಪ್ರಾರಂಭವಾಗದಿದ್ದಾಗ, ನಾನು ಶೃಂಗಸಭೆಯನ್ನು ಆಯೋಜಿಸಿದ್ದೆ. ವಿಜ್ಞಾನ ಭವನದಲ್ಲಿರುವ ಸಭಾಂಗಣವು ಅರ್ಧದಷ್ಟು ಮಾತ್ರ ತುಂಬಿತ್ತು. ಸರ್ಕಾರಗಳಂತೆ, ನಾವು ಕೂಡ ಜಾಗವನ್ನು ತುಂಬಿದ್ದೇವೆ. ಅದು ಆಂತರಿಕ ವಿಷಯ; ಅದನ್ನು ಹೊರಗೆ ಚರ್ಚಿಸಬೇಡಿ. ದೇಶಾದ್ಯಂತ ಬಂದ ಯುವಕರ ಸಮ್ಮುಖದಲ್ಲಿ ಸ್ಟಾರ್ಟ್-ಅಪ್ ಇಂಡಿಯಾ, ಸ್ಟ್ಯಾಂಡ್-ಅಪ್ ಇಂಡಿಯಾದಂತಹ ಉಪಕ್ರಮಗಳನ್ನು ಪ್ರಾರಂಭಿಸಲು ನಾನು ಪ್ರಯತ್ನಗಳನ್ನು ಮಾಡಿದ್ದೆ. ನಾನು ಯುವಕರಿಗೆ ಒಂದು ಆಕರ್ಷಣೆ, ಸಂದೇಶವನ್ನು ನೀಡಲು ಬಯಸಿದ್ದೆ, ಆದ್ದರಿಂದ ಉಪಕ್ರಮಗಳನ್ನು ತೆಗೆದುಕೊಂಡ ಕೆಲವು ಜನರನ್ನು ದೇಶಾದ್ಯಂತ ಹುಡುಕಲಾಯಿತು. ದೇಶದ ಯಾವುದೇ ಭಾಗದಲ್ಲಿ ಯಾರಾದರೂ ಏನಾದರೂ ಮಾಡುತ್ತಿದ್ದರೆ, ಒಮ್ಮೆ ನೋಡಿ. ನಾನು 5-7 ಜನರನ್ನು ಕರೆದು, "ಅಲ್ಲಿ ಭಾಷಣ ಮಾಡಿ; ಯಾರೂ ನನ್ನ ಮಾತನ್ನು ಕೇಳುವುದಿಲ್ಲ" ಎಂದು ಹೇಳಿದ್ದೆ. ಈಗ ಅವರು ನನ್ನ ಮಾತನ್ನು ಕೇಳುತ್ತಾರೆ, ಆದರೆ ನಾನು ಆ ಸಮಯದ ಬಗ್ಗೆ ಮಾತನಾಡುತ್ತಿದ್ದೇನೆ. ಹಾಗಾಗಿ, ಆ ಸಮಾರಂಭದಲ್ಲಿ ಒಬ್ಬ ಮಗಳು ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದದ್ದು ನನಗೆ ಸ್ಪಷ್ಟವಾಗಿ ನೆನಪಿದೆ. ಬಹುಶಃ ಅವಳು ಇಲ್ಲಿ ಕುಳಿತಿರಬಹುದು; ನನಗೆ ಖಚಿತವಿಲ್ಲ. ಅವಳು ಮೂಲತಃ ಬಂಗಾಳದವಳು, ಮತ್ತು ಅವಳ ಪೋಷಕರು ಅವಳಿಗೆ ಚೆನ್ನಾಗಿ ಶಿಕ್ಷಣ ನೀಡಿದ್ದಾರೆ. ಅವಳು ತನ್ನ ಅನುಭವವನ್ನು ವಿವರಿಸಿದಳು. "ನನ್ನ ಹೆತ್ತವರೂ ಸಹ ವಿದ್ಯಾವಂತರು. ಹಾಗಾದರೆ, ನಾನು ಮನೆಗೆ ಹೋದಾಗ, ನನ್ನ ತಾಯಿ ನಾನು ಏನು ಮಾಡುತ್ತಿದ್ದೇನೆ ಎಂದು ಕೇಳಿದರು?" ಅವಳು ತನ್ನ ಅಧ್ಯಯನದ ನಂತರ ಮನೆಗೆ ಮರಳಿದ್ದಳು. ಆದ್ದರಿಂದ, ಅವಳು ಉತ್ತರಿಸಿದಳು, "ನಾನು ಒಂದು ಸ್ಟಾರ್ಟ್-ಅಪ್ ಅನ್ನು ಪ್ರಾರಂಭಿಸಲಿದ್ದೇನೆ." ನಂತರ ಅವಳ ತಾಯಿ, ಬಂಗಾಳಿ ಆಗಿದ್ದರಿಂದ, "ಅದು ವಿನಾಶಕಾರಿ, ಸಂಪೂರ್ಣ ವಿಪತ್ತು!" ಎಂದು ಹೇಳಿದರು. ಅಂದರೆ, ಸ್ಟಾರ್ಟ್-ಅಪ್ ಎಂದರೆ ಸಂಪೂರ್ಣ ವಿಪತ್ತು. ಮತ್ತು ಅಲ್ಲಿಂದ, ಈ ಪ್ರಯಾಣ ಪ್ರಾರಂಭವಾಯಿತು, ಮತ್ತು ನಾವು ಇಲ್ಲಿ ಅದರ ಮಾದರಿಯನ್ನು ನೋಡುತ್ತಿದ್ದೇವೆ. ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನದ ಅಡಿಯಲ್ಲಿ ದೇಶವು ನವೀನ ವಿಚಾರಗಳಿಗೆ ವೇದಿಕೆಯನ್ನು ಒದಗಿಸಿತು ಮತ್ತು ಅವುಗಳನ್ನು ಹಣಕಾಸಿನ ಮೂಲಗಳೊಂದಿಗೆ ಸಂಪರ್ಕಿಸಿತು. ಶಿಕ್ಷಣ ಸಂಸ್ಥೆಗಳಲ್ಲಿ ಇನ್ಕ್ಯುಬೇಟರ್‌ಗಳನ್ನು ಸ್ಥಾಪಿಸುವ ಅಭಿಯಾನವನ್ನು ಸಹ ಪ್ರಾರಂಭಿಸಲಾಯಿತು. ಕಿಂಡರ್‌ಗಾರ್ಟನ್‌ನಂತೆ, ನಾವು ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಪ್ರಾರಂಭಿಸಿದ್ದೇವೆ. ಶಿಕ್ಷಣದಲ್ಲಿ ಕೆಜಿ ಪ್ರಾರಂಭವಾಗುವಂತೆಯೇ ನಾವು ಅದನ್ನು ಪ್ರಾರಂಭಿಸಿದ್ದೇವೆ. ಅಲ್ಲಿಂದ, ನಾವು ಪ್ರಗತಿ ಹೊಂದಿದ್ದೇವೆ ಮತ್ತು ಇನ್ಕ್ಯುಬೇಟರ್ ಕೇಂದ್ರಗಳು ಹೊರಹೊಮ್ಮಲು ಪ್ರಾರಂಭಿಸಿದವು. ಎರಡನೇ ಮತ್ತು ಮೂರನೇ ಹಂತದ ನಗರಗಳ ಯುವಕರಿಗೆ ಕಲ್ಪನೆಗಳನ್ನು ಹುಟ್ಟುಹಾಕುವ ಸೌಲಭ್ಯವೂ ಪ್ರಾರಂಭವಾಯಿತು. ಇಂದು, ನಮ್ಮ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಕೇವಲ ಪ್ರಮುಖ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ. ಇಡೀ ದೇಶದಲ್ಲಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಇದೀಗ ಒಂದು ಕಿರುಚಿತ್ರದಲ್ಲಿಯೂ ಚಿತ್ರಿಸಲಾಗಿದೆ. ಇದು ದೇಶದ 600 ಕ್ಕೂ ಹೆಚ್ಚು ಜಿಲ್ಲೆಗಳನ್ನು ತಲುಪಿದೆ. ಇದರರ್ಥ ಸಾಮಾಜಿಕ ಸಂಸ್ಕೃತಿಯನ್ನು ಸ್ಥಾಪಿಸಲಾಗಿದೆ. ಮತ್ತು ಒಮ್ಮೆ ಸಾಮಾಜಿಕ ಸಂಸ್ಕೃತಿ ರೂಪುಗೊಂಡ ನಂತರ, ಅದು ನಿಲ್ಲಲು ಯಾವುದೇ ಕಾರಣವಿಲ್ಲ. ಅದು ಹೊಸ ಎತ್ತರವನ್ನು ತಲುಪುತ್ತಲೇ ಇದೆ. ಇಂದು, ಭಾರತದ ಸ್ಟಾರ್ಟ್-ಅಪ್ ಕ್ರಾಂತಿಯ ನಾಯಕತ್ವವನ್ನು ದೇಶದ ಸಣ್ಣ ಪಟ್ಟಣಗಳ ಯುವಕರು ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಸ್ಟಾರ್ಟ್-ಅಪ್‌ಗಳು ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿವೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇಂದು ಕೃಷಿ, ಜವಳಿ, ಔಷಧ, ಸಾರಿಗೆ, ಬಾಹ್ಯಾಕಾಶ ಮತ್ತು ಯೋಗದಲ್ಲಿಯೂ ಸ್ಟಾರ್ಟ್-ಅಪ್‌ಗಳು ಪ್ರಾರಂಭವಾಗಿರುವುದು ನೋಡಿ ನನಗೆ ಸಂತೋಷವಾಗಿದೆ. ಆಯುರ್ವೇದದಲ್ಲೂ ಸ್ಟಾರ್ಟ್-ಅಪ್‌ಗಳು ಪ್ರಾರಂಭವಾಗಿವೆ. ಮತ್ತು ಕೇವಲ ಒಂದು ಅಥವಾ ಎರಡು ಅಲ್ಲ; 300-400 ಸಂಖ್ಯೆಯಲ್ಲಿ ಆರಂಭವಾಗಬೇಕೆಂದು ಬಯಸುತ್ತೇನೆ. ಪ್ರತಿಯೊಂದರಲ್ಲೂ ಹೊಸದೇನಾದರೂ ಇದೆ. ಕೆಲವೊಮ್ಮೆ ನಾನು ಮಾಡುವ ಯೋಗ ಸರಿಯೋ ಅಥವಾ ಸ್ಟಾರ್ಟ್-ಅಪ್ ಜಗತ್ತಿನ ಯಾರಾದರೂ ಸೂಚಿಸಿದ ಯೋಗ ಒಳ್ಳೆಯದೋ ಎಂದು ನನಗೆ ಆಶ್ಚರ್ಯವಾಗುತ್ತದೆ.
ಸ್ನೇಹಿತರೇ,
ನಾವು ಇತ್ತೀಚೆಗೆ ತೆರೆದಿರುವ ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ... ಆರಂಭದಲ್ಲಿ, ಸರ್ಕಾರದಲ್ಲಿ ಅಡೆತಡೆಗಳನ್ನು ಹಾಕುವ ಪ್ರವೃತ್ತಿ ಇದೆ, ಮತ್ತು ನನ್ನ ಸಂಪೂರ್ಣ ಪ್ರಯತ್ನವು ಆ ಅಡೆತಡೆಗಳನ್ನು ಮುರಿಯಲು ಹೋಗುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ, ಭಾರತೀಯ ಸ್ಟಾರ್ಟ್-ಅಪ್‌ಗಳು 50 ಕ್ಕೂ ಹೆಚ್ಚು ವಲಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಮತ್ತು ಈಗಾಗಲೇ, ನಮ್ಮ ಸ್ಟಾರ್ಟ್-ಅಪ್‌ಗಳು ಇಷ್ಟು ಕಡಿಮೆ ಸಮಯದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲು ಪ್ರಾರಂಭಿಸಿವೆ.
ಸ್ನೇಹಿತರೇ,
ಭಾರತದ ಯುವ ಶಕ್ತಿಯ ಸಾಮರ್ಥ್ಯವನ್ನು ಇಂದು ಜಗತ್ತು ನೋಡುತ್ತಿದೆ. ಈ ಸಾಮರ್ಥ್ಯದಲ್ಲಿ ವಿಶ್ವಾಸದೊಂದಿಗೆ, ದೇಶವು ನವೋದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಹಲವಾರು ಹೆಜ್ಜೆಗಳನ್ನು ಇಟ್ಟಿದೆ. ಆರಂಭದಲ್ಲಿ, ನಾನು ಹೇಳಿದಂತೆ, ಈ ಪ್ರಯತ್ನದಲ್ಲಿ ನಂಬಿಕೆ ಇಟ್ಟವರು ಬಹಳ ಕಡಿಮೆ ಜನರಿದ್ದರು. ಇಲ್ಲಿ, ಶಿಕ್ಷಣದ ಅರ್ಥವು ಉದ್ಯೋಗಗಳಿಗೆ ಸೀಮಿತವಾಗಿತ್ತು ಮತ್ತು ಉದ್ಯೋಗಗಳ ಅರ್ಥವು ಕೇವಲ ಸರ್ಕಾರಿ ಉದ್ಯೋಗವಾಗಿತ್ತು. ನಾನು ಮೊದಲು ಬರೋಡಾದಲ್ಲಿ (ವಡೋದರಾ) ವಾಸಿಸುತ್ತಿದ್ದೆ ಮತ್ತು ಮಹಾರಾಷ್ಟ್ರ ಕುಟುಂಬಗಳೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದ್ದೆ. ಅವುಗಳಲ್ಲಿ ಒಂದು ಗಾಯಕ್ವಾಡ್ ಎಸ್ಟೇಟ್. "ಮಗಳು ಬೆಳೆದರೆ, ಮನೆಯಲ್ಲಿ ಒಂದೇ ಚರ್ಚೆ ಅವಳ ಮದುವೆಯನ್ನು ಏರ್ಪಡಿಸುವ ಬಗ್ಗೆ. ಮಗ ತುಂಬಾ ಒಳ್ಳೆಯವನು ಮತ್ತು ಅವನಿಗೆ ಸರ್ಕಾರಿ ಕೆಲಸವೂ ಇದೆ. ಆದ್ದರಿಂದ, ಮಗಳನ್ನು ಮದುವೆಗೆ ಸೂಕ್ತವೆಂದು ಪರಿಗಣಿಸಲಾಗುತ್ತಿತ್ತು" ಎಂದು ತಮಾಷೆಯಾಗಿ ಹೇಳುತ್ತಿದ್ದ ನಮ್ಮ ಕೆಲವು ಸ್ನೇಹಿತರು ಇದ್ದರು. ಇಂದು, ಇಡೀ ಮನಸ್ಥಿತಿ ಬದಲಾಗಿದೆ. ಹಿಂದೆ, ಯಾರಾದರೂ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಮಾತನಾಡುವಾಗ, ಹಣವನ್ನು ಎಲ್ಲಿಂದ ಪಡೆಯುವುದು ಎಂಬುದರ ಬಗ್ಗೆ ಕಾಳಜಿ ಇತ್ತು. ಆರಂಭದಲ್ಲಿ ಚಿಂತೆ ಹಣದ ಕೊರತೆಯ ಬಗ್ಗೆಯಾಗಿತ್ತು. ಹಣವಿದ್ದವರು ಮಾತ್ರ ವ್ಯವಹಾರ ಆರಂಭಿಸಬಹುದು ಎಂಬ ನಂಬಿಕೆ ಇಲ್ಲಿತ್ತು. ಈ ಗ್ರಹಿಕೆ ಈಗ ಬದಲಾಗಿದೆ. ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಆ ಮನಸ್ಸನ್ನು ಛಿದ್ರಗೊಳಿಸಿದೆ. ಮತ್ತು ದೇಶದಲ್ಲಿ ಕ್ರಾಂತಿಗಳು ನಡೆಯುತ್ತಿವೆ.
ದೇಶದ ಯುವಕರು ಉದ್ಯೋಗಾಕಾಂಕ್ಷಿಗಳ ಬದಲು ಉದ್ಯೋಗ ಸೃಷ್ಟಿಕರ್ತರಾಗುವ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ದೇಶವು ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿದಾಗ, ಯುವಕರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. 2014 ರಲ್ಲಿ ಕೇವಲ 100 ಸ್ಟಾರ್ಟ್-ಅಪ್‌ಗಳು ಇತ್ತು, ಇಂದು ಭಾರತದಲ್ಲಿ ಸುಮಾರು 1.25 ಲಕ್ಷ ನೋಂದಾಯಿತ ಸ್ಟಾರ್ಟ್-ಅಪ್‌ಗಳಿವೆ, ಸುಮಾರು 1.2 ಮಿಲಿಯನ್ ಯುವಜನರನ್ನು ನೇರವಾಗಿ ತೊಡಗಿಸಿಕೊಂಡಿವೆ. ನಮ್ಮಲ್ಲಿ 110 ಕ್ಕೂ ಹೆಚ್ಚು ಯುನಿಕಾರ್ನ್‌ಗಳಿವೆ ಮತ್ತು ನಮ್ಮ ಸ್ಟಾರ್ಟ್-ಅಪ್‌ಗಳು ಸುಮಾರು 12,000 ಪೇಟೆಂಟ್‌ಗಳನ್ನು ಸಲ್ಲಿಸಿವೆ. ಪೇಟೆಂಟ್‌ಗಳ ಮಹತ್ವವನ್ನು ಇನ್ನೂ ಅರಿತುಕೊಳ್ಳದ ಅನೇಕ ಸ್ಟಾರ್ಟ್-ಅಪ್‌ಗಳಿವೆ. ನಾನು ಯಾರನ್ನಾದರೂ ಭೇಟಿಯಾದರೆ ನನ್ನ ಮೊದಲ ಪ್ರಶ್ನೆ, "ನೀವು ಪೇಟೆಂಟ್ ಪಡೆದಿದ್ದೀರಾ?" ಎಂದು ಕೇಳುತ್ತೇನೆ., "ಇನ್ನೂ ಇಲ್ಲ, ಅದು ಪ್ರಕ್ರಿಯೆಯಲ್ಲಿದೆ." ಎಂದರೆ ಈ ಕೆಲಸವನ್ನು ಜೊತೆಯಲ್ಲಿ ಪ್ರಾರಂಸಿ ಎಂದು ಹೇಳುತ್ತೆನೆ. ಇಂದು ಜಗತ್ತು ತುಂಬಾ ವೇಗವಾಗಿ ಬದಲಾಗುತ್ತಿರುವುದರಿಂದ, ಯಾರು ಮುಂದಾಳತ್ವ ವಹಿಸುತ್ತಾರೆಂದು ನಿಮಗೆ ತಿಳಿಯುವುದಿಲ್ಲ. ದೇಶವು ಅವರನ್ನು ಹೇಗೆ ಕೈ ಹಿಡಿದಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಜಿಇಎಂ ಪೋರ್ಟಲ್. ನೀವು ಅದನ್ನು ಇಲ್ಲಿಯೂ ನೋಡಬಹುದು. ಇಂದು, ಈ ಸ್ಟಾರ್ಟ್-ಅಪ್‌ಗಳು ಜಿಇಎಂ ಪೋರ್ಟಲ್ ಮೂಲಕ ಮಾತ್ರ 20,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವ್ಯವಹಾರವನ್ನು ಮಾಡಿವೆ. ಇದರರ್ಥ ಸರ್ಕಾರವು 20-22 ವರ್ಷ ವಯಸ್ಸಿನ ಯುವಕರು ಇಷ್ಟು ಕಡಿಮೆ ಸಮಯದಲ್ಲಿ 20,000 ಕೋಟಿ ರೂಪಾಯಿಗಳ ವ್ಯವಹಾರವನ್ನು ಮಾಡಲು ಸಾಧ್ಯವಾಗುವಂತಹ ವೇದಿಕೆಯನ್ನು ಸೃಷ್ಟಿಸಿದೆ. ಇದು ಗಮನಾರ್ಹ ಸಾಧನೆ. ಇಂದಿನ ಯುವಕರು ವೈದ್ಯರು ಮತ್ತು ಎಂಜಿನಿಯರ್‌ಗಳಾಗಬೇಕೆಂಬ ಹಂಬಲದ ಜೊತೆಗೆ, ನಾವೀನ್ಯಕಾರರಾಗುವ ಮತ್ತು ತಮ್ಮದೇ ಆದ ಸ್ಟಾರ್ಟ್-ಅಪ್‌ಗಳನ್ನು ಪ್ರಾರಂಭಿಸುವ ಕನಸು ಕಾಣುತ್ತಾರೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಗಳಾಗಿದ್ದೀರಿ. ಅವರು ಹೊಂದಿರುವ ಪ್ರತಿಭೆ ಮತ್ತು ತರಬೇತಿಯೊಂದಿಗೆ, ಅವರು ಸ್ಟಾರ್ಟ್-ಅಪ್‌ಗಳ ಮೂಲಕ ಹೊಸ ಕ್ಷೇತ್ರಗಳನ್ನು ಪ್ರವೇಶಿಸುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇಂದು, ಯುವಕರು ತಮ್ಮ ಸ್ಟಾರ್ಟ್-ಅಪ್‌ಗಳ ಸಹಾಯದಿಂದ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಮಿಂಚುತ್ತಿದ್ದಾರೆಂದು ನಾನು ನೋಡಿದ್ದೇನೆ ಮತ್ತು 2029 ರ ಸಮಯದಲ್ಲಿ ಕನಿಷ್ಠ 1000 ಸ್ಟಾರ್ಟ್-ಅಪ್‌ಗಳು ಇರುತ್ತವೆ ಮತ್ತು ಅವರ ಸೇವೆಗಳನ್ನು ರಾಜಕೀಯ ಪಕ್ಷಗಳು ಪಡೆಯುತ್ತವೆ ಎಂದು ನಾನು ದೃಢವಾಗಿ ನಂಬುತ್ತೇನೆ. ಅವರು ಅಂತಹ ನಾವೀನ್ಯತೆಗಳನ್ನು ತರುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾನು ಹೇಳಲು ಬಯಸುವುದೇನೆಂದರೆ, ಸೇವಾ ವಲಯ, ಸಂವಹನ ವಲಯ ಅಥವಾ ಯಾವುದೇ ಇತರ ಕ್ಷೇತ್ರವಾಗಿರಲಿ, ಪ್ರತಿಯೊಂದು ವಲಯದಲ್ಲೂ ಯುವಕರು ಹೊಸ ಆಲೋಚನೆಗಳನ್ನು ತರುತ್ತಿದ್ದಾರೆ. ಕನಿಷ್ಠ ಅವಶ್ಯಕತೆಗಳೊಂದಿಗೆ, ಅವರು ಪ್ರದರ್ಶನ ನೀಡಲು ಪ್ರಾರಂಭಿಸುತ್ತಾರೆ. ಮತ್ತು ಇದು ಅದರ ಶಕ್ತಿಯನ್ನು ಹೆಚ್ಚು ಬಲಪಡಿಸಿದೆ ಎಂದು ನಾನು ನಂಬುತ್ತೇನೆ. ಆಹಾರ ಮತ್ತು ಪಾನೀಯಗಳಲ್ಲಿನ ಸಾಂಪ್ರದಾಯಿಕ ವಸ್ತುಗಳು ಹೇಗೆ ಮುಂದುವರಿಯುತ್ತಿವೆ, ನಿಮ್ಮ ಸ್ವಂತ ಆರೋಗ್ಯವನ್ನು ನೀವು ಸುಲಭವಾಗಿ ಪರಿಶೀಲಿಸುವ ರೀತಿಯಲ್ಲಿ ವೈದ್ಯಕೀಯ ಉಪಕರಣಗಳನ್ನು ಹೇಗೆ ತಯಾರಿಸಲಾಗುತ್ತಿದೆ ಎಂಬುದನ್ನು ನಾನು ಇಂದು ನೋಡಿದ್ದೇನೆ. ಕೆಲವರು ಸಾಮಾಜಿಕ ಮಾಧ್ಯಮದ ಜಾಗತಿಕ ದೈತ್ಯರೊಂದಿಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಇವು ಕನಸುಗಳು, ಇದು ಉತ್ಸಾಹ ಮತ್ತು ಇದು ಶಕ್ತಿ, ಅದಕ್ಕಾಗಿಯೇ ಜನರು "ನಾನು ಅದನ್ನು ಮಾಡುತ್ತೇನೆ" ಎಂದು ಹೇಳುತ್ತಾರೆ. ಕೆಲವು ವರ್ಷಗಳ ಹಿಂದೆ ದೇಶವು ನೀತಿ ವೇದಿಕೆಯಲ್ಲಿ ಪ್ರಾರಂಭಿಸಿದ ಸ್ಟಾರ್ಟ್-ಅಪ್ ಯಶಸ್ಸಿನ ಹೊಸ ಎತ್ತರವನ್ನು ಮುಟ್ಟುತ್ತಿದೆ ಎಂದು ನಾನು ಹೇಳಬಲ್ಲೆ.
ಸ್ನೇಹಿತರೇ,
ದೇಶದ ಡಿಜಿಟಲ್ ಇಂಡಿಯಾ ಅಭಿಯಾನದಿಂದ ಸ್ಟಾರ್ಟ್-ಅಪ್‌ಗಳು ಗಮನಾರ್ಹ ಸಹಾಯವನ್ನು ಪಡೆದಿವೆ ಮತ್ತು ವಿಶ್ವವಿದ್ಯಾಲಯಗಳು ಅದರ ಬಗ್ಗೆ ಕೇಸ್ ಸ್ಟಡಿ ಮಾಡಬೇಕು ಎಂದು ನಾನು ನಂಬುತ್ತೇನೆ. ಇದು ಸ್ವತಃ ಒಂದು ದೊಡ್ಡ ಸ್ಫೂರ್ತಿಯಾಗಿದೆ. ನಮ್ಮ ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳು UPI ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆದಿವೆ. ಭಾರತದಲ್ಲಿ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲಾಗಿದೆ, ದೇಶದ ಮೂಲೆ ಮೂಲೆಗೂ ಡಿಜಿಟಲ್ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಮತ್ತು ನನ್ನ ಸ್ನೇಹಿತರೇ, ನಾವು ನಮ್ಮ ದೈನಂದಿನ ಜೀವನವನ್ನು ನಡೆಸುತ್ತಿರುವುದರಿಂದ ಮತ್ತು ಆಗಾಗ್ಗೆ ತಿಳಿದಿರದೆ ಇರುವುದರಿಂದ ನಾವು ಎಲ್ಲಿದ್ದೇವೆ ಎಂದು ನಿಮಗೆ ತಿಳಿದಿಲ್ಲ. ಆದರೆ G-20 ಶೃಂಗಸಭೆಯ ಸಮಯದಲ್ಲಿ, ನಾನು ಅದನ್ನು ನೋಡಿದೆ. ನಿಮ್ಮ ಪ್ರದರ್ಶನವನ್ನು ಈಗ ನಡೆಸುತ್ತಿರುವ ಬೂತ್ ಅನ್ನು ನಾವು ಸ್ಥಾಪಿಸಿದ್ದೆವು. ಅಲ್ಲಿ, UPI ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಪ್ರದರ್ಶಿಸಿದ್ದೇವೆ. ಅದರ ಪ್ರಾಯೋಗಿಕತೆಗಾಗಿ ನಾವು ಅವರಿಗೆ ಒಂದು ಸಾವಿರ ರೂಪಾಯಿಗಳನ್ನು ನೀಡುತ್ತಿದ್ದೆವು. ಪ್ರತಿಯೊಂದು ರಾಯಭಾರ ಕಚೇರಿಯು ತನ್ನ ಉನ್ನತ ನಾಯಕರನ್ನು ಒಮ್ಮೆ ನಮ್ಮ ಬೂತ್‌ಗೆ ಭೇಟಿ ನೀಡುವಂತೆ ಒತ್ತಾಯಿಸಿತು. UPI ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಬಯಸುವ ಉನ್ನತ ನಾಯಕರ ದೀರ್ಘ ಸಾಲುಗಳು ಇರುತ್ತಿದ್ದವು ಮತ್ತು ಅದು ಅವರಿಗೆ ಅದ್ಭುತವಾಗಿತ್ತು. ನಮ್ಮ ಹಳ್ಳಿಯಲ್ಲಿರುವ ತರಕಾರಿ ಮಾರಾಟಗಾರರು ಸಹ ಈಗ UPI ಮೂಲಕ ಸುಲಭವಾಗಿ ಪಾವತಿಗಳನ್ನು ಸ್ವೀಕರಿಸಬಹುದು.
ಸ್ನೇಹಿತರೇ,
ಇದು ದೇಶದಲ್ಲಿ ಆರ್ಥಿಕ ಸೇರ್ಪಡೆಯನ್ನು ಬಲಪಡಿಸಿದೆ ಮತ್ತು ಗ್ರಾಮೀಣ-ನಗರ ವಿಭಜನೆಯನ್ನು ಕಡಿಮೆ ಮಾಡಿದೆ. ಆರಂಭದಲ್ಲಿ, ಪ್ರಪಂಚದಾದ್ಯಂತ ಇದರ ಬಗ್ಗೆ ಕಳವಳಗಳಿದ್ದವು! ಡಿಜಿಟಲ್ ಪ್ರಗತಿ ಪ್ರಾರಂಭವಾದಾಗ, "ಇರುವವರು ಮತ್ತು ಇಲ್ಲದವರು" ಎಂಬ ಸಿದ್ಧಾಂತವು ಅದರೊಂದಿಗೆ ಸಂಬಂಧ ಹೊಂದಿತು. ಚರ್ಚೆ ಸಾಮಾಜಿಕ ವಿಭಜನೆಯ ಬಗ್ಗೆಯಾಗಿತ್ತು. ಭಾರತವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಿದೆ, ಆದ್ದರಿಂದ "ಇರುವವರು ಮತ್ತು ಇಲ್ಲದವರು" ಎಂಬ ಸಿದ್ಧಾಂತವು ಇಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇಲ್ಲಿ, ಎಲ್ಲವೂ ಎಲ್ಲರಿಗೂ ಲಭ್ಯವಿದೆ. ಇಂದು, ಅದು ಕೃಷಿ, ಶಿಕ್ಷಣ ಅಥವಾ ಆರೋಗ್ಯವಾಗಿರಲಿ, ಸ್ಟಾರ್ಟ್-ಅಪ್‌ಗಳಿಗೆ ಹೊಸ ಅವಕಾಶಗಳು ಹೊರಹೊಮ್ಮುತ್ತಿವೆ. ನಮ್ಮ ಸ್ಟಾರ್ಟ್-ಅಪ್‌ಗಳಲ್ಲಿ ಶೇಕಡ 45 ಕ್ಕಿಂತ ಹೆಚ್ಚು ಮಹಿಳೆಯರು - 'ನಾರಿ ಶಕ್ತಿ' (ಮಹಿಳಾ ಶಕ್ತಿ) ನೇತೃತ್ವ ವಹಿಸಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಸ್ಟಾರ್ಟ್-ಅಪ್‌ಗಳ ಪರಿಣಾಮವನ್ನು ಯಾರೂ ಅಂದಾಜು ಮಾಡಲು ಸಾಧ್ಯವಿಲ್ಲ. ಇದು ದೇಶಕ್ಕೆ ಹೆಚ್ಚುವರಿ ಪ್ರಯೋಜನವಾಗಿದೆ. ನಮ್ಮ ಹೆಣ್ಣುಮಕ್ಕಳು ಅತ್ಯಾಧುನಿಕ ನಾವೀನ್ಯತೆಯ ಮೂಲಕ ರಾಷ್ಟ್ರವನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ.
ಸ್ನೇಹಿತರೇ,
ನಾವೀನ್ಯತೆಯ ಸಂಸ್ಕೃತಿಯು 'ವಿಕಸಿತ ಭಾರತ'ದ ಅಭಿವೃದ್ಧಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಉತ್ತಮ ಭವಿಷ್ಯಕ್ಕೂ ಅತ್ಯಗತ್ಯ. ಮತ್ತು ನಾನು ಇದನ್ನು ಬಹಳ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ, ನಾನು ಪ್ರಪಂಚದ ಉತ್ತಮ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ನನ್ನ ಸಾಮರ್ಥ್ಯಗಳ ಮೇಲೆ ಮಾತ್ರವಲ್ಲ, ನಿಮ್ಮ ಸಾಮರ್ಥ್ಯಗಳ ಮೇಲೂ ನನಗೆ ನಂಬಿಕೆಯಿದೆ. ಭಾರತ್ ತನ್ನ G-20 ಅಧ್ಯಕ್ಷತೆಯ ಸಮಯದಲ್ಲಿ ತನ್ನ ದೃಷ್ಟಿಕೋನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿತು. G-20 ಶೃಂಗಸಭೆಯನ್ನು ಇಲ್ಲಿ ಮಾತ್ರ ನಡೆಸಲಾಯಿತು. COVID ಮೀರಿ ಜಗತ್ತನ್ನು ಎಲ್ಲಿಗೆ ಕೊಂಡೊಯ್ಯಬೇಕೆಂದು ಚರ್ಚಿಸಲು ಎಲ್ಲಾ ವಿಶ್ವದ ನಾಯಕರು ಒಟ್ಟುಗೂಡಿದರು. ಮತ್ತು ಈ ವೇದಿಕೆಯಲ್ಲಿ ಕುಳಿತಿರುವುದು ನನ್ನ ದೇಶದ ಯುವ ಮನಸ್ಸು, ಇದು 2047 ರ ಕಡೆಗೆ ದಾರಿಯನ್ನು ನಿರ್ಧರಿಸುತ್ತಿದ್ದೇನೆ. ಸ್ಟಾರ್ಟ್ಅಪ್-20 ಉಪಕ್ರಮದ ಅಡಿಯಲ್ಲಿ, ಪ್ರಪಂಚದಾದ್ಯಂತದ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗಳನ್ನು ಒಟ್ಟುಗೂಡಿಸಲು ಪ್ರಯತ್ನಗಳನ್ನು ಮಾಡಿದೆ. ಇದೇ ಭಾರತ್ ಮಂಟಪದಲ್ಲಿ, ಸ್ಟಾರ್ಟ್-ಅಪ್‌ಗಳನ್ನು G20 ದೆಹಲಿ ಘೋಷಣೆಯಲ್ಲಿ ಸೇರಿಸಲಾಗಿದ್ದಲ್ಲದೆ, 'ಬೆಳವಣಿಗೆಯ ನೈಸರ್ಗಿಕ ಎಂಜಿನ್‌ಗಳು' ಎಂದು ಗುರುತಿಸಲಾಗಿದೆ. G20ಈ ದಾಖಲೆಯನ್ನು ನೋಡಲು ನಾನು ಖಂಡಿತವಾಗಿಯೂ ನಿಮ್ಮನ್ನು ಒತ್ತಾಯಿಸುತ್ತೇನೆ. ನಾವು ಯಾವ ಮಟ್ಟವನ್ನು ತಲುಪಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ. ಈಗ, ನಾವು AI ತಂತ್ರಜ್ಞಾನದೊಂದಿಗೆ ಸಂಪರ್ಕ ಹೊಂದಿದ ಹೊಸ ಯುಗದಲ್ಲಿದ್ದೇವೆ. ಮತ್ತು ಇಂದು, AI ಎಂದರೆ ಭಾರತದ ಮೇಲುಗೈ ಎಂದು ಜಗತ್ತು ಒಪ್ಪಿಕೊಂಡಿದೆ. ಜಗತ್ತು ಅದನ್ನು ಒಪ್ಪಿಕೊಳ್ಳುತ್ತಿದೆ. ಈಗ, ನಮ್ಮ ಕೆಲಸವೆಂದರೆ ಅವಕಾಶವನ್ನು ಕಳೆದುಕೊಳ್ಳದಿರುವುದು. ಮತ್ತು ಇತ್ತೀಚಿನ ದಿನಗಳಲ್ಲಿ ನನಗೆ AI ನಿಂದ ಸಾಕಷ್ಟು ಸಹಾಯ ಸಿಗುತ್ತಿದೆ. ಏಕೆಂದರೆ ಚುನಾವಣಾ ಪ್ರಚಾರದ ಸಮಯದಲ್ಲಿ ನಾನು ಭಾಷಾ ಅಡೆತಡೆಗಳನ್ನು ಎದುರಿಸುತ್ತೇನೆ ಎಂದು ನನಗೆ ತಿಳಿದಿದೆ, ಆದ್ದರಿಂದ ನಾನು ತಮಿಳು, ತೆಲುಗು ಮತ್ತು ಒಡಿಯಾದಲ್ಲಿಯೂ ನನ್ನ ಸಂದೇಶವನ್ನು ತಿಳಿಸಲು AI ಅನ್ನು ಬಳಸುತ್ತಿದ್ದೇನೆ. ಆದ್ದರಿಂದ ನಿಮ್ಮಂತಹ ಯುವಕರು ಈ ಕೆಲಸ ಮಾಡಿದಾಗ, ನನ್ನ ಕೆಲಸವೂ ಮುಗಿಯುತ್ತದೆ. ಮೊದಲು, ಯಾರಾದರೂ ನನ್ನ ಆಟೋಗ್ರಾಫ್‌ಗಳನ್ನು ಕೇಳುವುದನ್ನು ನಾನು ನೋಡುತ್ತಿದ್ದೆ, ನಂತರ ಅವರು ಕ್ರಮೇಣ ಛಾಯಾಚಿತ್ರಗಳನ್ನು ಕೇಳಲು ಪ್ರಾರಂಭಿಸಿದರು, ಮತ್ತು ಈಗ ಅವರು ಸೆಲ್ಫಿಗಳನ್ನು ಕೇಳುತ್ತಾರೆ. ಈಗ ಅವರು ಮೂರನ್ನೂ ಕೇಳುತ್ತಾರೆ - ಒಂದು ಸೆಲ್ಫಿ, ಆಟೋಗ್ರಾಫ್ ಮತ್ತು ಒಂದು ಛಾಯಾಚಿತ್ರ. ಈಗ ಏನು ಮಾಡಬೇಕು? ಹಾಗಾಗಿ ನಾನು AI ಸಹಾಯವನ್ನು ಪಡೆದುಕೊಂಡೆ. ನನ್ನ NaMo ಅಪ್ಲಿಕೇಶನ್‌ನಲ್ಲಿ ನಾನು ಒಂದು ವ್ಯವಸ್ಥೆಯನ್ನು ಸ್ಥಾಪಿಸಿದ್ದೇನೆ. ನಿಮ್ಮ ಮುಖದ ಒಂದು ನೋಟ ಕೂಡ ಎಲ್ಲೋ ಕಾಣಿಸಿಕೊಂಡರೆ, ನೀವು ಮೋದಿಯೊಂದಿಗೆ ನಿಂತಿರುವ AI ಸಹಾಯದಿಂದ ಆ ಛಾಯಾಚಿತ್ರವನ್ನು ತೆಗೆದುಕೊಳ್ಳಬಹುದು. NaMo ಅಪ್ಲಿಕೇಶನ್‌ಗೆ ಹೋದರೆ, ಅಲ್ಲಿ ಒಂದು ಫೋಟೋ ಬೂತ್ ಇದೆ ಮತ್ತು ಅಲ್ಲಿಂದ ನಿಮ್ಮ ಫೋಟೋವನ್ನು ನೀವು ಪಡೆಯುತ್ತೀರಿ. ನಾನು ಇಲ್ಲಿ ಹಾದುಹೋಗುತ್ತಿದ್ದಂತೆ ನಿಮ್ಮ ಫೋಟೋ ಬಂದಿರಬೇಕು.
ಸ್ನೇಹಿತರೇ,
ಆದ್ದರಿಂದ, AI ಭಾರತದ ಯುವ ಹೂಡಿಕೆದಾರರಿಗೆ ಮತ್ತು ಜಾಗತಿಕ ಹೂಡಿಕೆದಾರರಿಗೆ ಲೆಕ್ಕವಿಲ್ಲದಷ್ಟು ಹೊಸ ಅವಕಾಶಗಳನ್ನು ತಂದಿದೆ. ರಾಷ್ಟ್ರೀಯ ಕ್ವಾಂಟಮ್ ಮಿಷನ್, ಭಾರತ AI ಮಿಷನ್ ಮತ್ತು ಸೆಮಿಕಂಡಕ್ಟರ್ ಮಿಷನ್; ಈ ಎಲ್ಲಾ ಅಭಿಯಾನಗಳು ಭಾರತದ ಯುವಕರಿಗೆ ಹೊಸ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯುತ್ತವೆ. ಕೆಲವೇ ತಿಂಗಳುಗಳ ಹಿಂದೆ, ನನ್ನನ್ನು ಯುಎಸ್ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಲಾಯಿತು, ಅಲ್ಲಿ ನಾನು AI ಬಗ್ಗೆ ಮಾತನಾಡಿದ್ದೆ. AI ಪ್ರಪಂಚದ ಭವಿಷ್ಯವನ್ನು ನಿರ್ಧರಿಸುವಷ್ಟು ಶಕ್ತಿಶಾಲಿಯಾಗುತ್ತಿದೆ ಎಂದು ನಾನು ಹೇಳಿದೆ. ಆದ್ದರಿಂದ, ಅವರು ಅರ್ಥಮಾಡಿಕೊಂಡಂತೆ, ಅದಕ್ಕೆ ತಕ್ಕಂತೆ ಚಪ್ಪಾಳೆ ತಟ್ಟಿತು. ನಂತರ ನಾನು ಹೇಳಿದೆ, AI ಬಗ್ಗೆ ನನ್ನ ವ್ಯಾಖ್ಯಾನ ಎಂದರೆ ಅಮೆರಿಕ-ಭಾರತ, ಮತ್ತು ಇಡೀ ಪ್ರೇಕ್ಷಕರು ಎದ್ದು ನಿಂತು ಶ್ಲಾಘಿಸಿದರು.
ಸ್ನೇಹಿತರೇ,
ಆದರೆ ನಾನು ಹೇಳಿದ್ದು ಅಲ್ಲಿನ ರಾಜಕೀಯ ಸನ್ನಿವೇಶದಲ್ಲಿ, ಆದರೆ ಇಂದು ನಾನು AI ಯ ಸಾಮರ್ಥ್ಯ, ಅದರ ನಾಯಕತ್ವವು ಭಾರತದ ಕೈಯಲ್ಲಿ ಉಳಿಯುತ್ತದೆ ಮತ್ತು ಉಳಿಯಬೇಕು ಎಂದು ದೃಢವಾಗಿ ನಂಬುತ್ತೇನೆ. ಜಾಗತಿಕ ಅನ್ವಯಿಕೆಗಳಿಗಾಗಿ ಭಾರತೀಯ ಪರಿಹಾರಗಳ ಪರಿಕಲ್ಪನೆಯು ಹೆಚ್ಚಿನ ಸಹಾಯ ಮಾಡುತ್ತದೆ ಎಂದು ನನಗೆ ಪೂರ್ಣ ನಂಬಿಕೆಯಿದೆ. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಭಾರತದ ಯುವ ನಾವೀನ್ಯಕಾರರು ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ಸಹಾಯ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾನು ಪ್ರಯೋಗ ಮಾಡುತ್ತಲೇ ಇದ್ದೇನೆ. ನಾನು ನಮ್ಮ ದೇಶದ ಮಕ್ಕಳೊಂದಿಗೆ ಪ್ರಪಂಚದಾದ್ಯಂತ ಅನೇಕ ದೇಶಗಳೊಂದಿಗೆ ಹ್ಯಾಕಥಾನ್‌ಗಳನ್ನು ಆಯೋಜಿಸುತ್ತೇನೆ. ಮೂವತ್ತರಿಂದ ನಲವತ್ತು ಗಂಟೆಗಳ ಕಾಲ, ಈ ಮಕ್ಕಳು ಆನ್‌ಲೈನ್‌ನಲ್ಲಿ ಭಾಗವಹಿಸುತ್ತಾರೆ, ಮಿಶ್ರ ತಂಡಗಳನ್ನು ರಚಿಸುತ್ತಾರೆ, ಸಿಂಗಾಪುರ-ಭಾರತ ತಂಡವಿದ್ದರೆ ಸಿಂಗಾಪುರ ಮತ್ತು ಭಾರತದ ಮಕ್ಕಳು ಒಟ್ಟಿಗೆ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಭಾರತೀಯ ಮಕ್ಕಳೊಂದಿಗೆ ಹ್ಯಾಕಥಾನ್‌ಗಳಲ್ಲಿ ಭಾಗವಹಿಸಲು ವಿಶ್ವಾದ್ಯಂತ ಒಂದು ದೊಡ್ಡ ಆಕರ್ಷಣೆ ಇದೆ ಎಂದು ನಾನು ನೋಡಿದ್ದೇನೆ. ನಂತರ ನಾನು ಅವರಿಗೆ ಹೇಳುತ್ತೇನೆ, "ನೀವು ಅವರೊಂದಿಗೆ ಹೊಂದಿಕೊಳ್ಳುವುದಿಲ್ಲ". ಅವರು ಹೇಳುತ್ತಾರೆ, "ನಾವು ಅವರೊಂದಿಗೆ ಹೊಂದಿಕೊಳ್ಳದಿದ್ದರೂ, ನಾವು ಏನನ್ನಾದರೂ ಕಲಿಯುತ್ತೇವೆ." ವಾಸ್ತವವಾಗಿ, ಭಾರತದಲ್ಲಿ ಯಾವುದೇ ನಾವೀನ್ಯತೆಯನ್ನು ಪ್ರಯತ್ನಿಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ, ಪ್ರಪಂಚದ ಪ್ರತಿಯೊಂದು ಭೌಗೋಳಿಕ ಮತ್ತು ಜನಸಂಖ್ಯಾಶಾಸ್ತ್ರದಲ್ಲಿ ಯಶಸ್ವಿಯಾಗುತ್ತದೆ ಏಕೆಂದರೆ ನಮಗೆ ಇಲ್ಲಿ ಎಲ್ಲಾ ರೀತಿಯ ಸನ್ನಿವೇಶಗಳಿವೆ. ನೀವು ಇಲ್ಲಿ ಮರುಭೂಮಿಗಳು, ಪ್ರವಾಹ ಪೀಡಿತ ಪ್ರದೇಶಗಳು, ಮಧ್ಯಮ ಮಳೆಯಾಗುವ ಪ್ರದೇಶಗಳು, ಅಂದರೆ ಪ್ರತಿಯೊಂದು ರೀತಿಯ ವಸ್ತುವೂ ನಿಮಗೆ ಒಂದೇ ಸ್ಥಳದಲ್ಲಿ ಲಭ್ಯವಿದೆ. ಮತ್ತು ಅದಕ್ಕಾಗಿಯೇ ಇಲ್ಲಿ ಯಶಸ್ವಿಯಾಗುವುದು ಜಗತ್ತಿನ ಎಲ್ಲಿಯಾದರೂ ಯಶಸ್ವಿಯಾಗಬಹುದು.
ಸ್ನೇಹಿತರೇ,
ಭಾರತವು ಈ ವಿಷಯದಲ್ಲಿ ನಿರಂತರವಾಗಿ ಮುಂದಾಲೋಚನೆಯೊಂದಿಗೆ ಚಲಿಸುತ್ತಿದೆ. ದೇಶವು ಕೋಟ್ಯಂತರ ರೂಪಾಯಿ ಮೌಲ್ಯದ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲು ನಿರ್ಧರಿಸಿದೆ. ನೀವು ಸ್ವಲ್ಪ ಸಮಯದ ಹಿಂದೆ ತೆಗೆದುಕೊಂಡ ನಿರ್ಧಾರವನ್ನು ನೋಡಿರಬಹುದು. ಮತ್ತು ನಾವು ನಿಗದಿಪಡಿಸಿದ ಮಧ್ಯಂತರ ಬಜೆಟ್, ಏಕೆಂದರೆ ಜನರು ಅನಗತ್ಯ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡುತ್ತಾರೆ ಏಕೆಂದರೆ ನಮ್ಮ ದೇಶದಲ್ಲಿ ಕೆಲವು ವಿಷಯಗಳನ್ನು ಚರ್ಚಿಸಲು ಸಮಯವಿಲ್ಲ. ಈ ಮಧ್ಯಂತರ ಬಜೆಟ್‌ನಲ್ಲಿ, ನಾನು ಮತ್ತೆ ಬಂದಾಗ ಪೂರ್ಣ ಬಜೆಟ್ ಬರುವುದರಿಂದ, ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ನಾವೀನ್ಯತೆಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಲಾಗಿದೆ ಎಂದು ದೇಶದ ಪ್ರತಿಯೊಬ್ಬ ಯುವಕರಿಗೂ ತಿಳಿಸಬೇಕೆಂದು ನಾನು ಬಯಸುತ್ತೇನೆ. ಇದು 'ಸೂರ್ಯೋದಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ' ದೀರ್ಘಕಾಲೀನ ಸಂಶೋಧನಾ ಯೋಜನೆಗಳಿಗೆ ಸಹಾಯ ಮಾಡುತ್ತದೆ. ಭಾರತವು ಡಿಜಿಟಲ್ ಡೇಟಾ ರಕ್ಷಣೆಗಾಗಿ ಅತ್ಯುತ್ತಮ ಕಾನೂನುಗಳನ್ನು ಸಹ ಜಾರಿಗೆ ತಂದಿದೆ. ಸ್ಟಾರ್ಟ್-ಅಪ್‌ಗಳನ್ನು ಪ್ರೋತ್ಸಾಹಿಸಲು ಅಗತ್ಯವಿರುವ ಪ್ರತಿಯೊಂದು ಹೆಜ್ಜೆಯನ್ನೂ ತೆಗೆದುಕೊಳ್ಳಲಾಗುತ್ತಿದೆ. ಈಗ ದೇಶವು ನಿಧಿಗಾಗಿ ಉತ್ತಮ ಕಾರ್ಯವಿಧಾನವನ್ನು ರಚಿಸಲು ಪ್ರಯತ್ನಗಳನ್ನು ಮಾಡುತ್ತಿದೆ.
ಸ್ನೇಹಿತರೇ,
ಇಂದು, ಯಶಸ್ವಿಯಾಗುತ್ತಿರುವ ಸ್ಟಾರ್ಟ್ ಅಪ್‌ಗಳು ಸಹ ದೊಡ್ಡ ಜವಾಬ್ದಾರಿಯನ್ನು ಹೊಂದಿವೆ. ನೀವು ಈ ಹಂತವನ್ನು ತಲುಪಲು ಯಾರಾದರೂ ನಿಮ್ಮ ಕಲ್ಪನೆಯನ್ನು ನಂಬಿದ್ದರು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಆದ್ದರಿಂದ, ನೀವು ಹೊಸ ಕಲ್ಪನೆಯನ್ನು ಸಹ ಬೆಂಬಲಿಸಬೇಕು. ನಿಮ್ಮ ಕೈ ಹಿಡಿದವರಂತೆ ನೀವು ಬೇರೆಯವರ ಕೈ ಹಿಡಿಯಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಯುವಕರನ್ನು ಪ್ರೇರೇಪಿಸಲು ನೀವು ಮಾರ್ಗದರ್ಶಕರಾಗಿ ಹೋಗಲು ಸಾಧ್ಯವಿಲ್ಲವೇ? ನೀವು ಹತ್ತು ಟಿಂಕರಿಂಗ್ ಲ್ಯಾಬ್‌ಗಳ ಉಸ್ತುವಾರಿ ವಹಿಸಿಕೊಳ್ಳುತ್ತೀರಿ ಎಂದಾದರೆ ನೀವು ಆ ಮಕ್ಕಳೊಂದಿಗೆ ತೊಡಗಿಸಿಕೊಳ್ಳುತ್ತೀರಿ, ನಿಮ್ಮ ಮತ್ತು ಅವರ ಆಲೋಚನೆಗಳನ್ನು ಚರ್ಚಿಸುತ್ತೀರಿ. ನೀವು ಇನ್‌ಕ್ಯುಬೇಶನ್ ಕೇಂದ್ರಗಳಿಗೆ ಭೇಟಿ ನೀಡುತ್ತೀರಿ. ಒಂದು ಗಂಟೆ ಕಳೆಯಿರಿ, ಅರ್ಧ ಗಂಟೆ ಕಳೆಯಿರಿ; ನಾನು ಹಣ ನೀಡುವ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಹೊಸ ಪೀಳಿಗೆಯನ್ನು ಭೇಟಿ ಮಾಡಿ, ಸ್ನೇಹಿತರೇ, ಇದು ಖುಷಿಯಾಗುತ್ತದೆ. ನೀವು ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು ಏಕೆಂದರೆ ನೀವು ಹಂಚಿಕೊಳ್ಳಲು ಯಶಸ್ಸಿನ ಕಥೆಯನ್ನು ಹೊಂದಿದ್ದೀರಿ. ಯುವ ಮನಸ್ಸುಗಳು ಕೇಳಲು ಸಿದ್ಧವಾಗಿವೆ. ನೀವು ನಿಮ್ಮನ್ನು ಸಾಬೀತುಪಡಿಸಿದ್ದೀರಿ; ಈಗ ನೀವು ಇತರ ಯುವಕರಿಗೆ ನಿರ್ದೇಶನ ತೋರಿಸಬೇಕಾಗಿದೆ.
ದೇಶವು ಪ್ರತಿ ಹಂತದಲ್ಲೂ ನಿಮ್ಮೊಂದಿಗಿದೆ. ನಾನು ಇಲ್ಲಿ ಇನ್ನೂ ಒಂದೆರಡು ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದು ನಾನು ಸರ್ಕಾರದೊಳಗೆ ಆಂತರಿಕವಾಗಿ ಚರ್ಚಿಸುವ ವಿಷಯ, ಮಾಧ್ಯಮಗಳಲ್ಲಿ ಹೊರಬರಬೇಕಾದ ವಿಷಯವಲ್ಲ. ನಾನು ಮೊದಲು ದೆಹಲಿಗೆ ಬಂದಾಗ, ಇಲ್ಲಿನ ಸಂಸ್ಕೃತಿಯ ಪರಿಚಯ ನನಗಿರಲಿಲ್ಲ. ನಾನು ಹೊರಗಿನವನಾಗಿದ್ದೆ. ನಾನು ಅಧಿಕಾರಿಗಳಿಗೆ ಹೇಳಿದೆ, “ನೋಡಿ, ಇಲ್ಲಿ ಬಹಳ ಸಮಯದಿಂದ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಇಲಾಖೆಗಳಿವೆ, ಒಂದು ಹಳಿಯಲ್ಲಿ ಸಿಲುಕಿಕೊಂಡಿವೆ. ನೀವು ಪ್ರಯತ್ನಿಸುತ್ತಿದ್ದೀರಿ, ಆದರೆ ಯಾವುದೇ ಪರಿಹಾರ ಬರುತ್ತಿಲ್ಲ. ಅಂತಹ ಕ್ಷೇತ್ರಗಳನ್ನು ಗುರುತಿಸಿ. ಮತ್ತು ನಾನು ದೇಶದ ಯುವಜನರಿಗೆ ಒಂದು ಸಮಸ್ಯೆಯನ್ನು ನೀಡುತ್ತೇನೆ, ಅದರ ಮೇಲೆ ಹ್ಯಾಕಥಾನ್ ಮಾಡಲು ಮತ್ತು ನನಗೆ ಪರಿಹಾರವನ್ನು ಒದಗಿಸಲು ಹೇಳುತ್ತೇನೆ.” ಸರಿ, ನಮ್ಮ ಅಧಿಕಾರಿಗಳು ಉನ್ನತ ಶಿಕ್ಷಣ ಪಡೆದಿದ್ದಾರೆ, ಅವರು ಹೇಳಿದ್ದು, “ಅಗತ್ಯವಿಲ್ಲ, ನಮಗೆ ಇಪ್ಪತ್ತು ವರ್ಷಗಳ ಅನುಭವವಿದೆ.” ಎಂದು, “ ಆಗ ನಾನು ಬನ್ನಿ, ಆರಂಭದಲ್ಲಿ, ನಮಗೆ ಕೆಲವು ಅಡಚಣೆಗಳಿವೆ, ಕೆಲವು ನಿಶ್ಚಲತೆಯ ಕ್ಷೇತ್ರಗಳಿವೆ ಎಂದು ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಕಾರಣ ನಾನು ಬಹಳಷ್ಟು ಪ್ರತಿರೋಧವನ್ನು ಎದುರಿಸಿದೆ; ಯಾರೂ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ; ಎಲ್ಲರೂ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳುತ್ತಿದ್ದರು. ನಾನು ಹೇಳಿದೆ, “ವಿಷಯಗಳು ಚೆನ್ನಾಗಿ ನಡೆಯುತ್ತಿವೆ, ಅದಕ್ಕಾಗಿಯೇ ಮೌಲ್ಯವರ್ಧನೆ ಇರುತ್ತದೆ. ಇಲ್ಲದಿದ್ದರೆ, ಅವರು ಏನು ಒಳ್ಳೆಯದು ಎಂದು ನೋಡುತ್ತಾರೆ, ಅದನ್ನು ಹೊರಗೆ ಬಿಡಿ.” , ಬಹಳ ಕಷ್ಟದಿಂದ, ಎಲ್ಲಾ ಇಲಾಖೆಗಳು ಅಂತಿಮವಾಗಿ ನನ್ನ ವಿನಂತಿಯನ್ನು ಒಪ್ಪಿಕೊಂಡವು. ನಾನು ದೃಢನಿಶ್ಚಯ ಮಾಡಿದಾಗ... ಬಹಳಷ್ಟು ಪ್ರಯತ್ನದ ನಂತರ, ಅವರು ಕೊನೆಗೆ ಇದು ಒಂದು ಸಮಸ್ಯೆ ಎಂದು ಒಪ್ಪಿಕೊಂಡರು. ಹಾಗಾಗಿ ನಾನು ಒಟ್ಟು ಲೆಕ್ಕ ಹಾಕಿದಾಗ, ಅದು ಒಟ್ಟು 400 ಸಮಸ್ಯೆಗಳಿಗೆ ಬಂದಿತು. ಅವರು ಶೇಕಡಾ 0.1 ರ ಬಗ್ಗೆಯೂ ಉಲ್ಲೇಖಿಸಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ದೇಶದ ಯುವಕರಿಗಾಗಿ ಹ್ಯಾಕಥಾನ್ ನಡೆಸಿ ಅವರಿಗೆ ಈ ಸಮಸ್ಯೆಗಳನ್ನು ನೀಡಿದ್ದೇನೆ. ನಾನು "ಇದಕ್ಕೆ ಪರಿಹಾರವನ್ನು ಕಲ್ಪಿಸಿಕೊಳ್ಳಿ" ಎಂದು ಹೇಳಿದೆ. ಅವರು ಅಂತಹ ಉತ್ತಮ ಪರಿಹಾರಗಳನ್ನು ತಂದರು, ಪರಿಹಾರಗಳನ್ನು ಒದಗಿಸಿದರು ಮತ್ತು ಮಕ್ಕಳು ನೀಡಿದ ಶೇಕಡಾ 70-80 ರಷ್ಟು ವಿಚಾರಗಳನ್ನು ಸರ್ಕಾರವು ಅಳವಡಿಸಿಕೊಂಡಿದೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ನಂತರ ಪರಿಸ್ಥಿತಿ ಹೇಗೆ ಬದಲಾಯಿತು ಎಂದರೆ ಇಲಾಖೆಗಳು "ಸರ್, ಈ ವರ್ಷ ಹ್ಯಾಕಥಾನ್ ಯಾವಾಗ ನಡೆಯಲಿದೆ?" ಎಂದು ನನ್ನನ್ನು ಕೇಳಲು ಪ್ರಾರಂಭಿಸಿದವು. ಈಗ ಪರಿಹಾರ ಇಲ್ಲಿ ಸಿಗುತ್ತದೆ ಎಂದು ಅವರು ಭಾವಿಸಿದ್ದರು. ನಾನು ಹೇಳಲು ಬಯಸುವುದೇನೆಂದರೆ ಈ ಮಕ್ಕಳು ಬಹಳಷ್ಟು ವಿಷಯಗಳನ್ನು ಮಂಡಿಸುತ್ತಾರೆ. ಮತ್ತು ಇವರು 18, 20, 22 ವರ್ಷ ವಯಸ್ಸಿನ ಯುವಕರು. ನಮ್ಮ ವ್ಯವಹಾರಗಳಾದ CII, FICCI, ASSOCHAM ನಲ್ಲಿರುವವರು ತಮ್ಮ ತಮ್ಮ ಕೈಗಾರಿಕೆಗಳ ಸಮಸ್ಯೆಗಳನ್ನು ಗುರುತಿಸುವಂತೆ ನಾನು ಒತ್ತಾಯಿಸುತ್ತೇನೆ. ಸಮಸ್ಯೆಗಳನ್ನು ಗುರುತಿಸಿದ ನಂತರ, ಅವರು ಸ್ಟಾರ್ಟ್-ಅಪ್‌ಗಳಿಗಾಗಿ ಹ್ಯಾಕಥಾನ್ ನಡೆಸಬೇಕು. ಮತ್ತು ಅವರಿಗೆ ಸಮಸ್ಯೆಗಳನ್ನು ನೀಡಬೇಕು. ಅವರು ನಿಮಗೆ ಉತ್ತಮ ಪರಿಹಾರಗಳನ್ನು ತರುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ಅದೇ ರೀತಿ, MSME ಗಳ ಜನರು ತಮ್ಮ ಸಮಸ್ಯೆಗಳನ್ನು ಗುರುತಿಸುವಂತೆ ನಾನು ಒತ್ತಾಯಿಸುತ್ತೇನೆ, ತಾಂತ್ರಿಕ ಅಡೆತಡೆಗಳು ಇರುತ್ತವೆ, ಸಾಕಷ್ಟು ಸಮಯವಿರುತ್ತದೆ, ಉತ್ಪಾದನೆಯಲ್ಲಿ ಸುಗಮತೆ ಇರುವುದಿಲ್ಲ, ದೋಷಯುಕ್ತ ಉತ್ಪಾದನೆ ಇರುತ್ತದೆ, ಹಲವು ವಿಷಯಗಳಿವೆ. ನೀವು ದೇಶದ ವಿದ್ಯಾರ್ಥಿಗಳ ಬಳಿಗೆ ಹೋಗಿ, ಹ್ಯಾಕಥಾನ್ ನಡೆಸಿ. MSME ಜನರು ತಮ್ಮನ್ನು ಮತ್ತು ಸರ್ಕಾರವನ್ನು ಎಲ್ಲಿಯೂ ಇರಿಸಬಾರದು. ನಾವು ಈ ಎರಡು ಕ್ಷೇತ್ರಗಳಲ್ಲಿ ಶ್ರಮಿಸಲು ಪ್ರಾರಂಭಿಸಿದರೆ, ದೇಶದ ಯುವ ಪ್ರತಿಭೆಗಳು ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಾರೆ ಮತ್ತು ನಮ್ಮ ಯುವ ಪ್ರತಿಭೆಗಳು ಅವರು ಕೆಲಸ ಮಾಡಬಹುದಾದ ಪ್ರದೇಶದ ಬಗ್ಗೆ ಕಲ್ಪನೆಯನ್ನು ಪಡೆಯುತ್ತಾರೆ. ನಾವು ಇದರಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಸ್ಟಾರ್ಟ್-ಅಪ್ ಮಹಾಕುಂಭದಿಂದ ಕೆಲವು ಕಾರ್ಯಸಾಧ್ಯವಾದ ಅಂಶಗಳು ಹೊರಬರಬೇಕು ಎಂದು ನಾನು ನಂಬುತ್ತೇನೆ. ಆ ಕಾರ್ಯಸಾಧ್ಯವಾದ ಅಂಶಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗೋಣ. ಮತ್ತು ನಾನು ನಿಮಗೆ ಭರವಸೆ ನೀಡುತ್ತೇನೆ, ಸದ್ಯಕ್ಕೆ, ಮುಂದಿನ ಒಂದೂವರೆ ತಿಂಗಳು ನಾನು ಸ್ವಲ್ಪ ಕಾರ್ಯನಿರತನಾಗಿದ್ದೇನೆ, ಆದರೆ ಅದರ ನಂತರ, ನಾನು ನಿಮಗಾಗಿ ಲಭ್ಯವಿರುತ್ತೇನೆ. ನೀವು ಮುಂದುವರಿಯಿರಿ, ಹೊಸ ಸ್ಟಾರ್ಟ್-ಅಪ್‌ಗಳನ್ನು ರಚಿಸಿ, ನಿಮಗೆ ನೀವೇ ಸಹಾಯ ಮಾಡಿಕೊಳ್ಳಿ, ಇತರರಿಗೆ ಸಹಾಯ ಮಾಡಿ ಎಂದು ನಾನು ಬಯಸುತ್ತೇನೆ. ನಾವೀನ್ಯತೆಯನ್ನು ಮುಂದುವರಿಸಿ, ನಾವೀನ್ಯಕಾರರನ್ನು ಬೆಂಬಲಿಸುತ್ತಲೇ ಇರಿ. ನಿಮ್ಮ ಆಕಾಂಕ್ಷೆಗಳೇ ಭಾರತದ ಆಕಾಂಕ್ಷೆಗಳು.
ಭಾರತವು 11 ನೇ ಅತಿದೊಡ್ಡ ಆರ್ಥಿಕತೆಯಿಂದ 5 ನೇ ಸ್ಥಾನಕ್ಕೆ ರೂಪಾಂತರಗೊಂಡಿದೆ ಮತ್ತು ನನ್ನ ದೇಶದ ಯುವಕರು ಇದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈಗ, ನಾನು ಭಾರತಕ್ಕೆ ಭರವಸೆ ನೀಡಿದ್ದೇನೆ ಮತ್ತು ನಾನು ಜಗತ್ತಿಗೆ ಭರವಸೆ ನೀಡಿದ್ದೇನೆ, ನನ್ನ ಮೂರನೇ ಅವಧಿಯಲ್ಲಿ, ನಾನು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತೇನೆ. ಮತ್ತು ಈ ಜಿಗಿತದಲ್ಲಿ, ಸ್ಟಾರ್ಟ್-ಅಪ್‌ಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ,
ಸ್ನೇಹಿತರೇ,
ನಿಮ್ಮೆಲ್ಲರೊಂದಿಗೆ ಚಾಟ್ ಮಾಡುವುದು ನನಗೆ ಇಷ್ಟವಾಯಿತು. ನಿಮ್ಮ ಉತ್ಸಾಹ ಮತ್ತು ಶಕ್ತಿಯು ನನಗೆ ಹೊಸ ಚೈತನ್ಯವನ್ನು ತುಂಬುತ್ತದೆ.
ನಿಮ್ಮೆಲ್ಲರಿಗೂ ಶುಭಾಶಯಗಳು!
ತುಂಬಾ ಧನ್ಯವಾದಗಳು.
ಹಕ್ಕು ಸ್ವಾಮ್ಯ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದ. ಹಿಂದಿಯಲ್ಲಿ ಮೂಲ ಭಾಷಣವನ್ನು ಮಾಡಲಾಗಿದೆ.
*****
(Release ID: 2176752)
Visitor Counter : 12
Read this release in:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam